Homeಕರೋನಾ ತಲ್ಲಣಕೋವಿಡ್ ನಿರ್ವಹಣೆಯ ವಿಫಲತೆ, ಚುನಾವಣಾ ಫಲಿತಾಂಶಗಳಲ್ಲಿ ಹಿನ್ನಡೆ: BJP-RSS ನಲ್ಲಿ ಈಗ ಆಂತರಿಕ ಆಕ್ರೋಶ, ತಳಮಳ!

ಕೋವಿಡ್ ನಿರ್ವಹಣೆಯ ವಿಫಲತೆ, ಚುನಾವಣಾ ಫಲಿತಾಂಶಗಳಲ್ಲಿ ಹಿನ್ನಡೆ: BJP-RSS ನಲ್ಲಿ ಈಗ ಆಂತರಿಕ ಆಕ್ರೋಶ, ತಳಮಳ!

- Advertisement -
- Advertisement -

ಬಿಜೆಪಿಯ ಪ್ರಮುಖ ಬೆಂಬಲಿಗರ ಪಟ್ಟಿಯಲ್ಲಿರುವ ಬಹುತೇಕ ಎಲ್ಲರೂ ಮಾರಣಾಂತಿಕ ಸಾಂಕ್ರಾಮಿಕ ರೋಗದಿಂದ ಬಾಧಿತರಾಗಿದ್ದಾರೆ ಎಂಬ ಅಂಶ ಮತ್ತು ಚುನಾವಣಾ ಫಲಿತಾಂಶಗಳಲ್ಲಿ ವ್ಯಕ್ತವಾಗಿದೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಉನ್ನತ ನಾಯಕರಲ್ಲಿ ಆಕ್ರೋಶ ಮತ್ತು ಕಳವಳ ಮೂಡಿಸಿವೆ ಎಂದು ಬಲ್ಲ ಮೂಲಗಳನ್ನು ಆಧರಿಸಿ ಎನ್‌ಡಿಟಿವಿ ವರದಿ ಮಾಡಿದೆ.

ತನ್ನ ಎಲ್ಲಾ ವಿಫಲತೆಗಳನ್ನು ಮರೆಮಾಚಲು ಸರ್ಕಾರವು ಕೋವಿಡ್‌ನ ಮೊರೆ ಹೋಗಿದ್ದು ತಪ್ಪು ಎಂಬ ಅಭಿಪ್ರಾಯಗಳು ಪಕ್ಷ ಮತ್ತು ಆರ್‌ಎಸ್‌ಎಸ್‌ಗಳಲ್ಲಿ ಕೇಳಿ ಬರುತ್ತಿವೆ.

ಕೋವಿಡ್‌ನ ಭೀಕರ ಎರಡನೇ ಅಲೆಯಲ್ಲಿನ ವಿನಾಶದ ಪ್ರಮಾಣ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವಿರುದ್ಧ ಅದು ಸೃಷ್ಟಿಸಿರುವ ಅಸಮಾಧಾನ ಮತ್ತು ಕೋಪಗಳು ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದಲ್ಲಿ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿಯವರ ಅಧಿಕಾರದ ಏಳು ವರ್ಷಗಳಲ್ಲಿ, ಸಾರ್ವಜನಿಕ ಗ್ರಹಿಕೆ ಮತ್ತು ಚುನಾವಣಾ ಫಲಿತಾಂಶಗಳು ಎಂದಿಗೂ ಪ್ರಬಲವಾದ “ಸಂಘ ಪರಿವಾರ”ವನ್ನು ಈ ಮಟ್ಟಿಗೆ ಕೆರಳಿಸಿರಲಿಲ್ಲ.

ತನ್ನ ಮತಬ್ಯಾಂಕ್ ಕೋವಿಡ್ ಅಲೆಗೆ ಜರ್ಜರಿತವಾಗಿದೆ ಎಂದು ಬಿಜೆಪಿ ಮತ್ತು ಸಂಘ ಪರಿವಾರಗಳು ಮನಗಂಡಿವೆ. ಮಧ್ಯಮ ವರ್ಗದವರು ಹೆಚ್ಚು ಹಾನಿಗೊಳಗಾಗಿದ್ದಾರೆ ಮತ್ತು ಈಗ ವೈರಸ್ ಹಳ್ಳಿಗಳಿಗೆ ಹರಡುತ್ತಿದೆ. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಅದು ವ್ಯಾಪಕ ತೊಂದರೆ ಸೃಷ್ಟಿಸಿದೆ ಎಂಬ ಅಂಶ ಈ ಕಳವಳಕ್ಕೆ ಕಾರಣ ಎಂದು ಎನ್‌ಡಿಟಿವಿ ವರದಿ ಹೇಳಿದೆ.

“ನೀವು ಯಾರನ್ನಾದರೂ ಕಳೆದುಕೊಂಡರೆ, ದುಃಖ ಮತ್ತು ಕೋಪವು ದೀರ್ಘಕಾಲದವರೆಗೆ ಉಳಿಯಲಿದೆ ಮತ್ತು ಅದು ಯಾವುದೇ ರೂಪದಲ್ಲಿ ವ್ಯಕ್ತವಾಗುತ್ತದೆ” ಎಂದು ಸಂಘ ಪರಿವಾರದ ನಾಯಕರೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಭವಿಷ್ಯದ ಚುನಾವಣೆಯಲ್ಲಿ ಬಿಜೆಪಿಗೆ ಈ ಸಾಂಕ್ರಾಮಿಕ ದೊಡ್ಡ ಹಿನ್ನಡೆ ಮಾಡಬಹುದು ಎಂಬ ಆತಂಕ ಅನೇಕ ಉನ್ನತ ನಾಯಕರಲ್ಲಿ ಕಂಡು ಬರುತ್ತಿದೆ.

ಮುಂದಿನ ಲೋಕಸಭಾ ಚುನಾವಣೆಗೆ (2024) ಇನ್ನೂ ಮೂರು ವರ್ಷಗಳು ಉಳಿದಿರುವಾಗ, ಪ್ರಧಾನಿ ಮೋದಿ ಮೂರನೇ ಅವಧಿಗೆ ಪ್ರಯತ್ನಿಸಲಿದ್ದರೆ, ಉತ್ತರ ಪ್ರದೇಶದಂತಹ ರಾಜ್ಯಗಳು ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿವೆ. ಉತ್ತರಪ್ರದೇಶದ ಪಂಚಾಯತ್ ಚುನಾವಣೆಯ ಫಲಿತಾಂಶಗಳು ಕೂಡ ಬಿಜೆಪಿ ಚಿಂತಿತವಾಗುವಂತೆ ಮಾಡಿದೆ.

ಈ ತರಹದ ಅಸಮಾಧಾನವು ಈಗ ಮುನ್ನೆಲೆಗೆ ಬಂದಿದೆ. ಕೇಂದ್ರ ಸಚಿವ ಸಂತೋಷ್ ಗಂಗ್ವಾರ್ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ, ಆಮ್ಲಜನಕದ ಕೊರತೆ, ವೈದ್ಯಕೀಯ ಸಲಕರಣೆಗಳ ಬ್ಲ್ಯಾಕ್ ಮಾರ್ಕೆಟ್ ಮತ್ತು ತಮ್ಮ ಕ್ಷೇತ್ರ ಬರೇಲಿಯಲ್ಲಿ ಕೋವಿಡ್ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿಕೊಳ್ಳುವ ವಿಳಂಬ ಕುರಿತಾಗಿ ಬರೆದ ಪತ್ರ ಈಗ ವೈರಲ್ ಆಗಿದೆ.

ಯಾವುದೇ ಹಾನಿ ನಿಯಂತ್ರಣಕ್ಕೆ ಒಂದು ಬದಲಾವಣೆಯ ಅಗತ್ಯವಿರುತ್ತದೆ ಎಂಬ ಬಲವಾದ ನಂಬಿಕೆ ಇದೆ ಎಂದು ಪರಿವಾರ ಮತ್ತು ಪಕ್ಷದ ನಾಯಕರು ಹೇಳುತ್ತಾರೆ. ಇದರಲ್ಲಿ ಕೆಲವು ಮಂತ್ರಿಗಳನ್ನು ತೆಗೆದು, ಹೊಸ ಮುಖಗಳಿಗೆ ದಾರಿ ಮಾಡಿಕೊಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್ ತುರ್ತುಸ್ಥಿತಿಯು ಆರೋಗ್ಯದ ಮೂಲಸೌಕರ್ಯ ಮತ್ತು ಸರ್ಕಾರದ ಸಿದ್ಧತೆಯ ವೈಫಲ್ಯವನ್ನು ಬಹಿರಂಗಪಡಿಸಿದೆ ಎಂದು ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಹೇಳುತ್ತದೆ.

ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂಬ ವಾದ ನಿಲ್ಲಲಾರದು. ಏಕೆಂದರೆ ಇದು ಕಳೆದ ವರ್ಷದಿಂದ ಕೋವಿಡ್ ವಿರುದ್ಧದ ಹೋರಾಟವನ್ನು ಕೇಂದ್ರವೇ ಮುನ್ನಡೆಸಿದೆ ಎಂಬುದು ಜನರಿಗೆ ಗೊತ್ತಿದೆ ಮತ್ತು ವೈಫಲ್ಯಕ್ಕೆ ಕೇಂದ್ರವೇ ಕಾರಣ ಎಂಬುದು ಜನರ ಅರಿವಿಗೆ ಬಂದಿದೆ ಎಂದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕೆಲವು ನಾಯಕರು ಹೇಳುತ್ತಾರೆ.

“ಜನರು ಕೇಂದ್ರ ನಾಯಕತ್ವದಿಂದ ನಿರಾಶೆಗೊಂಡಿದ್ದಾರೆ ಮತ್ತು ಪ್ರಸ್ತುತ ಪರಿಸ್ಥಿತಿಗೆ ಯಾವುದೇ ಕ್ರಮಗಳ ಕೊರತೆಯನ್ನು ಅವರು ದೂಷಿಸುತ್ತ, ಕೇಂದ್ರವನ್ನು ಶಪಿಸುತ್ತಿದ್ದಾರೆ. ಈ ಸಂದರ್ಭ ಈಗ ನಮ್ಮ ನಿಯಂತ್ರಣ ದಾಟಿ ಹೋಗಿದೆ” ಎಂದು ಮೂಲಗಳು ತಿಳಿಸಿವೆ.

ಕೋವಿಡ್ ಪ್ರಕರಣಗಳು ದೇಶದಲ್ಲಿ ಉಲ್ಬಣ ಕಾಣುತ್ತಿರುವಾಗ, ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯವರ ಅಭಿಯಾನವು “ತಪ್ಪು ಸಂದೇಶ” ವನ್ನು ಕಳುಹಿಸಿದೆ ಎಂದು ಹಿರಿಯ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ. ಬಿಜೆಪಿಯ ಉನ್ನತ ನಾಯಕರು ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡುತ್ತಿದ್ದರು ಮತ್ತು ಮಾಸ್ಕ್ ಧರಿಸದೇ ಬೃಹತ್ ರ‍್ಯಾಲಿ ಮತ್ತು ರೋಡ್ ಶೋಗಳಿಗೆ ಹಾಜರಾಗಿದ್ದರು, ಸಾರ್ವಜನಿಕ ಸುರಕ್ಷತೆಗಿಂತ ಮತಗಳಿಗೆ ಆದ್ಯತೆ ನೀಡುತ್ತಿದ್ದರು. ಇದು ಜಾಗತಿಕ ಮಾಧ್ಯಮಗಳಲ್ಲಿ ಕೂಡ ಬಿತ್ತರವಾಗಿ ಬಿಜೆಪಿ ಬಗ್ಗೆ ಕೆಟ್ಟ ಚಿತ್ರಣ ಮೂಡಲು ಕಾರಣವಾಗಿದೆ ಎಂದು ಅನೇಕ ನಾಯಕರು ಈಗ ಹೇಳುತ್ತಿದ್ದಾರೆ.

ಹೀಗೆ ಆಕ್ರೋಶ ಮತ್ತು ತಳಮಳಗಳನ್ನು ವ್ಯಕ್ತಪಡಿಸುವ ಇಂತಹ ನಾಯಕರು ಸರ್ಕಾರದೊಳಗಿನ ಸಂವಹನದ ಕೊರತೆಯನ್ನು ದೂರುತ್ತಾರೆ. “ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯರಾಘವನ್ ಮೂರನೇ ಅಲೆ ಬಗ್ಗೆ ನಮಗೆ ಎಚ್ಚರಿಕೆ ನೀಡುತ್ತಾರೆ. ಆದರೆ ಅವರು ಎರಡನೇ ಅಲೆಯ ಬಗ್ಗೆ ಎಂದಿಗೂ ಮಾತನಾಡಲಿಲ್ಲ” ಎಂದು ಒಬ್ಬ ನಾಯಕ ವಾಗ್ದಾಳಿ ನಡೆಸಿದರು.

ಬಿಜೆಪಿಯ ‘ಪ್ರಸಿದ್ಧ’ ಸಂಘಟನಾ ಶಕ್ತಿಗಳು ಮತ್ತು ಯಂತ್ರೋಪಕರಣಗಳು ಈ ಸಂದರ್ಭದದಲ್ಲಿ ಜನರ ನಡುವೆ ಕಾಣಲೇ ಇಲ್ಲ. ಕಳೆದ ವರ್ಷ ಪಕ್ಷದ ಸಂಘಟನೆಯು ಲಾಕ್‌ಡೌನ್ ಸಮಯದಲ್ಲಿ ಆಹಾರ ಪ್ಯಾಕೆಟ್‌ಗಳು ಮತ್ತು ಇತರ ಪರಿಹಾರಗಳನ್ನು ಏರ್ಪಡಿಸಿದ್ದಕ್ಕಿಂತ ಭಿನ್ನವಾಗಿ ಅವರು ಈ ಬಾರಿ ಜನರಿಗೆ ಯಾವ ಸಹಾಯವನ್ನು ನೀಡುತ್ತಿಲ್ಲ ಎಂದು ಪಕ್ಷದ ಆಂತರಿಕ ಮೂಲಗಳು ಹೇಳುತ್ತಿವೆ.

ವಿಚಿತ್ರ ಮತ್ತು ಕಾರ್ಯಸಾಧುವಲ್ಲದ ನಿಯಮಗಳು ಮತ್ತು ನಿಬಂಧನೆಗಳಲ್ಲಿ ಸಿಲುಕಿರುವ ‘ಲಸಿಕಾ ಅಭಿಯಾನ’ ಕೂಡ ಸರ್ಕಾರದ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹಲವು ನಾಯಕರು ಆರೋಪಿಸಿದ್ದಾರೆ.

ಒಂದನೇ ಅಲೆ ನಂತರ ಅವಕಾಶವಿತ್ತು, ಸಮಯವಿತ್ತು. ಆಗ ಲಸಿಕೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿತ್ತು ಎಂದು ನಾಯಕರು ಗಮನ ಸೆಳೆದಿದ್ದಾರೆ.

ಆದರೆ ಸರ್ಕಾರದಲ್ಲಿರುವವರು ಕೇಂದ್ರದ ಕೋವಿಡ್ ನಿರ್ವಹಣೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಎರಡನೇ ಅಲೆಯ ಪರಿಮಾಣದ ಬಗ್ಗೆ ಹೆಚ್ಚಿನ ಎಚ್ಚರಿಕೆ ಇರಲಿಲ್ಲ’ ಎಂದು ಅವರು ಹೇಳುತ್ತಾರೆ. “ಎರಡನೇ ಅಲೆ ಎದುರಿಸಲು ಸರ್ಕಾರ ಸಿದ್ಧವಾಗಿರಲಿಲ್ಲ ಎಂಬುದು ಸತ್ಯ, ಆದರೆ ಈಗ ಎಲ್ಲಾ ಕೈಗಳು ನಿಯಂತ್ರಣ ತಪ್ಪಿವೆ’ ಎಂದು ಕೇಂದ್ರ ಸಚಿವರೊಬ್ಬರು ಹೇಳಿದ್ದಾರೆ.

“ಆಮ್ಲಜನಕದ ಪೂರೈಕೆಯನ್ನು ಬಲಪಡಿಸಲಾಗುತ್ತಿದೆ. ವ್ಯಾಕ್ಸಿನೇಷನ್ ಅಭಿಯಾನ ಸುಗಮವಾಗಿರಲಿದೆ. ನಮ್ಮ ಲಸಿಕೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ ಮತ್ತು ಮುಂಬರುವ ತಿಂಗಳುಗಳಲ್ಲಿ ನಾವು ಹೆಚ್ಚಿನ ಲಸಿಕೆಗಳನ್ನು ಪಡೆಯುತ್ತೇವೆ” ಎಂದು ಕೆಲವು ನಾಯಕರು ಆಶಾಭಾವ ಹೊಂದಿದ್ದಾರೆ. ಪ್ರಧಾನಿ ವೈಯಕ್ತಿಕವಾಗಿ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಕೆಲವರು ಸಮಾಧಾನದ ಮಾತು ಆಡುತ್ತಿದ್ದಾರೆ.

ಪ್ರಧಾನಿ ಮೋದಿ ಪರಿಸ್ಥಿತಿಯ ತೀವ್ರತೆ ತಮ್ಮ ಗಮನಕ್ಕೆ ಬಂದ ಕೂಡಲೇ ಅವರ ಬಂಗಾಳ ಚುನಾವಣಾ ಪ್ರಚಾರದ ಅಭಿಯಾನವನ್ನು ಮೊಟಕುಗೊಳಿಸಿದರು ಎಂದು ಕೆಲವು ನಾಯಕರು ಹೇಳುತ್ತಾರೆ. ಗಂಗಾ ನದಿಯ ದಡದಲ್ಲಿ ನಡೆಯುತ್ತಿದ್ದ ಕುಂಭಮೇಳ ಕೊರೋನಾ ಸೂಪರ್ ಸ್ಪ್ರೆಡರ್ ಆಗುತ್ತಿದೆ ಎಂದು ಅರಿವಾದಾಗ ಮೋದಿ, ಕುಂಭಮೇಳ ಸಾಂಕೇತಿಕವಾಗಿ ನಡೆಯಲಿ ಎಂದು ಹೇಳಿದರು ಎಂದು ಕೆಲವು ನಾಯಕರು ಮೋದಿಯವರ ಸಮರ್ಥನೆ ಮಾಡುತ್ತಾರೆ.

“ಜನರು ಕೋಪಗೊಂಡಿದ್ದಾರೆ ಮತ್ತು ನೋವಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ, ಆದರೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸರ್ಕಾರ ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಈ ಕೆಲಸದಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ಮುಂಚೂಣಿಯಲ್ಲಿವೆ” ಎಂದು ಮತ್ತೊಬ್ಬ ನಾಯಕರು ಹೇಳುತ್ತಾರೆ. ಉದಾಹರಣೆಗೆ, ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಕೋವಿಡ್ ಟ್ರೇಸಿಂಗ್ ಮಾಡಲು, ಪರೀಕ್ಷಿಸಲು ಮತ್ತು ಚಿಕಿತ್ಸೆ ನೀಡಲು ಹಳ್ಳಿಗಳಲ್ಲಿ ವಿಶೇಷ ಚಾಲನೆ ನೀಡಿದೆ ಎಂದು ಅವರು ವಾದಿಸುತ್ತಾರೆ.
ಬಿಕ್ಕಟ್ಟಿನ ಈ ಸಮಯದಲ್ಲಿ ವಿರೋಧ ಪಕ್ಷದ ಆಡಳಿತದ ರಾಜ್ಯಗಳು “ರಾಜಕೀಯ ಮಾಡುತ್ತಿವೆ” ಮತ್ತು ತಮ್ಮ ವೈಫಲ್ಯವನ್ನು ಕೇಂದ್ರದ ಮೇಲೆ ಹೇರುತ್ತಿವೆ ಎಂದು ಮೋದಿ ಬೆಂಬಲಿಗ ನಾಯಕರು ಆರೋಪಿಸುತ್ತಾರೆ. ಈ ಸಂದರ್ಭದಲ್ಲಿ ಅವರು, ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳನ್ನು ದೂಷಿಸುತ್ತಾರೆ.

“ಸಾರ್ವಜನಿಕ ಆರೋಗ್ಯವು ರಾಜ್ಯ ವಿಷಯವಾಗಿದ್ದರೂ, ಸಾಂಕ್ರಾಮಿಕ ರೋಗಕ್ಕೆ ರಾಷ್ಟ್ರ ಮಟ್ಟದ ಸಮನ್ವಯ ಮತ್ತು ಗಣನೀಯ ಸಂಪನ್ಮೂಲಗಳು ಬೇಕಾಗಿರುವುದರಿಂದ ಕೇಂದ್ರ ಸರ್ಕಾರವು ಕೋವಿಡ್ ನಿರ್ವಹಣೆಯಲ್ಲಿ ಪೂರ್ವಭಾವಿಯಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಅಂಕಣದಲ್ಲಿ ಬರೆದಿದ್ದಾರೆ.


ಇದನ್ನೂ ಓದಿ; ಕೊರೊನಾ ಸೋಂಕಿತ ಪತ್ನಿಯ ಬಗ್ಗೆ ಸಿಗದ ಮಾಹಿತಿ, ಬಡವರಿಗೆ ಈ ಸ್ಥಿತಿ ಬರದಿರಲಿ ಎಂದ ಬಿಜೆಪಿ ಶಾಸಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...