Homeಕರ್ನಾಟಕ‘ಎ’ ಫಾರ್‌ ಅಂಬೇಡ್ಕರ್‌ ಎನ್ನಬೇಕಿದೆ: ನೂತನ ಪಠ್ಯ ವಿರೋಧಿಸಿ ಮೊಳಗಿದ ‘ತಿಪಟೂರು ಚಲೋ’

‘ಎ’ ಫಾರ್‌ ಅಂಬೇಡ್ಕರ್‌ ಎನ್ನಬೇಕಿದೆ: ನೂತನ ಪಠ್ಯ ವಿರೋಧಿಸಿ ಮೊಳಗಿದ ‘ತಿಪಟೂರು ಚಲೋ’

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ 'ಚಲೋ ತಿಪಟೂರು' ಹೋರಾಟ ನಡೆಯಿತು. ಸಚಿವ ಬಿ.ಸಿ.ನಾಗೇಶ್‌ ನಡೆಗಳಿಗೆ ತೀವ್ರ ವಿರೋಧ ವ್ಯಕ್ತವಾಯಿತು.

- Advertisement -
- Advertisement -

‘ಎ’ ಫಾರ್‌ ಆಪಲ್‌ ಎಂದು ಹೇಳುವ ಬದಲು, ‘ಎ’ ಫಾರ್‌ ಅಂಬೇಡ್ಕರ್‌‌ ಎಂದು ಮಕ್ಕಳಿಗೆ ಹೇಳಿಕೊಡಬೇಕಾಗಿದೆ. ಅಂಬೇಡ್ಕರ್‌- ಈ ದೇಶಕ್ಕೆ ನಾಗರಿಕತೆಯ ಬೆಳಕು ತಂದವರು ಎಂದು ಹಿರಿಯ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಹೇಳಿದರು.

ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಜಾಗೃತ ತಿಪಟೂರು, ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ವತಿಯಿಂದ ಇಂದು ನಡೆದ ‘ಚಲೋ ತಿಪಟೂರು, ಜಾಥಾ ಹಾಗೂ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ಅ- ಅರಸ, ಆ- ಆಳು ಎಂದು ಹೇಳಿಕೊಡಲಾಗುತ್ತಿದೆ. ಅರಸ ಎಂದು ಹೇಳಿಕೊಡುತ್ತಾ ಶಿವಾಜಿಯ ಫೋಟೋ ಹಾಕುತ್ತಾರೆ. ನಮಗೆ ಗೊತ್ತಿರುವುದು ಮೈಸೂರಿನ ಅರಸರು. ಟಿಪ್ಪು ಫೋಟೋ ಹಾಕಬಹುದಲ್ಲ, ಮೈಸೂರು ಒಡೆಯರ ಫೋಟೋ ಹಾಕಬಹುದಲ್ಲ. ನಮ್ಮ ನಾಡನ್ನು ಲೂಟಿ ಮಾಡಿದ ಶಿವಾಜಿಯನ್ನು ಪರಿಚಯ ಮಾಡಿಕೊಡುವ ಅಗತ್ಯವಿಲ್ಲ ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಈ ನೆಲಕ್ಕೆ ಸಂಬಂಧವಿಲ್ಲದ ಪಠ್ಯ ರೂಪಿತವಾಗಿಲ್ಲದಿದ್ದರೆ ನಮ್ಮದೇ ಆದ ಪಠ್ಯವನ್ನು ರಚಿಸುವ ಅವಕಾಶವನ್ನು ಎನ್‌ಸಿಎಫ್‌ (ನ್ಯಾಷನಲ್‌ ಕರಿಕ್ಯುಲಮ್ ಫ್ರೇಮ್‌ ವರ್ಕ್) ನೀಡಿತು. ಇವರು ಮಾಡಿರುವ ದ್ರೋಹಕ್ಕೆ ಪರ್ಯಾಯವಾಗಿ ನೆಲಪಠ್ಯಗಳನ್ನು ರೂಪಿಸಬೇಕಿದೆ. ಇದು ನಿಲ್ಲಲಾರದ ಹೋರಾಟ. ಮನೆಮನೆಯಲ್ಲೂ ಜಾಗೃತಿ ಮೂಡಬೇಕಿದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಮನುಸ್ಮೃತಿಯನ್ನು ಸುಟ್ಟಂತೆ ಈ ಪಠ್ಯಪುಸ್ತಕಗಳನ್ನು ಸುಡಬೇಕಿದೆ ಎಂದು ಕರೆ ನೀಡಿದರು.

ಸ್ವೀಡನ್‌ ದೇಶಕ್ಕೆ ಅಧ್ಯಕ್ಷನಾಗುವುದು ಅಲ್ಲಿನ ನಾಗರಿಕರಿಗೆ ಸುಲಭ. ಆದರೆ ಮೇಷ್ಟ್ರಾಗಲು ತುಂಬಾ ಶ್ರಮ ಬೇಕಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ದೊಡ್ಡ ಪ್ರಮಾಣದ ಆದ್ಯತೆಯನ್ನು ಅಲ್ಲಿನ ಸರ್ಕಾರ ನೀಡುತ್ತದೆ. ದುರಂತವೆಂದರೆ ನಮ್ಮ ದೇಶದಲ್ಲಿ ಪಠ್ಯಪುಸ್ತಕಗಳು ಮೊದಲಿನಿಂದಲೂ ಬಹುಜನರ ಬಿಡುಗಡೆಯನ್ನು ತಡೆದಿವೆ ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಪಠ್ಯ ಪರಿಷ್ಕರಣೆ: 8 ತಪ್ಪು ತಿದ್ದಲು ಮುಂದಾದ ಸರ್ಕಾರ; ಹಾಗೆಯೇ ಉಳಿದ ಸಾಲು ಸಾಲು ಎಡವಟ್ಟು!

ಸಂವಿಧಾನ ವಿರೋಧಿ ಪಠ್ಯ ರೂಪಿಸಲಾಗಿದೆ. ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಸಂವಿಧಾನದ ಆಶಯ. ಸಮಾನತೆಯನ್ನೇ ವಿರೋಧಿಸುವವರು ದೇಶದ್ರೋಹಿಗಳು. ನಾವು ಸಮಾನತೆಯನ್ನು ಒಪ್ಪುವುದಿಲ್ಲ ಎಂದು ಆರ್‌ಎಸ್‌ಎಸ್‌ ಸ್ಪಷ್ಟವಾಗಿ ಹೇಳಿದೆ. ಇವರಿಗಿಂತ ದೇಶದ್ರೋಹಿಗಳು ಯಾರಿದ್ದಾರೆ? ಸಮಾನತೆ ಮತ್ತು ಸಂವಿಧಾನ ಒಪ್ಪದ ಆರ್‌ಎಸ್‌ಎಸ್- ದೇಶದ್ರೋಹಿ ಸಂಘಟನೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಸರ್ಕಾರದಂತಹ ಲಜ್ಜೆಗೆಟ್ಟ ಸರ್ಕಾರವನ್ನು ನಾವು ಜಗತ್ತಿನಲ್ಲಿ ಎಲ್ಲಿಯೂ ನೋಡಲು ಸಾಧ್ಯವಿಲ್ಲ. ಪಠ್ಯದಲ್ಲಿ ತಪ್ಪುಗಳಿವೆ ಎಂದು ಸರ್ಕಾರ ಒಪ್ಪಿಕೊಂಡಿದ್ದರೂ ಅದನ್ನೇ ಜಾರಿಗೆ ತರುತ್ತಿದೆ. ಮಕ್ಕಳ ಬದುಕಿನಲ್ಲಿ ಇವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಹರಿಹಾಯ್ದರು.

ನೀವು ಏನೇ ಹೋರಾಟ ಮಾಡಿಕೊಂಡರೂ ನಾವು ಈ ಪಠ್ಯವನ್ನೇ ಜಾರಿಗೆ ತರುತ್ತೇವೆ ಎಂದು ಸರ್ಕಾರ ಹೊರಟಿದೆ. ಈ ಕೆಟ್ಟ ಪಠ್ಯವನ್ನು ನೋಡಿ ಬ್ರಾಹ್ಮಣ ಸಮುದಾಯ ನಾಚಿಕೆಪಟ್ಟಿಕೊಳ್ಳಬೇಕು. ತಪ್ಪು ತಿದ್ದುಕೊಳ್ಳುವ ಪ್ರಜ್ಞೆ ಆ ಸಮುದಾಯಕ್ಕೆ ಬರಬೇಕು. ಈ ದೇಶದಲ್ಲಿ ಸ್ವಾತಂತ್ರ್ಯದ ಫಲವನ್ನು ಬ್ರಾಹ್ಮಣ ಎಂಬ ವಿಷದ ಹಲ್ಲು ಕಚ್ಚಿದೆ. ನಾವು ಈ ಸರ್ಕಾರವನ್ನು ಕಿತ್ತು ಬಿಸಾಡಬೇಕು. ದಂಗೆ ಏಳಬೇಕು ಎಂದು ಕರೆ ನೀಡಿದರು.

ಚಿಂತಕ ಎಲ್‌.ಎನ್.ಮುಕುಂದ್‌ರಾಜ್‌ ಮಾತನಾಡಿ, “ದೇಶ ಕಂಡ ಮಹಾನೀಯರನ್ನು ಅವಮಾನಿದ ವ್ಯಕ್ತಿ ರೋಹಿತ್ ಚಕ್ರತೀರ್ಥ. ಅಂಬೇಡ್ಕರ್‌, ಗಾಂಧಿ, ಕುವೆಂಪು ಅವರಿಗೆ ಅಗೌರವ ತೋರಿದವನ ನೇತೃತ್ವದಲ್ಲಿ ಪಠ್ಯ ರಚಿಸಲಾಗಿದೆ” ಎಂದು ವಿಷಾದಿಸಿದರು.

ಇದನ್ನೂ ಓದಿರಿ: ಪಠ್ಯದಲ್ಲಿ ಹಿಂದೂ ಹತ್ಯಾಕಾಂಡಗಳು ಸೇರಬೇಕು ವರದಿಗೆ ಇತಿಹಾಸ ತಜ್ಞರ ವಿರೋಧ

“ವಿದ್ವಾಂಸರು ರೂಪಿಸಿದ ಪಠ್ಯಪುಸ್ತಕಗಳನ್ನು ಮಕ್ಕಳು ಓದಬೇಕಿದೆ. ಮಹಾನೀಯರನ್ನು ಹೀಯಾಳಿಸುವ ರೋಹಿತ್‌ ಚಕ್ರತೀರ್ಥನನ್ನು ಬೆಂಬಲಿಸುವ ಜನಪ್ರತಿನಿಧಿಯನ್ನು ತಿಪಟೂರಿನ ಜನ ಸೋಲಿಸಬೇಕಿದೆ” ಎಂದು ಆಶಿಸಿದರು.

ಜಾಗೃತ ತಿಪಟೂರು ಅಧ್ಯಕ್ಷರಾದ ಸಿ.ಬಿ.ಶಶಿಧರ್‌ (ಟೂಡಾ) ಮಾತನಾಡಿ, “ತಿಪಟೂರಿನ ಜನರು ಬೆಂಬಲಿಸಿದ್ದರಿಂದ ಬೃಹತ್ ಬೆಂಬಲ ಹೋರಾಟಕ್ಕೆ ಸಿಕ್ಕಿದೆ. ಜನರು ಪಠ್ಯವನ್ನು ವಾಪಸ್‌ ಪಡೆಯುವಂತೆ ನಿರಂತರ ಒತ್ತಾಯಿಸಿದರೂ ಇವರು ಕಿವುಡರಾಗಿದ್ದಾರೆ ಏಕೆ? ಇವರು ಕಿವಿ ಇದ್ದರೂ ಕಿವುಡರು, ಕಣ್ಣಿದ್ದರೂ ಕುರುಡರು. ನಿದ್ದೆ ಮಾಡುತ್ತಿರುವ ರೀತಿ ವರ್ತಿಸುತ್ತಿದ್ದಾರೆ. ಹೋರಾಟದ ಮೂಲಕವೇ ತಿವಿದು ಅವರನ್ನು ಎಚ್ಚರಿಸಬೇಕಿದೆ” ಎಂದರು.

“ಇಷ್ಟೆಲ್ಲ ಹೋರಾಟ ಮಾಡುತ್ತಿದ್ದರೂ ಸರ್ಕಾರ ಪ್ರತಿಕ್ರಿಯೆ ನೀಡುತ್ತಿಲ್ಲ. ಕೆಲವೊಂದನ್ನು ತಿದ್ದುತ್ತೇವೆ ಎಂದು ಹೇಳಿ ಸುಮ್ಮನಾಗುತ್ತಿದ್ದಾರೆ. ಈ ಪಠ್ಯಪುಸ್ತಕಗಳನ್ನು ವಾಪಸ್‌ ತೆಗೆದುಕೊಂಡು ಹಳೆಯ ಪಠ್ಯ ಪುಸ್ತಕವನ್ನು ಮತ್ತೆ ಕೊಡಲು ಏಕೆ ಸಾಧ್ಯವಾಗುತ್ತಿಲ್ಲ? ಜನ ಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದ್ದೇವೆ ಎಂದು ಗೊತ್ತಿದ್ದರೂ ಇವರು ಸುಮ್ಮನಾಗಿರುವುದು ಏತಕ್ಕೆ?” ಎಂದು ಪ್ರಶ್ನಿಸಿದರು.

“ಈ ಜನಪ್ರತಿನಿಧಿಗಳು ನಾಗಪುರದ ಹಿಡಿತದಲ್ಲಿದ್ದಾರೆ. ತೊಗಲು ಗೊಂಬೆಯಾಗಿದ್ದಾರೆ. ಚಕ್ರತೀರ್ಥನ ಅರ್ಹತೆ ಏನು? ಹೈಸ್ಕೂಲ್ ಟೀಚರ್‌ ಆಗಲು ಕನಿಷ್ಠ ಡಿಗ್ರಿ ಮಾಡಿರಬೇಕು, ತರಬೇತಿ ಪಡೆದಿರಬೇಕು. ಮಕ್ಕಳ ಪಠ್ಯಪುಸ್ತಕ ರೂಪಿಸುವವನ ಅರ್ಹತೆಯಾದರೂ ಏನು?” ಎಂದು ಪ್ರಶ್ನಿಸಿದರು.

ಅಲ್ಲಮಪ್ರಭು ಮಠದ ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿ, “ಬಸವಣ್ಣ ಎಂದರೆ ಬ್ರಾಹ್ಮಣರಿಗೆ ಯಾಕೆ ಭಯ? ಬಸವ ಅನುಯಾಯಿಗಳನ್ನು ಕಂಡರೆ ಏಕೆ ಭಯ? ಅಂಬೇಡ್ಕರ್‌ ಹೆಸರು ಕಂಡರೆ ಇವರು ಓಡುವುದೇಕೆ? ಸಂವಿಧಾನ ಶಿಲ್ಪಿ ಎಂಬ ಸಾಲು ತೆಗೆದಿರುವುದು ಮನುಷ್ಯನ ತಲೆಯನ್ನೇ ಕತ್ತರಿಸಿದ್ದಕ್ಕೆ ಸಮ” ಎಂದು ಬೇಸರ ವ್ಯಕ್ತಪಡಿಸಿದರು.

“ಮನುವಾದಿಗಳು ಮರೆಮಾಚುತ್ತಿರುವ ವಿಷಯಗಳನ್ನು ವಿದ್ಯಾವಂತರು ತಿಳಿಸಿಕೊಡಬೇಕು. ಧರ್ಮದ ವಿಚಾರ ಶಾಲೆಗೆ ಬರಬಾರದು ಎಂದು ಹಿಜಾಬ್‌ ವಿವಾದದ ಸಂದರ್ಭದಲ್ಲಿ ಹೇಳಿದರು. ಎಲ್ಲ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು ಎಂದು ನಾವೂ ಒತ್ತಾಯಿಸಿದೆವು. ಆದರೆ ಪಠ್ಯಪುಸ್ತಕದಲ್ಲೇ ಧರ್ಮವನ್ನು ತುರುಕಲು ಹೊರಟಿದ್ದೀರಿ. ಇದು ಯಾವ ನ್ಯಾಯ?” ಎಂದು ಕೇಳಿದರು.

ನಿಮ್ಮ ಶ್ರೇಣಿಕೃತ ವ್ಯವಸ್ಥೆಯನ್ನು ವಿರೋಧಿಸಿ ನಾರಾಯಗುರುಗಳು ಶೂದ್ರರಿಗೆ ದೇವಾಲಯಗಳನ್ನು ಕಟ್ಟಿದರು. ಅಂಥವರ ವಿಚಾರಧಾರೆಗಳು ನಿಮಗೆ ಬೇಡ. ಮೌಢ್ಯದ ವಿಚಾರಗಳು ನಿಮಗೆ ಬೇಕಿದೆ. ಮೌಢ್ಯ ವಿರೋಧಿ ಕಾಯ್ದೆಯನ್ನು ವಿರೋಧಿಸಿದ ಪಕ್ಷ ನಿಮ್ಮದು ಎಂದು ಟೀಕಿಸಿದರು.

ಇದನ್ನೂ ಓದಿರಿ: ಎನ್‌ಇಪಿ: ಫೈಥಾಗರಸ್‌ ಥಿಯರಿ ಸುಳ್ಳು, ಸಂಸ್ಕೃತ, ಮನುಸ್ಮೃತಿ ಕಲಿಕೆಗೆ ಪ್ರಸ್ತಾಪ: ಕರ್ನಾಟಕ ಸರ್ಕಾರದ ಹೊಸ ಹೆಜ್ಜೆ

ಸಚಿವ ಬಿ.ಸಿ.ನಾಗೇಶ್ ಅವರು ವಿವಾದದ ಆರಂಭದಲ್ಲೇ ಕ್ಷಮೆ ಕೇಳಿದ್ದರೆ ಅವರ ಗೌರವ ಉಳಿಯುತ್ತಿತ್ತು. ಈಗ ನಿಮ್ಮನ್ನು ಜನ ಮನೆಗೆ ಕಳುಹಿಸಲಿದ್ದಾರೆ. ನಿಮ್ಮ ಮನುವಾದವನ್ನು, ಧರ್ಮದ ಮೌಢ್ಯತೆಯನ್ನು ನಮ್ಮ ಮೇಲೆ ಹೇರಲು ಹೊರಟರೆ ನಾವು ಕ್ಷಮಿಸುವುದಿಲ್ಲ ಎಂದು ಎಚ್ಚರಿಸಿದರು.

ಕಾಶ್ಮೀರಿ ಫೈಲ್ಸ್‌ ಸಿನಿಮಾ ನೋಡಿ ಮುಖ್ಯಮಂತ್ರಿಯವರ ಹೊಟ್ಟೆ ಉರಿಯುತ್ತದೆ. ಆದರೆ 12ನೇ ಶತಮಾನದಲ್ಲಿ ನಮ್ಮ ಹತ್ಯಾಕಾಂಡ ನಡೆಯಿತು. ನಾವು ಪಳೆಯುಳಿಕೆಯಾಗಿ ಉಳಿದಿದ್ದೀವಿ. ಆದರೆ ಇದ್ದಷ್ಟು ಮಂದಿ ವಿಚಾರಗಳನ್ನು ಪಸರಿಸುತ್ತಿದ್ದೇವೆ. ನಾಯಿಯ ಸಿನಿಮಾ ನೋಡಿ ಭಾವುಕರಾಗುತ್ತೀರಿ. ಖಂಡಿತ ನಾಯಿಗೂ ಮರುಗಬೇಕು. ಆದರೆ ವಿದ್ಯಾರ್ಥಿಗಳು, ಹಿರಿಯರು, ಸಾಹಿತಿಗಳು, ಪ್ರಜ್ಞಾವಂತರು ಮಾತನಾಡುತ್ತಿದ್ದಾರೆ. ಅವರ ವೇದನೆ ನಿಮಗೆ ಅರ್ಥವಾಗುತ್ತಿಲ್ಲವೇಕೆ? ಎಂದು ಪ್ರಶ್ನಿಸಿದರು.

ಅರೆಶಂಕರ ಮಠದ ಸ್ವಾಮೀಜಿ ಮಾತನಾಡಿ, “ಬಿ.ಸಿ.ನಾಗೇಶ್ ಅವರನ್ನು ಸಜ್ಜನರು ಎಂದುಕೊಂಡಿದ್ದೆವು. ಪಠ್ಯ ಪುಸ್ತಕದ ವಿಚಾರದಲ್ಲಿ ತಪ್ಪು ಮಾಡಿದ್ದಾರೆ. ಇದು ಬರೀ ತಿಪಟೂರಿನ ವಿಚಾರವಲ್ಲ, ಇಡೀ ದೇಶದ ವಿಚಾರ. ಅಕ್ಷರಗಳಿಗೆ ಕೇಸರಿ ಬಣ್ಣ ತುಂಬುವುದನ್ನು ನಿಲ್ಲಿಸಬೇಕು. ಕೇಸರಿ ತ್ಯಾಗದ ಸಂಕೇತ. ಆದರೆ ನೀವು ತ್ಯಾಜ್ಯವಾಗಿಸಿದ್ದೀರಿ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಶ್ವಮಾನವ ಕುವೆಂಪು ಹೋರಾಟ ಸಮಿತಿಯ ಅಧ್ಯಕ್ಷರಾದ ಜಿ.ಬಿ.ಪಾಟೀಲ್‌, “ತಿಪಟೂರು ಜನರ ಕೈಲಿ ಬಿ.ಸಿ.ನಾಗೇಶರ ಜೀವವಿದೆ. ಅವರಿಗೆ ಪಾಠ ಕಲಿಸುವ ಮೂಲಕ ಇಡೀ ಕರ್ನಾಟಕಕ್ಕೆ ತಿಪಟೂರಿನ ಜನ ಆದರ್ಶವಾಗಬೇಕು. ದೇಶ ವಿರೋಧಿ ನಾಗೇಶರಿಗೆ ಒಂದು ಗತಿ ಕಾಣಿಸುತ್ತೇವೆ ಎಂಬ ಸಂಕಲ್ಪ ಮಾಡಬೇಕು. ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಮಣಿಸಬೇಕು” ಎಂದು ಮನವಿ ಮಾಡಿದರು.

ತುಮಕೂರಿನಿಂದ ಜಾಥಾ ಆರಂಭ

ತಿಪಟೂರು ಚಲೋ ಅಂಗವಾಗಿ ತುಮಕೂರಿನಲ್ಲಿ ಜಾಥಾವನ್ನು ಉದ್ಘಾಟಿಸಲಾಯಿತು. ಕರ್ನಾಟಕ ಸರ್ಕಾರ ಮಾಜಿ ಅಡ್ವೋಕೇಟ್ ಜನರಲ್‌ ಪ್ರೊ.ರವಿವರ್ಮಾಕುಮಾರ್‌ ಜಾಥಾಕ್ಕೆ ಚಾಲನೆ ನೀಡಿದರು.

“ಪಠ್ಯಪುಸ್ತಕ ಪರಿಷ್ಕರಣೆಯಿಂದ ಒಂದು ಪೀಳಿಗೆಗೆ ನಾಶವಾಗುತ್ತಿದೆ. ಮಕ್ಕಳಿಗೆ ಅವಿದ್ಯೆ, ಅಶಾಂತಿ, ದ್ವೇಷ ಉಣಿಸುವ ಕೆಲಸ ಮಾಡಲಾಗುತ್ತಿದೆ” ಎಂದು ಪ್ರೊ.ರವಿವರ್ಮ ಕುಮಾರ್‌ ಹೇಳಿದರು.

ಪಠ್ಯಪುಸ್ತಕದ ಹೆಸರಲ್ಲಿ ರಾಜ್ಯದ ಉದ್ದಗಲಕ್ಕೂ ಆಗುತ್ತಿರುವ ಅನಾಹುತಗಳನ್ನು ತಪ್ಪಿಸಲು ಹೋರಾಟ ಅನಿವಾರ್ಯವಾಗಿದೆ. ಒಬ್ಬ ಶಿಕ್ಷಕ ಕೆಟ್ಟವನಾದರೆ ಒಂದು ತರಗತಿಗೆ ಸಮಸ್ಯೆಯಾಗುತ್ತದೆ. ವೈದ್ಯ ತಪ್ಪು ಮಾಡಿದರೆ ರೋಗಿಗೆ ತೊಂದರೆಯಾಗಬಹುದು. ಆದರೆ, ಒಂದು ಪಠ್ಯಪುಸ್ತಕದಲ್ಲಿನ ಅನಗತ್ಯ ವಿಚಾರಗಳಿಂದ ಇಡೀ ಒಂದು ಪೀಳಿಗೆ ತಪ್ಪು ಹಾದಿಯತ್ತ ಸಾಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯಪುಸ್ತಕ ಸರ್ಕಾರದ ಶಿಶುವಲ್ಲ, ರೋಹಿತ್ ಚಕ್ರತೀರ್ಥರ ಶಿಶು. ಅದನ್ನು ಸರ್ಕಾರ ತನ್ನ ಶಿಶು ಎಂದು ಜನರ ಮೇಲೆ ಹೇರಲು ಹೊರಟಿದೆ. ಅನೇಕ ಚಿಂತಕರು, ಸಮಾಜದಲ್ಲಿ ಸಹಭಾಳ್ವೆ ಸಾರುವ ವ್ಯಕ್ತಿಗಳ ಪಠ್ಯ ತೆಗೆದು ಹಾಕಲಾಗಿದೆ. ರೋಹಿತ್‌ ಚಕ್ರತೀರ್ಥ ಸಮಿತಿಯ ಸಮಸ್ಯರೆಲ್ಲ ಆರ್‌‌ಎಸ್‌ಎಸ್ ಸಂಘಟನೆಯವರು ಮತ್ತು ಬ್ರಾಹ್ಮಣರು. ಅವರು ಬರೆದ ವಿಷಯಗಳನ್ನೇ ಪಠ್ಯದಲ್ಲಿ ಇಡಲಾಗಿದೆ ಎಂದು ದೂರಿದರು.

ಇದನ್ನೂ ಓದಿರಿ: NEP| ಮೊಟ್ಟೆ ನೀಡಿದರೆ ಮಕ್ಕಳಲ್ಲಿ ತಾರತಮ್ಯ ವೃದ್ಧಿ: ಎನ್‌‌ಸಿಇಆರ್‌ಟಿಗೆ ರಾಜ್ಯ ಸರ್ಕಾರದ ಸಮಿತಿ ಪ್ರಸ್ತಾವನೆ

ಸರ್ಕಾರ ಸುಳ್ಳಿನ ಸರಮಾಲೆಯ ಮೇಲೆ ನಡೆಯತ್ತಿದೆ. ಗೃಹಮಂತ್ರಿ, ಮುಖ್ಯಮಂತ್ರಿ ಸುಳ್ಳು ಹೇಳುವ ಕೆಲಸ ಮಾಡುತ್ತಿದ್ದಾರೆ. ಇಂದು ಪ್ರಜಾಪ್ರಭುತ್ವದ ಅರ್ಥ ಬದಲಾಗಿದೆ. ಬ್ರಾಹ್ಮಣರಿಂದ, ಬ್ರಾಹ್ಮಣರಿಗಾಗಿ, ಬ್ರಾಹ್ಮಣರಿಗೋಸ್ಕರ ಪಠ್ಯಪುಸ್ತಕ ಮಾಡಿರುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿಂತಕ ಕೆ.ದೊರೈರಾಜ್‌, ‘ಸರ್ಕಾರೇತರ ಸಂಸ್ಥೆ ಮಾಡಿರುವ ನೀತಿಯನ್ನು ಸಾರ್ವಜನಿಕರ ಮೇಲೆ ಹೇರುವ ಕೆಲಸ ಮಾಡುತ್ತಿದ್ದಾರೆ. ಇದನ್ನೆಲ್ಲಾ ಬದಿಗಿರಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವ ಹಾಗೆ ಮಾಡಬೇಕು’ ಎಂದು ಒತ್ತಾಯಿಸಿದರು.

ಲೇಖಕಿಯರಾದ ಬಾ.ಹ.ರಮಾಕುಮಾರಿ, ಬಿ.ಸಿ.ಶೈಲಾ ನಾಗರಾಜ್‌, ಸ್ಲಂ ಸಮಿತಿಯ ಅಧ್ಯಕ್ಷ ಎ.ನರಸಿಂಹಮೂರ್ತಿ, ಸಿಐಟಿಯು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌, ಪ್ರಧಾನ ಕಾರ್ಯದರ್ಶಿ ಎನ್‌.ಕೆ.ಸುಬ್ರಮಣಿ ಹಾಜರಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...