ಕೊರೊನಾ ಸಾಂಕ್ರಾಮಿಕದಿಂದ ನಲುಗಿರುವ ದೇಶದಲ್ಲಿ ಬ್ಲಾಕ್ ಫಂಗಸ್, ವೈಟ್ ಫಂಗಸ್ ಸೋಂಕು ಹಬ್ಬುತ್ತಿದೆ. ಇದರ ನಡುವೆಯೇ ಯೆಲ್ಲೋ ಫಂಗಸ್ (Yellow Fungus) ಸಹ ಕಂಡು ಬಂದಿದ್ದು ದೇಶದಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ.
ಈಗಾಗಲೇ ಎಲ್ಲಾ ರಾಜ್ಯಗಳಲ್ಲೂ ಬ್ಲಾಕ್ ಫಂಗಸ್ ಸೋಂಕನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದೆ. ಬ್ಲಾಕ್ ಫಂಗಸ್ ಪ್ರಕರಣಗಳು ಎಲ್ಲಾ ರಾಜ್ಯಗಳಲ್ಲೂ ದಾಖಲಾಗಿದ್ದು, ಅನೇಕರು ಮೃತಪಟ್ಟಿದ್ದಾರೆ. ಕರ್ನಾಟಕದಲ್ಲೂ 300 ಜನ ಈ ಸೋಂಕಿಗೆ ತುತ್ತಾಗಿದ್ದಾರೆ ಎಂದು ಸ್ವತಃ ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲೇ ದೆಹಲಿಯ ಘಾಜಿಯಬಾದ್‌ನಲ್ಲಿ ಮೊದಲ ಯೆಲ್ಲೋ ಫಂಗಸ್ ಪ್ರಕರಣ ಪತ್ತೆಯಾಗಿದೆ. ಈವರೆಗಿನ ಕಪ್ಪು, ಬಿಳಿ ಫಂಗಸ್‌ಗಿಂತ ಈ ಯೆಲ್ಲೋ ಫಂಗಸ್ ಮತ್ತಷ್ಟು ಮಾರಕವಾಗಿರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜನಾಕ್ರೋಶದ ಸ್ಫೋಟ: ರಾಜ್ಯಾದ್ಯಂತ ಮನೆಗಳಲ್ಲಿಯೇ ಭುಗಿಲೆದ್ದ ಪ್ರತಿಭಟನೆಗಳು
ಈ ವೈರಸ್ ಬಾಧಿತರಲ್ಲಿ ಆಲಸ್ಯ, ತೂಕ ಇಳಿಕೆ, ಹಸಿವೇ ಆಗದಿರುವುದು ಅಥವಾ ಕಡಿಮೆ ಹಸಿವಾಗುವುದು, ಕೀವು ಸೋರುವುದು ಸೇರಿದಂತೆ ಹಲವಾರು ಲಕ್ಷಣಗಳು ಕಂಡು ಬರುತ್ತದೆ ಎಂದು ತಿಳಿದು ಬಂದಿದೆ. ಯೆಲ್ಲೋ ಫಂಗಸ್ ಸೋಂಕಿನ ರೋಗ ಲಕ್ಷಣ ಕಂಡು ಬಂದ ತಕ್ಷಣ ರೋಗಿಗಳು ವೈದ್ಯರನ್ನು ಕಾಣುವುದು ಉತ್ತಮ ಎಂದು ಎಚ್ಚರಿಸಲಾಗಿದೆ.
ನೈರ್ಮಲ್ಯ ಕೊರತೆಯಿಂದ ಈ ಫಂಗಸ್ ಹರಡುವ ಸಾಧ್ಯತೆ ಇದೆ. ಕಣ್ಣು ಸೇರಿ ದೇಹದ ಎಲ್ಲಾ ಭಾಗಗಳಿಗೂ ಡ್ಯಾಮೇಜ್ ಮಾಡಬಲ್ಲದು ಎನ್ನಲಾಗಿದೆ. ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ಬ್ರಿಜ್ ಪಾಲ್ ತ್ಯಾಗಿ ಅವರಿಂದ ಈ ಮಾಹಿತಿ ಹೊರಬಿದ್ದಿದ್ದು, ಡಾ. ತ್ಯಾಗಿ, ಈಗ ದೆಹಲಿಯಲ್ಲಿ ಹಳದಿ ಫಂಗಸ್ ರೋಗಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಯೆಲ್ಲೋ ಫಂಗಸ್ಗೆ ಔಷಧ ಇದೆಯೇ? ಇದಕ್ಕೆ ಯಾವ ಚಿಕಿತ್ಸೆ ನೀಡಬೇಕು? ಈ ವೈರಸ್ ವಿರುದ್ಧದ ಹೋರಾಟಕ್ಕೆ ತಯಾರಿ ಹೇಗೆ ಮಾಡಬೇಕು? ಎಂಬ ಅಂಶಗಳು ಮತ್ತಷ್ಟು ಅಧ್ಯಯನದಿಂದ ಹೊರ ಬೀಳಬೇಕಿದೆ. ಆದರೆ, ಕೊರೊನಾ ಸಂಕಷ್ಟದಲ್ಲಿರುವ ದೇಶದಲ್ಲಿ ಬ್ಲಾಕ್, ವೈಟ್, ಹಳದಿ ಫಂಗಸ್‌ಗಳು ಆತಂಕ ಸೃಷ್ಟಿ ಮಾಡಿರುವುದು ಸುಳ್ಳಲ್ಲ.
ಇದನ್ನೂ ಓದಿ: ರೈತ ಹೋರಾಟಕ್ಕೆ 6 ತಿಂಗಳು- ಹೇಗಿದೆ ಪ್ರತಿಭಟನಾ ನಿರತ ಗಡಿಗಳಲ್ಲಿನ ಪರಿಸ್ಥಿತಿ..?


