Homeಕರ್ನಾಟಕಅಪ್ಪ ಎಂಬ ಆಕಾಶ ಮತ್ತು ಭೂಮಿ: ಸುಧೀಂದ್ರ ಹಾಲ್ದೊಡ್ಡೇರಿ ಬಗ್ಗೆ ಮಗಳ ಮನತುಂಬಿದ ಮಾತುಗಳು...

ಅಪ್ಪ ಎಂಬ ಆಕಾಶ ಮತ್ತು ಭೂಮಿ: ಸುಧೀಂದ್ರ ಹಾಲ್ದೊಡ್ಡೇರಿ ಬಗ್ಗೆ ಮಗಳ ಮನತುಂಬಿದ ಮಾತುಗಳು…

- Advertisement -
- Advertisement -

ಖ್ಯಾತ ವಿಜ್ಞಾನ ಬರಹಗಾರ, ಡಿಆರ್‌ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಅವರು ಇಂದು ನಿಧನರಾಗಿದ್ದಾರೆ. ಸುಧೀಂದ್ರ ಹಾಲ್ದೊಡ್ಡೇರಿ ಅವರ ಮಗಳು, ಲೇಖಕಿ ಮೇಘನಾ ಸುಧೀಂದ್ರ ಅವರು ಅಪ್ಪಂದಿರ ದಿನದಂದು ತಮ್ಮ ಅಪ್ಪನ ಬಗ್ಗೆ ಬರೆದ ಬರಹವನ್ನು ಅವರ ನೆನಪಿನಲ್ಲಿ ಇಂದು ಪ್ರಕಟಿಸುತ್ತಿದ್ದೆವೆ.

’ಅಪ್ಪ ಎಂದಾಗಲ್ಲೆಲ್ಲ ನನಗೆ ಎರಡು ಇಂಸಿಡೆಂಟ್ ನೆನಪಾಗುತ್ತದೆ. ನನ್ನ ಪೂರ್ತಿ ಹೆಸರಿನ ಅರ್ಧ ಭಾಗ ಅಪ್ಪನೇ ತುಂಬಿಕೊಂಡಿದ್ದಾರೆ. ಅರ್ಧ ಜನ ನನ್ನನ್ನು “ಸುಧೀಂದ್ರನ ಮಗಳು” ಎಂದು ಗುರುತಿಸಿ ನನ್ನ ಹೆಸರನ್ನೇ ಮರೆಯುವಷ್ಟು ಅಪ್ಪನ್ನನ್ನು ಪ್ರೀತಿಸುವವರಿದ್ದಾರೆ’.
ಘಟನೆ 1
ಒಮ್ಮೆ ಅಪ್ಪ ಕೆಲಸದ ಮೇಲೆ ರಷ್ಯಾದ ಮಾಸ್ಕೋಗೆ ಹೋಗಿದ್ದರು. ಎಂದಿನಂತೆ ಅಪ್ಪನಿಗೆ ದಿನಾ ಫೋನ್ ಮಾಡಿ, “ಯಾವಾಗ ಬರ್ತ್ಯಾ ಅಪ್ಪ, ಯಾವಾಗ ಬರ್ತ್ಯಾ ಅಪ್ಪ” ಎಂದು ಕೇಳಿ ಕೇಳಿ ಸುಸ್ತು ಮಾಡಿದ್ದೆ. ಅಪ್ಪ “ಒಂದು ವಾರ ಬಿಟ್ಟು, 2 ವಾರ ಬಿಟ್ಟು” ಎಂದು ಅನ್ನುತ್ತಿದ್ದರು. ಇನ್ನು ಮಾಸ್ಕೋದಿಂದ ಹೊರಡುವ ದಿನ ಬಂತು, “ಏನು ಬೇಕು ಮಗಳೇ?” ಎಂದು ಕೇಳಿದ್ದರು, “ಸೂಟ್ ಕೇಸ್ ತುಂಬ ಚಾಕ್ಲೇಟ್ ಬೇಕಪ್ಪ” ಎಂದು ಅಂದಿದ್ದೆ. ಅದನ್ನೆಲ್ಲಾ ಹೇಳಿ ಮರೆತೂ ಹೋಗಿದ್ದೆ.

ಸರಿ ಅಪ್ಪ ಮನೆಗೆ ಬಂದರು, ನಾನು ಸ್ಕೂಲಿಗೆ ಹೋಗಿದ್ದೆ, ಸಂಜೆ ಬಂದರೆ ಒಂದು ರೂಮಿನಲ್ಲಿ ದೊಡ್ಡ ಸೂಟ್ ಕೇಸ್ ಇಟ್ಟಿದ್ದರು. ತೆಗೆದರೆ ನಿಜವಾಗಿಯೂ ಅದರ ಪೂರ್ತಿ ಚಾಕ್ಲೇಟ್ ಇತ್ತು. ಒಂದು 35 ಕೆಜಿಯ ಸೂಟ್ಕೇಸಿನ ತುಂಬಾ ಚಾಕ್ಲೇಟ್ ತಂದಿದ್ದರು ಅಪ್ಪ. ಅವರನ್ನ ಕಸ್ಟಮ್ಸಿನಲ್ಲಿ ಹಿಡಿದ್ದಿದ್ದರೂ ಸಹ. ವೈಟ್ ಪಾಸ್‌ಪೋರ್ಟ್ ಮತ್ತು ಮಗಳಿಗೆ ಚಾಕ್ಲೇಟ್ ತೆಗೆದುಕೊಂಡು ಹೋಗುತ್ತಿದ್ದೇನೆ ಎಂಬ ಸಬೂಬಿನೊಂದಿಗೆ ಬಿಟ್ಟಿದ್ದರಂತೆ. ಒಂದು ಸೂಟ್ಕೇಸಿನ ಬಟ್ಟೆಯನ್ನೆಲ್ಲಾ ಬಿಟ್ಟು, ಮಗಳಿಗೆ ಚಾಕ್ಲೇಟ್ ತಂದಿದ್ದರು ಅಪ್ಪ. ನಾನು ಸುಮ್ಮನೆ ಹೇಳುವ ಮಾತನ್ನ ನಿಜ ಮಾಡೋದು ಅಪ್ಪ ಮಾತ್ರ.

ಘಟನೆ 2
ನಾನು ಸೆಕೆಂಡ್ ಪಿಯೂಸಿಯಲ್ಲಿ ಓದೋದು ಬಿಟ್ಟು ಆರಾಮಾಗಿ ಸಂಗೀತ, ನಾಟಕ ಅಂದುಕೊಂಡಿದ್ದೆ. ಹೋಗಲಿ ಅದರಲ್ಲೂ ಏನು ಅಂತಹ ಸಾಧನೆ ಮಾಡಿರಲ್ಲಿಲ್ಲ. ಸುಮ್ಮನೆ ಕ್ಲಾಸ್ ಚಕ್ಕರ್ ಹಾಕೋಕೆ ಒಂದು ನೆಪ ಅಷ್ಟೆ. ಎಸ್ಸೆಸೆಲ್ಸಿಯಲ್ಲಿ ವಿಪರೀತ ಮಾರ್ಕ್ಸ್ ತೆಗೆದುಕೊಂಡ ಓವರ್ ಕಾನ್ಫೆಡೆನ್ಸ್ ನನ್ನಲ್ಲಿತ್ತು. “ಬರತ್ತೆ ಬಿಡು ಮಾರ್ಕ್ಸ್” ಅನ್ನೋ ಕೊಬ್ಬು. ಅಪ್ಪ ಒಂದೆರೆಡು ಬಾರಿ ಮೆತ್ತಗೆ ಹೇಳಿದ್ದರು, “ಹತ್ತನೇ ಕ್ಲಾಸಿನ ಹಾಗಲ್ಲ ಇದು, ಸರಿಯಾಗಿ ಓದು, ಇದು ನಿನ್ನ ಜೀವನದ ಟರ್ನಿಂಗ್ ಪಾಯಿಂಟ್” ಎಂದು. ನಾನು ಆರಾಮಾಗಿಯೇ ಇದ್ದೆ. ಎಕ್ಸಾಮು ಬರೆದೆ. ಅತೀ ಸಾಧಾರಣ ಮಾರ್ಕ್ಸು, ಅತೀ ಸಾಧಾರಣ ಸಿಇಟಿ ರ್ಯಾಂಕು ಬಂತು. ಅಪ್ಪನಿಗೆ ಇದ್ದ ಕನೆಕ್ಷನ್ಸು, ದುಡ್ಡು ಇವೆಲ್ಲವೂ ನನ್ನನ್ನ ಕಾಪಾಡುತ್ತದೆ ಎಂಬ ಕೆಟ್ಟ ಕಾನ್ಫಿಡೆನ್ಸು ನನ್ನಲ್ಲಿತ್ತು. ಅಪ್ಪ ರಿಸೆಲ್ಟ್ ನೋಡಿ ಒಂದೇ ಮಾತು ಹೇಳಿದರು, “ನಿನ್ನ ಯೋಗ್ಯತೆಗೆ ಎಲ್ಲಿ ಸೀಟು ಸಿಗತ್ತೋ ಅಲ್ಲಿ ಸೇರ್ಕೊಂಡು ಇಂಜಿನಿಯರಿಂಗ್ ಮುಗಿಸು, ಗುಡ್ ಲಕ್” ಅಂದರು. “ನೆನೆಪಿರಲಿ ನೀನು ಎಷ್ಟೇ ಮಾರ್ಕ್ಸ್ ತೆಗೆದರೂ ನನ್ನ ಮಗಳೇ ಅದೇನು ಬದಲಾಗಲ್ಲ” ಎಂದು ಸಾಂತ್ವನ ಹೇಳಿ ಹೋದರು.

ನಾನು ಊರಾಚೆ ಕಾಲೇಜಿಗೆ ಸೇರಿದೆ. ದಿನಾ ಬೆಳಗ್ಗೆ 6 ಘಂಟೆಗೆ ಹೊರಟರೆ ಸಂಜೆ 6 ಘಂಟೆಗೆ ಬರುತ್ತಿದ್ದೆ. 1 ವರ್ಷ ಆಟಾಡಿದ್ದಕ್ಕೆ 4 ವರ್ಷ ಒದ್ದಾಡಿದೆ. ಅಪ್ಪ ಸುಮ್ಮನೆ ಮುಗುಳ್ನಗುತ್ತಿದ್ದರು. ಇಂಜಿನಿಯರಿಂಗ್ ಮುಗಿಸಿದ ನಂತರ, “ನೀನು ಯಾರ ಶಿಫಾರಸ್ಸಿನಲ್ಲೋ, ಯಾರ ದುಡ್ಡಲ್ಲೋ ಓದಲ್ಲಿಲ್ಲ ನಿನ್ನ ಯೋಗ್ಯತೆಗೆ ತಕ್ಕ ಹಾಗೆ ಓದಿದೆ, ಯಾವತ್ತೂ ಅಷ್ಟೇ ನೀನು ಕಷ್ಟ ಪಟ್ಟು ನೀನು ದಕ್ಕಿಸಿಕೊಂಡಿದ್ದೇ ನಿನ್ನ ಬಳಿ ಶಾಶ್ವತವಾಗಿ ಉಳಿಯೋದು, ಅಪ್ಪ ಅಮ್ಮ ಫ್ರೀಯಾಗಿ ಕೊಟ್ಟಿದ್ದೂ ಉಳಿಯಲ್ಲ” ಎಂಬ ಅತಿ ದೊಡ್ಡ ಜೀವನದ ಪಾಠವನ್ನು ಹೇಳಿಕೊಟ್ಟರು.

ಇದಾದ ನಂತರ ನಾನು ಯಾವತ್ತೂ ಯಾವುದನ್ನೂ ಲೈಟಾಗಿ ತೆಗೆದುಕೊಳ್ಳಲ್ಲಿಲ್ಲ. ತಲೆ ಬಗ್ಗಿಸಿ ಕೆಲಸ ಮಾಡಿಕೊಂಡು ಹೋಗಿದ್ದೇನೆ. ಅದು ವಿದೇಶದಲ್ಲಿ ಮಾಸ್ಟರ್ಸ್ ಇರಬಹುದು, ಅಥವಾ ಕೆಲಸ ಇರಬಹುದು ಅಥವಾ ಪುಸ್ತಕ-ಲೇಖನ ಬರೆಯೋದಿರಬಹುದು.

ಪ್ರೀತಿ ಮಾಡುತ್ತಲೇ ಅಸಂಖ್ಯಾತ ಜೀವನ ಪಾಠ ಕಲಿಸುತ್ತಿರುವ ಅಪ್ಪನಿಗೆ ಅಪ್ಪನ ದಿನದ ಶುಭಾಶಯಗಳು. ನೀನೆ ನನಗೆ ಸ್ಪೂರ್ತಿ ಅಪ್ಪ. ನನ್ನ ಮೂರನೆಯ ಪುಸ್ತಕವನ್ನ( #AI ಕಥೆಗಳು) ನಿನಗೇ ಅರ್ಪಣೆ ಮಾಡಿದ್ದೇನೆ.

  • ಮೇಘನಾ ಸುಧೀಂದ್ರ

ಇದನ್ನೂ ಓದಿ: ಖ್ಯಾತ ವಿಜ್ಞಾನ ಬರಹಗಾರ, DRDO ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ (61) ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....