Homeಮುಖಪುಟಕೆಲಸವಿಲ್ಲದ ಕಾರಣ ಕಳೆದ ವರ್ಷದ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ: ಕಂಗನಾ ರಾಣಾವತ್

ಕೆಲಸವಿಲ್ಲದ ಕಾರಣ ಕಳೆದ ವರ್ಷದ ತೆರಿಗೆ ಪಾವತಿಸಲು ಸಾಧ್ಯವಾಗಿಲ್ಲ: ಕಂಗನಾ ರಾಣಾವತ್

- Advertisement -
- Advertisement -

ನಾನು ಭಾರತದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿ. ಆದರೆ ಕಳೆದೊಂದು ವರ್ಷದಿಂದ ನನಗೆ ಕೆಲಸವಿಲ್ಲದ ಕಾರಣ ಕಳೆದ ವರ್ಷದ ಅರ್ಧದಷ್ಟು ತೆರಿಗೆಯನ್ನು ಪಾವತಿಸಲು ಸಾಧ್ಯವಾಗಿಲ್ಲ. ಆ ಬಾಕಿ ಮೊತ್ತಕ್ಕೆ ಸರ್ಕಾರ ಬಡ್ಡಿ ವಿಧಿಸುವುದರ ಬಗ್ಗೆ ಯೋಚಿಸುವುದಿಲ್ಲ ಎಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ಹೇಳಿದ್ದಾರೆ.

“ನಾನು ಅತ್ಯಧಿಕ ತೆರಿಗೆ ಸ್ಲ್ಯಾಬ್‌ನ ಅಡಿಯಲ್ಲಿ ಬಂದರೂ, ನನ್ನ ಆದಾಯದ ಸುಮಾರು 45 ಪ್ರತಿಶತವನ್ನು ತೆರಿಗೆಯಾಗಿ ಪಾವತಿಸುತ್ತೇನೆ. ಆದರೆ ಅತಿ ಹೆಚ್ಚು ತೆರಿಗೆ ಪಾವತಿಸುವ ನಟಿಯಾಗಿದ್ದರೂ, ನನ್ನ ಜೀವನದಲ್ಲಿ ಮೊದಲ ಬಾರಿಗೆ ನನಗೆ ಯಾವುದೇ ಕೆಲಸವಿಲ್ಲದ ಕಾರಣದಿಂದಾಗಿ ನನ್ನ ಕಳೆದ ವರ್ಷದ ತೆರಿಗೆಯ ಅರ್ಧದಷ್ಟು ಹಣವನ್ನು ಇನ್ನೂ ಪಾವತಿಸಿಲ್ಲ” ಎಂದು ಅವರು ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ನಾನು ತೆರಿಗೆ ಹಣ ಪಾವತಿಸದಿರುವುದರಿಂದ ಬಾಕಿ ಹಣದ ಮೇಲೆ ಸರ್ಕಾರ ಬಡ್ಡಿ ವಿಧಿಸಬಹುದು. ಈಗಲೂ ಆ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಈ ಸಮಯ ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಕಷ್ಟಕರವಾಗಿದೆ.  ಆದರೆ ನಾವೆಲ್ಲರೂ ಒಟ್ಟು ಸೇರಿ ಸಮಯವನ್ನು ಮೀರಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡಿನ ಖ್ಯಾತ ರಾಜಕಾರಣಿ ದಿವಂಗತ ಜಯಲಲಿತಾರವರ ಜೀವನ ಚರಿತ್ರೆ ಕುರಿತ ತಲೈವಿ ಬಯೋಪಿಕ್‌ನಲ್ಲಿ ಕಂಗನಾ ನಟಿಸಿದ್ದಾರೆ. ಆದರೆ ಕೋವಿಡ್ ಕಾರಣಗಳಿಂದಾಗಿ ಚಿತ್ರ ಪೂರೈಸಲು ಸಾಧ್ಯವಾಗಿಲ್ಲ. ಹಲವು ಸಿನಿಮಾಗಳನ್ನು ಅವರು ಒಪ್ಪಿಕೊಂಡಿದ್ದಾರೆ.


ಇದನ್ನೂ ಓದಿ: ಬಂಗಾಳದಲ್ಲಿ ಟಿಎಂಸಿ ಕಡೆಗೆ ಬಿಜೆಪಿ ಕಾರ್ಯಕರ್ತರ ಮಹಾ ವಲಸೆ: ತಬ್ಬಿಬ್ಬಾದ ಬಿಜೆಪಿ ಹಿರಿಯ ಮುಖಂಡರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ವಿರುದ್ಧ ಅವಹೇಳನಾಕಾರಿ ಪೋಸ್ಟ್‌ ಮಾಡಿದ ಬಿಜೆಪಿ; ಕ್ರಮ ತೆಗೆದುಕೊಳ್ಳದ ಸಿದ್ದರಾಮಯ್ಯ ಸರ್ಕಾರ

0
ರಾಜ್ಯಸಭಾ ಚುನವಣಾ ಫಲಿತಾಂಶದ ನಂತರ ವಿಧಾನಸೌಧದಲ್ಲಿ ನಡೆದ ಸಂಭ್ರಮಾಚರಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ನಾಸಿರ್ ಹುಸೇನ್ ಪರ ಅವರ ಅಭಿಮಾನಿಗಳು ಘೋಷಣೆ ಕೂಗಿದ್ದರು. 'ನಾಸಿರ್ ಸಾಬ್ ಝಿಂದಾಬಾದ್' ಎಂದು ಕೂಗಿದ್ದನ್ನು, ಕೆಲ ಗೋದಿ...