Homeಮುಖಪುಟಬೀದಿ ರೌಡಿಯ ರೀತಿಯಲ್ಲಿ ಮಾತನಾಡುವುದನ್ನು ಬಿಡಿ: ಸಚಿವ ಈಶ್ವರಪ್ಪನವರಿಗೆ ಹೆಚ್.ಸಿ.ಮಹದೇವಪ್ಪ ಕಿವಿಮಾತು

ಬೀದಿ ರೌಡಿಯ ರೀತಿಯಲ್ಲಿ ಮಾತನಾಡುವುದನ್ನು ಬಿಡಿ: ಸಚಿವ ಈಶ್ವರಪ್ಪನವರಿಗೆ ಹೆಚ್.ಸಿ.ಮಹದೇವಪ್ಪ ಕಿವಿಮಾತು

- Advertisement -
- Advertisement -

ಅನೈತಿಕ ಸರ್ಕಾರದಲ್ಲಿ ಸಂವಿಧಾನಾತ್ಮಕವಾಗಿ ಸಚಿವರಾಗಿರುವ ಕೆ.ಎಸ್.ಈಶ್ವರಪ್ಪನವರು ಯಾವುದೋ ಬೀದಿ ರೌಡಿಯ ರೀತಿಯಲ್ಲಿ ಮಾತನಾಡುವುದನ್ನು ಬಿಡಬೇಕು ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಿವಿಮಾತು ಹೇಳಿದ್ದಾರೆ.

ಹಿಂದೆ ನಮ್ಮ ಬಿಜೆಪಿ ಕಾರ್ಯಕರ್ತರಿಗೆ ಶಕ್ತಿ ಇರಲಿಲ್ಲ. ಆದರೆ ಈಗ ಯಾರಾದರೂ ಮುಟ್ಟಿದರೆ ವಾಪಸ್ ಒಂದಕ್ಕೆ ಎರಡು ತೆಗೆದುಬಿಡುತ್ತೇವೆ, ಅಷ್ಟರಮಟ್ಟಿಗೆ ಬಿಜೆಪಿ ಬೆಳೆದಿದೆ ಎಂದು ನಿನ್ನೆ ಸಚಿವ ಈಶ್ವರಪ್ಪನವರು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, “ಈಗ ಬಿಜೆಪಿ ಬೃಹತ್ ಆಗಿ ಬೆಳೆದಿದೆ. ಹಿಂದೆ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆಯಾದಾಗ ಕೇವಲ ಶಾಂತವಾಗಿರಿ ಎನ್ನುತ್ತಿದ್ದಾರೆ. ಆದರೆ ಈಗ ಒಂದಕ್ಕೆ ಎರಡು ತೆಗೆದುಬಿಡಿ ಎನ್ನುವಷ್ಟರ ಮಟ್ಟಿಗೆ ಬೆಳೆದಿದ್ದೇವೆ” ಎಂದು ಹೇಳಿದ್ದರು.

ಇದಕ್ಕೆ ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಹೆಚ್.ಸಿ.ಮಹದೇವಪ್ಪನವರು, “ನಿಮ್ಮ ಪಕ್ಷದ ಅಜ್ಞಾನಿಗಳೆಲ್ಲಾ ಸೇರಿಕೊಂಡು ಜನ ಸಾಮಾನ್ಯರ ಬದುಕಲ್ಲಿ ಉಂಟು ಮಾಡಿರುವ ಸಂಕಷ್ಟಗಳನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷದ ಬಳಿ ಸರಿಯಾದ ಆಡಳಿತಾತ್ಮಕ ಸಲಹೆಗಳನ್ನು ಪಡೆಯಿರಿ. ಕಾರಣ ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಹೀಗೆ ರೌಡಿಗಳಂತೆ ಮಾತನಾಡುವುದು ಮತ್ತು ದ್ವೇಷ ಹಬ್ಬಿಸಿ ಸಮಾಜವನ್ನು ಹಾಳು ಮಾಡುವುದು ಬಿಟ್ಟರೆ ಮತ್ತೇನೂ ಬರುವುದಿಲ್ಲ ಎಂಬುದು ನಮಗೆ ಗೊತ್ತಿದೆ” ಎಂದು ವ್ಯಂಗ್ಯವಾಡಿದ್ದಾರೆ.

ವಾಸ್ತವವಾಗಿ ಹೇಳುವುದಾದರೆ ಕರೋನಾ ಸಂದರ್ಭದಲ್ಲಿ ನಿಮ್ಮಂತಹ ಅವಿವೇಕಿಗಳ ಆಡಳಿತ ವೈಫಲ್ಯದಿಂದಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನದೇ ಈ ರಾಜ್ಯದ ಎಲ್ಲಾ ಪಕ್ಷಕ್ಕೆ ಸೇರಿದ ಜನ ಸಾಮಾನ್ಯರು ತತ್ತರಿಸಿ ಹೋಗಿದ್ದು, ಪಕ್ಷಾತೀತವಾಗಿ, ಧರ್ಮಾತೀತವಾಗಿ ಮತ್ತು ಜಾತ್ಯಾತೀತವಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹಿಂದೂಗಳ ರಕ್ಷಣೆ ಎಂದು ಗಂಟಲು ಹರಿದುಕೊಳ್ಳುತ್ತಿದ್ದ ನಿಮಗೆ ಅವರ ರಕ್ಷಣೆ ಇರಲಿ ಒಂದು ಆಕ್ಸಿಜನ್ ಬೆಡ್ ಹೊಂದಿಸಲು ಆಗಲಿಲ್ಲ ನಿಮ್ಮ ಯೋಗ್ಯತೆಗೆ. ನನ್ನ ಪ್ರಕಾರ ಆಡಳಿತಾತ್ಮಕವಾಗಿ ಅಂದೇ ನಿಮ್ಮ ಸರ್ಕಾರ ಸತ್ತು ಹೋಗಿದೆ ಎಂದು ಮಹಾದೇವಪ್ಪ ಕಿಡಿಕಾರಿದ್ದಾರೆ.

ಜನರ ದೈನಂದಿನ ಬದುಕಿನ ಕಷ್ಟಗಳ ಮುಂದೆ ನಿಮ್ಮ ಈ ದ್ವೇಷ ಹರಡುವ ಮಾತುಗಳಿಗೆ, “ಒಂದು ಕೊಟ್ಟರೆ, ಎರಡು ಕೊಡುತ್ತೇವೆ,” ಎಂಬ ಮಾತುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಏಕೆಂದರೆ ಜನ ಸಾಮಾನ್ಯರು ಮತ್ತು ಪಕ್ಷದ ಕಾರ್ಯಕರ್ತರು ನೀವು ಹೇಳಿದಂತೆ ಹೊಡಿ ಬಡಿ ಜಗಳ ಮತ್ತು ಹಿಂಸಾಚಾರವನ್ನು ಎಂದಿಗೂ ಇಷ್ಟಪಡುವುದಿಲ್ಲ. ಇದೆಲ್ಲಾ ನಿಮ್ಮಂತಹ ಹುಳಿತೇಗಿನ ಮಂದಿಯ ಸೊಕ್ಕಿನ ಪ್ರಲಾಪವಷ್ಟೇ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಜನ ಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರ ನೀಡುವುದಷ್ಟೇ ನಿಮಗೆ ಉಳಿದಿರುವ ಅನಿವಾರ್ಯ ಆಯ್ಕೆಯಾಗಿದೆ ಎಂಬುದನ್ನು ನಿಮ್ಮ ತಲೆಯಲ್ಲಿ ಇಟ್ಟುಕೊಂಡು ನೆಟ್ಟಗೆ ಕಾರ್ಯ ನಿರ್ವಹಿಸಿ, ಇಲ್ಲವೇ ರಾಜೀನಾಮೆ ಕೊಟ್ಟು ಹೊರಡಿ ಎಂದು ಅವರು ಹೇಳಿದ್ದಾರೆ.

ಸದಾ ಅಸಂವಿಧಾನಿಕವಾಗಿ ಮಾತನಾಡುವ ಮತ್ತು ಸಾರ್ವಜನಿಕ ಜೀವನದಲ್ಲಿ ಇರಲು ಲಾಯಕ್ಕಿಲ್ಲದ ಇಂತಹವರ ರಾಜೀನಾಮೆಯನ್ನು ಪಡೆಯಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಈ ಮೂಲಕ ಆಗ್ರಹಿಸುತ್ತೇನೆ ಎಂದು ಮಹಾದೇವಪ್ಪ ತಿಳಿಸಿದ್ದಾರೆ.


ಇದನ್ನೂ ಓದಿ: SSLC Result | ಎಸ್‌ಎಸ್‌ಎಲ್‌ಸಿ ರಿಸಲ್ಟ್‌‌ ಪ್ರಕಟ; ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...