ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಸಿಖ್ಖರು ಮತ್ತು ಹಿಂದೂಗಳಿಗೆ ಭಯ ಅಥವಾ ಆತಂಕ ಇಲ್ಲ ಎಂದು ಕಾಬೂಲ್ ಗುರುದ್ವಾರದ ಮುಖ್ಯಸ್ಥರು ಭರವಸೆ ನೀಡುತ್ತಿರುವ ವಿಡಿಯೊವನ್ನು ಅಕಾಲಿದಳ ಮತ್ತು ತಾಲಿಬಾನ್ ವಕ್ತಾರರು ಬುಧವಾರ ತಡರಾತ್ರಿ ಹಂಚಿಕೊಂಡಿದ್ದಾರೆ.
ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಅಕಾಲಿದಳದ ಮಂಜಿಂದರ್ ಸಿಂಗ್ ಸಿರ್ಸಾ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಕಾಬೂಲ್ ಗುರುದ್ವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಾಲಿಬಾನ್ ನಾಯಕರು “ಹಿಂದುಗಳು ಮತ್ತು ಸಿಖ್ಖರನ್ನು ಭೇಟಿಯಾಗಿದ್ದಾರೆ. ಅವರ ಸುರಕ್ಷತೆಯ ಭರವಸೆ ನೀಡಿದ್ದಾರೆ ಎಂದಿದ್ದಾರೆ.
76 ಸೆಕೆಂಡುಗಳ ಈ ವಿಡಿಯೊದಲ್ಲಿ ಹಲವಾರು ತಾಲಿಬಾನ್ ಸದಸ್ಯರು ಎಂದು ನಂಬಲಾಗಿರುವ ವ್ಯಕ್ತಿಗಳು ಗುರುದ್ವಾರಕ್ಕೆ ಭೇಟಿ ನೀಡಿ ಒಳಗೆ ಆಶ್ರಯ ಪಡೆದಿರುವ ಸಿಖ್ಖರ ಜೊತೆಗೆ ಮಾತನಾಡುತ್ತಿದ್ದಾರೆ. ವಿಡಿಯೊದಲ್ಲಿ ಗುರುದ್ವಾರ ಸಮಿತಿಯ ಅಧ್ಯಕ್ಷರ (ಪಾಷ್ಟೋ ಭಾಷೆಯಲ್ಲಿ) ಹೇಳಿಕೆಯೂ ಇದೆ.
ಇದನ್ನೂ ಓದಿ: ಅಫ್ಘಾನ್ ಪತನ: ‘ಭಾರತದ ಹಿತಾಸಕ್ತಿಗಳನ್ನು ಕಾಪಾಡಲು ಏನು ಮಾಡಿದ್ದೀರಿ?’ – ಮೋದಿಗೆ ಕಾಂಗ್ರೆಸ್ ಪ್ರಶ್ನೆ
I am in constant touch with the President Gurdwara Committee, Kabul S. Gurnam Singh & Sangat taking refuge in Gurdwara Karte Parwan Sahib in Kabul. Even today, Taliban leaders came to Gurdwara Sahib and met the Hindus and Sikhs and assured them of their safety @thetribunechd pic.twitter.com/glyCgZBwVI
— Manjinder Singh Sirsa (@mssirsa) August 18, 2021
ಅಲ್ ಜಜೀರಾ ಸುದ್ದಿ ವರದಿಯ ಭಾಗವಾಗಿರುವಂತೆ ಕಾಣುವ ಈ ವಿಡಿಯೊವನ್ನು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಆಫ್ ಅಫ್ಘಾನಿಸ್ತಾನದ ರಾಜಕೀಯ ಕಚೇರಿಯ ವಕ್ತಾರ ಎಂ.ನಯೀಮ್ ಕೂಡ ಟ್ವೀಟ್ ಮಾಡಿದ್ದಾರೆ.
حیاة السیخ والهنود في کابول: رئیس معابدهم في کابول: نحن في أمن و أمان لا نشعر بأي خوف أو قلق. قبل ذلک کان خوف و قلق عند الناس علی أرواحهم وأموالهم والآن لیست هناک مشاکل. نحن مطمئنون. pic.twitter.com/NXrtRuTRod
— Dr.M.Naeem (@IeaOffice) August 18, 2021
“ಕಾಬೂಲ್‌ನಲ್ಲಿ ಸಿಖ್ಖರು ಮತ್ತು ಭಾರತೀಯರ ಜೀವನ: ಅವರ ದೇವಾಲಯಗಳ ಮುಖ್ಯಸ್ಥರು ಹೇಳುತ್ತಾರೆ ನಾವು ಸುರಕ್ಷಿತವಾಗಿದ್ದೇವೆ. ನಾವು ಯಾವುದೇ ಭಯ ಅಥವಾ ಆತಂಕವನ್ನು ಅನುಭವಿಸುತ್ತಿಲ್ಲ. ಮೊದಲು ಇಲ್ಲಿನ ಜನರು ಅವರ ಜೀವನ ಮತ್ತು ಹಣದ ಬಗ್ಗೆ ಭಯ ಮತ್ತು ಆತಂಕದಲ್ಲಿದ್ದರು. ಈಗ ಯಾವುದೇ ಸಮಸ್ಯೆಗಳಿಲ್ಲ. ನಮಗೆ ಭರವಸೆ ಇದೆ” ಎಂದು ಗುರುದ್ವಾರದ ಮುಖ್ಯಸ್ಥರು ಹೇಳಿದ್ದಾರೆ ಎಂದು ಎಂ.ನಯೀಮ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ, ಅಫ್ಘಾನಿಸ್ತಾನದ ಗುರುದ್ವಾರದಲ್ಲಿ ಸಿಲುಕಿರುವ 200 ಸಿಖ್ಖರನ್ನು ಒಳಗೊಂಡಂತೆ ಎಲ್ಲಾ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಸೋಮವಾರ ಒಕ್ಕೂಟ ಸರ್ಕಾರವನ್ನು ಒತ್ತಾಯಿಸಿದ್ದರು. ಈ ಸ್ಥಳಾಂತರ ಕಾರ್ಯದಲ್ಲಿ ಅಗತ್ಯವಿರುವ ಯಾವುದೇ ಸಹಾಯವನ್ನು ನೀಡಲು ತಮ್ಮ ಸರ್ಕಾರ ಸಿದ್ಧವಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಹೇಳಿದ್ದರು.
20 ವರ್ಷಗಳ ನಂತರ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿದೆ. ಮೇ ತಿಂಗಳಲ್ಲಿ ಯುನೈಟೆಡ್ ಸ್ಟೇಟ್ಸ್ ತನ್ನ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡಾಗಿನಿಂದ ಆರಂಭವಾದ ಮಾನವೀಯ ಬಿಕ್ಕಟ್ಟು, ಅಲ್ಲಿನ ಜನರಲ್ಲಿ ಭಯ ಮತ್ತು ಆತಂಕವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಅಫ್ಘಾನ್ ಜನರು ಪಾಕಿಸ್ತಾನಕ್ಕಿಂತಲೂ ಭಾರತದಿಂದ ಹೆಚ್ಚು ನಿರೀಕ್ಷಿಸುತ್ತಿದ್ದಾರೆ- ಕಾಬೂಲ್‌ನಿಂದ ಬಂದ ಪತ್ರಕರ್ತೆ


