ಬೆಂಗಳೂರಿನ ವಿಮಾನ ನಿಲ್ದಾಣದ ಬಳಿ ಉತ್ತರ ಪ್ರದೇಶ ಸರ್ಕಾರದ ಕುರಿತ ಜಾಹೀರಾತು ಪೋಸ್ಟರ್‌ನ ಪೋಟೋವನ್ನು ಟ್ವೀಟ್ ಮಾಡಿದ್ದ ಬೆಂಗಳೂರು ಮೂಲಕ ವಕೀಲರೊಬ್ಬರಿಗೆ ಯುಪಿ ಸೈಬರ್ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಸೋಮವಾರ ಬೆಳಿಗ್ಗೆ ಶಿಶಿರಾ ರುದ್ರಪ್ಪ ಅವರು ಹಂಚಿಕೊಂಡಿದ್ದ ಹೋರ್ಡಿಂಗ್‌ನಲ್ಲಿ ಹಿಂದಿ ಭಾಷೆಯಲ್ಲಿ “ಉತ್ತರಪ್ರದೇಶ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಮತ್ತು 4 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗಗಳು ನೀಡಲಾಗಿದೆ” ಎಂದು ಬರೆಯಲಾಗಿದೆ. ಜೊತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರಗಳು ಇವೆ.
ಈ ಹೋರ್ಡಿಂಗ್ ಹಂಚಿಕೊಂಡಿರುವ ಶಿಶಿರಾ ರುದ್ರಪ್ಪ, “ಕರ್ನಾಟಕದಲ್ಲಿ ಯುಪಿ ಚುನಾವಣಾ ಪ್ರಚಾರ ಪ್ರಾರಂಭವಾಗಿದೆ” ಎಂದು ಶೀರ್ಷಿಕೆ ನೀಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದ ಬಳಿ ಅಂತಹದ್ದೆ ಹೋರ್ಡಿಂಗ್ ಇರುವ ಮತ್ತೊಂದು ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.
ಬೆಂಗಳೂರು ವಿಮಾನ ನಿಲ್ದಾಣ ಆವರಣದ ಹೊರಗಡೆ ಹೋರ್ಡಿಂಗ್ ಹಾಕಲಾಗಿತ್ತು ಎಂದು ವಕೀಲರು ಹೇಳಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.
UP election campaign has begun in Karnataka pic.twitter.com/U1NVT9pTci
— Shishira (@shishirar) July 12, 2021
ಇದನ್ನೂ ಓದಿ: ಉತ್ತರ ಪ್ರದೇಶ: ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ, ಒಬ್ಬನ ಬಂಧನ
ಸೋಮವಾರ ಸಂಜೆ, ಉತ್ತರ ಪ್ರದೇಶ ಸರ್ಕಾರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕ ಶಿಶಿರ್ ಸಿಂಗ್, ಈ ಚಿತ್ರವನ್ನು “ನಕಲಿ ಸುದ್ದಿ” ಎಂದು ಟ್ವೀಟ್ ಮಾಡಿದ್ದಾರೆ. ಕರ್ನಾಟಕದಲ್ಲಿ ಎಲ್ಲಿಯೂ ಅಂತಹ ಜಾಹೀರಾತು ಇಲ್ಲ ಎಂದು ಹೇಳಿ, ಯುಪಿ ಪೊಲೀಸ್ ಮಹಾನಿರ್ದೇಶಕರು ಮತ್ತು ಸೈಬರ್ ಸೆಲ್‌ನ ಟ್ವಿಟರ್ ಹ್ಯಾಂಡಲ್‌ಗಳನ್ನು ಟ್ಯಾಗ್ ಮಾಡಿದ್ದಾರೆ.
“ಜವಾಬ್ದಾರರಾಗಿರಿ. ದಯವಿಟ್ಟು ನಕಲಿ ಸುದ್ದಿಗಳನ್ನು ಹರಡಬೇಡಿ. ಕರ್ನಾಟಕ ರಾಜ್ಯದಲ್ಲಿ ಎಲ್ಲಿಯೂ ಅಂತಹ ಜಾಹೀರಾತು ನೀಡಿಲ್ಲ”ಎಂದು ಶಿಶಿರ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಉತ್ತರ ಪ್ರದೇಶ ಸೈಬರ್ ಪೊಲೀಸರು, “ದಯವಿಟ್ಟು ಗಮನಿಸಿ, ಈ ಟ್ವಿಟರ್ ಹ್ಯಾಂಡಲ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
Noted please.- Appropriate legal action will be taken against this twitter handle.
— Cyber Police UP (@cyberpolice_up) July 12, 2021
ಇನ್ನು ಒಂದು ಹೆಜ್ಜೆ ಮುಂದೆ ಹೋದ ಉತ್ತರ ಪ್ರದೇಶ ಸರ್ಕಾರ, ತನ್ನ ಅಧಿಕೃತ ಫ್ಯಾಕ್ಟ್‌ಚೆಕ್ ಟ್ವಿಟರ್ ಖಾತೆಯಲ್ಲಿಯೂ ಈ ಸುದ್ದಿ ಸುಳ್ಳು ಎಂದು ಹೇಳಿತ್ತು.
#FakeAlert: कनार्टक में लगी 'उत्तर प्रदेश देश में नं.1, 04 लाख युवाओं को सरकारी नौकरी' वाली होर्डिंग#InfoUPFactCheck: 'उत्तर प्रदेश में 04 लाख युवाओं को सरकारी नौकरी' वाली होर्डिंग कर्नाटक में लगी होने का पोस्ट शेयर किया गया है। यह पूर्ण रूप से असत्य है। https://t.co/L3b1sIHmb2 pic.twitter.com/stwp99DQGH
— Info Uttar Pradesh Fact Check (@InfoUPFactCheck) July 12, 2021
ಟ್ವೀಟ್ ‘ನಕಲಿ ಸುದ್ದಿ’ ಎಂಬ ಸಿಂಗ್ ಅವರ ಹೇಳಿಕೆಯನ್ನು ವಕೀಲರಾದ ಶಿಶಿರಾ ರುದ್ರಪ್ಪ ಪ್ರಶ್ನಿಸಿ, ಬೆಂಗಳೂರು ವಿಮಾನ ನಿಲ್ದಾಣದ ಬಳಿ ಜಾಹೀರಾತು ಹೋರ್ಡಿಂಗ್‌ನ ವಿಡಿಯೊ ಹಂಚಿಕೊಂಡಿದ್ದಾರೆ. ಹೋರ್ಡಿಂಗ್ ನಿಜಕ್ಕೂ ಕರ್ನಾಟಕದಲ್ಲಿದೆ ಎಂದಿರುವ ಅವರು ಶಿಶಿರ್ ಸಿಂಗ್ ಅವರಿಗೆ ತಮ್ಮ ಟ್ವೀಟ್ ಅಳಿಸಲು ಹೇಳಿದ್ದಾರೆ.
– @ShishirGoUP ji
Here is the video –
1) see the hoarding clearly!
2) see the truck of Bangalore airport parked in this
3) JCDecaux which is the official hoarding partner for Bangalore airportNow atleast please delete your tweet and of your department. @InfoUPFactCheck pic.twitter.com/55GyuCArlB
— Shishira (@shishirar) July 12, 2021
ಮಂಗಳವಾರ ಬೆಳಿಗ್ಗೆ ಮತ್ತೊಂದು ವಿಡಿಯೋ ಮತ್ತೊಂದು ವೀಡಿಯೊ ಹಂಚಿಕೊಂಡಿರುವ ಶಿಶಿರಾ ರುದ್ರಪ್ಪ, ಹೋರ್ಡಿಂಗ್ ಅನ್ನು ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.
Now the hoarding is being removed ! Luckily managed to capture on video by my team! pic.twitter.com/lT5FblMrUw
— Shishira (@shishirar) July 13, 2021
ಇನ್ನು ಬೆಂಗಳೂರಿನಲ್ಲಿ ಹಾಕಲಾಗಿದ್ದ ಯುಪಿ ಸರ್ಕಾರದ ಜಾಹೀರಾತು ಹೋರ್ಡಿಂಗ್‌ನ ಚಿತ್ರವನ್ನು ಹಂಚಿಕೊಂಡಿದ್ದಕ್ಕಾಗಿ ವಕೀಲರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಬೆದರಿಕೆ ಹಾಕಿದ ಸರ್ಕಾರದ ವಿರುದ್ಧ ಹಲವರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಕೊರೊನಾ ನಿರ್ವಹಣೆ ಲೋಪ ಮುಚ್ಚಿಕೊಳ್ಳಲು ಜಾಹೀರಾತುಗಳಿಗೆ ಹಣ ಸುರಿಯುತ್ತಿರುವ ಕರ್ನಾಟಕ ಮತ್ತು ಉತ್ತರ ಪ್ರದೇಶ



ಮನುವಾದಿಗಳು ಸತ್ಯ ಹೇಳುವವರ ಮೇಲೆ ಪೊಲೀಸರ ಮೂಲಕ ಮುಗಿಬೀಳುತ್ತಿದ್ದಾರೆ. ಏಕೆಂದರೆ ಇಂದು ಅವರಿಗೆ ಬೇರೆಲ್ಲಾ ದಾರಿಗಳೂ ಮುಚ್ಚಿಹೋಗಿ, ಅವರು ಹತಾಶರಾಗಿದ್ದಾರೆ.