Homeಮುಖಪುಟ7 ನೇ ವೇತನ ಆಯೋಗ: ಒಕ್ಕೂಟ ಸರ್ಕಾರದ ನೌಕರರಿಗೆ 28% ಡಿಎ ಹೆಚ್ಚಳ

7 ನೇ ವೇತನ ಆಯೋಗ: ಒಕ್ಕೂಟ ಸರ್ಕಾರದ ನೌಕರರಿಗೆ 28% ಡಿಎ ಹೆಚ್ಚಳ

- Advertisement -
- Advertisement -

ಒಕ್ಕೂಟ ಸರ್ಕಾರದ ನೌಕರರು ಮತ್ತು ಪಿಂಚಣಿದಾರರಿಗೆ ನೀಡುವ ಡಿಯರ್ನೆಸ್ ಭತ್ಯೆ (ಡಿಎ) ಮತ್ತು ಡಿಯರ್ನೆಸ್ ರಿಲೀಫ್ (ಡಿಆರ್) ಸವಲತ್ತುಗಳನ್ನು 17% ರಿಂದ 28% ಕ್ಕೆ ಹೆಚ್ಚಿಸಲು ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಕಳೆದ ವರ್ಷ ತಡೆಹಿಡಿಯಲ್ಪಟ್ಟಿದ್ದ ಡಿಎ ಮತ್ತು ಡಿಆರ್ ಹೆಚ್ಚಳಕ್ಕೆ ಒಕ್ಕೂಟ ಸರ್ಕಾರದ ಸಚಿವ ಸಂಪುಟವು ಇಂದು ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ಖಚಿತಪಡಿಸಿವೆ.

ಈ ಘೋಷಣೆಗಾಗಿ ಒಕ್ಕೂಟ ಸರ್ಕಾರದ ಲಕ್ಷಾಂತರ ನೌಕರರು ಮತ್ತು ಪಿಂಚಣಿದಾರರು ತಿಂಗಳಿನಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಡ್ಯಾಂ ಕಟ್ಟುವ ಹಕ್ಕು ಕರ್ನಾಟಕಕ್ಕಿದ್ದರೆ, ಅದನ್ನು ನಿಲ್ಲಿಸುವ ಹಕ್ಕು ನಮಗೂ ಇದೆ: ತಮಿಳುನಾಡು

ಏಳನೇ ಕೇಂದ್ರ ವೇತನ ಆಯೋಗದ (7 ನೇ ಸಿಪಿಸಿ) ಅಡಿಯಲ್ಲಿ ಡಿಎ ಮತ್ತು ಡಿಆರ್‌‌‌ಗಳನ್ನು ಜುಲೈನಲ್ಲಿ ಪುನಃಸ್ಥಾಪಿಸಲಾಗುವುದು ಎಂದು ಹಲವಾರು ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು. ಡಿಎ ಮತ್ತು ಡಿಆರ್ ಹೆಚ್ಚಳ ಪ್ರಯೋಜನಗಳು ಜುಲೈ 1, 2021 ರಿಂದ ಜಾರಿಗೆ ಬರಲಿವೆ. ಈ ಕ್ರಮದಿಂದ ಸರ್ಕಾರಕ್ಕೆ ಸುಮಾರು 34,400 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಳಿದೆ.

ಹಲವಾರು ಅನುಮೋದನೆಗಳು ಅಗತ್ಯವಿರುವುದರಿಂದ ಉದ್ಯೋಗಿಗಳಿಗೆ ಹೆಚ್ಚಳವಾದ ಡಿಎ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಹಿಂದಿನ ವರದಿಯು ಸೂಚಿಸಿದ್ದವು. ಆದರೆ ಇದೀಗ ಅಂತಹ ಯಾವುದೇ ವಿಳಂಬ ಇರುವುದಿಲ್ಲ ಎನ್ನಲಾಗಿದ್ದು, ಒಕ್ಕೂಟ ಸರ್ಕಾರದ ನೌಕರರು ಜುಲೈ 1, 2021 ರಿಂದ ಇರುವ ಬಾಕಿಯನ್ನು ಪಡೆಯುವ ಸಾಧ್ಯತೆಯಿದೆ.

ಈ ಹೆಚ್ಚಳವನ್ನು ಸಚಿವ ಸಂಪುಟವು ಅನುಮೋದಿಸುವ ಮೊದಲು ಕನಿಷ್ಠ ಮೂರು ಡಿಎ ಕಂತುಗಳು ಬಾಕಿಯಾಗಿದ್ದುವು. (ಕಳೆದ ವರ್ಷದಿಂದ ಎರಡು ಮತ್ತು ಈ ವರ್ಷದಿಂದ ಒಂದು – 01.01.2020, 01.07.2020 ಮತ್ತು 01.01.2021). ಬಾಕಿ ಇರುವ ಮೂರು ಕಂತುಗಳ ಭಾಗವಾಗಿ 11% ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: ವಿಪಕ್ಷ ನಾಯಕರು ನಮ್ಮ ಕೆಲಸವನ್ನು ಹೊಗಳುತ್ತಿದ್ದಾರೆ-ಸಿಧು ಹೇಳಿಕೆಗೆ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸ್ನೇಹಿತರ’ ಮೇಲಿನ ದಾಳಿಯು ಮೋದಿಯ ಕುರ್ಚಿ ಅಲುಗಾಡುತ್ತಿರುವುದನ್ನು ತೋರಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

0
ತೆಲಂಗಾಣದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚುನಾವಣೆ ಘೋಷಣೆಯಾದ ಬಳಿಕ ರಾಹುಲ್ ಗಾಂಧಿಯೇಕೆ ಅದಾನಿ–ಅಂಬಾನಿ ಬಗ್ಗೆ ಮಾತನಾಡುತ್ತಿಲ್ಲ. ಏನಾದರೂ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಐಸಿಸಿ...