Homeಮುಖಪುಟಪ್ರವಾಹ ಸಂತ್ರಸ್ತರ ಮೇಲೆ ಯಡಿಯೂರಪ್ಪನವರ ಎದುರೇ ಲಾಠಿಚಾರ್ಜ್: ವಿಡಿಯೋ ನೋಡಿ

ಪ್ರವಾಹ ಸಂತ್ರಸ್ತರ ಮೇಲೆ ಯಡಿಯೂರಪ್ಪನವರ ಎದುರೇ ಲಾಠಿಚಾರ್ಜ್: ವಿಡಿಯೋ ನೋಡಿ

- Advertisement -
- Advertisement -

ಗದಗ ಜಿಲ್ಲೆಯ ಕೊಣ್ಣೂರಿನಲ್ಲಿ ಪ್ರವಾಹ ಸಂತಸ್ತರು ಸಿಎಂ ಜೊತೆ ವಾಗ್ವಾದ ನಡೆಸಿದ್ದಾರೆ. ಸರ್ಕಾರ ಗಮನವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಎಂ ಕಾರಿಗೆ ಅಡ್ಡಗಟ್ಟಿ ಪ್ರತಿಭಟಿಸಿದ್ದಾರೆ. ನೂಕುನುಗ್ಗಲಿನಿಂದಾಗಿ ಪೊಲೀಸರು ಲಾಠಿ ಬೀಸಿದ್ದಾರೆ. ಜನ ರೊಚ್ಚಿಗೆದ್ದಾಗ ಅಲ್ಲಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಕಾಲ್ಕಿತ್ತಿದ್ದಾರೆ.

ವಿಡಿಯೋ ನೋಡಿ:

ಪ್ರವಾಹ ಸಂತ್ರಸ್ತರ ಮೇಲೆಯೇ ಲಾಠಿ ಚಾರ್ಚ್ ಮಾಡಿದ್ದಕ್ಕಾಗಿ ಯಡಿಯೂರಪ್ಪನವರ ವಿರುದ್ಧ ತೀವ್ರ ಟೀಕೆ ಕೇಳಿಬಂದಿದೆ.

ಯದ್ವಾ-ತದ್ವಾ ಟೀಕೆಗೆ ಬೆದರಿ ಓಡಿದ ಯಡಿಯೂರಪ್ಪ!
ಹೋದಲ್ಲೆಲ್ಲ ಒಂದಲ್ಲ ಒಂದು ರೀತಿಯ ಪ್ರತಿರೋಧ ಮತ್ತು ಪ್ರೆತಿಭಟನೆಯನ್ನು ರಾಜ್ಯದ ಘನತೆವೆತ್ತ ಮುಖ್ಯಮಂತ್ರಿ ಯಡಿಯೂರಪ್ಪ ಎದುರಿಸುತ್ತಲೇ ಇದ್ದಾರೆ. ನಿನ್ನೆ ಬೆಳಗಾವಿ ಜಿಲ್ಲೆಯ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ತೆರಳಿದಾಗ ಅಲ್ಲಿ ಯಾವ ಪರಿ ಗದ್ದಲ ಎದ್ದಿತೆಂದರೆ, ಸ್ವತಃ ಯಡಿಯೂರಪ್ಪ ನಾನು ನಿಮ್ಮ ಮುಖ್ಯಮಂತ್ರಿ ಅಂತಾ ಗೊತ್ತಿಲ್ವಾ? ದಯವಿಟ್ಟು ಶಾಂತರಾಗಿ’ ಎಂದು ಅಂಗಲಾಚಿಕೊಂಡರು.
ಈಗ ಮೂರು ತಾಸುಗಳ ಹಿಂದಷ್ಟೇ ಗದಗ ಜಿಲ್ಲೆಯ ಪ್ರವಾಹದ ಕುರಿತು ವರದಿ ಪ್ರಕಟಿಸಿದ್ದೆವು. ಆಗ ಅದರಲ್ಲಿ ಒಟ್ಟೂ ಜನಪ್ರತಿನಿಧಿಗಳ ಲೋಪದ ಬಗ್ಗೆ ಬರೆದಿದ್ದೆವು.

ಈಗ ಇದೇ ಗದಗ ಜಿಲ್ಲೆಯ ಕೊಣ್ಣೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಜಿಟಿಜಿಟಿ ಮಳೆಯ ನಡುವೆಯೇ ಬೆವರು ಹರಿಸುವಂತೆ ಮಾಡಿದ್ದಾರೆ ಆಕ್ರೋಶಭರಿತ ಜನರು. ಇದು ಕೇವಲ ದಿಗ್ಬಂಧನವಂತೂ ಅಲ್ಲವೇ ಅಲ್ಲ, ಪೊಲೀಸರು ಸ್ವಲ್ಪ ಜಾಗೃತಿ ವಹಿಸದೇ ಇದ್ದರೇ ಯಡಿಯೂರಪ್ಪ ಇವತ್ತು ಕೊಣ್ಣೂರಲ್ಲಿ ಬಾಳ ಫಜೀತಿಗೆ ಒಳಗಾಗುತ್ತಿದ್ದರು.

ಸರ್ಕಾರ ರಚನೆ ಎಂದು ಹೇಳುತ್ತ ಯಾವ ಸಚಿವರೂ ಇಲ್ಲದೇ, ಅದಕ್ಕೆ ಕಾರಣವನ್ನೂ ಕೊಡದೇ ಜಿಲ್ಲೆ ಜಿಲ್ಲೆ ತಿರುಗತೊಡಗಿದರೆ ಇನ್ನೇನು ಆಗುತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...