ಇತ್ತೀಚೆಗೆ ದೇಶದ ಕೆಲವು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಮೊತ್ತ 50 ರೂಪಾಯಿಗೆ ಏರಿಸಿದ್ದು, ತಾತ್ಕಾಲಿಕ ಕ್ರಮವಾಗಿದೆ. ಈ ನಿರ್ಧಾರ ಕೊರೊನಾವೈರಸ್ ಸಾಂಕ್ರಾಮಿಕದ ಸಮಯದಲ್ಲಿ ಜನಸಂದಣಿಯನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಶುಕ್ರವಾರ ಸ್ಪಷ್ಟಪಡಿಸಿದೆ.
ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ದರವನ್ನು ಇತ್ತೀಚೆಗೆ ಕೆಲವು ರೈಲು ನಿಲ್ದಾಣಗಳಲ್ಲಿ 50 ರೂಪಾಯಿಗಳವರೆಗೂ ಹೆಚ್ಚಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಅನಗತ್ಯ ಪ್ರಯಾಣವನ್ನು ನಿರುತ್ಸಾಹಗೊಳಿಸುವ, ತಡೆಯುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ಜೊತೆಗೆ ಅಲ್ಪ-ದೂರ ಪ್ರಯಾಣದ ಟಿಕೆಟ್ ದರವನ್ನೂ ಹೆಚ್ಚು ಮಾಡುವ ಯೋಜನೆಯಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
“ಕೆಲವು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರದಲ್ಲಿ ಪ್ರಸ್ತುತ ಹೆಚ್ಚಳವು ಜನಸಂದಣಿಯ ಮೂಲಕ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಒಂದು” ತಾತ್ಕಾಲಿಕ “ಕ್ರಮವಾಗಿದೆ. ಲಾಕ್‌ಡೌನ್ ನಂತರ ಮಾರ್ಚ್‌ನಲ್ಲಿ ಈ ನಿಯಮ ಜಾರಿಗೆ ತರಲಾಗಿದೆ. ಭಾರೀ ಜನಸಂದಣಿ ಕಾಣಿಸಿಕೊಳ್ಳುವ ಸೀಮಿತ ಸಂಖ್ಯೆಯ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ” ಎಂದು ರೈಲ್ವೆ ಹೇಳಿದೆ.
ಇದನ್ನೂ ಓದಿ: ಅಸ್ಸಾಂ: ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೇರಿದರೆ ಮಹಿಳೆಯರಿಗೆ 50% ಮೀಸಲಾತಿ
ರೈಲು ನಿಲ್ದಾಣಗಳಲ್ಲಿ ಜನಸಂದಣಿಯನ್ನು ತಡೆಗಟ್ಟಲು ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ಹೆಚ್ಚಿಸುವ ಅಧಿಕಾರವನ್ನು 2015 ರಿಂದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ (ಡಿಆರ್‌ಎಂ) ವಹಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಈ ರೀತಿಯ ನಿಯಮಗಳು ಅನೇಕ ವರ್ಷಗಳಿಂದ ಆಚರಣೆಯಲ್ಲಿದೆ. ಸಾಂದರ್ಭಿಕವಾಗಿ ಇದನ್ನು “ಅಲ್ಪಾವಧಿಯ ಜನಸಮೂಹ ನಿಯಂತ್ರಣ ಮಾಪಕವಾಗಿ” ಬಳಸಲಾಗುತ್ತದೆ ಎಂದು ಹೇಳಲಾಗಿದೆ. ಮುಂಬೈ ವಿಭಾಗದ ಒಟ್ಟು 78 ನಿಲ್ದಾಣಗಳಲ್ಲಿ ಕೇವಲ ಏಳು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳವನ್ನು ಜಾರಿಗೆ ತರಲಾಗಿದೆ ಎಂದು ಹೇಳಿದ್ದಾರೆ.
ಈ ನಿಯಮಗಳು ಹೊಸದಲ್ಲ. ಈ ಮೊದಲು, ಹಬ್ಬಗಳ ಸಮಯದಲ್ಲಿ ಇದನ್ನು ಜಾರಿ ಮಾಡಲಾಗುತ್ತಿತ್ತು. ನಂತರ ಹಿಂದಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ: ಸ್ವಕ್ಷೇತ್ರ ಬಿಟ್ಟು ನಂದಿಗ್ರಾಮದಲ್ಲಿ ಕಣಕ್ಕಿಳಿಯಲಿರುವ ಮಮತಾ ಬ್ಯಾನರ್ಜಿ!


