ಕೇವಲ 90 ನೋಂದಾಯಿತ ಮತದಾರರನ್ನು ಹೊಂದಿರುವ ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಮತಗಟ್ಟೆ ಒಂದರಲ್ಲಿ 181 ಮತಗಳನ್ನು ಚಲಾಯಿಸಲಾಗಿದೆ. ಪ್ರಕರಣ ಬೆಳಕಿಗೆ ಬಂದ ನಂತರ ಚುನಾವಣಾ ಆಯೋಗ ಮತಗಟ್ಟೆಯ 6 ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ಏಪ್ರಿಲ್ 1 ರಂದು ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ನಡೆಯಿತು. ಇಲ್ಲಿನ ಹಫ್ಲಾಂಗ್ ವಿಧಾನಸಭಾ ಕ್ಷೇತ್ರದಲ್ಲಿ ಬೂತ್ ಸಂಖ್ಯೆ 107 (ಎ) ರಲ್ಲಿ ಈ ಘಟನೆ ನಡೆದಿದೆ. ಅಂದು ಶೇ 74ರಷ್ಟು ಮತದಾನವಾಗಿತ್ತು. 2016 ರಲ್ಲಿ ಬಿಜೆಪಿಯ ಬಿರ್ ಭದ್ರಾ ಹಗ್ಗರ್ ಇಲ್ಲಿಂದ ಗೆದ್ದಿದ್ದಾರೆ. ಮತದಾನದಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.
ಮುಖ್ಯ ಕೇಂದ್ರಕ್ಕೆ ಸಹಾಯಕ ಮತದಾನ ಕೇಂದ್ರವಾಗಿದ್ದ ಈ ಬೂತ್‌ಗೆ ಮರು-ಮತದಾನದ ಆದೇಶ ಹೊರಡಿಸಲು ಚುನಾವಣಾ ಆಯೋಗ ಯೋಚಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಅಧಿಕೃತ ಆದೇಶವನ್ನು ಇನ್ನೂ ಹೊರಡಿಸಬೇಕಿದೆ.
ಇದನ್ನೂ ಓದಿ: ಟ್ವಿಟರ್ ಅಭಿಯಾನದ ಮೂಲಕ ಸಾಮಾಜಿಕ ಹೋರಾಟಗಳಿಗೆ ಜೊತೆಯಾದ ಕರ್ನಾಟಕ ಕ್ರಾಂತಿಕಾರಿ ಪಡೆ!
“ಮುಖ್ಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಆಗದ ಮತದಾರರಿಗೆ ಸಹಾಯಕ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಿದ್ದಾಗಿ ಮತದಾನದ ಕೇಂದ್ರದ ಅಧ್ಯಕ್ಷ ಮತ್ತು ಅಧಿಕಾರಿ ತಮ್ಮ ಹೇಳಿಕೆಗಳಲ್ಲಿ ಒಪ್ಪಿಕೊಂಡಿದ್ದಾರೆ” ಎಂದು ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಕರ್ತವ್ಯ ಲೋಪದ ಆರೋಪದಲ್ಲಿ ಸೀಖೋಸಿಯಮ್ ಲಾಂಗುಮ್ (ಸೆಕ್ಟರ್ ಆಫೀಸರ್), ಪ್ರಹ್ಲಾದ್ ಚ ರಾಯ್ (ಪ್ರೆಸಿಡಿಂಗ್ ಆಫೀಸರ್), ಪರಮೇಶ್ವರ ಚರಂಗ್ಸಾ (1 ನೇ ಮತಗಟ್ಟೆ ಅಧಿಕಾರಿ), ಸ್ವರಾಜ್ ಕಾಂತಿ ದಾಸ್ (2 ನೇ ಮತಗಟ್ಟೆ ಅಧಿಕಾರಿ) ಮತ್ತು ಲಾಲ್ಜಮ್ಲೊ ಥೀಕ್ (3 ನೇ ಮತಗಟ್ಟೆ ಅಧಿಕಾರಿ) ಅವರನ್ನು ಅಮಾನತುಗೊಳಿಸಲಾಗಿದೆ.
ಅಸ್ಸಾಂನಲ್ಲಿ ಮಾರ್ಚ್ 27 ರಂದು ಪ್ರಾರಂಭವಾದ ಮೂರು ಹಂತದ ವಿಧಾನಸಭಾ ಚುನಾವಣೆಯಲ್ಲಿ ಎರಡು ಹಂತಗಳು ಮಗಿದಿವೆ. ಮೂರನೇ ಮತ್ತು ಕೊನೆಯ ಹಂತದ ಮತದಾನ ಇಂದು (ಏಪ್ರಿಲ್ 6) ನಡೆಯುತ್ತಿದೆ.
ಇದನ್ನೂ ಓದಿ: ಕೇರಳದಲ್ಲಿ ಹಿಂದೂಗಳ ಬೆಂಬಲದಿಂದ BJP 10ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ: ನಳಿನ್ ಕುಮಾರ್ ಕಟೀಲ್



Reelection ನಡೆಸಿ.. ಅಧಿಕಾರಿಗಳ ಹಣದಿಂದ…