Homeಮುಖಪುಟರಾಮ ಮಂದಿರ ದೇಣಿಗೆ ಸಂಗ್ರಹ ಮೆರವಣಿಗೆಯಲ್ಲಿ ಘರ್ಷಣೆ: ಗುಜರಾತಿನಲ್ಲಿ 40 ಜನರ ಬಂಧನ

ರಾಮ ಮಂದಿರ ದೇಣಿಗೆ ಸಂಗ್ರಹ ಮೆರವಣಿಗೆಯಲ್ಲಿ ಘರ್ಷಣೆ: ಗುಜರಾತಿನಲ್ಲಿ 40 ಜನರ ಬಂಧನ

- Advertisement -
- Advertisement -

ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಭಾನುವಾರ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಮೂರು ಪ್ರಕರಣಗಳನ್ನು ದಾಖಲಿಸಿದ ನಂತರ, ಕನಿಷ್ಠ 40 ಜನರನ್ನು ಬಂಧಿಸಲಾಗಿದೆ. ಕೊಲೆ, ಗಲಭೆ, ಅಗ್ನಿಸ್ಪರ್ಶ ಮತ್ತು ಇತರ ಪಿತೂರಿ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣಕ್ಕೆ ಹಣ ಸಂಗ್ರಹಿಸುವ ಮೆರವಣಿಗೆಯಲ್ಲಿ ಭಾನುವಾರ ಎರಡು ಸಮುದಾಯಗಳ ಸದಸ್ಯರ ನಡುವೆ ಘರ್ಷಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಲಪಂಥೀಯ ಗುಂಪು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಯೋಜಿಸಿದ್ದ ರ‍್ಯಾಲಿಯಲ್ಲಿ, “ಜೋರಾಗಿ ಧಾರ್ಮಿಕ ಘೋಷಣೆಗಳನ್ನು’ ಕೂಗಿದರು.. ಅದು ಮತ್ತೊಂದು ಸಮುದಾಯವನ್ನು ಕೆರಳಿಸಿತು” ಎಂದು ತಿಳಿಸಿರುವ ಪೊಲೀಸರು. “ಕತ್ತಿಗಳು, ರಾಡ್‌ಗಳು ಮತ್ತು ಬೆಂಕಿ ಹಚ್ಚುವಿಕೆಯ ಘಟನೆಗಳಿಗೆ ಇದು ಕಾರಣವಾಯಿತು’ ಒಂದು ದೂರಿನಲ್ಲಿ ದಾಖಲಾಗಿದೆ ಎಂದು ಗಾಯಗೊಂಡ ಪೋಲೀಸ್ ಒಬ್ಬರು ವಿವರಿಸಿದ್ದಾರೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಉಪಯೋಗಿಸುವುದು ಅನಿವಾರ್ಯವಾಯಿತು ಎಂದು ಕಚ್ (ಪೂರ್ವ) ಪೊಲೀಸ್ ವರಿಷ್ಠಾಧಿಕಾರಿ ಮಯೂರ್ ಪಾಟೀಲ್ ತಿಳಿಸಿದ್ದಾರೆ.

ರ‍್ಯಾಲಿಯ ನಂತರ, ಕಿಡಾನಾ ಗ್ರಾಮದಲ್ಲಿ ಘರ್ಷಣೆಯ ಸ್ಥಳದಿಂದ 200 ಮೀಟರ್ ದೂರದಲ್ಲಿ ಜಾರ್ಖಂಡ್‌ನ ವಲಸೆ ಕಾರ್ಮಿಕನ ಶವ ಪತ್ತೆಯಾಗಿದೆ, ಮತ್ತು ಆ ಹಿಂಸಾಚಾರದ ಭಾಗವಾಗಿ ಅವನು ಕೊಲ್ಲಲ್ಪಟ್ಟಿದ್ದಾನೆಯೇ ಎಂದು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ” ಎಂದು ಪಾಟೀಲ್ ಹೇಳಿದರು.

ಭಾನುವಾರ “ರಥಯಾತ್ರೆ” ನಡೆಸಲು ಈ ಗುಂಪಿಗೆ ಅಗತ್ಯವಾದ ಅನುಮತಿ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್, ಉಜ್ಜಯಿನಿ ಮತ್ತು ಮಾಂಡ್ಸೌರ್ ಜಿಲ್ಲೆಗಳು ಸೇರಿದಂತೆ ದೇಶದ ವಿವಿಧ ಭಾಗಗಳಿಂದ ರಾಮ್ ದೇವಾಲಯದ ನಿಧಿ ಸಂಗ್ರಹ ರ‍್ಯಾಲಿಗಳಲ್ಲಿ ಇದೇ ರೀತಿಯ ಘರ್ಷಣೆಗಳು ವರದಿಯಾಗಿವೆ.
ಅಯೋಧ್ಯ ರಾಮ್ ದೇವಾಲಯ ನಿರ್ಮಾಣಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ 1.11 ಲಕ್ಷ ರೂ. ಚೆಕ್ ಕಳಿಸುವುದರ ಜೊತೆಗೆ, ಪತ್ರವೊಂದನ್ನು ಬರೆದ ಕಾಂಗ್ರೆಸ್‌ನ ದಿಗ್ವಿಜಯ ಸಿಂಗ್ ಅವರು ಇತ್ತೀಚೆಗೆ ಈ ಸಮಸ್ಯೆಯನ್ನು ಎತ್ತಿ ತೋರಿಸಿದ್ದರು.

“ಲಾಠಿ ಮತ್ತು ಕತ್ತಿಗಳನ್ನು ಹೊತ್ತುಕೊಂಡು ಸಮುದಾಯವನ್ನು ಪ್ರಚೋದಿಸಲು ಘೋಷಣೆಗಳನ್ನು ಎತ್ತುವುದು ಯಾವುದೇ ಧಾರ್ಮಿಕ ಸಮಾರಂಭದ ಒಂದು ಭಾಗವಾಗಲು ಸಾಧ್ಯವಿಲ್ಲ. ಇಂತಹ ಬೆಳವಣಿಗೆಗಳು ಹಿಂದೂ ಧರ್ಮದ ಭಾಗವಾಗಲು ಸಾಧ್ಯವಿಲ್ಲ … ಇಂತಹ ಬೆಳವಣಿಗೆಗಳು ಸಾಮಾಜಿಕ ಸಾಮರಸ್ಯವನ್ನು ಹಾನಿಗೊಳಿಸುತ್ತವೆ. ಇತರ ಧಾರ್ಮಿಕ ಸಮುದಾಯಗಳು ದೇವಾಲಯ ನಿರ್ಮಾಣಕ್ಕೆ ವಿರುದ್ಧವಾಗಿಲ್ಲ. ಆದ್ದರಿಂದ, ದೇಶದ ಪ್ರಧಾನ ಮಂತ್ರಿಯಾಗಿ, ಶಸ್ತ್ರಾಸ್ತ್ರಗಳನ್ನು ಹೊತ್ತ ಜನರು ಇತರ ಸಮುದಾಯಗಳನ್ನು ಪ್ರಚೋದಿಸುವ ನಿಧಿಸಂಗ್ರಹ ಮೆರವಣಿಗೆಗಳನ್ನು ನಿಲ್ಲಿಸುವಂತೆ ನೀವು ರಾಜ್ಯಗಳಿಗೆ ನಿರ್ದೇಶಿಸಬೇಕು’ ಎಂದು ದಿಗ್ವಿಜಯ ಸಿಂಗ್ ಮತ್ತು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.


ಇದನ್ನೂ ಓದಿ: ‘ರಿಪಬ್ಲಿಕ್ ಟಿವಿಯನ್ನು ಸಸ್ಪೆಂಡ್ ಮಾಡಿ’- ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಶನ್‌ಗೆ ಒತ್ತಾಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...