ಮಹಿಳೆಯರ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರಾಖಂಡದ ಹೊಸ ಮುಖ್ಯಮಂತ್ರಿ ವಿರುದ್ಧ ವಿರೋಧ ಪಕ್ಷಗಳು ಸೇರಿದಂತೆ ಟ್ವಿಟರ್‌ನಲ್ಲಿ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಹರಿದ ಡೆನಿಮ್ ಜೀನ್ಸ್‌ಗಳನ್ನು ಧರಿಸಿದ ಚಿತ್ರಗಳನ್ನು ಪೋಸ್ಟ್ ಮಾಡಿ ಮುಖ್ಯಮಂತ್ರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ’ಮೊದಲು ಆಲೋಚನೆ ಬದಲಾಯಿಸಿಕೊಳ್ಳಿ ಮುಖ್ಯಮಂತ್ರಿಗಳೇ, ಆಗಲೇ ದೇಶ ಬದಲಾಗುತ್ತದೆ’ ಎಂದಿದ್ದಾರೆ.
ಡೆಹ್ರಾಡೂನ್‌ನಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಉತ್ತರಾಖಂಡ ರಾಜ್ಯ ಆಯೋಗ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್, ಹರಿದ ಬಟ್ಟೆ ಧರಿಸಿದ ಮಹಿಳೆಯರಿಂದ ಮಕ್ಕಳಿಗೆ ಸಂಸ್ಕಾರ ಕಲಿಸಲು ಸಾಧ್ಯವೆ..? ಮಕ್ಕಳು ಪೋಷಕರಿಂದ ಮನೆಯಲ್ಲಿಯೇ ಹಾಳಾಗುತ್ತಾರೆ. ಇದು ಮಾದಕ ವಸ್ತು ಸೇವನೆಗೂ ಕಾರಣವಾಗುತ್ತದೆ. ಇವರು ಸಮಾಜಕ್ಕೆ ನೀಡುತ್ತಿರುವ ಸಂದೇಶವೇನು’ ಎಂದಿದ್ದರು.
ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್‌ರ ಈ ಹೇಳಿಕೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದವರಲ್ಲಿ ಮೊದಲಿಗರು ಕಾಂಗ್ರೆಸ್ ನಾಯಕ ಸಂಜಯ್ ಝಾ. ತಿರಥ್ ಸಿಂಗ್ ರಾವತ್ ಮಾತನ್ನು ನೀವು ಅನುಮೋದಿಸುತ್ತಿರಾ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದರು.
ಇದನ್ನೂ ಓದಿ: ಹರಿದ ಜೀನ್ಸ್ ಧರಿಸುವುದು ಮಾದಕ ವಸ್ತು ಸೇವನೆಗೂ ಕಾರಣವಾಗುತ್ತದೆ- ಉತ್ತರಾಖಂಡ ಸಿಎಂ
ತಿರಥ್ ಸಿಂಗ್ ರಾವತ್ ಹೇಳಿಕೆಗೆ ನಿನ್ನೆಯಿಂದಲೇ ಟ್ವಿಟರ್ ತುಂಬಾ ಹರಿದ ಜೀನ್ಸ್ ಧರಿಸಿದ್ದ ಚಿತ್ರಗಳನ್ನು ಹಂಚಿಕೊಂಡು ಅನೇಕ ಮಂದಿ ಪೋಸ್ಟ್ ಮಾಡುತ್ತಿದದ್ರು. ಗುರುವಾರ #RippedJeansTwitter ಹ್ಯಾಶ್‌ಟ್ಯಾಗ್ ಬಳಸಿ ಸಾವಿರಾರು ಮಂದಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
Wearing “#rippedjeans” destroys our culture, it seems. It leads to substance abuse. And a societal breakdown. Women should strictly avoid this sacrilege against our pristine customs, says Uttarakhand CM.
Dear BJP, this is your CM Tirath Singh Rawat: Do you endorse this? pic.twitter.com/9pGQdkxZKp
— Sanjay Jha (@JhaSanjay) March 17, 2021
ರಾಜ್ಯಸಭಾ ಸಂಸದೆ ಮತ್ತು ಶಿವಸೇನೆ ಮುಖಂಡ ಪ್ರಿಯಾಂಕಾ ಚತುರ್ವೇದಿ ತಮ್ಮ ಟ್ವಿಟರ್‌ನಲ್ಲಿ, “ದೇಶದ ‘ಸಂಸ್ಕೃತಿ’ ಮತ್ತು ‘ಸಂಸ್ಕಾರ’ ಮಹಿಳೆಯರನ್ನು ಮತ್ತು ಅವರ ಆಯ್ಕೆಗಳ ಬಗ್ಗೆ ಕುಳಿತು ನಿರ್ಣಯಿಸುವ ಪುರುಷರಿಂದ ಪ್ರಭಾವಿತವಾಗಿದೆ. ಮೊದಲು ಆಲೋಚನೆ ಬದಲಾಯಿಸಿಕೊಳ್ಳಿ ಮುಖ್ಯಮಂತ್ರಿಗಳೇ, ಆಗಲೇ ದೇಶ ಬದಲಾಗುತ್ತದೆ’ ಎಂದಿದ್ದಾರೆ.
Ripped Jeans aur Kitab.
The country’s ‘sanskriti’ & ‘sanskaar’ are impacted by men who sit and judge women and their choices. Soch badlo Mukhyamantri Rawat ji, tabhi desh badlega. #RippedJeansTwitter pic.twitter.com/qYXcN88fY6— Priyanka Chaturvedi (@priyankac19) March 18, 2021
ಇದನ್ನೂ ಓದಿ: ಬಿಜೆಪಿಗೆ ಮತ ನೀಡಿದರೆ ‘ಜೈ ಸಿಯಾ ರಾಂ’ ಎನ್ನಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ
ನಟಿ ಗುಲ್ ಪನಾಗ್ ಮಗುವನ್ನು ಹಿಡಿದುಕೊಂಡು ಹರಿದ ಡೆನಿಮ್ ಧರಿಸಿದ ಸೆಲ್ಫಿ ಹಂಚಿಕೊಂಡಿದ್ದು, #RippedJeansTwitter ಬಳಸಿದ್ದಾರೆ.
#RippedJeansTwitter pic.twitter.com/zwitZiIE9k
— Gul Panag (@GulPanag) March 17, 2021
Hell yeah! #RippedJeansTwitter pic.twitter.com/cOeQGE590U
— ruchi kokcha (@ruchikokcha) March 17, 2021
ರೇಡಿಯೊ ಜಾಕಿ ಆಗಿರುವ ನಿಮಿ ಎಂಬುವವರು ತಮ್ಮ ಫೋಟೋವನ್ನು ಶೇರ್ ಮಾಡಿದ್ದು, ಹರಿದ ಜೀನ್ಸ್ ಸತ್ತುಹೋಗಿರುವ ಮನಸ್ಥಿತಿಯ ವಿರುದ್ಧದ ಹೋರಾಟ ಎಂದಿದ್ದಾರೆ.
Ripped jeans to fight against
RIP-ped
MENTALITY.#RippedJeansTwitter #rippedjeans pic.twitter.com/cre37i4Sdt
— Mirchi Nimi (@illogicalNimi) March 18, 2021
ಮಾಜಿ ಫೆಮಿನಾ ಮಿಸ್ ಇಂಡಿಯಾ, ನಟಿ ಸಿಮ್ರಾನ್ ಕೌರ್ ಕೂಡ ತಮ್ಮ ಟ್ವಿಟರ್ ಪೇಜ್‌ನಲ್ಲಿ ಹರಿದ ಜೀನ್ಸ್ ಧರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
#RippedJeansTwitter pic.twitter.com/321UKRqvTY
— Simran Kaur Mundi (@SimrankMundi) March 17, 2021
ಟ್ವಿಟರ್ ಬಳಕೆದಾರರೊಬ್ಬರು ನಟಿ ಕಂಗನಾ ಅವರ ಚಿತ್ರಗಳನ್ನು ಹಂಚಿಕೊಂಡಿದ್ದು, ಈ ಅಭಿಯಾನಕ್ಕೆ ಕೈ ಜೋಡಿಸಿದಕ್ಕೆ ಧನ್ಯವಾದಗಳು ಎಂದಿದ್ದಾರೆ.
Thank you #KanganaRanaut for taking a stand #rippedjeans pic.twitter.com/P9kd8gtc2D
— ✌️PeaceMongerᴾᵃʳᵒᵈʸ ᴴᵃᵗᵉ (@PeaceMonger143) March 18, 2021
ಕೆಲ ದಿನಗಳ ಹಿಂದೆ ನಟಿ ಕಂಗನಾ ಕೂಡ ಹರಿದ ಡೆನಿಮ್ ಜೀನ್ಸ್ ವಿರುದ್ಧ ಮಾತನಾಡಿದ್ದರು. ’ಪ್ರಸ್ತುತ ಸಾಧಕರನ್ನು ಗುರುತಿಸಲು ಹೊರಟಾಗ ಅವರೆಲ್ಲಾ ಹರಿದ, ಟೋನ್ಡ್ ಅಮೆರಿಕನ್ ಜೀನ್ಸ್‌ಗಳನ್ನು ಧರಿಸಿರುತ್ತಾರೆ ಎಂದು, ಟೋನ್ಡ್ ಅಮೆರಿಕನ್ ಜೀನ್ಸ್ ಧರಿಸಿಸುವವರನ್ನು ಪರೋಕ್ಷವಾಗಿ ಟೀಕಿಸಿದ್ದರು. ಆಗ ನಟಿ ಕಂಗನಾ ರಣಾವತ್ ಅವರನ್ನು ನೆಟ್ಟಿಗರು ಅವರದ್ದೇ ಭಾವಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಕಾಲೆಳೆದಿದ್ದರು.
ಇದನ್ನೂ ಓದಿ: ಅಮೆರಿಕನ್ ಜೀನ್ಸ್ ಬಗ್ಗೆ ಕಂಗನಾ ಟ್ವೀಟ್: ಹಳೆಯ ಫೋಟೋಗಳನ್ನು ಶೇರ್ ಮಾಡಿ ಕಾಲೆಳೆದ ನೆಟ್ಟಿಗರು


