Homeಮುಖಪುಟಜಾಗತಿಕ ಭೂ-ರಾಜಕೀಯದಲ್ಲಿ ಮಧ್ಯಪ್ರಾಚ್ಯ ರಾಜಮನೆತನಗಳ ಆಟಗಳು

ಜಾಗತಿಕ ಭೂ-ರಾಜಕೀಯದಲ್ಲಿ ಮಧ್ಯಪ್ರಾಚ್ಯ ರಾಜಮನೆತನಗಳ ಆಟಗಳು

- Advertisement -
- Advertisement -

ಅಮೆರಿಕದ ಖ್ಯಾತ ಸ್ಟಾಂಡ್‌ಅಪ್ ಕಮೆಡಿಯನ್ ಜಾರ್ಜ್ ಕಾರ್ಲಿನ್ ಮಾತು ಹೀಗಿದೆ: “ಕೋತಿ ನಿನ್ನ ಬೆನ್ನು ಬಿಟ್ಟಿತು ಎಂದ ಕ್ಷಣ ಸರ್ಕಸ್ ಪಟ್ಟಣ ಬಿಟ್ಟಿದೆ ಎಂದು ಅರ್ಥ ಅಲ್ಲ. ಇದು ರಾಜಕೀಯ ಆಯ್ಕೆಗಳ ಬಗ್ಗೆ ಮಾಡುವ ತಮಾಷೆ. ಈ ವ್ಯಂಗ್ಯ ಟ್ರಂಪ್ ಅಧಿಕಾರದಿಂದ ಕೆಳಗಿಳಿದ ಖುಷಿಗೆ ಅನ್ವಯಿಸಿದರು, ಆಳುವ ವರ್ಗಗಳು ಮತದಾರರಿಗೆ ಸೃಷ್ಟಿಸುವ ರಾಜಕೀಯ ಆಯ್ಕೆಯ ಹೇಗಿರುತ್ತವೆ ಎಂಬುದರ ಎಚ್ಚರಿಕೆ ಕೂಡ. ಟ್ರಂಪ್ ಬದಲಿಗೆ ಬಂದಿರುವ ಜೋ ಬೈಡೆನ್ ಕೂಡ ತನ್ನ ಯುದ್ಧಪರ ನೀತಿಗಳಲ್ಲಿ, ವಿದೇಶಿ ನೀತಿಗಳಲ್ಲಿ, ಕಾರ್ಪೊರೇಟ್ ಪರ ನೀತಿಗಳಲ್ಲಿ ಟ್ರಂಪ್ ಹಾಗೆಯೆ. ಟ್ರಂಪ್ ಮಾದರಿ ಜೋಕೆರ್ ರೀತಿ ವರ್ತಿಸುವುದಿಲ್ಲ ಎನ್ನುವ ವ್ಯತ್ಯಾಸವಷ್ಟೆ.

2014 ಅಕ್ಟೋಬರ್ ತಿಂಗಳ ಮೊದಲ ವಾರ. ಒಬಾಮ ಅಧಿಕಾರಾವಧಿಯ ಸಮಯ. ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಅಂದು ಅಮೆರಿಕದ ಉಪಾಧ್ಯಕ್ಷರಾಗಿದ್ದ ಜೋ ಬಿಡೆನ್ ಒಬ್ಬ ವಿದ್ಯಾರ್ಥಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ’ಅವರ ಮಿತ್ರ ರಾಷ್ಟ್ರಗಳಾದ ಟರ್ಕಿ, ಸೌದಿ, ಯುಏಇ ಇನ್ನಿತರೆ ಅರಬ್ ರಾಷ್ಟ್ರಗಳು ಸಿರಿಯಾದಲ್ಲಿ ಅಧ್ಯಕ್ಷ ಅಸ್ಸಾದ್‌ನನ್ನು ಶತಾಯಗತಾಯ ಕೆಳಗಿಳಿಸಲು ಕೋಟಿಗಟ್ಟಲೆ ಹೇಗೆ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಸಿ ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದನೆ ಸೃಷ್ಟಿಸಿದವು ಮತ್ತು ಹೇಗೆ ಅಮೆರಿಕ ಈ ಎಲ್ಲದರ ಭಾಗವಾಗಿತ್ತು, ಆದ್ದರಿಂದ ಸುನ್ನಿ ನೆರೆಹೊರೆಯವರ ಒಕ್ಕೂಟವನ್ನು ಹೇಗೆ ಒಟ್ಟುಗೂಡಿಸಲು ಸಾಧ್ಯವಾಯಿತು’ ಎಂಬ ವಿಷಯಗಳನ್ನು ಬಹಿರಂಗಪಡಿಸಿದ್ದಲ್ಲದೆ ’ಇದೆಲ್ಲಾ ಆಗಿದ್ದು ಏಕೆಂದರೆ ಅಮೆರಿಕಕ್ಕೆ ಮತ್ತೊಮ್ಮೆ ಮುಸ್ಲಿಂ ರಾಷ್ಟ್ರಕ್ಕೆ ಹೋಗಿ ಆಕ್ರಮಣಕಾರರಾಗಲು ಸಾಧ್ಯವಿಲ್ಲ. ಅದರ ನೇತೃತ್ವವನ್ನು ಸುನ್ನಿಗಳು ವಹಿಸಬೇಕಾಗಿದೆ’ ಎಂದು ಹೇಳುತ್ತಾರೆ. ಅಷ್ಟರಲ್ಲೇ ಮೈಕ್ ಆಫ್ ಆಗುತ್ತದೆ ಮತ್ತು ನಂತರದ ಧ್ವನಿ ಕೆಲವಷ್ಟೇ ಮಾಧ್ಯಮಗಳಿಗೆ ಸಿಗುತ್ತವೆ. ನಂತರದಲ್ಲಿ ಈ ಸುದ್ದಿ ದೊಡ್ಡದಾಗುವಷ್ಟರಲ್ಲಿ ಬಿಡೆನ್ ತನ್ನ ಮಿತ್ರರಾಷ್ಟ್ರಗಳ ಕ್ಷಮೆ ಕೇಳುತ್ತಾರೆ.

ಟ್ರಂಪ್ ಆಡಳಿತದ ಇತ್ತೀಚಿನ ರಾಜತಾಂತ್ರಿಕ ಸಾಧನೆಯೆಂದರೆ ಕಚ್ಚಾ ತೈಲದೊರೆಗಳಾದ ಸೌದಿ, ಎಮಿರಾಟಿ, ಬ್ರಹರೈನ್, ಕುವೈಟ್, ಕತಾರ್, ಒಮನ್ ರಾಷ್ಟ್ರಗಳ ಆಳುವ ವರ್ಗಗಳನ್ನು ಇಸ್ರೇಲ್ ಜತೆಗೆ ಕೂಡಿಸಿದ್ದು. ವರ್ಷಗಳಿಂದ ಯುಎಇ, ಸೌದಿ ಮತ್ತು ಇತರ ಕೊಲ್ಲಿ ರಾಜಪ್ರಭುತ್ವಗಳು ಕದ್ದು ಮುಚ್ಚಿ ಇಸ್ರೇಲ್ ಜೊತೆ ಭದ್ರತೆ, ಗುಪ್ತಚರ ಮತ್ತು ಮಿಲಿಟರಿ ಕ್ಷೇತ್ರಗಳಲ್ಲಿ ಸಹಕರಿಸುತ್ತಿದ್ದವು. ಅರಬ್ ರಾಷ್ಟ್ರಗಳ ಸುತ್ತಲಿನಲ್ಲಿ ಬೆಳೆಯುತ್ತಿರುವ ಇರಾನಿನ ಪ್ರಭಾವ ಮತ್ತು ಕ್ಷೀಣಿಸುತ್ತಿರುವ ಅಮೆರಿಕ ಇಸ್ರೇಲ್ ಪ್ರಭಾವ ಈ ಅಸಾಮಾನ್ಯ ಒಕ್ಕೂಟಕ್ಕೆ ಕಾರಣವಾಗಿದೆ. ಇರಾನ್ ಬಹುತೇಕವಾಗಿ ಶಿಯಾ ಇಸ್ಲಾಂ ಅನುಸರಿಸಿದರೆ, ಅರಬ್ ರಾಜಮನೆತನಗಳು ಬಹುತೇಕವಾಗಿ ಸುನ್ನಿ ಇಸ್ಲಾಂ ಅನುಸರಿಸುತ್ತದೆ.

ಒಂದು ಕಡೆ ಬಹಿರಂಗಗೊಳ್ಳುತ್ತಿರುವ ಈ ಒಕ್ಕೂಟವಾದರೆ ಇನ್ನೊಂದೆಡೆ ಅರಬ್ ವಸಂತದ ಪ್ರಭಾವ ಇಳಿಮುಖವಾಗಿ ಅಲ್ಲಿನ ಬಹುತೇಕ ರಾಷ್ಟ್ರಗಳಲ್ಲಿ ಸರ್ವಾಧಿಕಾರ (ಈಜಿಪ್ಟ್), ಅರಾಜಕತೆ, ಗುಲಾಮರ ಮಾರಾಟ(ಲಿಬಿಯಾ), ಆಂತರಿಕ ಯುದ್ದ (ಸಿರಿಯಾ), ಯುದ್ಧದ ನಂತರ ಮರುನಿರ್ಮಾಣದ ಹೆಜ್ಜೆಗಳು (ಇರಾಕ್), ಅತ್ಯಂತ ದೊಡ್ಡ ಮಾನವ ನಿರ್ಮಿತ ದುರಂತದ ನರಮೇಧ (ಯೆಮೆನ್) ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ಕುತಂತ್ರ ತಾಂಡವವಾಡಿತ್ತಿದೆ. ಸತತ 40 ವರ್ಷಗಳಿಗಿಂತ ಹೆಚ್ಚು ಅಂತಾರಾಷ್ಟ್ರೀಯ ನಿರ್ಬಂಧಗಳಿಂದ ತತ್ತರಿಸಿಯೂ ಅಮರಿಕಗೆ ಮಣಿಯದೆ ಸೆಟೆದು ನಿಂತಿರುವ ಇರಾನ್ ಈಗ ಹೊಸ ಶತ್ರು. ಇರಾನಿನ ಪ್ರಭಾವ ಇರಾಕ್, ಸಿರಿಯಾ ಮತ್ತು ಯೆಮೆನ್ ಯುದ್ಧದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಗೋಚರಿಸುತ್ತಿದೆ. ಇಸ್ರೇಲ್, ಇರಾನ್, ಸಿರಿಯಾ, ಲೆಬನಾನ್, ಯೆಮೆನ್ ದೇಶದ ಕಲಹಗಳಲ್ಲಿ ಪರೋಕ್ಷ ಯುದ್ಧ ಸಾರಿವೆ.

ಸಿರಿಯಾ ಯುದ್ಧದ ನಂತರ ಇರಾನಿನ ಸೈನಿಕರು ಈಗ ಇಸ್ರೇಲ್ ಗಡಿಯವರೆಗೂ ವಿಸ್ತರಿಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಎಂಬ ಭಯೋತ್ಪಾದಕ ಪೆಡಂಭೂತವನ್ನು ಮಣಿಸುವಲ್ಲಿ ಇರಾನಿಯ ಕ್ರಾಂತಿಕಾರಿ ಸೈನಿಕರು ಬಹುಮುಖ್ಯ ಪಾತ್ರ ವಹಿಸಿದ್ದರು. ಮುಖ್ಯವಾಗಿ ಜನವರಿ 3, 2020ರಲ್ಲಿ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘಿಸಿ ಕೊಲ್ಲಲ್ಪಟ್ಟ ಇರಾನಿ ಕ್ರಾಂತಿಕಾರಿ ಸೈನಿಕ ಪಡೆಯ ಮುಖ್ಯಸ್ಥ ಜನರಲ್ ಸೊಲೈಮಾನಿ ಪಾತ್ರ ಬಹು ದೊಡ್ಡದು. ಒಂದು ಕಡೆ ಇರಾನ್ ದೇಶವನ್ನು ಅಮೆರಿಕ, ಇಸ್ರೇಲ್ ಮತ್ತು ಹೊಸ ಒಕ್ಕೂಟದ ಪಡೆಗಳು ಸುತ್ತುವರೆದರೆ. ಇರಾನಿನ ಸೈನಿಕರು ಇಸ್ರೇಲ್ ಮತ್ತು ಅರಬ್ಬೀ ರಾಜಪ್ರಭುತ್ವಗಳನ್ನೂ ಸುತ್ತುವರೆದಿದ್ದಾರೆ. ಸಾಂಪ್ರದಾಯಿಕ ಯುದ್ಧದಲ್ಲಿ ಇರಾನ್, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಗೆಲ್ಲಲಾಗುವುದಿಲ್ಲ. ಆದರೆ ಅಸಂಪ್ರದಾಯಕ ಯುದ್ಧದಲ್ಲಿ ಇರಾನ್ ಮೇಲುಗೈ ಸಾಧಿಸಿದೆ. ಇರಾನ್‌ಗೆ ಸಾಮ್ರಾಜ್ಯಶಾಹಿ ರಶಿಯಾ ಮತ್ತು ಚೀನಾ ಬೆಂಬಲವಿಲ್ಲದೆ ಯಾವುದೇ ತರಹದ ಗೆಲುವು ಅಸಾಧ್ಯ. ಆದ್ದರಿಂದ ಪ್ರತಿರೋಧದ ಶಕ್ತಿಯಾಗಿ ಇರಾನ್, ರಶಿಯಾ ಮತ್ತು ಚೀನಾ ಒಂದಾಗುತ್ತಿದ್ದಾರೆ, ತನ್ನ ದುರಹಂಕಾರಿ, ಸರ್ವಾಧಿಕಾರಿ, ದಮನಕಾರಿ ನಡೆಗಳಿಂದ ಅರಬ್ ಒಕ್ಕೊಟ ಅಮೇರಿಕ ಮತ್ತು ಇಸ್ರೇಲ್ ಜೊತೆ ಗುರುತಿಸಿಕೊಳ್ಳುತ್ತಿದೆ.

ಸಾಮ್ರಾಜ್ಯಶಾಹಿ ಶಕ್ತಿಗಳ ಪೈಪೋಟಿ ಮತ್ತು ಇಸ್ಲಾಮಿಕ್ ಪ್ರಪಂಚದ ಮೇಲೆ ಬೆಳೆಯುತ್ತಿರುವ ಚೀನಾದ ಪ್ರಭಾವ
ಸೋವಿಯೆತ್ ಯೂನಿಯನ್ ಪತನದ ನಂತರ ಏಕಪಕ್ಷೀಯವಾಗಿದ್ದ ಜಾಗತಿಕ ರಾಜಕೀಯ ಚೀನಾ ಪ್ರಗತಿಯಿಂದ ಮತ್ತೊಮ್ಮೆ ಬಹುಮುಖ ಜಾಗತಿಕ ರಾಜಕೀಯಕ್ಕೆ ನಾಂದಿಯಾಗಿದೆ. ಚೀನಾ ತನ್ನ ರಾಜತಾಂತ್ರಿಕತೆ ಮತ್ತು ಆರ್ಥಿಕ ಶಕ್ತಿಯಿಂದ ಇಸ್ಲಾಮಿಕ್ ರಾಷ್ಟ್ರಗಳತ್ತ ಒಳ್ಳೆಯ ಸ್ನೇಹ ಮತ್ತು ಬಾಂಧವ್ಯವನ್ನು ಸಾಧಿಸಿ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಗೆ ನೆರವಾಗುತ್ತಿದೆ. ಚೀನಾ ತನ್ನ ಎರಡನೆ ಸಿಲ್ಕ್ ರೋಡ್ ಯೋಜನೆಯಡಿ ಪಾಕಿಸ್ತಾನ, ಇರಾನ್, ಇರಾಕ್, ಸಿರಿಯಾ, ಈಜಿಪ್ಟ್, ಸೌದಿ, ಎಮಿರಾಟಿ, ಓಮನ್, ಕತಾರ್, ಟರ್ಕಿ, ಆಫ್ರಿಕಾದ ಉತ್ತರ ಭಾಗದ ಮುಸ್ಲಿಂ ರಾಷ್ಟ್ರಗಳು ಮತ್ತು ಆಗ್ನೇಯ ಏಷ್ಯಾದ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ ಬ್ರುನೈ ರಾಷ್ಟ್ರಗಳೊಂದಿಗೆ ಸ್ನೇಹ ಸಂಬಂಧಗಳನ್ನು ಹೆಚ್ಚಿಸಿಕೊಳ್ಳುತ್ತಿದೆ.

ತನ್ನ ತಂತ್ರಜ್ಞಾನ, ಮೂಲಸೌಕರ್ಯ ಯೋಜನೆಗಳು, ಬಂದರುಗಳು, ರೈಲ್ವೆ ಸಂಪರ್ಕ, ವ್ಯಾಪಾರ ವಹಿವಾಟು ಮೂಲಕ ತನ್ನ ಶಕ್ತಿಯನ್ನು ಶರವೇಗದಲ್ಲಿ ಬಲಪಡಿಸಿಕೊಳ್ಳುತ್ತಿದೆ. ಹೆಚ್ಚಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಚೀನಾ ’ಪಾಲುದಾರಿಕೆ’, ’ರಾಜಕೀಯ ಸಮಾನತೆ’, ಮತ್ತು ’ಇಬ್ಬರ ಸಹಭಾಗಿತ್ವದ ಗೆಲುವು’ ಸಿದ್ಧಾಂತದ ಸಹಕಾರಿಯಂತೆ ಕಂಡರೆ, ಅದೇ ಪಾಶ್ಚಾತ್ಯ ಅಮೆರಿಕದ ಅಫ್ಘಾನಿಸ್ತಾನ, ಇರಾಕ್, ಸಿರಿಯಾ, ಲಿಬಿಯಾ, ಸುಡಾನ್, ಯೆಮೆನ್ ಯುದ್ಧಗಳ ನಂತರ ಹಸ್ತಕ್ಷೇಪವಾದಿ ವೈರಿಯಾಗಿ ಕಾಣತೊಡಗಿದೆ. ಸೋವಿಯೆತ್ ಪತನದ ನಂತರ ಸುಮ್ಮನಿದ್ದ ರಶಿಯಾ ಮತ್ತೆ ತನ್ನ ಮಿಲಿಟರಿ ಸಾಮರ್ಥ್ಯನನ್ನು ಸಿರಿಯಾದಲ್ಲಿ ನಿರೂಪಿಸಿದೆ. ಆದರೆ ರಷ್ಯಾಗೆ ತನ್ನದೇ ಆದ ಆರ್ಥಿಕ ಸವಾಲುಗಳಿವೆ. ಆದ್ದರಿಂದ ಅದು ಚೀನಾಗೆ ಹತ್ತಿರವಾಗುತ್ತಿದೆ.

ಇವೆಲ್ಲದರಲ್ಲಿ ಹೆಚ್ಚಾಗಿ ನಷ್ಟ ಅನುಭವಿಸುತ್ತಿರುವುದೇ ಭಾರತ. ಮೋದಿ ಸರ್ಕಾರ ತನ್ನೆಲ್ಲ ಸಾಂಪ್ರದಾಯಿಕ ಸ್ನೇಹಗಳನ್ನು ಬದಿಗಿಟ್ಟು ಅಮೆರಿಕ ಇಸ್ರೇಲ್ ಮತ್ತು ಅರಬ್ಬೀ ರಾಜಮನೆತನಗಳ ಸ್ನೇಹಕ್ಕೆ ಕೈ ಚಾಚುತ್ತಿದೆ. ಅಮೆರಿಕದ ಒತ್ತಡದಿಂದ ಇರಾನಿನೊಂದಿಗಿನ ಐತಿಹಾಸಿಕ ಬಾಂಧವ್ಯವನ್ನು, ಅನನ್ಯ ಸ್ನೇಹವನ್ನು ಹಾಳು ಮಾಡಿಕೊಂಡಿರುವ ಭಾರತ ಚಾಬಹಾರ್ ಬಂದರು ಮತ್ತು ಇರಾನಿನ ಬಹುದೊಡ್ಡ ಕಚ್ಚಾ ತೈಲ ಭಾವಿ ಫಾರ್ಜಾಡ್-ಬಿ ಕಳೆದುಕೊಂಡಿದೆ. ತನ್ನ ಮುಸ್ಲಿಂ ದ್ವೇಷಿ ರಾಜಕಾರಣದಿಂದ ತನ್ನ ನೆರೆಹೊರೆಯ ರಾಷ್ಟ್ರಗಳೆನ್ನಲ್ಲ ದೂರ ಮಾಡಿಕೊಂಡಿರುವ ಭಾರತ ಈಗ ತನ್ನ ಸಾಂಪ್ರದಾಯಿಕ ಮಿತ್ರರಾಷ್ಟ್ರ ರಷ್ಯಾವನ್ನು ಕೂಡ ದೂರ ಮಾಡಿಕೊಳ್ಳುತ್ತಿದೆ. ಇದಕ್ಕೆ ಸಾಕ್ಷಿಯಾಗಿ ರಷ್ಯಾದ ಅಂತರರಾಷ್ಟ್ರೀಯ ವ್ಯವಹಾರಗಳ ಮಂಡಳಿಯ ಅಂದ್ರೆ ಕೋರ್ಟುನೋವ್, ಚೀನಾದ ಗ್ಲೋಬಲ್ ಟೈಮ್ಸ್‌ನಲ್ಲಿ ಬರೆದಿರುವ ’ರಶಿಯಾ ಪೂರ್ವಕ್ಕೆ ಭಾರತ ಪಶ್ಚಿಮಕ್ಕೆ, ಸಂಬಂಧಗಳ ಹದಗೆಡುವಿಕೆ’ ಬರಹವೇ ಸಾಕ್ಷಿ.

ಮಧ್ಯಪ್ರಾಚ್ಯ ಏಷ್ಯಾ ಐತಿಹಾಸಿಕವಾಗಿ ಇಡೀ ಜಗತ್ತಿಗೆ ಬಹಳಷ್ಟು ಹೊಸದನ್ನು ಕೊಟ್ಟಿದೆ. ಒಳ್ಳೆಯ ಬದಲಾವಣೆಗಳಿಗೂ, ಕೆಟ್ಟ ಬದಲಾವಣೆಗಳಿಗೂ ನಾಂದಿ ಹಾಡಿದೆ. ಆದರೆ ಪ್ಯಾಲೆಸ್ಟೀನ್‌ಅನ್ನು ನಡುನೀರಿನಲ್ಲಿ ಕೈಬಿಟ್ಟು ಬಹಿರಂಗವಾಗಿ ಅನಾವರಣಗೊಳ್ಳುತ್ತಿರುವ ಈ ಸರ್ವಾಧಿಕಾರಿ ರಾಜಮನೆತನಗಳ ಒಕ್ಕೂಟದಿಂದ ಅರಬ್ ರಾಷ್ಟ್ರಗಳಿಂದಾಚೆಇರುವ ೮೦% ಮುಸಲ್ಮಾನರ ಮೇಲೆ ಯಾವ ಪರಿಣಾಮ ಬೀರುತ್ತದೆಯೆಂದು ಕಾದು ನೋಡಬೇಕಿದೆ.


ಇದನ್ನೂ ಓದಿ: ಟ್ರಂಪ್ ಒಬ್ಬ ವಿಫಲ ನಾಯಕ, ಅವರು ಇತಿಹಾಸದಲ್ಲಿ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ: ಅರ್ನಾಲ್ಡ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...