Homeಮುಖಪುಟಮಾನನಷ್ಟ ಮೊಕದ್ದಮೆ: ಕೊನೆಗೂ ನ್ಯಾಯಾಲಯದ ಮುಂದೆ ಹಾಜರಾದ ನಟಿ ಕಂಗನಾ ರಣಾವತ್

ಮಾನನಷ್ಟ ಮೊಕದ್ದಮೆ: ಕೊನೆಗೂ ನ್ಯಾಯಾಲಯದ ಮುಂದೆ ಹಾಜರಾದ ನಟಿ ಕಂಗನಾ ರಣಾವತ್

- Advertisement -
- Advertisement -

ಬಾಲಿವುಡ್ ಸಾಹಿತಿ, ಬರಹಗಾರ ಜಾವೇದ್ ಅಖ್ತರ್‌ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ನಟಿ ಕಂಗನಾ ರಣಾವತ್ ಸೋಮವಾರ ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಸೆ.14 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಮುಂದಿನ ವಿಚಾರಣೆಯ ದಿನಾಂಕ ಸೆಪ್ಟಂಬರ್ 20 ರಂದು ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಹಾಜರಾಗಲು ವಿಫಲವಾದರೆ ನಟಿಯ ವಿರುದ್ಧ ವಾರಂಟ್ ಹೊರಡಿಸುವುದಾಗಿ ಎಚ್ಚರಿಕೆ ನೀಡಿತ್ತು.

ಟಿವಿ ಸಂದರ್ಶನವೊಂದರಲ್ಲಿ ನಟಿ ಕಂಗನಾ ತಮ್ಮ ವಿರುದ್ಧ ಮಾನಹಾನಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಜಾವೇದ್‌ ಅಖ್ತರ್‌ ಕಳೆದ ನವೆಂಬರ್‌ನಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಕಳೆದ ವರ್ಷ ಜೂನ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ನಟ ಸುಶಾಂತ್ ಸಿಂಗ್ ರಜಪೂತ್‌ ಪ್ರಕರಣದಲ್ಲಿ ಕಂಗನಾ ತಮ್ಮ ಹೆಸರನ್ನು ವಿನಾಃ ಕಾರಣ ಎಳೆದು ತಂದಿದ್ದಾರೆ ಎಂದು ಜಾವೇದ್ ಅಖ್ತರ್‌ ತಮ್ಮ ದೂರಿನಲ್ಲಿ ತಿಳಿಸಿದ್ದರು.

ಇದನ್ನೂ ಓದಿ: ಮಾನನಷ್ಟ ಕೇಸ್: ವಿಚಾರಣೆಗೆ ಖುದ್ದು ಹಾಜರಾಗದಿದ್ದರೆ ವಾರಂಟ್ – ನಟಿ ಕಂಗನಾಗೆ ಮುಂಬೈ ಕೋರ್ಟ್ ಎಚ್ಚರಿಕೆ

 

ಇನ್ನು, ನಟಿ ಕಂಗನಾ ರಣಾವತ್, ಸಾಹಿತಿ ಜಾವೇದ್ ಅಖ್ತರ್ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ಪ್ರತಿದೂರು ದಾಖಲಿಸಿದ್ದಾರೆ. “ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆ” ಎಂದು ಆರೋಪ ಮಾಡಿದ್ದು, ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಾನು “ನಂಬಿಕೆ ಕಳೆದುಕೊಂಡೆ” ಎಂದು ಹೇಳಿದ್ದಾರೆ.

ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯಲು ಬೇಕಾದ ಪ್ರಕ್ರಿಯೆಗಳನ್ನು ಮುಗಿಸಿದ್ದಾರೆ. ನಟಿ ಪರ ವಕೀಲ ರಿಜ್ವಾನ್ ಸಿದ್ದೀಕ್, ಸಾಹಿತಿ ಜಾವೇದ್ ಅಖ್ತರ್‌, ಕಂಗನಾ ರಣಾವತ್ ಮತ್ತು ಆಕೆಯ ಸಹೋದರಿ ರಂಗೋಲಿ ಅವರನ್ನು ಮನೆಗೆ ಕರೆದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: ಕೆಲಸವಿಲ್ಲದ ಕಾರಣ ಕಳೆದ ವರ್ಷದ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ: ಕಂಗನಾ ರಾಣಾವತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನದ ವಿವರ ತಡವಾಗಿ ಪ್ರಕಟ, ನೋಂದಾಯಿತ ಮತದಾರರ ಮಾಹಿತಿ ಮಾಯ: ಚು. ಆಯೋಗಕ್ಕೆ ಗಂಭೀರ...

0
ಲೋಕಸಭೆ ಚುನಾವಣೆಯ ಮೊದಲ ಮತ್ತು ಎರಡನೇ ಹಂತದ ಮತದಾನದ ಅಂತಿಮ ಅಂಕಿ ಅಂಶಗಳನ್ನು ಬಹಳ ತಡವಾಗಿ ಬಿಡುಗಡೆಗೊಳಿಸಿರುವುದು ಮತ್ತು ಚುನಾವಣಾ ಆಯೋಗದ ವೆಬ್‌ಸೈಟ್‌ನಿಂದ ನೋಂದಾಯಿತ ಮತದಾರರ ಮಾಹಿತಿ ಕಾಣೆಯಾಗಿರುವುದು ಅನುಮಾನಗಳನ್ನು ಹುಟ್ಟು ಹಾಕಿದೆ. ಇದು...