ಸಿಎಎ ಪ್ರತಿಭಟನೆಯಲ್ಲಿ ’ಶಾಹಿನ್ ಬಾಗ್ ಅಜ್ಜಿ’ ಎಂದೇ ಪ್ರಖ್ಯಾತಿ ಹೊಂದಿದ್ದ 82 ವರ್ಷದ ಬಿಲ್ಕೀಸ್ ಬಾನುರವರು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ಬಂದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ದೆಹಲಿ ಚಲೋ ರೈತರ ಪ್ರತಿಭಟನೆ ಆರನೇ ದಿನ ಮುಂದುವರೆಯುತ್ತಿದ್ದಂತೆ, 82 ವರ್ಷದ ಬಿಲ್ಕೀಸ್ ದಾದಿ, ಪ್ರತಿಭಟನಾಕಾರರೊಂದಿಗೆ ಸೇರಲು ಸಿಂಧೂ ಗಡಿ(ದೆಹಲಿ-ಹರಿಯಾಣ ಗಡಿ)ಯಲ್ಲಿ ರೈತರಿಗೆ ತನ್ನ ಬೆಂಬಲ ಸೂಚಿಸಲು ಬಂದಿದ್ದರು. ಈ ವೇಳೆ ಪೊಲೀಸರು ಬಿಲ್ಕೀಸ್ ಅವರನ್ನು ಬಂಧಿಸಿದ್ದಾರೆ.
ದೇಶದಾದ್ಯಂತ ಸಿಎಎ ವಿರುದ್ದ ನಡೆಯುತ್ತಿದ್ದ ಪ್ರತಿಭಟನೆಯ ಕೇಂದ್ರ ಬಿಂದು ಆಗಿದ್ದ ಶಾಹಿನ್ ಬಾಗ್‌ನಲ್ಲಿ, ದೆಹಲಿಯ ಚಳಿಗೂ ಜಗ್ಗದೆ ಕೋಟ್ಯಾಂತರ ಚಳವಳಿಗಾರರ ಸ್ಫೂರ್ತಿಯ, ಪ್ರತಿರೋಧದ ಮುಖವಾಗಿ ಅವರು ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ’ಶಾಹಿನ್ ಬಾಗ್ ಅಜ್ಜಿ’ ಬಿಲ್ಕೀಸ್ 2020 ರ ಪ್ರಭಾವಶಾಲಿ ವ್ಯಕ್ತಿ
Delhi: Police detain Shaheen Bagh activist Bilkis Dadi who reached Singhu border (Delhi-Haryana border) to join farmers' protest. https://t.co/UTnTit1oso pic.twitter.com/34lCCtXy5u
— ANI (@ANI) December 1, 2020
“ನಾವು ರೈತರ ಮಕ್ಕಳು, ಇಂದು ರೈತರ ಪ್ರತಿಭಟನೆಯನ್ನು ಬೆಂಬಲಿಸಲು ಹೋಗುತ್ತೇವೆ. ನಾವು ಧ್ವನಿ ಎತ್ತುತ್ತೇವೆ, ಸರ್ಕಾರ ನಮ್ಮ ಮಾತನ್ನು ಕೇಳಬೇಕು’ ಎಂದು ಬಿಲ್ಕಿಸ್ ದಾದಿ ಎಎನ್‌ಐ ಜೊತೆಗೆ ಹೇಳಿದ್ದರು.
’ಶಾಹಿನ್ ಬಾಗ್ ಅಜ್ಜಿ’ ಎಂದೇ ಪ್ರಖ್ಯಾತಿ ಹೊಂದಿದ್ದ ಬಿಲ್ಕೀಸ್ ಬಾನು, ’ಟೈಮ್’ ನಿಯತಕಾಲಿಕೆಯ ವರ್ಷದ ಅತ್ಯಂತ ಪ್ರಭಾವಶಾಲಿ 100 ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.


