ವಿವಾದಿತ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 6 ತಿಂಗಳಿನಿಂದ ರಾಜಸ್ಥಾನ-ಹರಿಯಾಣ ಗಡಿ ಶಹಜಾನ್‌ಪುರದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ಮಳೆ ಭಾರಿ ಪೆಟ್ಟು ನೀಡಿದೆ. ಬಿರುಗಾಳಿ ಸಹಿತ ಭಾರಿ ಮಳೆಗೆ ರೈತ ಪ್ರತಿಭಟನಾಕಾರರ ಶೇಕಡಾ 90 ರಷ್ಟು ಗುಡಿಸಲುಗಳು ಮತ್ತು ಟೆಂಟ್‌ಗಳಿಗೆ ಹಾನಿ ಉಂಟಾಗಿದೆ.
ಬಿರುಗಾಳಿಗೆ ಟೆಂಟ್‌ಗಳಿಗೆ ಇದ್ದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಪ್ರತಿಭಟನಾ ನಿರತ ರೈತರು ನಿದ್ದೆಯಿಲ್ಲದೆ ರಾತ್ರಿಯನ್ನು ಕಳೆದಿದ್ದು, ಪ್ರತಿಭಟನಾ ಸ್ಥಳದ ಪಕ್ಕದ ಡಾಬಾ ಮತ್ತು ಕೆಲ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಘಟನೆಯಲ್ಲಿ ಟೆಂಟ್ ಬಿದ್ದು ಮೂವರು ರೈತರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.
ಭಾರಿ ಮಳೆಗೆ ಟೆಂಟ್‌ಗಳು, ಗುಡಿಸಲುಗಳು, ಚಾಪೆ, ಕುರ್ಚಿಗಳು, ಧ್ವನಿವರ್ಧಕಗಳು, ಫ್ಯಾನ್, ಕೂಲರ್‌ಗಳು, ಹುಕ್ಕಾಗಳು, ಪಾತ್ರೆಗಳು ಇತ್ಯಾದಿ ದೆಹಲಿ-ಜೈಪುರ ಹೆದ್ದಾರಿ ಮತ್ತು ಹತ್ತಿರದ ಹೊಲಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿರುವುದು ಕಂಡುಬಂದಿದೆ.
ಇದನ್ನೂ ಓದಿ: ಶ್ರದ್ಧಾಂಜಲಿ : ಕರ್ನಾಟಕದ ಮಕ್ಕಳಿಗೂ ಪ್ರೇರಣೆಯಾಗಿದ್ದ ಸಂತ ಸುಂದರಲಾಲ್ ಬಹುಗುಣ
The Fight till the WIN Continues even in extreme weather conditions#FarmersProtest #6MonthsofFarmersProtest #मोदी_कठपुतली_अंबानी_की pic.twitter.com/HXasjChXud
— Kisan Ekta Morcha (@Kisanektamorcha) May 31, 2021
“ಬಿರುಗಾಳಿ ಆರಂಭವಾದಾಗ ನಾವು ತಕ್ಷಣ ಹೊರಬಂದು ಡಾಬಾದಲ್ಲಿ ಆಶ್ರಯ ಪಡೆದಿದ್ದೇವೆ. ಆದರೆ, ನಮ್ಮ ಸಹಚರರೊಬ್ಬರು ಟೆಂಟ್ ಒಳಗೆ ಉಳಿದಿದ್ದರು. ಟೆಂಟ್ ಅವರ ಮೇಲೆ ಬಿದ್ದು ಗಾಯಗೊಂಡಿದ್ದರು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ರೈತರೆಲ್ಲಾ ರಾತ್ರಿ ಪೂರ್ತಿ ಹಾಸಿಗೆಗಳ ಮೇಲೆ ಕುಳಿತುಕೊಂಡು ಕಾಲ ಕಳೆದಿದ್ದಾರೆ ”ಎಂದು ಅಖಿಲ ಭಾರತ ಕಿಸಾನ್ ಸಭಾದ ಮುಖಂಡ ರಘುವೀರ್ ಸಿಂಗ್ ಹೇಳಿದ್ದಾರೆ.
“ಚಂಡಮಾರುತದಿಂದ ನಮ್ಮ ಟೆಂಟ್‌ಗಳು ವ್ಯಾಪಕ ಹಾಣಿಗೊಳಗಾಗಿವೆ. ಯಾವುದೇ ಟೆಂಟ್, ಗುಡಿಸಲುಗಳ ಛಾವಣಿ ಉಳಿದಿಲ್ಲ. ಮಳೆ ನಮ್ಮ ಟೆಂಟ್‌ಗಳನ್ನು ಮಾತ್ರ ಮುರಿದಿದೆ, ಚೈತನ್ಯವಲ್ಲ. ನಾವು ಮೊದಲ ದಿನದಿಂದ ಇಂತಹ ಪ್ರತಿಕೂಲತೆಯನ್ನು ಎದುರಿಸಿದ್ದೇವೆ. ಇದನ್ನು ಸಹ ನಿವಾರಿಸುತ್ತೇವೆ ”ಎಂದು ಹಿರಿಯ ರೈತ ಮುಖಂಡ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಬಿರುಗಾಳಿಯ ಹೊಡೆತದಿಂದ ಮತ್ತೆ ಎಚ್ಚೆತ್ತಿರುವ ರೈತರು, ಪ್ರತಿಭಟನೆಯನ್ನು ಮುಂದುವರಿಸಲು ತಮ್ಮ ತಾತ್ಕಾಲಿಕ ವಾಸಸ್ಥಾನವನ್ನು ಪುನರ್ನಿರ್ಮಿಸಲು ಪ್ರಾರಂಭಿಸಿದ್ದಾರೆ ಎಂದು ಬಿಕೆಯು ನಾಯಕ ರಾಮ್ ಕಿಸಾನ್ ಮೆಹ್ಲಾವತ್ ಹೇಳಿದ್ದಾರೆ. ಶಹಜಾನ್‌ಪುರ ಗಡಿಯಲ್ಲಿ ರೈತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುವಂತೆ ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮನವಿ ಮಾಡಿದೆ.
ಇದನ್ನೂ ಓದಿ: “ನನ್ನನ್ನು ಈ ರೀತಿ ಅವಮಾನಿಸಬೇಡಿ”: ಪಿಎಂ ಜೊತೆಗಿನ ಭೇಟಿ ನಂತರ ಮಮತಾ ಅಸಮಾಧಾನ


