Homeಮುಖಪುಟಕೊರೊನಾ ಸೋಂಕಿತ ಪತ್ನಿಯ ಬಗ್ಗೆ ಸಿಗದ ಮಾಹಿತಿ, ಬಡವರಿಗೆ ಈ ಸ್ಥಿತಿ ಬರದಿರಲಿ ಎಂದ ಬಿಜೆಪಿ...

ಕೊರೊನಾ ಸೋಂಕಿತ ಪತ್ನಿಯ ಬಗ್ಗೆ ಸಿಗದ ಮಾಹಿತಿ, ಬಡವರಿಗೆ ಈ ಸ್ಥಿತಿ ಬರದಿರಲಿ ಎಂದ ಬಿಜೆಪಿ ಶಾಸಕ

- Advertisement -
- Advertisement -

ಕೊರೊನಾ ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಪತ್ನಿಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ದೊರಕುತ್ತಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ಅಳಲು ತೊಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ ಜಸ್ರಾನಾದ ಭಾರತೀಯ ಜನತಾ ಪಕ್ಷದ ಶಾಸಕ ರಾಮ್‌ಗೋಪಾಲ್ ಪಪ್ಪು ಲೋಧಿ ಮತ್ತು ಅವರ ಪತ್ನಿ ಸಂಧ್ಯಾ ಲೋಧಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಇಬ್ಬರೂ ಫಿರೋಜಾಬಾದ್‌ನ ಓಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಂಧ್ಯಾ ಲೋಧಿಯವರ ಆರೋಗ್ಯ ಪರಿಸ್ಥಿತಿ ಹದಗೆಟ್ಟ ಕಾರಣ ಹೆಚ್ಚಿನ ಚಿಕಿತ್ಸೆಗೆ ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಆದರೆ, ಅವರನ್ನು ಎಸ್‌ಎನ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ ಮೂರು ದಿನಗಳಾದರೂ, ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿಲ್ಲ. ಅಲ್ಲಿ ಆಕೆಗೆ ಸರಿಯಾಗಿ ಆಹಾರ ಮತ್ತು ಕುಡಿಯಲು ನೀರು ಕೂಡ ದೊರಕುತ್ತಿಲ್ಲ. ಇಂತಹ ಸ್ಥಿತಿ ಬಡವರಿಗೆ ಎಂದಿಗೂ ಬರದಿರಲಿ ಎಂದು ನಾನು ಆಶಿಸುತ್ತೇನೆ ಎಂದು ವಿಡಿಯೊದಲ್ಲಿ ಅಳಲು ತೊಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಜನ ದಂಗೆ ಏಳುವ ಮುನ್ನ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ’: ಗ್ರಾಮೀಣ ಭಾಗದ ವೈದ್ಯರ ಆಕ್ರೋಶ

ಬಿಜೆಪಿ ಶಾಸಕರಾಗಿದ್ಧರೂ ಕೂಡ ಅವರ ಪತ್ನಿ ಸಂಧ್ಯಾ ಲೋಧಿ ಅವರಿಗೆ ಆಗ್ರಾದ ಆಸ್ಪತ್ರೆಯಲ್ಲಿ ಅಷ್ಟು ಸುಲಭದಲ್ಲಿ ಬೆಡ್ ದೊರೆತಿಲ್ಲ. ಆಗ್ರಾದ ಜಿಲ್ಲಾಧಿಕಾರಿ ಪ್ರಭು ಎನ್ ಸಿಂಗ್ ಅವರು ಬೆಡ್ ಕೊಡಿಸುವ ಭರವಸೆ ಇದ್ದರೂ, ಸಂಧ್ಯಾ ಲೋಧಿಯವರನ್ನು ಬೆಡ್‌ ಇಲ್ಲ ಎಂದು ಹಿಂದಿರುಗುವಂತೆ ಹೇಳಲಾಗಿತ್ತು.

ಚಿಕಿತ್ಸೆಗಾಗಿ ಪಟ್ಟ ಪಾಡು ಮತ್ತು ಭೀಕರ ಅನುಭವವನ್ನು ಎದುರಿಸಿರುವ ಬಗ್ಗೆಯೂ ಶಾಸಕರು ಮಾತನಾಡಿದ್ದಾರೆ. ಶಾಸಕನಾಗಿಯೂ ಇಂತಹ ಸ್ಥಿತಿ ನನಗೆ ಬಂದಿದೆ. ಇನ್ನು ಬಡವರ ಗತಿ ಏನು, ಅವರಿಗೆ ಎಂದಿಗೂ ಈ ಸ್ಥಿತಿ ಬರಬಾರದು ಎಂದಿದ್ದಾರೆ ಶಾಸಕ ರಾಮ್‌ಗೋಪಾಲ್ ಪಪ್ಪು ಲೋಧಿ.

ಶಾಸಕರ ಪತ್ನಿಯನ್ನು ಆಗ್ರಾದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ್‌ನಲ್ಲಿ ದಾಖಲಿಸಿ ಮೂರು ದಿನಗಳಾಗಿವೆ. ಆದರೆ ಮೂರು ದಿನಗಳಾದರೂ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಶಾಸಕರಿಗೆ ಸಾಧ್ಯವಾಗಿಲ್ಲ. “ನನ್ನ ಹೆಂಡತಿ ಹೇಗಿದ್ದಾಳೆಂದು ದೇವರಿಗೆ ಮಾತ್ರ ತಿಳಿದಿದೆ. ಆಕೆಗೆ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬಡವರಿಗೆ ಇಂತಹ ಸ್ಥಿತಿ ಎಂದಿಗೂ ಬರಬಾರದು ಎಂದು ನಾನು ಆಶಿಸುತ್ತೇನೆ ”ಎಂದು ರಾಮ್‌ಗೋಪಾಲ್ ಲೋಧಿ ಹೇಳಿದ್ದಾರೆ.


ಇದನ್ನೂ ಓದಿ: ಮೇ 10 ರಿಂದ ಲಾಕ್‌ಡೌನ್‌‌‌ – ‘ಜನ ಹೊಟ್ಟೆಗೆ ಏನು ತಿಂತಾರೆ?’; ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...