ಬಾಗಲಕೋಟೆಯ ಇಳಕಲ್ ಪಟ್ಟಣದಲ್ಲಿ 15 ವರ್ಷದ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ, ತಲೆಗೆ ಟೋಪಿ ಧರಿಸಿ ಖಾಸಗಿ ಟ್ಯೂಷನ್‌ಗೆ ಬಂದಿದ್ದ ಬಾಲಕನನ್ನು ಚುಡಾಯಿಸಿದ್ದ. ಇದು ಎರಡು ಧಾರ್ಮಿಕ ಸಂಘಟನೆಗಳ ಸದಸ್ಯರ ನಡುವೆ ಘರ್ಷಣೆಗೆ ಕಾರಣವಾಗಿತ್ತು, ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಬಾಲಕನೊಬ್ಬ ತಲೆಗೆ ಟೋಪಿ ಧರಿಸಿ ಖಾಸಗಿ ಟ್ಯುಟೋರಿಯಲ್‌ಗೆ ಬಂದಿದ್ದಾಗ ಗೇಲಿ ಮಾಡಿದ್ದಾನೆ. ಬೇಸರಗೊಂಡ ಬಾಲಕ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರಾದ ತನ್ನ ಸ್ನೇಹಿತರಿಗೆ ಹೇಳಿದ್ದಾರೆ. ನಂತರ ಅವರು ಗೇಲಿ ಮಾಡಿದ ಬಾಲಕನಿಗೆ ಕಪಾಳಮೋಕ್ಷ ಮಾಡಿದ್ದಾರೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
“ಹೊಡೆತ ತಿಂದ ಹುಡುಗ ಇದನ್ನು ಹಿಂದೂ ಸಂಘಟನೆಯ ಸದಸ್ಯರಾದ ತನ್ನ ಸ್ನೇಹಿತರಿಗೆ ವಿವರಿಸಿದ್ದಾನೆ. ಅವರು ಬಂದು ಮುಸ್ಲಿಂ ಬಾಲಕ ಮತ್ತು ಆತನ ಸ್ನೇಹಿತರನ್ನು ಥಳಿಸಿದ್ದಾರೆ. ಪಿಎಫ್‌ಐ ಸದಸ್ಯರು ಮತ್ತೊಮ್ಮೆ 15 ವರ್ಷದ ಹಿಂದೂ ಹುಡುಗನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಎರಡೂ ಧಾರ್ಮಿಕ ಸಂಘಟನೆಗಳ ಸದಸ್ಯರ ನಡುವೆ ಗಲಾಟೆ ನಡೆದಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್‌ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ
Opposition to #Muslim boy wearing skull cap in private tution has led to clashes in #Ilkal town of #Bagalkote #Karnataka. Muslim students allege when they confronted- they were beaten up by more than 15 people.
2 Students r seriously injured. 2 FIR regd. 1 is counter comp (1/2) pic.twitter.com/xR0Q1bIySs— Imran Khan (@KeypadGuerilla) October 12, 2021
ಎರಡೂ ಧಾರ್ಮಿಕ ಸಂಘಟನೆಯ ಸುಮಾರು ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಳಕಲ್ ಟೌನ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ.
“ಸಣ್ಣ ಕಾರಣಕ್ಕಾಗಿ ಇಬ್ಬರು ಅಪ್ರಾಪ್ತರ ನಡುವೆ ನಡೆದ ಜಗಳವನ್ನು ಎರಡೂ ಧಾರ್ಮಿಕ ಸಂಘಟನೆಗಳು ದುರ್ಬಳಕೆ ಮಾಡಿಕೊಂಡಿವೆ. ನಾವು ಎರಡೂ ಕಡೆಯಿಂದ ಎರಡು ಪ್ರಕರಣಗಳನ್ನು ದಾಖಲಿಸಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದ ಸುಮಾರು ಎಂಟು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ” ಎಂದು ಎಸ್‌ಪಿ ಜಗಳಸರ್ ಹೇಳಿಕೆಯನ್ನು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
“ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಆಸ್ಪತ್ರೆಯಲ್ಲಿ ಕೆಲವರಿಗೆ ಬೆದರಿಕೆ ಹಾಕುತ್ತಿರುವ ವ್ಯಕ್ತಿಯನ್ನು ನಾವು ಬಂಧಿಸುತ್ತೇವೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಅದರ ಬಗ್ಗೆ ವಿವರವಾದ ತನಿಖೆ ನಡೆಸುತ್ತೇವೆ” ಎಂದು ಎಸ್‌ಪಿ ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ದಲಿತ ಯುವಕನ ಬರ್ಬರ ಗುಂಪು ಹತ್ಯೆ, ಕಾಂಗ್ರೆಸ್ ವಿರುದ್ಧ ಭುಗಿಲೆದ್ದ ಆಕ್ರೋಶ


