ರೈತ ಹೋರಾಟಕ್ಕೆ ನಾಲ್ಕು ತಿಂಗಳು ತುಂಬಿ ಐದನೇ ತಿಂಗಳಿಗೆ ಕಾಲಿಟ್ಟಿದೆ. ದೆಹಲಿಯ ಗಡಿಗಳು ಈ ನಾಲ್ಕು ತಿಂಗಳಲ್ಲಿ ಹೋರಾಟಗಾರರ ಸ್ವಂತ ಊರುಗಳಾಗಿ ಮಾರ್ಪಟ್ಟಿವೆ. ತಮ್ಮದೆ ಗ್ರಾಮದಲ್ಲಿ ಇರುವಂತೆ, ಇಲ್ಲಿನ ರೈತರು ಸಿಂಘು, ಟಿಕ್ರಿ, ಗಾಜಿಪುರ್, ಶಹಜಾನ್‌ಪುರ ಗಡಿಗಳನ್ನು ಗ್ರಾಮಗಳಂತೆ ಭಾವಿಸಿದ್ದಾರೆ.
ಪ್ರತಿಭಟನಾಕಾರರಲ್ಲಿ ಪ್ರತಿಭಟನೆಯ ಉತ್ಸಾಹ ಕಡಿಮೆಯಾಗದಂತೆ ನೋಡಿಕೊಳ್ಳಲ್ಲು ಇಲ್ಲಿ ಕಾರ್ಯನಿರ್ವಹಿಸುತ್ತಿವರುವ ನೂರಾರು ಸಂಘಟನೆಗಳು ಪ್ರಯತ್ನ ಪಡುತ್ತಿವೆ. ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೋರಾಟಗಾರರಲ್ಲಿ ಉತ್ಸಾಹ ತುಂಬುತ್ತಿವೆ. ಅವುಗಳಲ್ಲಿ ಅಮೆರಿಕನ್ ಸಿಖ್ ಸಂಘಟನೆ ಕೂಡ ಒಂದು.
ಏಪ್ರಿಲ್ 2 ಮತ್ತು 3 ರಂದು ಸಿಂಘು ಗಡಿಯಲ್ಲಿ ಕಿಸಾನ್ ಪ್ರೀಮಿಯರ್ ಲೀಗ್ ಆಯೋಜನೆಗೊಂಡಿದೆ. ಅಮೆರಿಕನ್ ಸಿಖ್ ಸಂಘಟನೆ ನ್ಯಾಷನಲ್ ಶೂಟಿಂಗ್ ಬಾಲ್ ಚಾಂಪಿಯನ್‌ಶಿಪ್ ಆಯೋಜನೆ ಮಾಡಿದೆ. ಪ್ರತಿಭಟನಾ ಸ್ಥಳ ಸಿಂಘು ಗಡಿಯ ಪಾರ್ಕರ್ ಮಾಲ್ ಬಳಿ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: ರೈತ ವಿರೋಧಿ ಕೃಷಿ ಕಾಯ್ದೆ ತಂದು ಶೋಷಿಸುತ್ತಿರುವವರೆ ನಿಜ ಭಯೋತ್ಪಾದಕರು- ನಟ ಚೇತನ್ ಕಿಡಿ
American Sikh Sangat will organize shooting ball championship at Singhu border. pic.twitter.com/glJzNqKpGQ
— Sandeep Singh (@PunYaab) March 28, 2021
ಈ ಕುರಿತು ದೆಹಲಿಯ ಗಡಿಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ರೈತರ ಪ್ರತಿಭಟನೆಯ ಇಂಚಿಂಚು ಮಾಹಿತಿ ನೀಡುತ್ತಿರುವ ಸಂದೀಪ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕಿಸಾನ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಬಹುಮಾನ ಒಂದು ಲಕ್ಷ ರೂಪಾಯಿ ಮತ್ತು ಟ್ರೋಫಿ, ಎರಡನೇ ಬಹುಮಾನ 70,000 ರೂಪಾಯಿ ಜೊತೆಗೆ ಟ್ರೋಪಿ ಮತ್ತು ಮೂರನೇ, ನಾಲ್ಕನೇ ಬಹುಮಾನವಾಗಿ ಟ್ರೋಪಿ ಜೊತೆಗೆ 21,000 ರೂಪಾಯಿಗಳನ್ನು ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಸಿಂಘು ಗಡಿಯಲ್ಲಿ ಮನೆ ನಿರ್ಮಾಣ: ರೈತರ ವಿರುದ್ದ ಎರಡು ಪ್ರಕರಣ ದಾಖಲು
ಎಲ್ಲಾ ಗಡಿಗಳಲ್ಲಿ ಜಿಮ್, ಕ್ರೀಡಾ ಸೌಲಭ್ಯಗಳಿರುವುದು ತಿಳಿದಿರುವ ವಿಷಯವೆ. ಸಂಜೆಯ ವೇಳೆ ಗಡಿಗಳಲ್ಲಿ ಯುವಜನತೆ ಒಂದೆಡೆ ಸೇರಿ ಆಟಗಳನ್ನು ಆಡುತ್ತಾರೆ. ಕಬ್ಬಡ್ಡಿ, ಫುಟ್‌ಬಾಲ್, ವಾಲಿಬಾಲ್ ಸೇರಿದಂತೆ ಹಲವು ಆಟಗಳಲ್ಲಿ ತೊಡಗಿಸಿಕೊಳ್ಳತ್ತಾರೆ. ಇವರುಗಳನ್ನು ಪ್ರೋತ್ಸಾಹಿಸಲು ಈ ಪಂದ್ಯಾವಳಿ ಆಯೋಜಿಸಲಾಗಿದೆ ಎನ್ನಲಾಗಿದೆ.
ಈ ಹಿಂದೆ ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಉತ್ತೇಜನ ನೀಡುವ ಸಲುವಾಗಿ, ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ದೆಹಲಿಯ 12 ಬಾಲಕಿಯರ ತಂಡಗಳು ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ನೂರಾರು ಕಿಲೋಮೀಟರ್ ದೂರಗಳಿಂದ ಬಂದು ಸಿಂಗು ಗಡಿಯಲ್ಲಿ ಕಬ್ಬಡಿ ಆಡಿ ರೈತರಿಗೆ ಬೆಂಬಲ ಸೂಚಿಸಿದ್ದರು.
ಒಟ್ಟಾರೆ, ಗಡಿಗಳನ್ನೇ ಮನೆಗಳನ್ನಾಗಿಸಿಕೊಂಡಿರುವ ರೈತರು ಹಲವು ಕಾರ್ಯಕ್ರಮಗಳ ಮೂಲಕ ತಮ್ಮಲ್ಲಿನ ಪ್ರತಿಭಟನಾ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಒಕ್ಕೂಟ ಸರ್ಕಾರ, ವಿವಾದಿತ ಕೃಷಿ ಕಾನೂನುಗಳನ್ನು ವಾಪಸ್ ತೆಗೆದುಕೊಳ್ಳುವವರೆಗೂ ಗಡಿಗಳಿಂದ ವಾಪಸ್ ಆಗುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮುಂದುವರೆದ ಹೋರಾಟ: ಮಾ. 31 ಕ್ಕೆ ಬೆಳಗಾವಿಯಲ್ಲಿ ರೈತ ಮಹಾಪಂಚಾಯತ್


