ನಾನುಗೌರಿ ಡೆಸ್ಕ್
ಗೋಡ್ಸೆ ಗೋಲ್ವಾಲ್ಕರ್ ಹೆಸರಿನಲ್ಲಿ ಚುನಾವಣೆ ಎದುರಿಸಿ: ಬೃಂದಾ ಕಾರಟ್
ಜಿಎಸ್‍ಟಿ, ನೋಟು ರದ್ದತಿ, ಮಹಿಳಾ ಸುರಕ್ಷೆಗಳ ಸಾಧನೆಯನ್ನು ಮುಂದಿಟ್ಟು ಚುನಾವಣೆ ಎದುರಿಸಿ: ಪ್ರಿಯಾಂಕಾ
ಮಹಿಳೆಯರ 56 ‘ರಾಜಕೀಯೇತರ’ ಪ್ರಶ್ನೆಗಳಿಗೆ ಉತ್ತರ ಕೊಡಿ: ವಿಮೆನ್ಸ್ ಮಾರ್ಚ್
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 5 ವರ್ಷಗಳ ಸಾಧನೆಯನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿಲ್ಲ ಎಂಬ ಟೀಕೆಗೆ ಇಂಬು ಕೊಡುವಂತೆ ಬೇರೆ ಬೇರೆ ವಲಯಗಳಿಗೆ ಸೇರಿದ ಹಲವರು ಒಂದೇ ದಿನ ಸವಾಲು ಎಸೆದಿದ್ದಾರೆ. ನಿಮ್ಮ ತಂದೆ ರಾಜೀವ್‍ಗಾಂಧಿ ಹೆಸರನ್ನೇ ಇಟ್ಟುಕೊಂಡು ಮುಂದಿನ ಎರಡು ಹಂತದ ಚುನಾವಣೆ ಎದುರಿಸಿ ಎಂದು ಮೋದಿ ಕಾಂಗ್ರೆಸ್‍ಗೆ ಸವಾಲು ಹಾಕಿದ ನಂತರದ ದಿನ ಮೋದಿಯವರು ಈ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬಂದಿರುವುದು ವಿಪರ್ಯಾಸ. ಈ ರೀತಿ ಸವಾಲು ಒಡ್ಡಿದವರೆಲ್ಲರೂ ಮಹಿಳೆಯರೇ ಆಗಿರುವುದೊಂದು ವಿಶೇಷ.
My open challenge to Congress.
Fight elections in the name of the former PM associated with Bofors in:
Delhi and Punjab, where innocent Sikhs were butchered in his reign.
Bhopal, where he helped Warren Anderson flee after the infamous Gas Tragedy.
Challenge accepted? pic.twitter.com/CstT0VyITd
— Chowkidar Narendra Modi (@narendramodi) May 6, 2019
ಸಿಪಿಎಂ ನಾಯಕಿ ಬೃಂದಾ ಕಾರಟ್ ಅವರು ‘ನಿಮ್ಮ ರಾಜಕೀಯ ತಂದೆಯರಾದ ಗೋಡ್ಸೆ ಮತ್ತು ಗೋಳ್ವಾಲ್ಕರ್ ಅವರ ಹೆಸರುಗಳನ್ನೇ ಮುಂದಿಟ್ಟು ಚುನಾವಣೆ ಎದುರಿಸಲು ನೀವು ಸಿದ್ಧರಿದ್ದೀರಾ?’ ಎಂದು ಸವಾಲೆಸೆದಿದ್ದಾರೆ. ಇದನ್ನು ಪೋಸ್ಟರ್ ಮಾಡಿ ಸಿಪಿಎಂ ಜಾಲತಾಣಗಳಲ್ಲಿ ಹಂಚಲಾಗುತ್ತಿದೆ.
ಗೋಡ್ಸೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಕೊಲೆಗೈದ ವ್ಯಕ್ತಿಯಾಗಿದ್ದು, ಸಂಘಪರಿವಾರವು ಆತನನ್ನು ಆರಾಧಿಸುತ್ತಿದೆ. ಆರೆಸ್ಸೆಸ್‍ಗೂ ಆತನಿಗೂ ಸಂಬಂಧವಿಲ್ಲವೆಂದು ಹೇಳುವ ಪ್ರಯತ್ನಗಳೂ ವಿಫಲಗೊಂಡಿದ್ದು, ಗಾಂಧಿ ಹತ್ಯೆಯತಾದಾಗ ಆರೆಸ್ಸೆಸ್ ಎಲ್ಲೆಡೆ ಸಿಹಿ ಹಂಚಿ ಸಂಭ್ರಮಿಸಿದ್ದು ಆಗಲೇ ಸುದ್ದಿಯಾಗಿತ್ತು. ಅದೇ ರೀತಿಯಲ್ಲಿ ಆರೆಸ್ಸೆಸ್ ಚಿಂತನೆಗಳನ್ನು ರೂಪಿಸಿದ ಅದರ ಎರಡನೇ ಸರಸಂಘಚಾಲಕ ಗೋಲ್ವಾಲ್ಕರ್ ಆರೆಸ್ಸೆಸ್‍ನೊಳಗೆ ಸದಾ ಆರಾಧಿಸಲ್ಪಡುವ ವ್ಯಕ್ತಿ. ಆದರೆ ಚಿಂತನಾಗಂಗಾ ಮತ್ತಿತರ ಪುಸ್ತಕಗಳಲ್ಲಿ ನಿಜವಾದ ಭಾರತೀಯತೆಯನ್ನು ಹೀಗಳೆಯುವ ಮತ್ತು ದಲಿತರು ಶೂದ್ರರು ಮತ್ತು ಮಹಿಳೆಯರನ್ನು ಹೀಗಳೆಯುವ ಚಿಂತನೆಗಳು ಇವೆ. ಹೀಗಾಗಿ ಬಹಿರಂಗವಾಗಿ ಅವರನ್ನು ಪದೇ ಪದೇ ಚರ್ಚೆಗೆ ತರಲಾಗುವುದಿಲ್ಲ. ಹಾಗಾಗಿಯೇ ಬೃಂದಾ ಅವರು ಈ ಸವಾಲು ಎಸೆದಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ವರ್ಸಸ್ ಮೋದಿ
ಇನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ‘ಜಿಎಸ್‍ಟಿ, ನೋಟು ರದ್ದತಿ, ಮಹಿಳಾ ಸುರಕ್ಷೆಗಳ ಸಾಧನೆಯನ್ನು ಮುಂದಿಟ್ಟು ಚುನಾವಣೆ ಎದುರಿಸಿ. ನೀವು ನೀಡಿದ ಫೇಕ್ ಭರವಸೆಗಳನ್ನೇ ಮುಂದಿಟ್ಟು ಚುನಾವಣೆ ಎದುರಿಸಬಹುದಲ್ಲವೇ’ ಎಂದು ಕೇಳಿದ್ದಾರೆ.

ಅದೇ ರೀತಿ ‘ವಿಮೆನ್ಸ್ ಮಾರ್ಚ್’ ವೇದಿಕೆಯ ವತಿಯಿಂದ ಪ್ರೆಸ್‍ಕ್ಲಬ್ ಆಫ್ ಇಂಡಿಯಾದಿಂದ ಪತ್ರಿಕಾಗೋಷ್ಠಿ ನಡೆಸಿದ ಪ್ರಸಿದ್ಧ ಹೋರಾಟಗಾರ್ತಿಯರು ಮತ್ತು ಚಿಂತಕಿಯರಾದ ಅಂಜಲಿ ಭಾರದ್ವಾಜ್, ಶಬನಂ ಹಷ್ಮಿ, ಪೂರ್ಣಿಮಾ ಗುಪ್ತಾ, ದೀಪ್ತಾ ಭೋಗ್, ಅಮೃತಾ ಜೋಹ್ರಿ ಮತ್ತಿತರರು ಮೋದಿಯವರಿಗೆ 56 ಪ್ರಶ್ನೆಗಳನ್ನು ಎಸೆದಿದ್ದಾರೆ. ಸ್ವಾರಸ್ಯಕರ ಸಂಗತಿಯೆಂದರೆ, ಇವರುಗಳು ಈ ಪತ್ರಿಕಾಗೋಷ್ಟಿಯನ್ನು ನಾನ್-ಪೊಲಿಟಿಕಲ್ (ರಾಜಕೀಯೇತರ) ಎಂದು ಕರೆದಿದ್ದರು. ಆ ಮೂಲಕ ಕೆನಡಾ ದೇಶದ ಪ್ರಜೆ, ನಟ ಅಕ್ಷಯ್ ಕುಮಾರ್ ನಡೆಸಿದ ಮೋದಿಯವರ ಸಂದರ್ಶನವನ್ನು ಲೇವಡಿ ಮಾಡಿದಂತಿತ್ತು. ಮಹಿಳೆಯರು ಮತ್ತು ಜನಸಾಮಾನ್ಯರೆಲ್ಲರ ಬದುಕಿಗೆ ಸಂಬಂಧಿಸಿದ ಈ ಪ್ರಶ್ನೆಗಳು ಒಂದಕ್ಕಿಂತ ಒಂದು ಗಮನ ಸೆಳೆಯುವಂತಿದೆ.
ಪ್ರಶ್ನೆಗಳ ಸಂಪೂರ್ಣ ವಿವರಗಳಿಗೆ: ಇಲ್ಲಿ ಕ್ಲಿಕ್ ಮಾಡಿ
ಒಟ್ಟಿನಲ್ಲಿ ಸೈನ್ಯ, ಪಾಕಿಸ್ತಾನ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆಯೇ ಪದೇ ಪದೇ ಮಾತಾಡುತ್ತಿರುವ ಮೋದಿಯವರು ಮತ್ತೆ ಮತ್ತೆ ದೇಶದ ಜನರ ಸಮಸ್ಯೆಗಳು ಮತ್ತು ಅವರ 5 ವರ್ಷಗಳ ಸಾಧನೆಯ ಕುರಿತೇ ಪ್ರಶ್ನೆಗಳನ್ನು ಎದುರಿಸಬೇಕಾಗಿ ಬರುತ್ತಿದೆ.
ಇದನ್ನೂ ಓದಿ: ರಾಜೀವ್ ಗಾಂಧಿ ಮತ್ತು ಸರ್ಜಿಕಲ್ ಸ್ಟ್ರೈಕ್


