2017-18 ಮತ್ತು 2020-21ರ (ನಾಲ್ಕು ವರ್ಷಗಳ) ನಡುವೆ ಪರಿಶಿಷ್ಟಜಾತಿ (SC) ಸಮುದಾಯದ ಕಲ್ಯಾಣಕ್ಕಾಗಿ ನಿಗದಿಪಡಿಸಿದ ಹಣದ ಶೇಕಡಾ 20 ರಷ್ಟು ಅಂದರೆ ಒಟ್ಟು 50,000 ಕೋಟಿ ರೂಪಾಯಿಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಬಳಕೆ ಮಾಡಿಲ್ಲ ಎಂದು ದಿ ಪ್ರಿಂಟ್ ವರದಿ ಮಾಡಿದೆ.
ಹೀಗಾಗಿ , ಹಂಚಿಕೆ ನಿಯಂತ್ರಿಸುವ ಚೌಕಟ್ಟಿನಲ್ಲಿ ಬದಲಾವಣೆಯನ್ನು ಪ್ರಸ್ತಾಪಿಸಲು ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಸಚಿವಾಲಯಗಳು ಮತ್ತು ಇಲಾಖೆಗಳಾದ್ಯಂತ ಏಕರೂಪದ ವಿತರಣೆಯನ್ನು ಹೆಚ್ಚಿನ ಆದ್ಯತೆಯ ಪ್ರದೇಶಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಅದರ ಫಲಾನುಭವಿಗಳಿಗೆ ವಾರ್ಷಿಕ 50,000 ರೂ.ಗಳವರೆಗೆ ನಗದು ವರ್ಗಾವಣೆ ಮಾಡುವ ಉದ್ದೇಶ ಹೊಂದಲಾಗಿದೆ.
ಬಳಕೆಯಾಗದ ನಿಧಿಯ ವಿಷಯ ಮತ್ತು ಹಂಚಿಕೆಗಾಗಿ ಹೊಸ ವ್ಯವಸ್ಥೆಯನ್ನು ರೂಪಿಸುವ ಸರ್ಕಾರದ ಪ್ರಸ್ತಾಪವು ಈ ತಿಂಗಳ ಆರಂಭದಲ್ಲಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ಕ್ರಿಯಾ ಯೋಜನೆಯ (ಡಿಎಪಿಎಸ್‌ಸಿ) ಪರಿಶೀಲನಾ ಸಭೆಯಲ್ಲಿ ಚರ್ಚೆಗೆ ಬಂದಿತು.
ಇದನ್ನೂ ಓದಿ: ‘ನನ್ನನ್ನು ಕಿತ್ತು ಹಾಕಿದರೂ ನಾನು ಮಾತನಾಡುತ್ತೇನೆ’-ರೈತರನ್ನು ಮತ್ತೆ ಬೆಂಬಲಿಸಿದ ಮೇಘಾಲಯ ರಾಜ್ಯಪಾಲ
ಡಿಎಪಿಎಸ್‌ಸಿ ಎಂಬುದು ಸರ್ಕಾರದ ಸಂಸ್ಥೆಯಾಗಿದ್ದು, ಪರಿಶಿಷ್ಟ ಜಾತಿಗಳ (ಎಸ್‌ಸಿ) ಉನ್ನತಿಯನ್ನು ಗುರಿಯಾಗಿಟ್ಟುಕೊಂಡು ಹಲವು ಯೋಜನೆಗಳಿಗಾಗಿ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಹಣವನ್ನು ಹಂಚಲಾಗುತ್ತದೆ.
ಕಳೆದ ನಾಲ್ಕು ವರ್ಷಗಳಲ್ಲಿ, 2017- 18 ರಿಂದ 2020-21 ರವರೆಗೆ ಒಟ್ಟು 2,59,977.40 ಕೋಟಿ ರೂಪಾಯಿ ಹಣವನ್ನು ಡಿಎಪಿಎಸ್‌ಸಿ ಅಡಿಯಲ್ಲಿ ಪರಿಶಿಷ್ಟಜಾತಿ ಕಲ್ಯಾಣಕ್ಕೆ ಮಂಜೂರು ಮಾಡಲಾಗಿದೆ.
ಸರ್ಕಾರಿ ಹಿರಿಯ ಅಧಿಕಾರಿಗಳ ಪ್ರಕಾರ, ಈ ಅವಧಿಯಲ್ಲಿ ಎಂಟು ಸಚಿವಾಲಯಗಳು ಅಥವಾ ಇಲಾಖೆಗಳು ಶೇಕಡಾ 80 ರಷ್ಟು ಹಣವನ್ನು ಬಳಸಿಲ್ಲ. ಇವುಗಳಲ್ಲಿ ಕೃಷಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಸೇರಿವೆ.
ಹಣ ಹಂಚಿಕೆಯ ಚೌಕಟ್ಟಿನ ಬದಲಾವಣೆಯನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪ್ರಸ್ತಾಪಿಸಿದೆ. ಇದನ್ನು “ಪಿಎಂ-ಸೋಶಿಯಲ್ ಇನ್‌ಕ್ಲೂಷನ್ ಮಿಷನ್” (SIM) ಎಂದು ಹೆಸರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ SIM ಅಡಿಯಲ್ಲಿ, ಶೇಕಡಾ 40 ರಷ್ಟು ಹಣವನ್ನು ಹೆಚ್ಚಿನ ಆದ್ಯತೆಯ ಕ್ಷೇತ್ರಗಳಲ್ಲಿ ಮತ್ತು ಶೇಕಡಾ 60 ರಷ್ಟು ಹಣವನ್ನು ಶರತ್ತುಬದ್ಧ ನಗದು ವರ್ಗಾವಣೆಯ ಮೂಲಕ ನೀಡಬೇಕೆಂದು ಸೂಚಿಸಲಾಗಿದೆ. ಆದರೆ ಈ ಪ್ರಸ್ತಾಪಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಜೆಪಿಗೆ ಮತ ನೀಡಿದರೆ ‘ಜೈ ಸಿಯಾ ರಾಂ’ ಎನ್ನಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯಂ ಅವರು, “ವಿವಿಧ ಸಚಿವಾಲಯಗಳಿಗೆ ನಿಗದಿಪಡಿಸಿದ ಪರಿಶಿಷ್ಟಜಾತಿ ಕಲ್ಯಾಣ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವಲ್ಲಿ ಸರ್ಕಾರ ಗಂಭೀರವಾಗಿದೆ ಮತ್ತು ಮುಂದೆ ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು” ಎಂದು ಹೇಳಿದ್ದಾರೆ.
ಪರಿಶಿಷ್ಟಜಾತಿಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಹಂಚಿಕೆಯ ಪರಿಕಲ್ಪನೆಯನ್ನು ಆರನೇ ಪಂಚವಾರ್ಷಿಕ ಯೋಜನೆಯಲ್ಲಿ ಪರಿಚಯಿಸಲಾಯಿತು. ಇದನ್ನು 1980 ರಿಂದ ಜಾರಿಗೆ ತರಲಾಗಿದೆ. “2009 ರಲ್ಲಿ ನಡೆಸಿದ ಪರಿಶೀಲನೆಯಲ್ಲಿ ಕೇವಲ 17 ಕೇಂದ್ರ ಸಚಿವಾಲಯಗಳು ಇದನ್ನು ಕಾರ್ಯಗತಗೊಳಿಸುತ್ತಿವೆ ಎಂದು ಕಂಡು ಬಂದಿದೆ.
2017 ರಲ್ಲಿ ನೀತಿ ಆಯೋಗದ ವರದಿಯು ಎಸ್‌ಸಿ /ಎಸ್‌ಟಿಗಳಿಗೆ ವಿಶೇಷ ಹಂಚಿಕೆಯನ್ನು ಮುಂದುವರೆಸುವ ಅಗತ್ಯವನ್ನು ಸೂಚಿಸಿತ್ತು. ಇದನ್ನು ಯೋಜನೆಯ ಬಜೆಟ್‌ಗೆ ಮೀಸಲಿಡಲಾಗಿದೆ.
ನಾಲ್ಕು ವರ್ಷಗಳ ಹಂಚಿಕೆಯಲ್ಲಿ 49,722.18 (ಸುಮಾರು 50 ಸಾವಿರ ಕೋಟಿ) ರೂ.ಗಳನ್ನು ಸಚಿವಾಲಯಗಳು / ಇಲಾಖೆಗಳು ಬಳಸದೇ ವಾಪಸ್ ಮಾಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹರಿದ ಜೀನ್ಸ್ ಧರಿಸುವುದು ಮಾದಕ ವಸ್ತು ಸೇವನೆಗೂ ಕಾರಣವಾಗುತ್ತದೆ- ಉತ್ತರಾಖಂಡ ಸಿಎಂ



If you people can not do your job Punctually.. Please leave.. Why you doing all these things.. Otherwise please follow our Constitution
Jai Bheem