‘ಲವ್ ಜಿಹಾದ್’ ಎಂಬುದು ರಾಷ್ಟ್ರವನ್ನು ವಿಭಜಿಸಲು ಮತ್ತು ಕೋಮು ಸೌಹಾರ್ದತೆಗೆ ಭಂಗ ತರಲು ಬಿಜೆಪಿ ಸೃಷ್ಟಿಸಿದ ಪದ. ಮದುವೆ ಎಂಬುದು ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದು, ಅದಕ್ಕೆ ಕಾನೂನು ತರುವುದು ಅಸಂವಿಧಾನಿಕ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟೀಕಿಸಿದ್ದಾರೆ.
ಶುಕ್ರವಾರ(ನ. 20) ತಮ್ಮ ಸರಣಿ ಟ್ವಿಟ್‌ಗಳಲ್ಲಿ, ಗೆಹ್ಲೋಟ್ ಅವರು “ವಯಸ್ಕರ ನಡುವಿನ ಸಮ್ಮತಿಗೆ ರಾಜ್ಯ ಸರ್ಕಾರದ ಅನುಮತಿ ಅಗತ್ಯ ಎಂಬಂತ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಲವ್ ಜಿಹಾದ್ ರಾಷ್ಟ್ರವನ್ನು ವಿಭಜಿಸಲು ಮತ್ತು ಕೋಮು ಸೌಹಾರ್ದತೆಗೆ ಭಂಗ ತರಲು ಬಿಜೆಪಿ ಸೃಷ್ಟಿಸಿದ ಪದವಾಗಿದೆ. ಮದುವೆ ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದೆ. ಅದನ್ನು ತಡೆಯಲು ಕಾನೂನನ್ನು ತರುವುದು ಸಂಪೂರ್ಣವಾಗಿ ಅಸಂವಿಧಾನಿಕ ಮತ್ತು ಅದು ಯಾವುದೇ ನ್ಯಾಯಾಲಯದಲ್ಲಿಯೂ ನಿಲ್ಲುವುದಿಲ್ಲ. ಪ್ರೀತಿಯಲ್ಲಿ ಜಿಹಾದ್‌ಗೆ ಸ್ಥಾನವಿಲ್ಲ” ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಮೊದಲ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
Love Jihad is a word manufactured by BJP to divide the Nation & disturb communal harmony. Marriage is a matter of personal liberty, bringing a law to curb it is completely unconstitutional & it will not stand in any court of law. Jihad has no place in Love.
1/— Ashok Gehlot (@ashokgehlot51) November 20, 2020
ಇದನ್ನೂ ಓದಿ: ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಮೋದಿ-ಶಾ ಕಾರಣ: ಅಶೋಕ್ ಗೆಹ್ಲೋಟ್
ಮತ್ತೊಂದು ಟ್ವೀಟ್‌ನಲ್ಲಿ “ವಯಸ್ಕರ ನಡುವಿನ ಸಮ್ಮತಿಗೂ ರಾಜ್ಯ ಸರ್ಕಾರದ ಅನುಮತಿ ಅಗತ್ಯ ಎನ್ನುವಂಥ ವಾತಾವರಣವನ್ನು ದೇಶದಲ್ಲಿ ಅವರು ಸೃಷ್ಟಿಸುತ್ತಿದ್ದಾರೆ. ಮದುವೆ ವೈಯಕ್ತಿಕ ನಿರ್ಧಾರ, ಅದರ ಮೇಲೆಯೂ ಅವರು ನಿರ್ಬಂಧ ವಿಧಿಸುತ್ತಿದ್ದಾರೆ. ಇದು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಂತೆ” ಎಂದು ಉಲ್ಲೇಖಿಸಿದ್ದಾರೆ.
“ಲವ್ ಜಿಹಾದ್” ವಿರುದ್ಧದ ಹೇಳಿಕೆಗಳನ್ನು “ಕೋಮು ಸೌಹಾರ್ದತೆಯನ್ನು ಭಂಗಗೊಳಿಸುವ, ಸಾಮಾಜಿಕ ಸಂಘರ್ಷವನ್ನು ಉತ್ತೇಜಿಸುವ ಮತ್ತು ಸಾಂವಿಧಾನಿಕ ನಿಬಂಧನೆಗಳನ್ನು ಕಡೆಗಣಿಸುವ ತಂತ್ರ” ಎಂದು ಗೆಹ್ಲೋಟ್ ಬಣ್ಣಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಟ್ವಿಟ್‌ಗಳು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜಸ್ಥಾನ ಮುಖ್ಯಂತ್ರಿಗೆ ತಿರುಗೇಟು ನೀಡಲು ಹಲವು ಪ್ರಕರಣಗಳಲ್ಲಿ ಬಾಧಿತರಾದ ಯುವತಿಯರನ್ನು ಉಲ್ಲೇಖಿಸಿ ಹಲವಾರು ಟ್ವೀಟ್‌ಗಳನ್ನು ಮಾಡಿದ್ದಾರೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕೂಡ ಸರಣಿ ಟ್ವೀಟ್‌ಗಳನ್ನು ಮಾಡಿದ್ದು, “ಲವ್ ಜಿಹಾದ್” ಕಾರಣದಿಂದಾಗಿ ಸಾವಿರಾರು ಯುವತಿಯರು ಸಿಕ್ಕಿಬಿದ್ದಿದ್ದಾರೆ. ಪ್ರೇಮವಿವಾಹದ ನೆಪದಲ್ಲಿ ಹೆಸರು ಮತ್ತು ಧರ್ಮವನ್ನು ಬದಲಿಸುತ್ತಿರುವುದು ಲವ್ ಜಿಹಾದ್ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ಮದುವೆ ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದ್ದರೆ, ಮಹಿಳೆಯರು ಮದುವೆ ನಂತರ “ತಮ್ಮ ತವರು ಮನೆಯ ಹೆಸರು ಮತ್ತು ಧರ್ಮವನ್ನು ಉಳಿಸಿಕೊಳ್ಳಲು ಮುಕ್ತರಾಗಿಲ್ಲ ಏಕೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ತರಲು ಸಾಧ್ಯವಿಲ್ಲ’- ಸಿದ್ದರಾಮಯ್ಯ
प्रिय अशोक गहलोत जी, क्या हज़ारों युवतियों के साथ प्रेम और विवाह के नाम पर, नाम और धर्म बदल कर हो रहे धोखे को लव जिहाद नहीं कहेंगे?
शादी अगर व्यक्तिगत स्वतंत्रता का मामला है तो फिर महिलाएं अपने मायके का नाम या धर्म रखने के लिए स्वतंत्र क्यों नहीं हैं?
1/#LoveJihaad— Gajendra Singh Shekhawat (@gssjodhpur) November 20, 2020
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದಶಿ ಸಿ.ಟಿ.ರವಿ, ಅಶೋಕ್ ಗೆಹ್ಲೋಟ್ ಅವರ ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಟಿದ್ದಾರೆ.
“ರಾಷ್ಟ್ರವನ್ನು ವಿಭಜಿಸುವುದು ಮತ್ತು ಕೋಮು ಸೌಹಾರ್ದತೆಗೆ ಭಂಗ ತರುವುದು ಕಾಂಗ್ರೆಸ್ಸಿನ ಏಕೈಕ ಕಾರ್ಯ. ಮದುವೆ ವೈಯಕ್ತಿಕ ಸ್ವಾತಂತ್ರ್ಯದ ವಿಷಯವಾಗಿದೆ, ಇದನ್ನು ಯಾರೂ ವಿವಾದ ಮಾಡುವುದಿಲ್ಲ. ಆದರೆ ಸಲ್ಮಾನ್ ಅವರನ್ನು ಮದುವೆಯಾದ ನಂತರ ಸುನೀತಾ ಶಬ್ನಮ್ ಆಗಲು ಕಾರಣವೇನು? ಅದು ನಿಜವಾದ ಪ್ರೀತಿಯಾಗಿದ್ದರೆ, ಹಿಂದೂಗಳನ್ನು ಇಸ್ಲಾಂಗೆ ಮತಾಂತರಗೊಳಿಸಲು ಏಕೆ ಒತ್ತಾಯಿಸಬೇಕು” ಎಂದು ಪ್ರಶ್ನಿಸಿದ್ದಾರೆ.
Dividing Nation & disturbing communal harmony is sole domain of CONgress.
Yes, marriage is a matter of personal liberty, nobody disputes this. But why should Sunita always become Shabnam after marrying Salman?
If it is true love, why should Hindu be forced to convert to Islam? https://t.co/9lBzlit6R3
— C T Ravi ?? ಸಿ ಟಿ ರವಿ (@CTRavi_BJP) November 20, 2020
ವಿಪರ್ಯಾಸವೆಂದರೆ- ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೇ ಸಂಸತ್ತಿನಲ್ಲಿ ಈ ಸಂಬಂಧ ಸ್ಪಷ್ಟನೆ ನೀಡಿ, ಇದುವರೆಗೂ ಯಾವುದೇ ಲವ್ ಜಿಹಾದ್ ನಡೆದಿಲ್ಲ ಎಂದು ಹೇಳಿದ್ದು, ಕಾನೂನಿನಡಿಯಲ್ಲಿ ಈ ಪದವನ್ನು ವ್ಯಾಖ್ಯಾನಿಸಿಲ್ಲ ಎಂದು ಹೇಳಿದೆ.
ಆದರೂ, ಬಿಜೆಪಿ ಆಳ್ವಿಕೆಯ ಹಲವಾರು ರಾಜ್ಯಗಳಲ್ಲಿ “ಲವ್ ಜಿಹಾದ್” ವಿರುದ್ಧ ಕಠಿಣ ಕಾನೂನು ಶೀಘ್ರದಲ್ಲೇ ತರಲಾಗುವುದು ಎಂದು ಘೋಷಿಸಡಲಾಗುತ್ತಿದೆ. ಇಂದು ಉತ್ತರ ಪ್ರದೇಶ ಸರ್ಕಾರ, ಮಂಗಳವಾರ ಹರಿಯಾಣ ಸರ್ಕಾರ, ಮಧ್ಯಪ್ರದೇಶ ಸರ್ಕಾರ ಇದೇ ರೀತಿಯ ಘೋಷಣೆ ಮಾಡಿವೆ.


