ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕ್ಯಾಪಿಟಲ್ ಮೇಲಿನ ದಾಳಿಯನ್ನು ಖ್ಯಾತ ಬಾಡಿ ಬಿಲ್ಡರ್, ಟರ್ಮಿನೇಟರ್ ಖ್ಯಾತಿಯ ಹಾಲಿವುಡ್ ನಟ ಮತ್ತು ಕ್ಯಾಲಿಫೋರ್ನಿಯದ ಮಾಜಿ ಗವರ್ನರ್ ಅರ್ನಾಲ್ಡ್ ಖಂಡಿಸಿದ್ದು, ಈ ಕೃತ್ಯವನ್ನು ಜರ್ಮನಿಯ ನಾಜಿ ದೌರ್ಜನ್ಯಕ್ಕೆ ಹೋಲಿಸಿದ್ದಾರೆ. ಜೊತೆಗೆ ಈ ಕುರಿತು ತಾವು ಮಾಡಿರುವ ವೀಡಿಯೋದಲ್ಲಿ ಐಕ್ಯತೆಗಾಗಿ ಮನವಿ ಮಾಡಿದ್ದಾರೆ.
ಈ ಕುರಿತ ವೀಡಿಯೋವನ್ನು ಅರ್ನಾಲ್ಡ್ ಟ್ವೀಟ್ ಮಾಡಿದ್ದು, “ಜಗತ್ತಿನಾದ್ಯಂತ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಈ ವಾರ ಕ್ಯಾಪಿಟಲ್ ಮೇಲೆ ನಡೆದ ದಾಳಿಯ ಕುರಿತು ನನ್ನ ಅಮೆರಿಕದ ಪ್ರಜೆಗಳಿಗೆ ಮತ್ತು ಗೆಳೆಯರಿಗೆ ನನ್ನ ಸಂದೇಶ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಅಮೆರಿಕ ಕ್ಯಾಪಿಟಲ್ ಗಲಭೆ: ತ್ರಿವರ್ಣ ಧ್ವಜ ಹಾರಿಸಿದವರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲು
My message to my fellow Americans and friends around the world following this week's attack on the Capitol. pic.twitter.com/blOy35LWJ5
— Arnold (@Schwarzenegger) January 10, 2021
ಇದನ್ನೂ ಓದಿ: ಅಮೆರಿಕ ಇತಿಹಾಸದಲ್ಲೆ ನನ್ನ ಅವಧಿ ಅತ್ಯುತ್ತಮ; ಅದೀಗ ಕೊನೆಯಾಗುತ್ತಿದೆ- ಟ್ರಂಪ್
1938 ರಲ್ಲಿ ನಾಜಿಗಳು “ಕ್ರಿಸ್ಟಲ್‌ನಚ್ ಅಥವಾ ನೈಟ್ ಆಫ್ ಬ್ರೋಕನ್ ಗ್ಲಾಸ್” ಎಂದು ಕರೆಯಲ್ಪಡುವ ದಾಳಿಯಲ್ಲಿ ಯಹೂದಿ ಒಡೆತನದ ಮಳಿಗೆಗಳ ಕಿಟಕಿಗಳನ್ನು ಒಡೆದಿದ್ದರು. ಈ ದಾಳಿಯನ್ನು ಟ್ರಂಪ್ ಬೆಂಬಲಿಗರು ಕ್ಯಾಪಿಟಲ್ ಮೇಲೆ ಮಾಡಿದ ದಾಳಿಗೆ ಹೋಲಿಸಿದ್ದಾರೆ.
“ಬುಧವಾರ ಅಮೆರಿಕದಲ್ಲಿ ಬ್ರೋಕನ್ ಗ್ಲಾಸ್ ದಿನ” ಎಂದು ಅಮೆರಿಕ ಮತ್ತು ಕ್ಯಾಲಿಫೋರ್ನಿಯ ಧ್ವಜಗಳ ನಡುವೆ ಕುಳಿತು ವೀಡಿಯೋದಲ್ಲಿ ಹೇಳಿದ್ದಾರೆ. ಇದು ಸಾಕಷ್ಟು ವೈರಲ್ ಆಗಿತ್ತು. ಮುಂದುವರಿದು, ತನ್ನ ಬಾಲ್ಯ ಮತ್ತು ತನ್ನ ಕುಟುಂಬದ ಬಗ್ಗೆ ಮತ್ತು ತಾವು ಅನುಭವಿಸಿದ ಕಷ್ಟಗಳನ್ನು ವಿವರಿಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಸಂಸತ್ ದಾಳಿಯಲ್ಲಿ ಭಾರತೀಯ ಧ್ವಜ ಹಾರಾಟ: ವ್ಯಾಪಕ ಟೀಕೆ
ಇದು ನೋವಿನ ಸಂಗತಿಯಾದ್ದರಿಂದ ಇದುವರೆಗೂ ಸಾರ್ವಜನಿಕವಾಗಿ ಇದನ್ನು ಹಂಚಿಕೊಂಡಿರಲಿಲ್ಲ. ನನ್ನ ತಂದೆ ವಾರದಲ್ಲಿ 2-3 ಬಾರಿ ಕುಡಿದು ಬಂದು ನನ್ನನ್ನು ಮತ್ತು ನನ್ನ ತಾಯಿಯನ್ನು ಹೊಡೆಯುತ್ತಿದ್ದರು. ಹೆದರಿಸುತ್ತಿದ್ದರು. ನನ್ನ ತಂದೆ ಮತ್ತು ನಮ್ಮ ಕೆಲವು ನೆರೆಹೊರೆಯವರನ್ನು ಸುಳ್ಳಿನ ಮೂಲಕ ದಾರಿ ತಪ್ಪಿಸಲಾಗಿತ್ತು. ಇಂತಹ ಸುಳ್ಳುಗಳಿಗೆ ಯಾವಾಗಲೂ ಮುನ್ನಡೆಯಿರುತ್ತದೆ.
ಇಂತಹ ಸುಳ್ಳುಗಳಿಂದಲೇ ಟ್ರಂಪ್ ಕೂಡಾ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಆರೋಪಿಸಿದ ಅರ್ನಾಲ್ಡ್, “ಅಧ್ಯಕ್ಷ ಟ್ರಂಪ್, ಚುನಾವಣೆಯ ಫಲಿತಾಂಶಗಳನ್ನು ಮತ್ತು ನ್ಯಾಯಯುತವಾಗಿ ನಡೆದ ಚುನಾವಣೆಯನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ಸುಳ್ಳಿನಿಂದ ಜನರನ್ನು ತಪ್ಪುದಾರಿಗೆಳೆಯುವ ಮೂಲಕ ಅವರು ದೊಂಬಿಯೆಬ್ಬಿಸಲು ಬಯಸಿದರು. ಟ್ರಂಪ್ ಒಬ್ಬ ವಿಫಲ ನಾಯಕ. ಅವರು ಇತಿಹಾಸದಲ್ಲಿ ಒಬ್ಬ ಕೆಟ್ಟ ಅಧ್ಯಕ್ಷರಾಗಿ ಉಳಿಯುತ್ತಾರೆ” ಎಂದು ಹೇಳಿದ್ದಾರೆ.
“ನಿಮ್ಮ ರಾಜಕೀಯ ನಿಲುವು ಮತ್ತು ಸಂಬಂಧ ಏನೇ ಇರಲಿ. ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡೆನ್‌ಗೆ ಶುಭ ಹಾರೈಸಿ. ‘ಅಧ್ಯಕ್ಷರಾಗಿ ಚುನಾಯಿತರಾಗಿರುವ ಬೈಡೆನ್, ನಮ್ಮ ಅಧ್ಯಕ್ಷರಾಗಿರುವ ನಿಮ್ಮ ಯಶಸ್ಸನ್ನು ನಾವು ಬಯಸುತ್ತೇವೆ. ನೀವು ಯಶಸ್ವಿಯಾದರೆ, ನಮ್ಮ ರಾಷ್ಟ್ರವು ಯಶಸ್ವಿಯಾಗುತ್ತದೆ’ ಎಂದು ನಮ್ಮೊಂದಿಗೆ ಸೇರಿ ಹರಸಿ ಎಂದು ಅರ್ನಾಲ್ಡ್ ಹೇಳಿದ್ದಾರೆ.
ಇದನ್ನೂ ಓದಿ: ಜೋ ಬೈಡನ್-ಕಮಲಾ ಹ್ಯಾರಿಸ್ ಗೆಲುವನ್ನು ಅಂಗೀಕರಿಸಿದ ಅಮೆರಿಕ ಕಾಂಗ್ರೆಸ್
ಕೊನೆಯದಾಗಿ ಅಮೆರಿಕದ ಸಂವಿಧಾನವನ್ನು ಬದಲಾಯಿಸಬೇಕು ಎಂದು ಭಾವಿಸುವವರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದು, “ನೀವು ಎಂದಿಗೂ ಗೆಲ್ಲುವುದಿಲ್ಲ” ಎಂದು ಹೇಳಿದ್ದಾರೆ.
ಅಮೆರಿಕದ ಚುನಾವಣೆ ಮುಗಿದು, ಜೋ ಬೈಡೆನ್ ಗೆಲುವು ಸಾಧಿಸಿದ್ದರೂ ಸಹ ಡೊನಾಲ್ಡ್ ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮೊದಲಿನಿಂದಲೂ ಆರೋಪಿಸುತ್ತಲೇ ಇದ್ದಾರೆ. ಇದರ ಭಾಗವಾಗಿ ಟ್ರಂಪ್ ಬೆಂಬಲಿಗರು ಇತ್ತೀಚೆಗೆ ಶ್ವೇತ ಭವನಕ್ಕೆ ಮುತ್ತಿಗೆ ಹಾಕಿದ್ದರು. ಇಲ್ಲಿ ಭಾರತದ ಧ್ವಜವನ್ನೂ ಬಳಸಲಾಗಿತ್ತು. ಇದಕ್ಕೆ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಟ್ರಂಪ್ ಹಿಂಸೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅವರ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ಅಮೆರಿಕಾ ನಾಲ್ಕು ಐತಿಹಾಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ – ಜೋ ಬೈಡೆನ್