ಈ ಹಿಂದೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ತ್ಯಜಿಸಿ ಬಿಜೆಪಿ ಸೇರಿದ್ದ ಶಾಸಕರು ಸೇರಿದಂತೆ 6-7 ಬಿಜೆಪಿ ಸಂಸದರು ಪಶ್ಚಿಮಬಂಗಾಳ ಚುನಾವಣೆಗೂ ಮುನ್ನವೇ ಟಿಎಂಸಿ ಸೇರಲಿದ್ದಾರೆ ಎಂದು ಸಚಿವ ಜ್ಯೋತಿಪ್ರಿಯ ಮಲ್ಲಿಕ್ ಹೇಳಿದ್ದಾರೆ.
ಈ ಕುರಿತು ಸಚಿವರ ಹೇಳಿಕೆಯನ್ನು ವರದಿ ಮಾಡಿರುವ ಎಎನ್‌ಐ, “6-7 ಸಂಸದರು ಚುನಾವಣೆಗೆ ಮುನ್ನವೇ ಮೇ ಮೊದಲ ವಾರದಲ್ಲಿ ಟಿಎಂಸಿಗೆ ಸೇರಲಿದ್ದಾರೆ. ನಮ್ಮ ಪಕ್ಷ ತೊರೆದಿದ್ದ ಶಾಸಕರು ಕೂಡ ಪಕ್ಷಕ್ಕೆ ಮರಳಿ ಬರಲಿದ್ದಾರೆ. ಬಂಕುರಾದ ಶಾಸಕ ತುಷಾರ್ ಬಾಬು ನಿನ್ನೆ ಪಕ್ಷಕ್ಕೆ ಮರಳಿ ಬಂದಿದ್ದಾರೆ” ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಓವೈಸಿ ಬಿಜೆಪಿಗೆ ನೆರವಾಗಲಿದ್ದಾರೆ: ಸ್ಪೋಟಕ ಹೇಳಿಕೆ ನೀಡಿದ ಸಾಕ್ಷಿ ಮಹರಾಜ್
Six-seven MPs will immediately join TMC within the first week of May, before the elections. Even all the MLAs who'd left us, have queued up for rejoining. Tushar babu, the MLA from Bankura rejoined yesterday: West Bengal minister Jyotipriya Mallick pic.twitter.com/tt2BiaKxCt
— ANI (@ANI) January 12, 2021
ಇದನ್ನೂ ಓದಿ: ಪಶ್ಚಿಮ ಬಂಗಾಳ: ʼಬಿಜೆಪಿಗೆ ಮತ ನೀಡಬೇಡಿʼ ಅಭಿಯಾನ ಆರಂಭ
2020ರ ಡಿಸೆಂಬರ್ 19 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನಡೆದ ಪೂರ್ವ ಮಿದ್ನಾಪೋರ್ ರ್ಯಾಲಿಯಲ್ಲಿ ಆರು ಟಿಎಂಸಿ ಶಾಸಕರು ಮತ್ತು ಓರ್ವ ಸಂಸದರು ಬಿಜೆಪಿಗೆ ಸೇರಿದ್ದರು. 2016 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಕೇವಲ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, ಪಕ್ಷವು ಈಗ 25 ಶಾಸಕರ ಬಲವನ್ನು ಹೊಂದಿದೆ.
ಆದರೆ ರಾಜ್ಯ ಬಿಜೆಪಿಯು ಈ ಸಚಿವರ ಹೇಳಿಕೆಯನ್ನು ನಿರಾಕರಿಸಿದ್ದು, “ಟಿಎಂಸಿ ಹಗಲುಗನಸು ಕಾಣುತ್ತಿದೆ. ವಾಸ್ತವ ಚಿತ್ರಣ ಇದಕ್ಕೆ ತದ್ವಿರುದ್ಧವಾಗಿದೆ. ಶೀಘ್ರದಲ್ಲೇ ಆಡಳಿತ ಪಕ್ಷದಿಂದ ಭಾರಿ ಪ್ರಮಾಣದಲ್ಲಿ ಪಕ್ಷಾಂತರ ನಡೆಯಲಿದೆ. ಹಲವಾರು ಶಾಸಕರು ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಅವರೆಲ್ಲರೂ ಬಿಜೆಪಿಯ ಮಡಿಲಿಗೆ ಬರಲು ಸಿದ್ಧರಾಗಿದ್ದಾರೆ” ಎಂದು ರಾಜ್ಯ ಬಿಜೆಪಿಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಎಡಪಕ್ಷಗಳೊಂದಿಗೆ ‘ಕೈ’ ಜೋಡಿಸಲು ಒಪ್ಪಿಗೆ – ಅಧೀರ್ ಚೌಧರಿ