Homeಅಂತರಾಷ್ಟ್ರೀಯಕಾಬೂಲ್ ಆತ್ಮಾಹುತಿ ದಾಳಿ: 13 ಅಮೆರಿಕಾ ಸೈನಿಕರು, 60 ನಾಗರಿಕರು ಸಾವು

ಕಾಬೂಲ್ ಆತ್ಮಾಹುತಿ ದಾಳಿ: 13 ಅಮೆರಿಕಾ ಸೈನಿಕರು, 60 ನಾಗರಿಕರು ಸಾವು

- Advertisement -
- Advertisement -

ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಗುರುವಾರ ನಡೆದ ಅವಳಿ ಆತ್ಮಹತ್ಯಾ ಬಾಂಬ್‌ ದಾಳಿ ಮತ್ತು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 13 ಅಮೆರಿಕಾ ಸೈನಿಕರು ಸೇರಿದಂತೆ ಹಲವಾರು ಜನರು ಸಾವನ್ನಪ್ಪಿದರು. ತಾಲಿಬಾನ್ ನಿಯಂತ್ರಿತ ಅಘ್ಘಾನ್‌ನಿಂದ ಜನರನ್ನು ಸ್ಥಳಾಂತರ ಮಾಡುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

ಈ ದುರಂತದಲ್ಲಿ 60 ಅಘ್ಘಾನ್‌ ನಾಗರಿಕರು, 13 ಅಮೆರಿಕಾದ ಸೈನಿಕರು ಸಾವನ್ನಪ್ಪಿದ್ದು ಮೃತಪಟ್ಟವರ ಸಂಖ್ಯೆ 73 ದಾಟಿದೆ. ಘಟನೆಯಲ್ಲಿ 18 ಯೋಧರು, 143ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಘ್ಘಾನ್ ಮತ್ತು ಅಮೆರಿಕಾ ಸೆಂಟ್ರಲ್ ಕಮಾಂಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗಾಯಾಳುಗಳನ್ನು ಸ್ಥಲೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಂಬ್ ಸ್ಫೋಟದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತುಕೊಂಡಿದೆ. ಟೆಲಿಗ್ರಾಂ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಇದನ್ನೂ ಓದಿ: ಅಫ್ಘಾನ್: ಮಹಿಳೆಯರು ಕೆಲಸಕ್ಕೆ ಹೊರ ಹೋಗುವುದು ಸುರಕ್ಷಿತವಲ್ಲ- ತಾಲಿಬಾನ್ ವಕ್ತಾರ

ಅಧ್ಯಕ್ಷ ಜೋ ಬಿಡೆನ್ ಐಸಿಸ್ ಉಗ್ರರ ಕೆಲಸಕ್ಕೆ ಪ್ರತಿಕಾರದ ಮಾತುಗಳನ್ನಾಡಿದ್ದಾರೆ. “ಬಾಂಬ್ ದಾಳಿಯ ಹೊರತಾಗಿಯೂ ಅಮೆರಿಕಾದ ನಾಗರಿಕರು ಮತ್ತು ಇತರರನ್ನು ಸ್ಥಳಾಂತರಿಸುವ ಕೆಲಸ ಮುಂದುವರೆಯುತ್ತದೆ. ಈ ಘಟನೆಗೆ ಕಾರಣರಾದವರನ್ನು ಶಿಕ್ಷಿಸದೆ ಬಿಡುವುದಿಲ್ಲ. ನಾವು ಇವರನ್ನು ಕ್ಷಮಿಸುವುದಿಲ್ಲ. ಈ ಘಟನೆ ಮರೆಯುವುದಿಲ್ಲ. ನಾವು ನಿಮ್ಮನ್ನು ಬೇಟೆಯಾಡುತ್ತೇವೆ ” ಎಂದು ಪ್ರತಿಜ್ಞೆ ಮಾಡಿದ್ದಾರೆ.

ಈ ಹಿಂದೆ ಜೋ ಬಿಡೆನ್, ಐಸಿಸ್ ದಾಳಿಯ ಬೆದರಿಕೆಯಿಂದಾಗಿ ಅಮೆರಿಕನ್ ಪಡೆಗಳು ಅಫ್ಘಾನಿಸ್ತಾನವನ್ನು ತೊರೆಯಬೇಕು. ಮಂಗಳವಾರದ ವೇಳೆಗೆ ಏರ್ ಲಿಫ್ಟ್ ಕೊನೆಗೊಳ್ಳುತ್ತದೆ ಎಂದು ಹೇಳಿದ್ದರು.

ಆಗಸ್ಟ್ 15 ರಂದು ಅಘ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ 1,00,000 ಕ್ಕೂ ಹೆಚ್ಚು ಜನರನ್ನು ಅಫ್ಘಾನಿಸ್ತಾನದಿಂದ  ಸ್ಥಳಾಂತರಿಸಲಾಗಿದೆ. ಅಂದಿನಿಂದ ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಸಾವಿರಾರು ಮಂದಿ ಬೇರೆಡೆ ಹೋಗಲು ಕಾಯುತ್ತಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: 2014 ರ ಬೀದಿ ನಾಟಕದ ದೃಶ್ಯ ‘ತಾಲಿಬಾನ್ ಮಹಿಳೆಯನ್ನು ಮಾರುತ್ತಿದೆ’ ಎಂದು ವೈರಲ್‌!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...