Homeಮುಖಪುಟಜಂತರ್‌ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ: ವೈರಲ್ ವಿಡಿಯೊ ಆಧರಿಸಿ FIR

ಜಂತರ್‌ ಮಂತರ್‌ನಲ್ಲಿ ಮುಸ್ಲಿಂ ವಿರೋಧಿ ಘೋಷಣೆ: ವೈರಲ್ ವಿಡಿಯೊ ಆಧರಿಸಿ FIR

- Advertisement -
- Advertisement -

ದೆಹಲಿಯ ಹೃದಯಭಾಗ ಜಂತರ್‌ ಮಂತರ್‌ ಬಳಿ ಪ್ರತಿಭಟನೆಯ ವೇಳೆ ಗುಂಪೊಂದು ಮುಸ್ಲಿಂ ಸಮುದಾಯದವರಿಗೆ ಬೆದರಿಕೆಯೊಡ್ಡುವ, ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಈ ವಿಡಿಯೊ ತುಣುಕುಗಳಲ್ಲಿ, “ರಾಮ್, ರಾಮ್” ಎಂಬ ಘೋಷಣೆಗಳ ಜೊತೆಗೆ ಮುಸ್ಲಿಮರನ್ನು ಕೊಲ್ಲುವ ಘೋಷಣೆಗಳು ಕೇಳಿ ಬರುತ್ತಿವೆ. ವೈರಲ್ ವಿಡಿಯೊ ಆಧರಿಸಿ ಎಫ್‌ಐಆರ್‌ ದಾಖಲಿಸಲಾಗಿದೆ,  ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

“ಹಿಂದೂಸ್ತಾನ್ ಮೇ ರೆಹನಾ ಹೋಗಾ, ಜೈ ಶ್ರೀ ರಾಮ್ ಕೆಹನಾ ಹೋಗಾ (ಭಾರತದಲ್ಲಿ ಉಳಿಯಬೇಕಿದ್ದರೇ, ಜೈ ಶ್ರೀ ರಾಮ್ ಎಂದು ಹೇಳಬೇಕು)” ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಸಂಸತ್ತಿನಿಂದ ಕೇವಲ ಒಂದು ಕಿಮೀ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜನರು ಇಂತಹ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ.

ಇದನ್ನೂ ಓದಿ: ಜನಸಂಖ್ಯಾ ನಿಯಂತ್ರಣದ ಬಗ್ಗೆ ಸ್ಥಳೀಯ ಮುಸ್ಲಿಂ ನಾಯಕರೊಂದಿಗೆ ಚರ್ಚಿಸಿದ ಅಸ್ಸಾಂ ಸಿಎಂ

 

ಸುಪ್ರೀಂಕೋರ್ಟ್ ವಕೀಲ ಮತ್ತು ದೆಹಲಿ ಬಿಜೆಪಿ ಮಾಜಿ ವಕ್ತಾರ ಅಶ್ವನಿ ಉಪಾಧ್ಯಾಯ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಘೋಷಣೆಗಳನ್ನು ಕೂಗಲಾಗಿದೆ. ಘಟನೆ ಬಗ್ಗೆ ಮಾತನಾಡಿರುವ ಅಶ್ವನಿ ಉಪಾಧ್ಯಾಯ, “ವೈರಲ್ ವಿಡಿಯೊಗಳ ಬಗ್ಗೆ ತಿಳಿದಿಲ್ಲ. ಕೇವಲ ಐದು ಅಥವಾ ಆರು ಜನರು ಘೋಷಣೆಗಳನ್ನು ಕೂಗುತ್ತಿದ್ದಾರೆ. ಅವರು ಅಂತಹ ಘೋಷಣೆಗಳನ್ನು ಕೂಗಬಾರದಿತ್ತು” ಎಂದು ಹೇಳಿದ್ದಾರೆ.

“ಈ ಘೋಷಣೆಗಳು ಕೂಗುತ್ತಿದ್ದಾ ನಾನು ಕೂಡ ಇರಲಿಲ್ಲ, ಘೋಷಣೆ ಕೂಗಿದವರನ್ನು ನಾನು ಆಹ್ವಾನಿಸಿರಲಿಲ್ಲ. ನಾನು ಪ್ರತಿಭಟನೆಯಿಂದ ಹೋದ ನಂತರ ಇದು ನಡೆದಿರಬೇಕು. ವಿಡಿಯೊಗಳಲ್ಲಿ ಕಾಣುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.

ದೆಹಲಿ ಪೊಲೀಸರು ವೈರಲ್ ವಿಡಿಯೊಗಳನ್ನು ಆಧರಿಸಿ “ಅಪರಿಚಿತ ವ್ಯಕ್ತಿಗಳ ವಿರುದ್ಧ” ಪ್ರಕರಣ ದಾಖಲಿಸಿದ್ದಾರೆ. ವಿಡಿಯೋದಲ್ಲಿರುವವರನ್ನು ಗುರುತಿಸಲು ಪ್ರಯತ್ನಿಸುತ್ತಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ದೀಪಕ್ ಯಾದವ್ ಹೇಳಿದ್ದಾರೆ.

ದ್ವೇಷದ ಭಾಷಣಗಳಿಗೆ ಕುಖ್ಯಾತರಾಗಿರು ಯತಿ ನರಸಿಂಗಾನಂದ ಸರಸ್ವತಿ ಉಪಸ್ಥಿತಿಯಲ್ಲಿ ಘೋಷಣೆಗಳನ್ನು ಕೂಗಲಾಗಿದೆ. ಕಿರುತೆರೆ ನಟ ಮತ್ತು ಬಿಜೆಪಿ ನಾಯಕ ಗಜೇಂದ್ರ ಚೌಹಾಣ್ ಕೂಡ ಪ್ರತಿಭಟನೆಯ ಭಾಗವಾಗಿದ್ದರು ಎಂದು ವರದಿಯಾಗಿದೆ.

ಹಳೆಯ ವಸಾಹತುಶಾಹಿ ಯುಗದ ಕಾನೂನುಗಳ ವಿರುದ್ಧವಾಗಿ ಆಯೋಜಿಸಲಾಗಿದ್ದ, “ವಸಾಹತು ಕಾನೂನುಗಳು ಮತ್ತು ಏಕರೂಪದ ಕಾನೂನುಗಳನ್ನು ಮಾಡಿ” ಎಂಬ ಮೆರವಣಿಗೆಯಲ್ಲಿ ಈ ಘೋಷಣೆಗಳನ್ನು ಕೂಗಲಾಗಿದೆ.


ಇದನ್ನೂ ಓದಿ: ಹಿಂದೂ ಯುವತಿ ಮುಸ್ಲಿಂ ಉಗ್ರನನ್ನು ಕೊಂದಳೇ? ಇಲ್ಲ, ವೆಬ್‍ ಸೀರಿಸ್ ಪಾತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...