ಹೈದರಾಬಾದ್‌ನಲ್ಲಿ ಭಾರಿ ಮಳೆ: ಪ್ರವಾಹಕ್ಕೆ ಸಿಲುಕಿ ಇಬ್ಬರು ನಾಪತ್ತೆ
PC: indiatoday

ಶುಕ್ರವಾರ ಸಂಜೆಯಿಂದ ಹೈದರಾಬಾದ್‌ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಹೈದರಾಬಾದ್‌ನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ನಗರದಲ್ಲಿ ರಾತ್ರಿ 8:30 ರಿಂದ 11 ಗಂಟೆಯ ನಡುವೆ 10 ರಿಂದ 12 ಸೆಂಮೀ ಮಳೆಯಾಗಿದೆ.

ಭಾರಿ ಮಳೆಯ ಪರಿಣಾಮವಾಗಿ ಹಲವಾರು ತಗ್ಗು ಪ್ರದೇಶಗಳು ಮಳೆನೀರಿನಿಂದ ತುಂಬಿವೆ. ತಗ್ಗು ಪ್ರದೇಶದ  ಮನೆಗಳಿಗೆ ನೀರು ನುಗ್ಗಿ ಜನ ಪರದಾಡುವಂತಾಗಿದೆ. ಪ್ರಬಲ ಪ್ರವಾಹಕ್ಕೆ ಸಿಲುಕಿ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓಲ್ಡ್ ಸಿಟಿಯಲ್ಲಿ ಪ್ರವಾಹಕ್ಕೆ ತುತ್ತಾಗಿರುವ ರೆಸ್ಟೋರೆಂಟ್‌ನ ವೀಡಿಯೊವನ್ನು ಸುದ್ದಿ ಸಂಸ್ಥೆ ANI ಹಂಚಿಕೊಂಡಿದ್ದು, ಗ್ರಾಹಕರು ನೀರು ತುಂಬಿದ ಹೋಟೆಲ್‌ನಲ್ಲೇ ಕುಳಿತು ಆಹಾರ ಸೇವಿಸುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ನಾವು ಕೂಡ ರೈತರು, ಪ್ರಿಯಾಂಕ, ರಾಹುಲ್ ಅವರನ್ನು ಸ್ವಾಗತಿಸುತ್ತೇವೆ: ಬಿಜೆಪಿ ಕಾರ್ಯಕರ್ತನ ಕುಟುಂಬ

ಅಲ್ಲಿನ ನಿವಾಸಿಗಳು ಹಂಚಿಕೊಂಡಿರುವ ಇತರ ದೃಶ್ಯಗಳಲ್ಲಿ ವಾಹನಗಳು ಕೊಚ್ಚಿಕೊಂಡು ಹೋಗುವುದನ್ನು ನೋಡಬಹುದು.

ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಪ್ರವಾಹದ ಭೀಕರತೆಯನ್ನು ನೆನಪಿಸಿಕೊಂಡಿರುವ ನಿವಾಸಿಗಳು, ನಗರ ಆಡಳಿತವು ಮೂಲಸೌಕರ್ಯಗಳನ್ನು ಸುಧಾರಿಸುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

“ಭಾರೀ ಮಳೆಯಿಂದಾಗಿ ನಾಲೆಗಳು ಉಕ್ಕಿ ಹರಿದ ಕಾರಣ ಇಬ್ಬರು ವ್ಯಕ್ತಿಗಳು ಕೊಚ್ಚಿಕೊಂಡು ಹೋಗಿದ್ದಾರೆ. ರಕ್ಷಣಾ ತಂಡವು ಅವರಿಗಾಗಿ ಶೋಧ ನಡೆಸುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಕೆ ಪುರುಷೋತ್ತಮ್ ಹೇಳಿದ್ದಾರೆ.


ಇದನ್ನೂ ಓದಿ: ನಿರೂಪಕ ‘ಅಜಿತ್ ಹನುಮಕ್ಕನವರ್‌’ಗೆ ನಟಿ ಸಂಜನಾ ಸಭ್ಯತೆಯ ಪಾಠ; ವಿಡಿಯೊ ವೈರಲ್

LEAVE A REPLY

Please enter your comment!
Please enter your name here