ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಶಿವಸೇನೆ ಬೆಂಬಲ ಸೂಚಿಸಿದೆ. ಮಮತಾ ಬ್ಯಾನರ್ಜಿಯನ್ನು ’ನಿಜವಾದ ಬಂಗಾಳಿ ಟೈಗರ್’ ಎಂದ ಶಿವಸೇನೆಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್, ಈ ಬಾರಿ “ದೀದಿ Vs ಎಲ್ಲರೂ” ಎಂಬ ಚುನಾವಣಾ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ ಈ ಬಾರಿ “ದೀದಿ Vs ಎಲ್ಲರೂ” ಎಂಬ ಸ್ಪರ್ಧೆಯಾಗಿ ಮಾರ್ಪಟ್ಟಿದ್ದು, ಮಾರ್ಚ್ 27 ರಿಂದ ಏಪ್ರಿಲ್ 29 ರವರೆಗೆ ಸುಧೀರ್ಘ 8 ಹಂತಗಳಲ್ಲಿ ಮತದಾನ ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಚುನಾವಣೆಯಲ್ಲಿ ಶಿವಸೇನೆಯು ಅಖಾಡಕ್ಕೆ ಇಳಿಯುತ್ತದೆಯೋ ಇಲ್ಲ ಮಮತಾ ಬ್ಯಾನರ್ಜಿಗೆ ಬೆಂಬಲ ನೀಡುತ್ತದೆಯೋ ಎಂಬ ಗೊಂದಲಗಳಿಗೆ ಇಂದು ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿರುವ ಸಂಜಯ್ ರಾವತ್, ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಮಮತಾ ದೀದಿಗೆ ಘರ್ಜಿಸುವಂತ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿಗೆ ಬೆಂಬಲ ಘೋಷಿಸಿದ ತೇಜಸ್ವಿ ಯಾದವ್
— Sanjay Raut (@rautsanjay61) March 4, 2021
’ಪ.ಬಂಗಾಳ ರಾಜ್ಯದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬಹು ದೊಡ್ಡ ಸವಾಲು ಇದೆ. “ದೀದಿ ವರ್ಸಲ್ ಎಲ್ಲರೂ” ಎಂಬ ರಾಜಕೀಯ ಚಿತ್ರಣ ಇಲ್ಲಿದೆ. ಎಲ್ಲರು ಎಂದರೆ ಹಣ, ಬಲ, ಮಾಧ್ಯಮ. ಈ ಎಲ್ಲವನ್ನೂ ಮಮತಾ ಬ್ಯಾನರ್ಜಿ ವಿರುದ್ಧ ಪ್ರಯೋಗಿಸಲಾಗುತ್ತಿದೆ. ಹೀಗಾಗಿಯೇ ದೀದಿ ಪರವಾಗಿ ನಾವು ನಿಲ್ಲಲಿದ್ದೇವೆ’ ಎಂದು ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯ ಬಹುಕಾಲದ ಮಿತ್ರಪಕ್ಷವಾಗಿದ್ದ ಶಿವಸೇನೆ 2019 ರಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರ್ಕಾರವನ್ನು ರಚಿಸಿದೆ. ಈಗಾಗಲೇ ಎನ್‌ಸಿಪಿ ಪಶ್ಚಿಮ ಬಂಗಾಳದ ತೃಣಮೂಲದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿ ಸೇರಿದ ಕ್ರಿಕೆಟಿಗ ಮನೋಜ್ ತಿವಾರಿ
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆಳ್ವಿಕೆ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರದಿಂದ ದೂರವಿದೆ. ಆದರೆ ಟಿಎಂಸಿ ನಾಯಕರನ್ನು ತನ್ನ ತೆಕ್ಕೆಗೆ ಸೆಳೆಯುವುದರಲ್ಲಿ ಬಿಜೆಪಿ ಮುಂದಿದೆ. ಇದರ ಜೊತೆಗೆ ರಾಜ್ಯದಲ್ಲಿ ಹಿಂಸಾಚಾರ ನಡೆಯುತ್ತಿದೆ ಮತ್ತು ಬಿಜೆಪಿ ನಾಯಕರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಇತ್ತ, ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. “ಬಿಹಾರದ ಅನೇಕ ಜನರು ಪಶ್ಚಿಮ ಬಂಗಾಳದಲ್ಲಿ ವಾಸಿಸುತ್ತಿದ್ದಾರೆ. ಮಮತಾ ಜಿ ಅವರನ್ನು ಬೆಂಬಲಿಸುವಂತೆ ನಾನು ಬಿಹಾರದ ಎಲ್ಲರಿಗೂ ಮನವಿ ಮಾಡುತ್ತೇನೆ” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: ‘ಕಮಲದ ಗುಂಡಿ ಒತ್ತಿ, ಮಮತಾ ತನ್ನ ಕುರ್ಚಿಯಿಂದ ಎರಡು ಅಡಿ ಹಾರಿ ಬೀಳುವ ಕರೆಂಟ್ ಹೊಡೆಯುತ್ತದೆ’-ನಿತಿನ್ ಗಡ್ಕರಿ



Is not ethick Shivasene ,they are fools partner