’ಮಸೀದಿ ಅಜಾನ್‌ನಿಂದ ನಿದ್ರಾಭಂಗ, ತಲೆನೋವು’: ಅಲಹಾಬಾದ್ ವಿವಿ ಉಪಕುಲಪತಿ ದೂರು!
PC: IANS

ಅಲಹಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಸಂಗಿತಾ ಶ್ರೀವಾಸ್ತವ ಅವರು ಪ್ರಯಾಗರಾಜ್‌ನ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಹತ್ತಿರದ ಮಸೀದಿಯಿಂದ ಕೇಳಿ ಬರುವ ಅಜಾನ್‌ನಿಂದಾಗಿ ನಿದ್ರಾಭಂಗವಾಗುತ್ತಿದೆ. ಅದರಿಂದ ದಿನವಿಡೀ ತಲೆನೋವು ಉಂಟು ಮಾಡುತ್ತದೆ. ಇದರಿಂದ ಕೆಲಸದ ಸಮಯದಲ್ಲಿ ಕಷ್ಟವಾಗುತ್ತದೆ ಎಂದು ದೂರಿದ್ದಾರೆ.

ಮಾರ್ಚ್ 3 ರಂದು ಪ್ರಯಾಗರಾಜ್ ಡಿ.ಎಂ. ಭಾನು ಚಂದ್ರ ಗೋಸ್ವಾಮಿ ಅವರಿಗೆ ಬರೆದ ಪತ್ರದಲ್ಲಿ, ಸಿವಿಲ್ ಲೈಲ್ಸ್‌ನಲ್ಲಿನ ಶಬ್ದ ಮಾಲಿನ್ಯದ ಬಗ್ಗೆ ಬರೆದಿದ್ದಾರೆ. ಪ್ರತಿದಿನ ಬೆಳಿಗ್ಗೆ 5.30 ರ ಸುಮಾರಿಗೆ ನನ್ನ ನಿದ್ರೆಗೆ ತೊಂದರೆಯಾಗುತ್ತದೆ ಎಂದು ನಿಮ್ಮ ಗಮನಕ್ಕೆ ತರಬೇಕು. ಸುತ್ತಮುತ್ತಲಿನ ಮಸೀದಿಯಲ್ಲಿ ಮೌಲ್ವಿಗಳು ಮೈಕ್‌ನಲ್ಲಿ ಜೋರಾಗಿ ಅಜಾನ್ ಮಾಡುವುದರಿಂದ ನಿದ್ದೆಗೆ ತೊಂದರೆಯಾಗುತ್ತಿದೆ.  ಕಷ್ಟಪಟ್ಟು ಪ್ರಯತ್ನಿಸಿದ ನಂತರವೂ ನಿದ್ದೆ ಮಾಡಲಾಗುವುದಿಲ್ಲ. ಇದು ದಿನವಿಡೀ ತಲೆನೋವಿಗೆ ಕಾರಣವಾಗುತ್ತದೆ. ಇದರಿಂದ ಲಸದ ಸಮಯದಲ್ಲಿ ಕಷ್ಟವಾಗುತ್ತದೆ ಎಂದು ದೂರಿದ್ದಾರೆ.

ಸಿವಿಲ್ ಲೈನ್ಸ್‌ನಲ್ಲಿರುವ ಉಪಕುಲಪತಿ ನಿವಾಸದಿಂದ ಸುಮಾರು 400 ಮೀ ದೂರದಲ್ಲಿರುವ ಮಸೀದಿಯನ್ನು ಲಾಲ್ ಮಸೀದಿ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಬಿಎಸ್‌ಪಿ ಶಾಸಕಿಯ ಪತಿಯನ್ನು ಹುಡುಕಿಕೊಟ್ಟವರಿಗೆ 30 ಸಾವಿರ ಬಹುಮಾನ!

’ನಾನು ಯಾವುದೇ ಜಾತಿ ಅಥವಾ ಧರ್ಮಕ್ಕೆ ವಿರೋಧಿಯಲ್ಲ, ಅವರು ಮೈಕ್ ಇಲ್ಲದೆ ಅಜಾನ್ ಮಾಡಬಹುದು, ಇದರಿಂದ ಇತರರಿಗೆ ತೊಂದರೆಯಾಗುವುದಿಲ್ಲ. ಈದ್‌ಗೆ ಮುಂಚೆಯೇ ಅವರು ಸೆಹರಿಯನ್ನು ಮೈಕ್‌ನಲ್ಲಿ ಬೆಳಿಗ್ಗೆ 4 ಗಂಟೆಗೆ ಶುರುಮಾಡುತ್ತಾರೆ. ಇದರಿಂದ ಇತರ ಜನರಿಗೆ ತೊಂದರೆಯಾಗುತ್ತದೆ ಎಂದು ಅಲಹಾಬಾದ್ ಉಪಕುಲಪತಿ ಪ್ರೊ.ಸಂಗಿತಾ ಶ್ರೀವಾಸ್ತವ ತಮ್ಮ ಪತ್ರದಲ್ಲಿ ಸೇರಿಸಿದ್ದಾರೆ.

ಈ ಪತ್ರವನ್ನು ಪ್ರಯಾಗರಾಜ್ (ಶ್ರೇಣಿ) ಐ.ಜಿ.ಕವೀಂದ್ರ ಪ್ರತಾಪ್ ಸಿಂಗ್ ಮತ್ತು ಎಸ್‌ಎಸ್‌ಪಿ ಸರ್ವಶ್ರೇಶ್ ತ್ರಿಪಾಠಿ ಮತ್ತು ಪ್ರಯಾಗರಾಜ್ ವಿಭಾಗೀಯ ಆಯುಕ್ತ ಸಂಜಯ್ ಗೋಯೆಲ್ ಅವರಿಗೂ ಕಳುಹಿಸಲಾಗಿದೆ.

’ಪತ್ರವನ್ನು ಸ್ವೀಕರಿಸಲಾಗಿದೆ. ನಾವು ಅದನ್ನು ಪರಿಶೀಲಿಸುತ್ತಿದ್ದೇವೆ. ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ತಿಳಿಸಿದ್ದಾರೆ ಎಂದು ಡಿಎಂ ಗೋಸ್ವಾಮಿ ಅವರನ್ನು ದಿ ಇಂಡಿಯನ್ ಎಕ್ಸ್‌ಪ್ರೆಸ್‌ ಉಲ್ಲೇಖಿಸಿದೆ.

ಇದನ್ನೂ ಓದಿ:  ಎನ್‌ಆರ್‌ಸಿಯನ್ನು ದೇಶದಾದ್ಯಂತ ಜಾರಿಗೆ ನಿರ್ಧರಿಸಿಲ್ಲ: ಕೇಂದ್ರ ಸರ್ಕಾರ

ಅಲಹಾಬಾದ್ ಉಪ ಕುಲಪತಿ ಪತ್ರಕ್ಕೆ ಪ್ರತಿಕ್ರಿಯಿಸಿರುವ ಲಕ್ನೋ ಮೂಲದ ಪ್ರಮುಖ ಸುನ್ನಿ ಧರ್ಮಗುರು ಮೌಲಾನಾ ಖಾಲಿದ್ ರಶೀದ್ ಫಿರಂಗಿ ಮಹಾಲಿ, ’ಅಲಹಾಬಾದ್ ವಿಶ್ವವಿದ್ಯಾಲಯದ ವಿಸಿ ಬರೆದ ಪತ್ರದಲ್ಲಿ ಅಜಾನ್ ಗಾಗಿ ಧ್ವನಿವರ್ಧಕವನ್ನು ಬಳಸುವುದನ್ನು ನಿರ್ಬಂಧಿಸುವ ಬಗ್ಗೆ ಮನವಿ ಮಾಡಿದೆ. ನಾವು ಅದನ್ನು ವಿರೋಧಿಸುತ್ತೇವೆ. ನಮ್ಮ ದೇಶವು ಗಂಗಾ-ಜಮುನಾ ತಹಜೀಬ್‌ಗೆ ಹೆಸರುವಾಸಿಯಾಗಿದೆ ಎಂದು ವಿಸಿ ತಿಳಿದಿರಬೇಕು’ ಎಂದಿದ್ದಾರೆ.

’ದೇಶದ ಜನರು ಇತರ ಧರ್ಮಗಳನ್ನು ಗೌರವಿಸುತ್ತಾರೆ ಮತ್ತು ಮಸೀದಿಗಳಿಂದ ಅಜಾನ್ ಶಬ್ದ ಮತ್ತು ದೇವಾಲಯಗಳಿಂದ ಭಜನೆ ಮತ್ತು ಕೀರ್ತನೆ ಸದಾ ಬೀಸುವ ಗಾಳಿಯಲ್ಲಿರುತ್ತದೆ. ಇದರಿಂದಾಗಿ ಯಾರೊಬ್ಬರ ನಿದ್ರೆಗೆ ತೊಂದರೆಯಾಗಿಲ್ಲ. ಆದ್ದರಿಂದ, ಈ ರೀತಿಯ ವಿಷಯಗಳನ್ನು ಹೇಳುವುದು ಅರ್ಥಹೀನ ಮತ್ತು ಮೊದಲಿನಿಂದಲೂ ಗೌರವಾನ್ವಿತ ಹೈಕೋರ್ಟ್‌ನ ಆದೇಶವನ್ನು ಮಸೀದಿಗಳಲ್ಲಿ ಅನುಸರಿಸಲಾಗುತ್ತಿದೆ’ ಎಂದಿದ್ದಾರೆ.

’ಪ್ರತಿಯೊಬ್ಬರ ಧರ್ಮವನ್ನು ಗೌರವಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಮತ್ತು ಅನಗತ್ಯ ಸಮಸ್ಯೆಗಳೊಂದಿಗೆ ಜನರನ್ನು ಗೊಂದಲಗೊಳಿಸಬಾರದು ಎಂದು ಮನವಿ ಮಾಡಿದ್ದಾರೆ.

ಪತ್ರ ಬರೆದಿರುವ ಅಲಹಾಬಾದ್ ಉಪ ಕುಲಪತಿ ಪ್ರೊ.ಸಂಗಿತಾ ಶ್ರೀವಾಸ್ತವ ವೈಯಕ್ತಿಕ ಕಾರಣಗಳಿಗಾಗಿ ಒಂದು ವಾರ ರಜೆಯಲ್ಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಮೂರು ಕೋಟಿ ಪಡಿತರ ಚೀಟಿ ರದ್ದು: ಗಂಭೀರ ವಿಷಯ ಎಂದು ಕೇಂದ್ರಕ್ಕೆ ಸುಪ್ರೀಂ ನೋಟಿಸ್

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

  1. ಕಡವನ ಗುಡಿಯಿರಲಿ,ಮಸೀದಿ ಇರಲಿ ,ಇವೆರಡರಿಂದಾಗುತ್ತಿರುವ ಗದ್ದಲದ ಕಿರಿಕಿರಿ ಕೊನೆಯಾಗಲಿ.

LEAVE A REPLY

Please enter your comment!
Please enter your name here