ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹತ್ಯಾಕಾಂಡ ಪ್ರಮುಖ ಆರೋಪಿ ಅಜಯ್ ಮಿಶ್ರಾ ತೇನಿ ಅವರ ಮಗ ಆಶಿಶ್ ಮಿಶ್ರಾರನ್ನು ಯುಪಿ ಪೊಲೀಸರು ಇಂದು (ಅ.09) ವಿಚಾರಣೆಗೆ ಕರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರ ಮನೆಗೆ ಭಾರಿ ಭದ್ರತೆ ನೀಡಲಾಗಿದೆ.
ಲಖಿಂಪುರ್ ಖೇರಿ ಹತ್ಯಾಕಾಂಡದಲ್ಲಿ ನಾಲ್ವರು ರೈತರು ಸೇರಿದಂತೆ 8 ಜನರು ಮೃತಪಟ್ಟಿದ್ದಾರೆ. 6 ದಿನಗಳಾದರೂ ಪ್ರಕರಣದ ಆರೋಪಿ ಅಶಿಶ್ ಮಿಶ್ರಾರನ್ನು ಬಂಧಿಸಿರದಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಆದರೆ, ಆಶಿಶ್ ಮೋನು ಮಿಶ್ರಾ ವಿಚಾರಣೆಗೆ ಹಾಜರಾಗಿರಲಿಲ್ಲ.
ದೇಶಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆ, ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಲುವಕುಶ್ ಮತ್ತು ಆಶಿಶ್ ಪಾಂಡೆ ಎಂಬ ಇಬ್ಬರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಹತ್ಯಾಕಾಂಡದಲ್ಲಿ ಯುಪಿ ಪೊಲೀಸರು ಆಶಿಶ್ ಮಿಶ್ರಾ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ ಆದರೆ ಇದುವರೆಗೂ ಆತನನ್ನು ಬಂಧಿಸಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ವಾಪಸ್ ತೆರಳುತ್ತಿದ್ದ ರೈತರ ಮೇಲೆ ಹರಿದ ಎಸ್‌ಯುವಿ ವಾಹನ ತನಗೆ ಸೇರಿದ್ದು ಎಂದು ಒಪ್ಪಿಕೊಂಡಿದ್ದರೂ, ವಾಹನದಲ್ಲಿ ತನ್ನ ಮಗ ಇರಲ್ಲಿಲ್ಲ ಎಂದು ಕೇಂದ್ರ ಸಚಿವರು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ರೈತರ ಹತ್ಯಾಕಾಂಡ: ಪರಿಹಾರ ನನ್ನ ಮಗನನ್ನು ವಾಪಸ್ ತರುವುದಿಲ್ಲ, ನಮಗೆ ನ್ಯಾಯ ಬೇಕು- ಮೃತರ ತಂದೆ
ಪ್ರಕರಣದಲ್ಲಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿರುವ ಸುಪ್ರೀಕೋರ್ಟ್, “ಉತ್ತರ ಪ್ರದೇಶ ಸರ್ಕಾರ ಸಾಕಷ್ಟು ಕೆಲಸ ಮಾಡಿಲ್ಲ” ಎಂದಿದೆ. “ಉತ್ತರ ಪ್ರದೇಶ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ನಾವು ತೃಪ್ತರಾಗಿಲ್ಲ. ಜವಾಬ್ದಾರಿಯುತ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆಯನ್ನು ನಾವು ನಿರೀಕ್ಷಿಸುತ್ತೇವೆ. ಬಂದೂಕನ್ನು ಬಳಸಿ ಕೊಲ್ಲಲಾಗಿದೆ ಎಂಬುದನ್ನು ಒಳಗೊಂಡಂತೆ ಈಗ ಕೇಳಿ ಬಂದಿರುವ ಆರೋಪಗಳು ತೀವ್ರ ಗಂಭೀರವಾಗಿವೆ” ಎಂದು ಸುಪ್ರೀಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಆತಂಕ ವ್ಯಕ್ತಪಡಿಸಿದ್ದಾರೆ.
“ಈ ರೀತಿ ಯಾವ ಸಂದೇಶವನ್ನು ನೀವು ಕಳುಹಿಸುತ್ತಿದ್ದೀರಿ? ಸಾಮಾನ್ಯ ಸಂದರ್ಭಗಳಲ್ಲಿ ಕೂಡ ಪೊಲೀಸರು ತಕ್ಷಣ ಹೋಗಿ ಆರೋಪಿಗಳನ್ನು ಬಂಧಿಸುವುದಿಲ್ಲ. ಇರಬೇಕಾದ ರೀತಿಯಲ್ಲಿ ಕೆಲಸಗಳು ಆಗುತ್ತಿಲ್ಲ. ಇದು ಕೇವಲ ಮಾತಿಗೆ ಸೀಮಿತವಾಗಿದೆ ಹೊರತು ಕ್ರಿಯೆಗಳಲ್ಲಿ ಕಂಡು ಬರುತ್ತಿಲ್ಲ” ಎಂದು ಉತ್ತರ ಪ್ರದೇಶ ಪೊಲೀಸರನ್ನು ಸಿಜೆಐ ತೀಕ್ಷ್ಣವಾಗಿ ಖಂಡಿಸಿದ್ದಾರೆ.
ಇತ್ತ, ಹತ್ಯಾಕಾಂಡ ಮತ್ತು ಮುಂದಿನ ಕ್ರಮಗಳ ಕುರಿತು ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ ಶನಿವಾರ ಮಧ್ಯಾಹ್ನ ದೆಹಲಿಯ ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾಗೋಷ್ಠಿ ಆಯೋಜಿಸಿದೆ.
ರೈತ ಮುಖಂಡರಾದ ದರ್ಶನ್ ಪಾಲ್, ಹನ್ನಾನ್ ಮೊಲ್ಲಾ, ಹರಪಾಲ್ ಬಿಲಾರಿ, ಜೋಗಿಂದರ್ ಉಗ್ರನ್, ರಾಕೇಶ್ ಟಿಕಾಯತ್, ಸುರೇಶ್ ಕೌತ್, ಯೋಗೇಂದ್ರ ಯಾದವ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ.
Press Conference by SKM Coordination Committee
9 October 2021 – 1 PM at Press Club of India, Delhi
Subject : Lakhimpur Massacre and further course of action
Speakers :
Darshan Pal
Hannan Mollah
Harpal Bilari
Joginder Ugrahan
Rakesh Tikait
Suresh Kauth
Yogendra Yadav— Kisan Ekta Morcha (@Kisanektamorcha) October 9, 2021
ಇದನ್ನೂ ಓದಿ: ಸಾಕ್ಷಿಯಿಲ್ಲದೆ ಒತ್ತಡದಿಂದ ಯಾರ ಮೇಲೂ ಕ್ರಮ ಕೈಗೊಳ್ಳುವುದಿಲ್ಲ-ಯೋಗಿ ಆದಿತ್ಯನಾಥ್


