ಅಫಘಾನಿಸ್ತಾನದಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿರುವವರ ಮೇಲೆ ಹಾಗೂ ಆ ಹೋರಾಟದ ವರದಿಗಳನ್ನು ಮಾಡಿದ ಪತ್ರಕರ್ತರ ಮೇಲೆ ತಾಲಿಬಾನ್ ನಡೆಸುತ್ತಿರುವ ಹಿಂಸಾಚಾರವನ್ನು ವಿಶ್ವಸಂಸ್ಥೆ ಖಂಡಿಸಿದೆ.
ಪ್ರತಿಭಟನಾಕಾರರ ಮೇಲೆ ಬಲ ಪ್ರದರ್ಶನ ಮಾಡುವುದನ್ನು ಹಾಗೂ ಬಂಧಿಸುವುದನ್ನು ತಾಲಿಬಾನ್ ತಕ್ಷಣ ನಿಲ್ಲಿಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ಕಚೇರಿಯ ವಕ್ತಾರ ರವಿನಾ ಶಾಮ್ದಾಸಾನಿ ಹೇಳಿಕೆ ನೀಡಿದ್ದಾರೆ.
ತಾಲಿಬಾನಿಗಳು ಕಾಬೂಲ್ ಅನ್ನು ವಶಕ್ಕೆ ಪಡೆದುಕೊಂಡ ನಂತರ, ಆಗಸ್ಟ್ 15ರಿಂದಲೂ ಹೋರಾಟ ಮಾಡಲಾಗುತ್ತಿದೆ. ಆದರೆ ದಂಗೆಕೋರ ಗುಂಪಿನವರು, ಈ ಹೋರಾಟವನ್ನು ಕಾನೂನುಬಾಹಿರವೆಂದು ಘೋಷಿಸಿ ಬುಧವಾರ ನಿಷೇಧಿಸಿದೆ. ಈ ದಂಗೆಕೋರ ಗುಂಪು ತನ್ನ ವಿರೋಧಿಗಳನ್ನು ಹಾಗೂ ತನ್ನ ವಿರುದ್ಧ ಘೋಷಣೆ ಕೂಗುವವರನ್ನು ನಿಷೇಧಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತಾಲಿಬಾನ್ ನಿಂದ ಹೆಚ್ಚಾಗುತ್ತಿರುವ ಹಿಂಸೆಯನ್ನು ಶಾಂತಿಯುತ ಹೋರಾಟಗಾರರು ಎದುರಿಸುವಂತಾಗಿದೆ. ಆಗಸ್ಟ್ 15ರಿಂದ ಆಗಸ್ಟ್ 19ರ ಅವಧಿಯಲ್ಲಿ ಹೋರಾಟ ನಡೆಯತ್ತಿದ್ದಾಗ ಹತ್ತಿಕ್ಕಲು ಯತ್ನಿಸಿದ ತಾಲಿಬಾನ್ ಎಂಟು ಮಂದಿಯನ್ನು ಗಾಯಗೊಳಿಸಿ ಇಬ್ಬರನ್ನು ಕೊಂದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಸೆಪ್ಟೆಂಬರ್ 7ರಂದು ಹೆರಾತ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ ಬಂದೂಕು ಬಳಸಿರುವ ತಾಲಿಬಾನ್ ಏಳು ಜನರನ್ನು ಗಾಯಗೊಳಿಸಿ ಇಬ್ಬರನ್ನು ಕೊಂದಿದೆ. ಅದೇ ದಿನ ಕಾಬೂಲ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದಾಗ 15 ಮಂದಿ ಪತ್ರಕರ್ತರನ್ನು ಒಳಗೊಂಡಂತೆ ಹಲವು ಪ್ರತಿಭಟನಾಕಾರರನ್ನು ತಾಲಿಬಾನ್ ಥಳಿಸಿದೆ. ಸುಮಾರು ಐದು ಮಂದಿ ಪತ್ರಕರ್ತರನ್ನು ಬಂಧಿಸಲಾಗಿದ್ದು, ಮತ್ತೆ ಇಬ್ಬರನ್ನು ತೀವ್ರವಾಗಿ ಗಾಯಗೊಳಿಸಲಾಗಿದೆ
ಎಂದು ವಿಶ್ವಸಂಸ್ಥೆ ಬೇಸರ ವ್ಯಕ್ತಪಡಿಸಿದೆ.