ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೂರು ಪ್ರಮುಖ ಪಕ್ಷಗಳು ಪ್ರಾಬಲ್ಯವಿರುವ ರಾಜಕೀಯ ಕಣವಾಗಿರುವ ಕರ್ನಾಟಕದಲ್ಲಿ ಯಾವುದೇ ಆಧಾರವಿಲ್ಲದ ಸಣ್ಣ ಪಕ್ಷಗಳು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ನೆಲೆಯನ್ನು ಕಂಡುಕೊಳ್ಳಲು ಸಿದ್ದತೆ ನಡೆಸುತ್ತಿವೆ.
ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ಆರಂಭವಾಗಲಿದ್ದು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರ ಪಾಲಿಕೆಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆ ನಡೆಯಲಿದೆ. ಅಲ್ಲಿಂದ ಬೆಂಗಳೂರಿನಲ್ಲಿ ವರ್ಷಾಂತ್ಯದಲ್ಲಿ ಬಿಬಿಎಂಪಿ ಚುನಾವಣೆ ನಡೆಯಲಿದೆ.
ಆಮ್ ಆದ್ಮಿ ಪಕ್ಷ (ಎಎಪಿ) ಮೊದಲ ಬಾರಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. “ನಾವು ಸ್ಥಳದ ಐತಿಹಾಸಿಕ ಮಹತ್ವವನ್ನು ಎತ್ತಿ ತೋರಿಸುವ ಮೂಲಕ ವಿಶ್ವ ದರ್ಜೆಯ ನಗರಗಳ ನಿರ್ಮಾಣದ ಭರವಸೆಯನ್ನು ಹೊಂದಿದ್ದೇವೆ. ಮಹಿಳೆಯರು ಮತ್ತು ಯುವಕರ ಮತಗಳನ್ನು ಪಡೆಯಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರಬಹುದು, ಆದರೆ ನಾವು ಎಲ್ಲರನ್ನೂ ಒಳಗೊಳ್ಳುವ ರಾಜಕೀಯಕ್ಕಾಗಿ ಕಣಕ್ಕಿಳಿಯಲಿದ್ದೇವೆ” ಎಂದು ಎಎಪಿ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಮಸೂದೆ 2021; ಕೃಷಿಗೆ ಮತ್ತು ವಿದ್ಯುತ್ ವಲಯದ ಕಾರ್ಮಿಕರಿಗೆ ಮಾರಕ
ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆಗಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಂಟು ವಾರ್ಡ್‌ಗಳಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕೂಡ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. “ನಾವು ಪಕ್ಷದ ಬದ್ದತೆಯ ಕಾರ್ಯಕರ್ತರು. ಕೊಳ್ಳೇಗಾಲದ ಶಾಸಕ ಎನ್ ಮಹೇಶ್ ಅವರ ಉಚ್ಚಾಟಣೆಯಿಂದ ಪಕ್ಷವು ಶುದ್ದೀಕರಣಗೊಂಡಿದೆ. ಇದರಿಂದಾಗಿಜನರು ನಮ್ಮನ್ನು ಆರ್ಶೀವದಿಸುತ್ತಾರೆ” ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಡಾ. ಕೃಷ್ಣಮೂರ್ತಿ ಹೇಳಿದ್ದಾರೆ.
“ಬಿಎಸ್‌ಪಿ ನಿರ್ದಿಷ್ಟ ಸಮುದಾಯದ ಮತಗಳ ವಿಭಜನೆ ಮಾಡುತ್ತದೆ ಎಂಬುದು ಅಪ್ರಸ್ತುತ. ಬದಲಾಗಿ, ಹಿಂದಿನ ಆಡಳಿತಗಳಲ್ಲಿ ಬಹುಜನರ (ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ) ಜೀವನವು ಹೇಗೆ ಸುಧಾರಿಸಿಲ್ಲ ಎಂಬುದನ್ನು ಬಿಎಸ್‌ಪಿ ಎತ್ತಿ ತೋರಿಸುತ್ತದೆ” ಎಂದು ಹೇಳಿದ್ದಾರೆ.
ಬಿಎಸ್‌ಪಿ ಪಕ್ಷವು ರಾಜ್ಯದಾದ್ಯಂತ ತನ್ನ ಕಾರ್ಯಕರ್ತರಿಗಾಗಿ ಸರಣಿ ಕಾರ್ಯಾಗಾರಗಳನ್ನು ನಡೆಸುತ್ತಿದೆ ಎಂದು ವರದಿಯಾಗುತ್ತಿದೆ. ಪಕ್ಷವು 2018 ರ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಲ ಕ್ಷೇತ್ರವನ್ನು ಗೆಲ್ಲುವ ಮೂಲಕ ತನ್ನ ಮೊದಲ ಗೆಲುವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
2004ರಲ್ಲಿ, ಪಕ್ಷದ ನಾಯಕಿ ಮಾಯಾವತಿ ಅವರ ಪ್ರಭಾವ ಉತ್ತುಂಗದಲ್ಲಿದ್ದಾಗ, ಬಿಎಸ್‌ಪಿ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೇವಲ 2.5% ಮತಗಳನ್ನು ಗಳಿಸುವ ಮೂಲಕ, ಸುಮಾರು 45 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯದ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗಿದೆ.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ), ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಾಳೆ, ಎಂ.ವೆಂಕಟಸ್ವಾಮಿ ನೇತೃತ್ವದಲ್ಲಿ ರಾಜ್ಯಾದ್ಯಂತ ತಮ್ಮ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶವು ಬಿಬಿಎಂಪಿ ಚುನಾವಣೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಗಳಿಗೆ ಮೆಟ್ಟಿಲಾಗಲಿವೆ. ಅಲ್ಲದೆ, ಈ ಸಣ್ಣ ಪಕ್ಷಗಳು ಯಾರ ಭವಿಷ್ಯವನ್ನು ಕಸಿದುಕೊಳ್ಳುತ್ತವೆ ಎಂಬುದರ ಬಗ್ಗೆ ಸುಳಿವು ನೀಡಬಹುದು.
ಇದನ್ನೂ ಓದಿ: ಸರ್ಕಾರಿ ಕಚೇರಿಗಳ ಹಲವು ಸಮಸ್ಯೆಗಳನ್ನು ಬಯಲಿಗೆಳೆಯುತ್ತಿರುವ KRS ಪಕ್ಷ



SDPI is playing an inportant role in this election and I cannot see any report on this matter.. why there is any soecific reason..?
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸ್ಪರ್ಧೆಯ ಬಗ್ಗೆ ಯಾಕೆ ಉಲ್ಲೇಖಿಸಿಲ್ಲ?