ರಕ್ತದಾನ ಶಿಬಿರದಲ್ಲಿ ಮಾತನಾಡುತ್ತಿದ್ದ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್, ಬಿಜೆಪಿ ಪಕ್ಷವನ್ನು ಕೊರೊನಾ ವೈರಸ್‌ಗಿಂತ ಅಪಾಯಕಾರಿ ಎಂದು ಸಾರ್ವಜನಿಕವಾಗಿ ಜರಿದಿದ್ದಾರೆ.
“ನಿಮ್ಮ ಕಿವಿ ಮತ್ತು ಕಣ್ಣುಗಳನ್ನು ತೆರೆದಿಡಿ ಯಾಕೆಂದರೆ ನಿಮ್ಮ ಸುತ್ತಲೂ ಕೊರೊನಾಗಿಂತಲೂ ಹೆಚ್ಚು ಅಪಾಯಕಾರಿ ಜನರು ಇದ್ದಾರೆ. ಬಿಜೆಪಿ ಕೊರೊನಾಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ಯಾಕೆಂದರೆ ಅವರಿಗೆ ನಮ್ಮ ಸಂಸ್ಕೃತಿ ಅರ್ಥವಾಗುವುದಿಲ್ಲ, ಅವರಿಗೆ ಮಾನವೀಯತೆ ಅರ್ಥವಾಗುವುದಿಲ್ಲ. ಅವರಿಗೆ ನಮ್ಮ ಕಠಿಣ ಪರಿಶ್ರಮದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ವ್ಯವಹಾರ ಮಾತ್ರ ತಿಳಿದಿದೆ” ಎಂದು ಅವರು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣೆ: AAP ಯ ದೆಹಲಿ ಮಾದರಿ ಪ್ರಚಾರ ತಂತ್ರ ಬಳಸಲಿರುವ ಮಮತಾ ಬ್ಯಾನರ್ಜಿ
“ಅವರಲ್ಲಿ ಸಾಕಷ್ಟು ಹಣವಿದೆ. ಅವರು ಅದನ್ನು ಎಲ್ಲೆಡೆ ಹಂಚಿ, ತದನಂತರ ಧರ್ಮದ ಆಧಾರದ ಮೇಲೆ ಜನರನ್ನು ಒಡೆದು ಗಲಭೆಗಳನ್ನು ಪ್ರಚೋದಿಸುತ್ತಾರೆ” ಎಂದು ಅವರು ಬಹಿರಂಗ ಸಭೆಯಲ್ಲಿ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿಯ ಸಾಮಾಜಿಕ ಜಾಲತಾಣ ಮುಖ್ಯಸ್ಥ ಅಮಿತ್ ಮಾಳವಿಯಾ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ. “ಪಶ್ಚಿಮ ಬಂಗಾಳದಲ್ಲಿ ಕೆಟ್ಟ ರೀತಿಯ ಲಸಿಕೆ ರಾಜಕಾರಣ ನಡೆಯುತ್ತಿದೆ. ಮೊದಲನೆಯದಾಗಿ ಮಮತಾ ಬ್ಯಾನರ್ಜಿಯ ಸಂಪುಟ ಸಚಿವರಾದ ಸಿದ್ದಿಕುಲ್ಲಾ ಚೌಧರಿ ಲಸಿಕೆಗಳನ್ನು ಸಾಗಿಸುವ ಲಾರಿಗಳನ್ನು ಹಿಡಿದಿದ್ದಾರೆ. ಈಗ ಟಿಎಂಸಿ ಸಂಸದೆ ಬಿಜೆಪಿಯನ್ನು ಕೊರೊನಾಗೆ ಹೋಲಿಸಿ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ಅಪಪ್ರಚಾರ ಪ್ರಚಾರ ಮಾಡುತ್ತಿದ್ದಾರೆ. ಆದರೆ ಪಿಶಿ (ಆಂಟಿ) ಮೌನವಾಗಿದ್ದಾರೆ. ಯಾಕೆ? ರಾಜಿ ಮಾಡಿಕೊಂಡಿದ್ದಾರೆಯೆ?” ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯ 6-7 ಸಂಸದರು ಟಿಎಂಸಿ ಸೇರಲಿದ್ದಾರೆ: ಬಿಜೆಪಿಗೆ ಆಘಾತ ನೀಡಿದ ಜ್ಯೋತಿಪ್ರಿಯ ಮಲ್ಲಿಕ್
In WB, worst kind of vaccine politics is unfolding. First, Siddiqulla Chowdhury, a sitting minister in Mamata Banerjee’s cabinet, holds up trucks carrying vaccines. Now a TMC MP, campaigning in Muslim majority Deganga, likens BJP to Corona.
But Pishi is silent. Why? Appeasement?
— Amit Malviya (@amitmalviya) January 15, 2021
ಬುಧವಾರ ಕೋಲ್ಕತ್ತಾದಿಂದ ಬಂಕುರಾಕ್ಕೆ ಲಸಿಕೆಗಳನ್ನು ಸಾಗಿಸುತ್ತಿದ್ದ ಆರೋಗ್ಯ ಇಲಾಖೆ ವ್ಯಾನ್ ಬುರ್ದ್ವಾನ್‌ನ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡ ಘಟನೆಯನ್ನಾಗಿದೆ ಅವರು ಉಲ್ಲೇಖಿಸಿದ್ದು. ಬಂಗಾಳದ ಸಚಿವ ಸಿದ್ದಿಕುಲ್ಲಾ ಚೌಧರಿ ಅವರು ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಅಲ್ಲಿ ಟ್ರಾಫಿಕ್ ಜಾಂ ಉಂಟಾಗಿತ್ತು ಎಂದು ವರದಿಯಾಗಿದೆ. ನಂತರ ಲಸಿಕೆಯ ವಾಹನವನ್ನು ಪೊಲೀಸರು ಬೇರೆ ಮಾರ್ಗದ ಮೂಲಕ ಕಳುಹಿಸಿಕೊಟ್ಟಿದ್ದರು.
ಸಿದ್ದಿಕುಲ್ಲಾ ಚೌಧರಿ ಹೆದ್ದಾರಿ ಪ್ರತಿಭಟನೆಯ ಮೊದಲೇ ಘೋಷಿಸಲಾಗಿತ್ತು ಮತ್ತು ಅದರ ಬಗ್ಗೆ ಪೊಲೀಸರಿಗೆ ಹಿಂದೆಯೆ ತಿಳಿಸಲಾಗಿತ್ತು ಎನ್ನಲಾಗಿದೆ. ಆದರೆ ಆ ಮಾರ್ಗದಲ್ಲಿ ಲಸಿಕೆಗಳಿರುವ ವಾಹನ ಆಗಮಿಸುತ್ತಿರುವುದನ್ನು ಪೊಲೀಸರಿ ಮಾಹಿತಿ ನೀಡಿರಲಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ಚುನಾವಣೆ ಸೋತ ದಿನ ಬಿಜೆಪಿ ಕೂಡಾ ಟ್ರಂಪ್ ಬೆಂಬಲಿಗರಂತೆಯೆ ವರ್ತಿಸುತ್ತದೆ: ಮಮತಾ



ಗೌರಿ ತಂಡದವರೇ ಎಲ್ಲರಿಗೂ ನಮಸ್ಕಾರ.
ನಿಮ್ಮ ಬರವಣಿಗೆಯ ಶೈಲಿಯೇ ಸ್ಪಷ್ಟವಾಗಿ ಹೇಳುತ್ತಿದೆ “ನೀವು ದೇಶ ದ್ರೋಹಿಗಳಿಂದ ದುಡ್ಡು ತೆಗೆದುಕೊಂಡು ದೇಶದ ವಿರುದ್ಧವಾಗಿ ಬರೆಯುತ್ತಿದ್ದೀರೆಂದು” ನಾಚಿಕೆಯಾಗಬೇಕು ನಿಮ್ಮಂಥ ಪತ್ರಿಕೋದ್ಯಮಕ್ಕೆ.
ಇನ್ನು ಮುಂದಾದರೂ ನಿಮ್ಮ ಜ್ಞಾನವನ್ನು ಸರಿಯಾದ ಪಥದಲ್ಲಿ ಬಳಸಿಕೊಳ್ಳಿ, ದೇವರು ಒಳ್ಳೆಯದನ್ನು ಮಾಡಲಿ. ಸ್ವಲ್ಪ ಪಾಪಕರ್ಮ ಕಡಿಮೆಯಾಗಬಹುದು.
ಇಲ್ಲಿಯ ಹಿಂದುತ್ವ ನಿಮಗೆ ಕಸಿವಿಸಿಯಾಗುತ್ತಿದ್ದರೆ ಹೋಗಿ ಆಫ್ಘಾನಿಸ್ತಾನವನ್ನು ಸೇರಿಕೊಳ್ಳಿ.