ಭಾರಿ ಕುತೂಹಲ ಮೂಡಿಸಿದ್ದ ಕರ್ನಾಟಕದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು ಸಿಂದಗಿಯಲ್ಲಿ 12 ನೇ ಸುತ್ತಿನ ಮತ ಏಣಿಕೆ ಮುಗಿದಿದ್ದು, ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ.
ಸಿಂದಗಿಯ ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 12ನೇ ಸುತ್ತಿನ ಬಳಿಕ 19,719 ಮತಗಳ ಅಂತರ ಸಾಧಿಸಿದ್ದು, ಗೆಲುವಿನತ್ತ ಮುನ್ನುಗ್ಗುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ್ ಭೂಸನೂರು 54,407 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 34,688 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಕೇವಲ 2,333 ಮತಗಳನ್ನು ಪಡೆದಿದ್ದಾರೆ.
’ಸಿಂದಗಿಯಲ್ಲಿ ಜನ ಅಭಿವೃದ್ಧಿ ಬಯಸಿದ್ದಾರೆ. ಹಾಗಾಗಿ ಜನ ಮತ ಹಾಕಿದ್ದಾರೆ. ನಾವು ಕೂಡ ಭರವಸೆಯನ್ನು ನೀಡಿದ್ದೇವು. ಇದನ್ನು ಜನ ನಂಬಿಕೆ ಇಟ್ಟು ಆಡಳಿತ ಪಕ್ಷಕ್ಕೆ ಮತ ಹಾಕಿದ್ದಾರೆ’ ಎಂದು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.
“ಸಿಂದಗಿಯಲ್ಲಿ ನಾವು ತುಂಬಾ ಮಾರ್ಜಿನ್‌ನಲ್ಲಿ ಇರುವುದರಿಂದ ಗೆಲುವು ಸಿಗುತ್ತದೆ. ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಕಡಿಮೆ ಮಾರ್ಜಿನ್ ಇರುವುದರಿಂದ ನಮಗೆ ಗೆಲ್ಲುವ ಅವಕಾಶ ಜಾಸ್ತಿ ಇದೆ. ಹಾನಗಲ್‌ನಲ್ಲಿ ಯಾವಾಗಲು ಪೈಪೋಟಿ ಹೆಚ್ಚಾಗಿರುತ್ತದೆ. ಇನ್ನು ಹೆಚ್ಚಿನ ಸುತ್ತುಗಳು ಇವೆ ಕಾದು ನೋಡೋಣ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾನಗಲ್‌ನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಜೆಡಿಎಸ್ ಎರಡೂ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ.
ಇದನ್ನೂ ಓದಿ: ವಿಡಿಯೊ ವರದಿ: ಬ್ಯಾಲಹಳ್ಳಿ ದಲಿತರಿಂದ ದೇವಾಲಯ ಪ್ರವೇಶ; ಸವರ್ಣೀಯರ ಅಸಹನೆ


