ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕಿ ಮಂಡಾ ವಿಜಯ್ ಮಹಾತ್ರೆ ಅವರು ಮುಖ್ಯಮಂತ್ರಿಯನ್ನು ಹೊಗಳಿದ್ದಾರೆ.
’ಪ್ರತಿಪಕ್ಷಗಳು ಸೇರಿದಂತೆ ಯಾರಾದರೂ ಯಾವುದೇ ಕೆಲಸಕ್ಕಾಗಿ ಉದ್ಧವ್ ಠಾಕ್ರೆ ಅವರನ್ನು ಸಂಪರ್ಕಿಸಿದಾಗ, ಅವರು ತಾಳ್ಮೆಯಿಂದ ಕೇಳುತ್ತಾರೆ ಮತ್ತು ಉಪಯುಕ್ತ ಸಲಹೆಯನ್ನು ನೀಡುತ್ತಾರೆ” ಎಂದು ವಿರೋಧ ಪಕ್ಷದ ಶಾಸಕಿ ಬುಧವಾರ ನವಿ ಮುಂಬೈನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ
“ಮುಖ್ಯಮಂತ್ರಿಯವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಠಾಕ್ರೆ ಅವರು ನವಿ ಮುಂಬೈನಲ್ಲಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನುಮೋದನೆ ನೀಡಿದ್ದಾರೆ. ಇದರಿಂದ ನಾಗರಿಕರಿಗೆ ಹೆಚ್ಚಿನ ಸಹಾಯವಾಗುತ್ತದೆ” ಎಂದು ಮಂಡಾ ಮಹಾತ್ರೆ ಹೇಳಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರ BJP ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು: ಬಿಜೆಪಿ -ಶಿವಸೇನೆ ನಡುವೆ ವಾಕ್ಸಮರ
“ಮುಖ್ಯಮಂತ್ರಿಯವರು ನಮ್ಮ ಯೋಜನೆಗಳಿಗೆ ಬೆಂಬಲ ನೀಡಿದಾಗ ಮತ್ತು ಅದಕ್ಕೆ ಪ್ರೋತ್ಸಾಹ ನೀಡಿದಾಗ, ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ಏಕೆ ಹೇಳಬಾರದು” ಎಂದು ಮುಂಬೈನ ಬೇಲಾಪುರದ ಶಾಸಕಿ ಪ್ರಶ್ನಿಸಿದ್ದಾರೆ.
ಆದರೆ, ಸಿಎಂ ತಮ್ಮದೆ ಪಕ್ಷದಿಂದ ಟೀಕೆಗಳನ್ನು ಎದುರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ, “ಒಬ್ಬ ಮುಖ್ಯಮಂತ್ರಿ ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ. ರಾಜ್ಯದ ನಾಯಕನಾಗಿ ಅವರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ಒಳ್ಳೆಯ ಕೆಲಸ ಮಾಡಿದಾಗ ನಾವು ಒಳ್ಳೆಯ ಕೆಲಸ ಎಂದು ಹೇಳಿದರೆ, ಅದರಲ್ಲಿ ಏನು ತಪ್ಪಿದೆ” ಎಂದಿದ್ದಾರೆ.
ಮಹಾರಾಷ್ಟ್ರದ 12 ಮಹಿಳಾ ಬಿಜೆಪಿ ಶಾಸಕರಲ್ಲಿ ಮಂಡಾ ವಿಜಯ್ ಮಹಾತ್ರೆ ಬುಧವಾರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತ, ಕರಾಡ್ ರೈಲ್ವೇ ನಿಲ್ದಾಣದಲ್ಲಿ ತನ್ನನ್ನು ತಪ್ಪಾಗಿ ವಶಕ್ಕೆ ಪಡೆಯಲಾಗಿದೆ ಎಂದು ಆರೋಪಿಸಿ, ಮಹಾರಾಷ್ಟ್ರ ಸರ್ಕಾರ ಮತ್ತು ಮುಂಬೈ ಪೊಲೀಸರ ವಿರುದ್ಧ ಬಿಜೆಪಿ ನಾಯಕ ಕಿರಿತ್ ಸೋಮಯ್ಯ ಅವರು ನವಘರ್ ಮುಲುಂದ್ ಪೂರ್ವ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಯಿಂದ 4.80 ಲಕ್ಷ ರೂ. ಬಿಜೆಪಿಗೆ ವರ್ಗಾವಣೆ!


