Homeಕರ್ನಾಟಕಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

ಶ್ರದ್ಧಾಂಜಲಿ; ಗಾಂಧಿವಾದಿಗಳ ಬಗ್ಗೆ ಇದ್ದ ತಕರಾರುಗಳಿಗೆ ಉತ್ತರ ನೀಡುತ್ತಿದ್ದ ದೊರೆಸ್ವಾಮಿಯವರು..

- Advertisement -
- Advertisement -

ವಿದ್ಯಾರ್ಥಿ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಎಂದರೆ ಅವರು ಭೂಮಿಯ ಮೇಲೆ ಬದುಕುತ್ತಿರುವ ದೇವರುಗಳು; ಅವರನ್ನೆಲ್ಲಾ ನಮ್ಮಂಥವರು ನೋಡಲೂ ಸಾಧ್ಯವಿಲ್ಲ ಎಂದು ತಿಳಿದಿದ್ದವನಿಗೆ ಡಿಗ್ರಿ ಓದುವ ಸಮಯಕ್ಕೆ ಅವರ ಬಗ್ಗೆ ಇದ್ದ ಪೂಜ್ಯಭಾವ ದೂರವಾಗಿತ್ತು. ಅದು ಗಾಂಧಿ ಮತ್ತು ಗಾಂಧಿವಾದದ ಬಗ್ಗೆ ಅಸಡ್ಡೆ ಮೂಡುತ್ತಿದ್ದ ಕಾಲ. ಮೊದಲೇ ಎಚ್. ನರಸಿಂಹಯ್ಯನವರನ್ನು ಹತ್ತಿರದಿಂದ ನೋಡಿದ್ದ ನನಗೆ ಎಚ್.ಎಸ್ ದೊರೆಸ್ವಾಮಿಯವರು ಸಿಕ್ಕಿದ್ದು ಗಾಂಧಿವಾದವನ್ನು ಕಂಠಪೂರ್ತಿ ವಿರೋಧಿಸುತ್ತಿದ್ದ ದಿನಗಳಲ್ಲಿ. ಅದು 2002. ಬೆಂಗಳೂರು ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ ವಿರುದ್ಧ ನಾವು ದೊಡ್ಡಬಳ್ಳಾಪುರದ ಯುವಜನರು ’ಜನಧ್ವನಿ ಯುವ ವೇದಿಕೆಯ’ ಅಡಿಯಲ್ಲಿ ಒಂದು ಸೈಕಲ್ ಜಾಥಾ ಹಮ್ಮಿಕೊಂಡಿದ್ದೆವು. ಬೆಂಗಳೂರಿನ ಕೆ.ಆರ್.ಸರ್ಕಲ್ಲಿನಲ್ಲಿ ಜಾಥಾ ಉದ್ಘಾಟನೆ. ಉದ್ಘಾಟಿಸಿದವರು ಹಿರಿಯ ಗಾಂಧಿವಾದಿ ಎಚ್.ಎಸ್ ದೊರೆಸ್ವಾಮಿಯವರು. ಅರವತ್ತು ಸೈಕಲ್‌ಗಳು ಬೆಂಗಳೂರಿನಿಂದ ಮೈಸೂರು ಮತ್ತು ಮೈಸೂರಿನಿಂದ ಬೆಂಗಳೂರಿಗೆ ಸುತ್ತಿದವು. ಆ ಜಾಥಾ ನಮ್ಮ ಬದುಕಿನಲ್ಲಿ ಬಹಳ ಮಹತ್ತರವಾದದ್ದು. ದೊರೆಸ್ವಾಮಿಯವರ ಹೆಸರನ್ನಷ್ಟೇ ಕೇಳುತ್ತಿದ್ದ ನಮ್ಮೆದುರಿಗೆ ಅವರು ನಿಂತು ಮಾತನಾಡಿದರು. ಇಪ್ಪತ್ತರ ಆಸುಪಾಸಿನ ನಮ್ಮೆಲ್ಲರ ಕಾರ್ಯವನ್ನು ಮಹತ್ವದ ಸಾಧನೆಯೆಂಬಂತೆ ಬೆನ್ನು ತಟ್ಟಿದರು; ಹುರಿದುಂಬಿಸಿದರು. ಬಿಎಂಐಸಿ ಯೋಜನೆಯ ಕುತಂತ್ರವನ್ನು, ರೈತರ ವಿರುದ್ಧದ ದ್ರೋಹವನ್ನು ನಮ್ಮೆಲ್ಲರ ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದರು.

ಅದಾದಮೇಲೆ ನಾನು ಅವರನ್ನು ಬಹಳ ಸಲ ಭೇಟಿ ಮಾಡಿದ್ದೇನೆ. ಅವರಿರುವ ವೇದಿಕೆಯಲ್ಲಿ ಕೂತು ಭಾಷಣ ಮಾಡಿದ್ದೇನೆ. ಅವರು ಮಾಡುತ್ತಿದ್ದ ಭಾಷಣವನ್ನು ಕುತೂಹಲ, ಶ್ರದ್ಧೆಯಿಂದ ಕೇಳಿಸಿಕೊಂಡಿದ್ದೇನೆ. ಎಲ್ಲಿ ಪ್ರಗತಿಪರ ಆಶಯಗಳ ಕಾರ್ಯಕ್ರಮಗಳಿರುತ್ತಿದ್ದವೋ, ಎಲ್ಲಿ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಗಳಿರುತ್ತಿದ್ದವೋ ಅಲ್ಲಿ ದೊರೆಸ್ವಾಮಿಯವರು ಇರುತ್ತಿದ್ದರು. ನಾವು ಸ್ನೇಹಿತರು ಅವರನ್ನು ಹೀಗೆ ಎಲ್ಲಾ ಕಡೆ ಕಂಡಾಗ ’ಪಾಪ ಈ ವಯಸ್ಸಿನಲ್ಲಿ ಇವರನ್ನು ಯಾಕೆ ಎಳೆದಾಡುತ್ತಾರೆ’ ಅಂದುಕೊಳ್ಳುತ್ತಿದ್ದೆವು. ’ಚಲೋ ಉಡುಪಿ’ಯ ಸಮಯದಲ್ಲಿ ಅವರ ಮನೆಗೆ ಹೋಗುವ ಅವಕಾಶ ಸಿಕ್ಕಿತು. ಅವರು ನಮ್ಮನ್ನು ಆದರದಿಂದ ಮಾತನಾಡಿಸಿದರು. ಚಲೋ ಉಡುಪಿ ಆಂದೋಲನದ ಜೊತೆಯಾದರು.

ನಾನು ಗ್ರಹಿಸಿದ ಹಾಗೆ ದೊರೆಸ್ವಾಮಿಯವರು ’ಗಾಂಧಿವಾದಿಗಳ’ ಕರ್ಮಠತನವನ್ನು ಕೊಂಚಮಟ್ಟಿಗೆ ಮೀರಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರನ್ನೆಲ್ಲಾ ಗಾಂಧಿವಾದಿ ಎಂದು ಗುರುತಿಸುವುದರಿಂದ ಅವರನ್ನು ಎಲ್ಲರೂ ಗಾಂಧಿವಾದಿ ಎಂದೇ ನೋಡುತ್ತಿದ್ದರು. ಆದರೆ, ನಾಗಲಾಪಲ್ಲಿಯ ರಕ್ತದ ಕಲೆಗಳ ಮೇಲೆ ಕುಳಿತು ಮೌನ ಪ್ರತಿಭಟನೆ ಮಾಡಿ ’ಕೊಂದವರನ್ನೂ ನಾವು ಅಹಿಂಸಾತ್ಮಕವಾಗಿ ಎದುರುಗೊಳ್ಳಬೇಕು’ ಎಂದಿದ್ದ ಗಾಂಧಿವಾದಿ ಸತ್ಯವ್ರತ ಅಂಥವರನ್ನು ಕಂಡಿದ್ದ ನನಗೆ, ದೌರ್ಜನ್ಯದ ವಿಷಯ ಕಿವಿಗೆ ಬಿದ್ದರೆ ಮನುಷ್ಯ ಸಹಜವಾಗಿ ಸಿಟ್ಟಿಗೇಳುತ್ತಿದ್ದ ದೊರೆಸ್ವಾಮಿಯವರು ಕೊಂಚ ಭಿನ್ನವಾಗಿ ಕಂಡರು. ನೂರ್ ಶ್ರೀಧರ್, ಸಿರಿಮನೆ ನಾಗರಾಜ್ ಅವರು ನಕ್ಸಲ್ ಚಳವಳಿಯಿಂದ ಹೊರಗೆ ಬಂದ ನಂತರದ ಕಾಲದಲ್ಲಿ ದೊರೆಸ್ವಾಮಿ ಮತ್ತು ಪ್ರಗತಿಪರರ ಸಖ್ಯ ಹೆಚ್ಚಾಯಿತು. ಅದಕ್ಕೆ ಮೊದಲು ’ಎಲ್ಲಾಕಡೆ’ ಇರುತ್ತಿದ್ದರು. ಮತ್ತು ಅಲ್ಲಿಯವರೆಗೆ ಅವರು ಕರ್ನಾಟಕದ ದಲಿತ ಚಳವಳಿಯೊಂದಿಗೆ ಕಾಯ್ದುಕೊಂಡಿದ್ದ ಅಂತರಕ್ಕೆ ನಾವು ಈಗ ಕಾರಣಗಳನ್ನು ಹುಡುಕುವುದು ಅಷ್ಟು ಒಳ್ಳೆಯದಲ್ಲ. ದಿಡ್ಡಳ್ಳಿ ಆದಿವಾಸಿಗಳ ಹೋರಾಟದಲ್ಲಿ ಹಾಗೂ ನಾಡಿನ ಭೂಮಿ ಮತ್ತು ವಸತಿ ವಂಚಿತರ ಹೋರಾಟದಲ್ಲಿ ಅವರು ಅಷ್ಟು ದೃಢವಾಗಿ ನಿಂತಿದ್ದು ನಮ್ಮಂಥವರಿಗೆ ಅವರ ಮೇಲಿನ ಗೌರವ ಹೆಚ್ಚುವಂತೆ ಮಾಡಿತು. ಇದೆಲ್ಲದರ ನಡುವೆ ನನಗೆ ದೊರೆಸ್ವಾಮಿ ಎಂದತಕ್ಷಣ ಎರಡು ಘಟನೆಗಳು ಥಟ್ಟನೆ ನೆನಪಿಗೆ ಬರುತ್ತವೆ.

ಮೊದಲನೆಯದ್ದನ್ನು ನಂತರ ಹೇಳುತ್ತೇನೆ. ನಂತರದ್ದು ನಡೆದದ್ದು 2017ರಲ್ಲಿ. ದೊಡ್ಡಬಳ್ಳಾಪುರದ ಗಾಂಧಿವಾದಿಗಳಾದ ಮೇಷ್ಟ್ರು ಎಂ.ಜಿ ಚಂದ್ರಶೇಖರಯ್ಯನವರ ಸೇವಾ ನಿವೃತ್ತಿಯ ಕಾರಣಕ್ಕೆ ಅವರ ಶಿಷ್ಯಂದಿರೆಲ್ಲಾ ಸೇರಿ ಅಭಿನಂದನೆ ಸಮಾರಂಭ ಇಟ್ಟುಕೊಂಡಿದ್ದೆವು. ದೊರೆಸ್ವಾಮಿಯವರನ್ನು ಮುಖ್ಯ ಅತಿಥಿಗಳಾಗಿ ಕರೆಯಲಾಗಿತ್ತು. ಅವರು ದೊಡ್ಡಬಳ್ಳಾಪುರದ ಪ್ರವಾಸಿಮಂದಿರದಲ್ಲಿ ನಮ್ಮೊಂದಿಗೇ ಊಟ ಮಾಡಿದರು. ಹೊರಡುವಾಗ ಅವರನ್ನು ಕರೆದುಕೊಂಡು ಬಂದಿದ್ದ ಟ್ಯಾಕ್ಸಿ ಡ್ರೈವರ್‌ಗೆ ಸಮಾರಂಭದ ಮುಂದಾಳತ್ವ ವಹಿಸಿದ್ದ ಪತ್ರಕರ್ತ ಮಂಜುನಾಥ ಅದ್ದೆಯವರು ಹಣ ಕೊಡಲು ಹೋದರು. ಸುಮಾರು ಐವತ್ತೈದು ವಯಸ್ಸಿನ ಆ ಡ್ರೈವರ್ ಹಣ ತೆಗೆದುಕೊಳ್ಳಲು ನಿರಾಕರಿಸಿದರು. ನಮಗೆ ಆಶ್ಚರ್ಯವಾಯಿತು. ಬೆಂಗಳೂರಿಂದ ನಲವತ್ತು ಕಿಲೋಮೀಟರ್ ಬಂದು ಕಾರಿನ ಬಾಡಿಗೆ ತೆಗೆದುಕೊಳ್ಳದಿದ್ದರೆ ಹೇಗೆಂದು ಕೇಳಿದೆವು. ಅದಕ್ಕವರು: ’ಬೆಂಗಳೂರು ಏರ್‌ಪೋರ್ಟಿಗೆ ಖಾಸಗಿ ಟ್ಯಾಕ್ಸಿಯವರಿಗೆ ಮಾತ್ರ ಅವಕಾಶ ಕೊಟ್ಟು ಕೆಎಸ್‌ಟಿಡಿಸಿ ಕಾರುಗಳಿಗೆ ನಿರ್ಬಂಧ ಹೇರಲಾಗಿತ್ತು. ಆಗ ದೊರೆಸ್ವಾಮಿಯವರು ದೆಹಲಿಗೆ ಹೋಗಿ ಹೋರಾಟ ಮಾಡಿ ನಮಗೂ ಏರ್‌ಪೋರ್ಟಿನಲ್ಲಿ ಬಾಡಿಗೆ ಓಡಿಸಲು ಅವಕಾಶ ಕೊಡಿಸಿದರು. ಅವರಿಂದ ಇವತ್ತು ಸುಮಾರು ಮೂರ್‍ನಾಲ್ಕು ಸಾವಿರ ಚಾಲಕರ ಕುಟುಂಬಗಳು ಊಟ ಮಾಡ್ತಿದಿವಿ. ಅವರು ನನ್ನ ಕಾರಿನಲ್ಲಿ ಬಂದಿರೋದೇ ನನ್ನ ಪುಣ್ಯ. ಅವರ ಹತ್ರ ಹಣ ಹೇಗೆ ತಗೊಳ್ಳಲಿ ಸ್ವಾಮಿ’ ಅಂದರು. ಅಲ್ಲಿದ್ದವರ ಕಣ್ಣುಗಳು ಒದ್ದೆಯಾಗಿದ್ದವು. ಎಷ್ಟು ಪ್ರಯಾಸಪಟ್ಟರೂ ಅವರು ಹಣ ತೆಗೆದುಕೊಳ್ಳಲಿಲ್ಲ. ಮತ್ತು ಇದನ್ನೆಲ್ಲಾ ಅವರು ದೊರೆಸ್ವಾಮಿಯವರ ಮುಂದೆ ಹೇಳಲಿಲ್ಲ.

ಮೊದಲನೆಯ ಘಟನೆ ನಡೆದದ್ದು 2016ರಲ್ಲಿ. ದೊರೆಸ್ವಾಮಿಯವರನ್ನು ಯಾವುದೋ ಕಾರ್ಯಕ್ರಮದ ನಿಮಿತ್ತ ಭೇಟಿ ಮಾಡಲು ಹೋಗಿದ್ದೆವು. ಮನೆಯ ಒಳಗೆ ಹೋಗುವ ಮೊದಲು ಚಪ್ಪಲಿಗಳನ್ನು ಬಿಡುವ ಜಾಗದಲ್ಲಿ ಒಂದು ಕುರ್ಚಿಯ ಮೇಲೆ ಅಂಬೇಡ್ಕರ್ ಫೋಟೋ ಇರುವ ದೊಡ್ಡ ಮೊಮೆಂಟೋ, ಅವರ ಬರಹ ಭಾಷಣಗಳ ಯಾವುದೋ ಒಂದು ಸಂಪುಟ ಮತ್ತು ಗಂಧದ ಹಾರಗಳಿದ್ದವು. ದೊರೆಸ್ವಾಮಿಯವರು ಯಾವುದೋ ದಲಿತ ಸಂಘಟನೆಯ ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದರು. ಮತ್ತವರು ಮನೆಗೆ ಹಿಂದಿರುಗಿ ತುಂಬಾ ಸಮಯವೇ ಆಗಿತ್ತು. ಅವರು ಮನೆಗೆ ಬಂದಾಗ ಅವುಗಳನ್ನೆಲ್ಲಾ ಒಳಗೆ ತೆಗೆದುಕೊಂಡು ಹೋಗುವುದನ್ನು ಮರೆತಿರಬಹುದು. ಆಮೇಲೆ ಒಳಗೆ ಎತ್ತಿಕೊಂಡಿರಬಹುದು. ಮತ್ತು ಇದು ಗಮನಾರ್ಹ ವಿಷಯವೇ ಅಲ್ಲದಿರಬಹುದು. ಆದರೆ, ಈ ಘಟನೆ ನನ್ನೊಳಗೆ ಉಂಟುಮಾಡಿದ ಭಾವನೆಯನ್ನು ಹೇಗೆ ಹೇಳಲಿ.. ಇದಾದ ಮೇಲೆ ನಾನವರ ಮನೆಗೆ ಹೋಗುವ ಸಂದರ್ಭ ಒದಗಲಿಲ್ಲ.

ಕರ್ನಾಟಕದ ಜನಹೋರಾಟಗಳಿಗೆ ಇನ್ನೂ ದೊರೆಸ್ವಾಮಿಯವರ ಅಗತ್ಯವಿತ್ತು.

ಹುಲಿಕುಂಟೆ ಮೂರ್ತಿ

ಹುಲಿಕುಂಟೆ ಮೂರ್ತಿ
ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯ ಮೂರ್ತಿ ಕನ್ನಡ ಅಧ್ಯಾಪಕರು. ಬೆಂಗಳೂರಿನ ವಿ.ವಿಯಲ್ಲಿ ಕನ್ನಡ ಎಂಎ ಮಾಡುವ ಮುಂಚಿನಿಂದಲೂ ಸಾಮಾಜಿಕ ಚಳವಳಿಯಲ್ಲಿ ಕ್ರಿಯಾಶ್ರೀಲರು, ನೀಲಗ್ಯಾನನ ಕವನ ಸಂಕಲನಕ್ಕೂ ಮುಂಚೆಯೇ ಕವಿಯಾಗಿ ಗುರುತು ಪಡೆದುಕೊಂಡಿದ್ದಾರು. ಕೌದಿ ಚಿತ್ರದ ಗೀತರಚನೆಗಾಗಿ ರಾಜ್ಯಪ್ರಶಸ್ತಿ ಪಡೆದಿದ್ದಾರೆ.


ಇದನ್ನೂ ಓದಿ: ಎಚ್ ಎಸ್ ದೊರೆಸ್ವಾಮಿ ಶ್ರದ್ಧಾಂಜಲಿ; ಎತ್ತರ ಮರ, ಬಾಗಿದ ಕೊಂಬೆ: ಪ್ರೊ. ರಹಮತ್ ತರೀಕೆರೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...