ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರಾ ಕೊಟ್ಟೂರು, ಕೌಟುಂಬಿಕ ಕಲಹದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇತ್ತೀಚೆಗೆ ವಿವಾಹ ವಿವಾದದಿಂದ ಸುದ್ದಿಯಾಗಿದ್ದ ಚೈತ್ರಾ ಅವರು ಕೋಲಾರದ ಕುರುಬರಪೇಟೆಯ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ನಟಿ ಚೈತ್ರಾ ಕೊಟ್ಟೂರು ಮಂಡ್ಯ ಮೂಲದ ಉದ್ಯಮಿ ನಾಗಾರ್ಜುನ್ ಅವರನ್ನು ಬೆಂಗಳೂರಿನ ಬ್ಯಾಟರಾಯನಪುರದ ಗಣಪತಿ ದೇವಸ್ಥಾನದಲ್ಲಿ ಕಳೆದ ಮಾರ್ಚ್ 28ರಂದು ವಿವಾಹವಾಗಿದ್ದರು. ಬೆಳಗ್ಗೆ ವಿವಾಹವಾಗಿ ಸಂಜೆಯೊಳಗೆ ವಿವಾಹ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ನನಗೆ ಬಲವಂತವಾಗಿ ಮದುವೆ ಮಾಡಲಾಗಿದೆ ಎಂದು ನಾಗಾರ್ಜುನ್ ಆರೋಪಿಸಿದ್ದರು.
ಇದನ್ನೂ ಓದಿ: ಚೆಕ್ ಬೌನ್ಸ್ ಕೇಸ್: ಖ್ಯಾತ ನಟ ಶರತ್‌ಕುಮಾರ್ ಮತ್ತು ನಟಿ ರಾಧಿಕಾ ದಂಪತಿಗೆ ಒಂದು ವರ್ಷ ಜೈಲು
ಈ ಸಂಬಂಧ ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ನಂತರ ಮಾತುಕತೆಗೆ ಬರುವುದಾಗಿ ನಾಗಾರ್ಜುನ್ ಮತ್ತು ಪೋಷಕರು ತಿಳಿಸಿದ್ದರು. ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ನಾಗಾರ್ಜುನ್ ನನಗೆ ಇಷ್ಟ. ಅವರಿಗೂ ನಾನು ಇಷ್ಟ. ಒಪ್ಪಿಯೇ ಮದುವೆಯಾಗಿದ್ದೇವೆ. ಬಲವಂತದಿಂದ ಮದುವೆಯಾಗಲು ಅವರು ಮಗುವಲ್ಲ ಎಂದು ಚೈತ್ರಾ ಹೇಳಿದ್ದರು.
ನಾಗಾರ್ಜುನ್ ಮಾತ್ತು ಚೈತ್ರಾ ಕೊಟ್ಟೂರು ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ನಂತರ ಪರಸ್ಪರ ಆಪ್ತತೆ ಹೊಂದಿದ್ದರು ಎನ್ನಲಾಗಿದೆ. ನಾಗಾರ್ಜುನ್ ಅವರ ಹುಟ್ಟುಹಬ್ಬವನ್ನು ನಟಿ ಚೈತ್ರಾ ಕೊಟ್ಟೂರು ಭರ್ಜರಿಯಾಗಿ ಆಚರಿಸಿದ್ದರು.
ನಟಿ ಚೈತ್ರಾ ರಂಗಭೂಮಿ, ಸಿನಿಮಾ ನಟನೆ, ಜಾಹೀರಾತು ನಿರ್ದೇಶನ, ಬರವಣಿಗೆಯಲ್ಲಿ ಸಕ್ರಿಯರಾಗಿದ್ದರು. ಸೂಜಿದಾರ ಚಿತ್ರದಿಂದ ಗುರುತಿಸಿಕೊಂಡಿದ್ದಾರೆ. ಬೆಳ್ಳಿತೆರೆ ಜೊತೆಗೆ ಕಿರುತೆರೆಯ ಲಗ್ನಪತ್ರಿಕೆ ಧಾರಾವಾಹಿಯಲ್ಲು ಅಭಿನಯಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟ: ಹುತಾತ್ಮ ಸ್ಮಾರಕಕ್ಕೆ ಸೇರಿದ ದೇಶದ 23 ರಾಜ್ಯಗಳ 1,500 ಹಳ್ಳಿಗಳ ಮಣ್ಣು


