ಬಳ್ಳಾರಿಯ ಜಿಂದಾಲ್ ಆವರಣದಲ್ಲಿ ಒಂದು ಸಾವಿರ ಆಕ್ಸಿಜನೇಟೆಡ್ ಬೆಡ್‌ಗಳ ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚುವಲ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಿದ್ದಾರೆ.
ಕಳೆದ ವರ್ಷ ಕೋವಿಡ್ ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದಾಗ ಚಿಕಿತ್ಸೆ ಮತ್ತು ರೋಗಿಗಳ ಐಸೋಲೇಶನ್‌ಗಾಗಿ 1,100 ಹಾಸಿಗೆಗಳನ್ನು ಹೊಂದಿರುವ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಅನ್ನು ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ತೆರೆದಿತ್ತು. ಇದಕ್ಕಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂ ಖರ್ಚು ಮಾಡಿ ಭಾರೀ ಪ್ರಚಾರ ಗಿಟ್ಟಿಸಿತ್ತು.
ಆದರೆ, ಕೇವಲ ಒಂದೂವರೆ ತಿಂಗಳ ಬಳಿಕ ಈ ಸೆಂಟರ್ ಅನ್ನು ಮುಚ್ಚಲಾಗಿತ್ತು. ಕೊರೊನಾ ಎರಡನೇ ಅಲೆಯಲ್ಲಿ ಈ ಕೇಂದ್ರವಿದ್ದಿದ್ದರೇ ಹಾಸಿಗೆಗಾಗಿ ಜನ ಪರದಾಡುವ ಸ್ಥಿತಿ ಬರುತ್ತಿರಲಿಲ್ಲ ಎಂದು ಹಲವು ಸಂಘ ಸಂಸ್ಥೆಗಳು ಸರ್ಕಾರವನ್ನು ಟೀಕಿಸಿದ್ದವು.
ಇದನ್ನೂ ಓದಿ: ಪ್ರಚಾರ ಬಯಸದೆ ಸದ್ದಿಲ್ಲದೆ ಜನಸೇವೆಯಲ್ಲಿ ತೊಡಗಿದ ಬಿಎಂಸಿ-92 ವೈದ್ಯರ ತಂಡ
ಮುಖ್ಯಮಂತ್ರಿ @BSYBJP ರವರು ಇಂದು ವರ್ಚುವಲ್ ಕಾರ್ಯಕ್ರಮದ ಮೂಲಕ ಬಳ್ಳಾರಿಯ ಜೆ.ಎಸ್.ಡಬ್ಲ್ಯೂ ಸಂಸ್ಥೆ ವತಿಯಿಂದ ಸ್ಥಾಪಿಸಲಾಗಿರುವ 1 ಸಾವಿರ ಆಕ್ಸಿಜನೇಟೆಡ್ ಹಾಸಿಗೆಗಳ 'ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆ'ಯನ್ನು ಉದ್ಘಾಟಿಸಿದರು. (1/2)#KarnatakaFightsCorona #Unite2FightCorona @CimGOI @jswsteel pic.twitter.com/eiG0FNnP1q
— CM of Karnataka (@CMofKarnataka) May 19, 2021
ಬಳ್ಳಾರಿಯ ಜೆ.ಎಸ್.ಡಬ್ಲ್ಯೂ ಸಂಸ್ಥೆ ವತಿಯಿಂದ ಸ್ಥಾಪಿಸಲಾಗಿರುವ 1 ಸಾವಿರ ಆಕ್ಸಿಜನೇಟೆಡ್ ಹಾಸಿಗೆಗಳ ‘ಕೋವಿಡ್ ಕೇರ್ ಫೀಲ್ಡ್ ಆಸ್ಪತ್ರೆ’ಯನ್ನು ಜಿಂದಾಲ್ ಆವರಣದಲ್ಲಿ ಆರಂಭಿಸಲಾಗಿದೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಆರೋಗ್ಯ ಸಚಿವ ಸುಧಾಕರ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಜೆ.ಎಸ್.ಡಬ್ಲ್ಯೂ ಅಧ್ಯಕ್ಷ ಸಜ್ಜನ್ ಜಿಂದಾಲ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಮತ್ತಿತರರು ಭಾಗವಹಿಸಿದ್ದರು.
ಈ ತಾತ್ಕಾಲಿಕ ಆಸ್ಪತ್ರೆಯಲ್ಲಿ ಗುರುವಾರದಿಂದ 272 ಬೆಡ್‌ಗಳು ಚಿಕಿತ್ಸೆ ದೊರೆಯಲಿದ್ದು, ಸದ್ಯದಲ್ಲೇ 700 ಹಾಸಿಗೆಗಳು ಕೊರೊನಾ ರೋಗಿಗಳ ಉಪಯೋಗಕ್ಕೆ ಮುಕ್ತವಾಗಲಿದೆ. ಇನ್ನು ಈ ಆಸ್ಪತ್ರೆಯಲ್ಲಿ ಸೇವೆಯನ್ನು ಸಲ್ಲಿಸಲು ಬಳ್ಳಾರಿಯ ಬೆಸ್ಟ್ ನರ್ಸಿಂಗ್ ಆಸ್ಪತ್ರೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದ ಗುಜರಾತ್‌ನ ನರ್ಸ್‌ಗಳು ರೈಲಿನ ಮೂಲಕ ಬಂದಿದ್ದಾರೆ.
ಇತ್ತಿಚೆಗೆ ರಾಜ್ಯ ಸರ್ಕಾರ ಜಿಂದಾಲ್ ಕಂಪನಿಗೆ 3677 ಎಕರೆ ಭೂಮಿ ಮಾರಾಟ ಮಾಡಿದೆ.
ಇದನ್ನೂ ಓದಿ: ಬೆಡ್‌ಗಾಗಿ ಸೋಂಕಿತರ ಪರದಾಟ: ಬೆಂಗಳೂರಿನ 10,100 ಬೆಡ್‌ಗಳ ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಏನಾಯಿತು?


