ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಸ್ಥಳೀಯ ದಿನಪತ್ರಿಕೆಯ ವರದಿಗಾರರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಬ್ಬಿ ಪಟ್ಟಣದಲ್ಲಿ ನೀರು ಪೋಲಾಗುತ್ತಿರುವ ಕುರಿತು ಸಮಗ್ರವಾಗಿ ವರದಿ ಮಾಡಿದ್ದ ಪತ್ರಕರ್ತ ರಮೇಶ್ ಗೌಡ ಅವರ ಮೇಲೆ, ಇಲ್ಲಿನ ಪ್ರವಾಸಿ ಮಂದಿರದ ಬಳಿ ಭಾನುವಾರ ಮಧ್ಯಾಹ್ನ ಸುಮಾರು 7 ರಿಂದ 8 ಜನ ಯುವಕರ ಗುಂಪು ಹಲ್ಲೆ ಮಾಡಿದೆ.
ಗಾಯಾಳು ರಮಶ್ ಗೌಡ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ತುಮಕುರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೋಗೀಶ್ ಮತ್ತು ಕೌನ್ಸಲರ್‌ಗಳ ಹೆಸರು ಕೇಳಿ ಬಂದಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ: ಕಾಂಗ್ರೆಸ್ ಬಿಜೆಪಿಯಲ್ಲಿ ಹುಳಿ ಹಿಂಡುವ ಕೆಲಸ ಮಾಡುತ್ತಿದೆ- ಸಿ.ಸಿ ಪಾಟೀಲ್
ಪಟ್ಟಣದ ಸುಭಾಷ್ ನಗರದಲ್ಲಿ ವಿಪರಿತವಾಗಿ ನೀರು ಪೋಲಾಗುತ್ತಿರುವ ಬಗ್ಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬರ ಮಾಹಿತಿ ಮೇರೆಗೆ ರಮೇಶ್ ಗೌಡ ಅವು ವಿವರವಾದ ವರದಿ ಮಾಡಿದ್ದರು. ನೀರು ಪೋಲಾಗುತ್ತಿರುವುದಕ್ಕೆ ವಾರ್ಡ್ ಸದಸ್ಯರ ನಿರ್ಲಕ್ಷ್ಯ ಕಾರಣ ಎಂದು ವರದಿ ಮಾಡಿದ್ದರು.
ಈ ವರದಿ ಮಾಡಿದ್ದ ಕಾರಣಕ್ಕೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಯೋಗೀಶ್ ಮತ್ತು ಕೌನ್ಸಲರ್‌ಗಳಾದ ಕುಮಾರ್, ಲೋಕೇಶ್ ಬಾಬು ತಮ್ಮ ಗೂಂಡಾಗಳನ್ನು ಬಿಟ್ಟು ಹಲ್ಲೆ ಮಾಡಿಸಿದ್ದಾರೆ ಎಂದು ವೆಬ್‌ಸೈಟ್ ಕನ್ನಡ ಇ ನ್ಯೂಸ್ ವರದಿ ಮಾಡಿದೆ.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ‘ಕನ್ನಡ ಮಾತಾಡಿ’ ಎಂದ ರೈತನಿಗೆ ಧಮಕಿ ಹಾಕಿದ ಹಿಂದಿ ಭಾಷಿಗ ಬ್ಯಾಂಕ್ ಸಿಬ್ಬಂದಿ!


