ದೆಹಲಿಯ ಜಂತರ್ ಮಂತರ್‌ನಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಮತ್ತು ಇತರ ಐವರನ್ನು ಬಂಧಿಸಲಾಗಿದೆ.
ಭಾನುವಾರ ನಡೆದ ಪ್ರತಿಭಟನೆಯ ಸಂಘಟಕರಲ್ಲಿ ಒಬ್ಬರೆಂದು ಹೇಳಲಾಗಿರುವ ಅಶ್ವಿನಿ ಉಪಾಧ್ಯಾಯರನ್ನು ಸೋಮವಾರ ತಡರಾತ್ರಿಯವರೆಗೆ ಇತರ ಆರೋಪಿಗಳೊಂದಿಗೆ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ದೊರೆತಿದೆ.
ದೆಹಲಿಯ ಹೃದಯಭಾಗ ಜಂತರ್ ಮಂತರ್ ಬಳಿ ಭಾನುವಾರ ಪ್ರತಿಭಟನೆ ನಡೆಸುತ್ತಿದ್ದ ಗುಂಪೊಂದು ಮುಸ್ಲಿಂ ಸಮುದಾಯದವರಿಗೆ ಬೆದರಿಕೆಯೊಡ್ಡುವ, ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದರು. ಈ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ಹಿಂದೂ ಯುವತಿ ಮುಸ್ಲಿಂ ಉಗ್ರನನ್ನು ಕೊಂದಳೇ? ಇಲ್ಲ, ವೆಬ್ ಸೀರಿಸ್ ಪಾತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ
“ಹಿಂದೂಸ್ತಾನ್ ಮೇ ರೆಹನಾ ಹೋಗಾ, ಜೈ ಶ್ರೀ ರಾಮ್ ಕೆಹನಾ ಹೋಗಾ (ಭಾರತದಲ್ಲಿ ಉಳಿಯಬೇಕಿದ್ದರೇ, ಜೈ ಶ್ರೀ ರಾಮ್ ಎಂದು ಹೇಳಬೇಕು)” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸಂಸತ್ತಿನಿಂದ ಕೇವಲ ಒಂದು ಕಿಮೀ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜನರು ಇಂತಹ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದರು.
A mob in the capital of this country is shouting, "Jab mulle kaate jaayenge, Ram Ram chillaayenge."
Kindly instruct me with the curriculum of how this must be ignored.
— Hussain Haidry (@hussainhaidry) August 8, 2021
ಸುಪ್ರೀಂಕೋರ್ಟ್ ವಕೀಲ ಮತ್ತು ದೆಹಲಿ ಬಿಜೆಪಿ ಮಾಜಿ ವಕ್ತಾರ ಅಶ್ವಿನಿ ಉಪಾಧ್ಯಾಯ ಆಯೋಜಿಸಿದ್ದರು ಎಂದು ಹೇಳಲಾದ ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗಲಾಗಿತ್ತು. “ವೈರಲ್ ವಿಡಿಯೊಗಳ ಬಗ್ಗೆ ತಿಳಿದಿಲ್ಲ. ಕೇವಲ ಐದು ಅಥವಾ ಆರು ಜನರು ಘೋಷಣೆಗಳನ್ನು ಕೂಗುತ್ತಿದ್ದಾರೆ. ಅವರು ಅಂತಹ ಘೋಷಣೆಗಳನ್ನು ಕೂಗಬಾರದಿತ್ತು. ಈ ಘೋಷಣೆಗಳು ಕೂಗುತ್ತಿದ್ದಾ ನಾನು ಕೂಡ ಇರಲಿಲ್ಲ, ಘೋಷಣೆ ಕೂಗಿದವರನ್ನು ನಾನು ಆಹ್ವಾನಿಸಿರಲಿಲ್ಲ. ನಾನು ಪ್ರತಿಭಟನೆಯಿಂದ ಹೋದ ನಂತರ ಇದು ನಡೆದಿರಬೇಕು. ವಿಡಿಯೊಗಳಲ್ಲಿ ಕಾಣುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅಶ್ವಿನಿ ಉಪಾಧ್ಯಾಯ ಹೇಳಿದ್ದರು.
ಇದನ್ನೂ ಓದಿ: ವಿವಾದಿತ ಯತಿ ನರಸಿಂಗಾನಂದ್ ವಿರುದ್ದ FIR ದಾಖಲಿಸಲು ಮಹಿಳಾ ಆಯೋಗ ಒತ್ತಾಯ
ಮತ್ತೊಂದು ಹೇಳಿಕೆಯಲ್ಲಿ, ಈ ಪ್ರತಿಭಟನೆಯನ್ನು ಜಂತರ್ ಮಂತರ್‌ನಲ್ಲಿ ಸೇವ್ ಇಂಡಿಯಾ ಫೌಂಡೇಶನ್‌ನವರು ಆಯೋಜಿಸಿದ್ದರು ಎಂದು ಹೇಳಿದ್ದಾರೆ. “ಸೇವ್ ಇಂಡಿಯಾ ಫೌಂಡೇಶನ್ ಟ್ರಸ್ಟ್‌ನೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾನು ಆರ್‌ವಿಎಸ್ ಮಣಿ, ಫಿರೋಜ್ ಬಕ್ತ್ ಅಹ್ಮದ್, ಗಜೇಂದ್ರ ಚೌಹಾಣ್ ಅಲ್ಲಿ ಅತಿಥಿಗಳಾಗಿ ಹೋಗಿದ್ದೇವು” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳು ವೈರಲ್ ಆದ ಮೇಲೆ, ಅಶ್ವಿನಿ ಉಪಾಧ್ಯಾಯ ಮತ್ತು ವಿಡಿಯೊಗಳಲ್ಲಿ ಗೋಚರಿಸುವವರನ್ನು ಒಳಗೊಂಡಂತೆ ಕಾರ್ಯಕ್ರಮದ ಹಿಂದೆ ಇರುವವರನ್ನು ಪೋಲಿಸರು ಬಂಧಿಸದಿರುವ ಬಗ್ಗೆ ಪೊಲೀಸರ ಮೇಲೆ ಒತ್ತಡ ಹೇರಲಾಗಿತ್ತು. ಅಂತಿಮವಾಗಿ ಸೋಮವಾರ ತಡರಾತ್ರಿ ಕಾರ್ಯನಿರ್ವಹಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹಳೆಯ ವಸಾಹತುಶಾಹಿ ಯುಗದ ಕಾನೂನುಗಳ ವಿರುದ್ಧವಾಗಿ ಆಯೋಜಿಸಲಾಗಿದ್ದ, “ವಸಾಹತು ಕಾನೂನುಗಳು ಮತ್ತು ಏಕರೂಪದ ಕಾನೂನುಗಳನ್ನು ಮಾಡಿ” ಎಂಬ ಮೆರವಣಿಗೆಯಲ್ಲಿ ಈ ಘೋಷಣೆಗಳನ್ನು ಕೂಗಲಾಗಿದೆ.
ಬಂಧಿತರಲ್ಲಿ ಅಶ್ವಿನಿ ಉಪಾಧ್ಯಾಯ, ಸೇವ್ ಇಂಡಿಯಾದ ನಿರ್ದೇಶಕ ಪ್ರೀತ್ ಸಿಂಗ್, ವಿನೋದ್ ಶರ್ಮಾ, ದೀಪಕ್ ಸಿಂಗ್, ವಿನೀತ್ ಕ್ರಾಂತಿ ಮತ್ತು ದೀಪಕ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ: ವೈರಲ್ ವಿಡಿಯೊ ಆಧರಿಸಿ FIR


