Homeಚಳವಳಿಪೆಗಾಸಸ್‌ ಪಟ್ಟಿಯಲ್ಲಿದ್ದ ಪತ್ರಕರ್ತನನ್ನು ಅರೆಸ್ಟ್‌ ಮಾಡಿದ ಜಾರ್ಖಂಡ್ ಪೊಲೀಸರು!

ಪೆಗಾಸಸ್‌ ಪಟ್ಟಿಯಲ್ಲಿದ್ದ ಪತ್ರಕರ್ತನನ್ನು ಅರೆಸ್ಟ್‌ ಮಾಡಿದ ಜಾರ್ಖಂಡ್ ಪೊಲೀಸರು!

ಆದಿವಾಸಿಗಳ ಪರವಾಗಿ ಬರೆಯುತ್ತಿದ್ದ ಅವರನ್ನು ಯಾಕೆ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ಇನ್ನೂ ಕಾರಣ ತಿಳಿಸಿಲ್ಲ

- Advertisement -
- Advertisement -

ಜಾರ್ಖಂಡ್‌ನ ರಾಂಚಿ ಪೊಲೀಸರು ಸ್ವತಂತ್ರ ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್ ಅವರನ್ನು ಭಾನುವಾರ ಮಧ್ಯಾಹ್ನ ಬಂಧಿಸಿದ್ದಾರೆ. ಪೊಲೀಸ್ ಪಡೆಗಳು ಮುಂಜಾನೆ ರೂಪೇಶ್ ಕುಮಾರ್ ಸಿಂಗ್ ಅವರ ಮನೆಗೆ ತೆರಳಿ ಮಧ್ಯಾಹ್ನ 1 ಗಂಟೆಯವರೆಗೆ ಮನೆಯನ್ನು ಶೋಧಿಸಿದ್ದರು.

ಪೊಲೀಸರೊಂದಿಗೆ ಬಂಧನ ವಾರಂಟ್ ಇದ್ದರೂ ಮಧ್ಯಾಹ್ನ 1 ಗಂಟೆಯವರೆಗೆ ಅದನ್ನು ತೋರಿಸಲಿಲ್ಲ ಎಂದು ‘ಗೌರಿಲಂಕೇಶ್‌‌ನ್ಯೂಸ್‌’ ವರದಿ ಮಾಡಿದೆ. ಬೆಳಿಗ್ಗೆ 5.30 ಕ್ಕೆ ರೂಪೇಶ್ ಕುಟುಂಬ ಇನ್ನೂ ನಿದ್ದೆಯಲ್ಲಿದ್ದಾಗ ಪೊಲೀಸರು ಮನೆಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಮನೆಯನ್ನು ಮಧ್ಯಾಹ್ನ 1 ಗಂಟೆಯವರೆಗೂ ಪೊಲೀಸರು ಶೋಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಸರ್ಚ್ ವಾರೆಂಟ್ ಪ್ರಕಾರ, ಸೆರೈಕೆಲಾ-ಖರ್ಸಾನ್ವಾದ ಕಂದ್ರಾ ಪೊಲೀಸ್ ಠಾಣೆಯಿಂದ ಎಂಟು ತಿಂಗಳ ಹಿಂದಿನ ಪ್ರಕರಣ ವಿಚಾರವಾಗಿ ಹುಡುಕಾಟ ನಡೆಸಬೇಕಿತ್ತು. ಮಧ್ಯಾಹ್ನ 1 ಗಂಟೆಗೆ ವಸ್ತುಗಳನ್ನು ವಶಪಡಿಸಿಕೊಳ್ಳುವವರೆಗೆ ಪೊಲೀಸರು ಬಂಧನ ವಾರಂಟ್ ಬಗ್ಗೆ ಮಾಹಿತಿ ನೀಡಿರಲಿಲ್ಲ.

ಪೆಗಾಸಸ್‌ ಪಟ್ಟಿಯಲ್ಲಿದ್ದ ಪತ್ರಕರ್ತ ಜಾರ್ಖಂಡ್ ಪೊಲೀಸರಿಂದ ಅರೆಸ್ಟ್‌‌‌! | ನಾನುಗೌರಿ.ಕಾಂ
ಬಂಧನ

ವಶಪಡಿಸಿಕೊಳ್ಳುವ ಎಲ್ಲಾ ವಸ್ತುಗಳನ್ನು ಸಿದ್ಧಪಡಿಸಿ, ರೂಪೇಶ್ ಕುಮಾರ್ ಸಿಂಗ್ ಅವರನ್ನು ಬಂಧಿಸಿ ಬಂಧನ ವಾರಂಟ್ ತೋರಿಸಿ ನಂತರ ಕರೆದೊಯ್ಯಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಬೆಡ್‌ಶೀಟ್‌ಗಳು, ಮೊಬೈಲ್, ಎರಡು ಲ್ಯಾಪ್‌ಟಾಪ್‌ಗಳು ಮತ್ತು ಸೀಲ್ ಮಾಡಿದ ವಾಹನದ ದಾಖಲೆಗಳಿವೆ.

ಇದನ್ನೂ ಓದಿ: ಉತ್ತರ ಪ್ರದೇಶ: ಪತ್ರಕರ್ತ ಜುಬೇರ್‌‌ ವಿರುದ್ಧ ತನಿಖೆಗೆ ಎಸ್‌ಐಟಿ ರಚನೆ

ರೂಪೇಶ್ ಕುಮಾರ್ ಸಿಂಗ್ ಈಗಾಗಲೇ ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೇಂದ್ರ ಸರ್ಕಾರ ಅವರನ್ನು ಪೆಗಾಸಸ್ ಪಟ್ಟಿಯಲ್ಲಿ ಇರಿಸಿ, ಅವರ ಫೋನ್ ಅನ್ನು ಅಕ್ರಮವಾಗಿ ಮೇಲ್ವಿಚಾರಣೆ ಮಾಡುತ್ತಿತ್ತು. ಆದರೆ ರಾಜ್ಯ ಪೊಲೀಸರು ಅವರನ್ನು ಬಂಧಿಸಿರುವ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್ ಮನೆಯಲ್ಲಿ ಹುಡುಕಾಟ ನಡೆಸುತ್ತಿರುವ ಪೊಲೀಸರು

ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ರೂಪೇಶ್ ಸದಾ ದನಿಯೆತ್ತಿದ್ದಾರೆ. ಅವರು ‘ಭೂಮಿ, ನೀರು ಮತ್ತು ಅರಣ್ಯ ಹಕ್ಕುಗಳು(ಜಲ್, ಜಂಗಲ್ ಮತ್ತು ಜಮೀನ್) ಮತ್ತು ಆದಿವಾಸಿಗಳ ವಿರುದ್ಧದ ಸರ್ಕಾರದ ದೌರ್ಜನ್ಯಗಳ ಬಗ್ಗೆ ನಿರಂತವಾಗಿ ಬರೆಯುತ್ತಿದ್ದರು. ಅವರ ವರದಿಗಳು ವಿವರವಾದ ಪುರಾವೆಗಳನ್ನು ಆಧರಿಸಿ ವರದಿಯಾಗುತ್ತಿದ್ದವು. ಆದಿವಾಸಿ ಹಕ್ಕುಗಳ ಸಂಬಂಧಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಲ್ಲಿ ಅನೇಕ ಸಂಸ್ಥೆಗಳಿಗೆ ಈ ವರದಿಗಳು ಸಹಾಯ ಮಾಡಿದ್ದವು.

ಅರೆಸ್ಟ್‌ ವಾರೆಂಟ್

ಎರಡು ದಿನಗಳ ಹಿಂದೆ ಜಾರ್ಖಂಡ್‌ನ ಗಿರ್ಡಿಹ್ ಜಿಲ್ಲೆಯಲ್ಲಿ ಸ್ಥಾಪಿಸಲಾದ ಕಾರ್ಖಾನೆಗಳ ಹೊಗೆ ಮತ್ತು ಬೂದಿಯಿಂದ ಹಾನಿಗೊಳಗಾದ ಪ್ರದೇಶಗಳ ಕುರಿತು ಅವರು ಇತ್ತೀಚೆಗೆ ವರದಿ ಮಾಡಿದ್ದರು. ಈ ವರದಿಯಲ್ಲಿ ಆ ಪ್ರದೇಶದಲ್ಲಿನ ಕಾರ್ಖಾನೆಗಳು ಅಲ್ಲಿನ ಜನರ ಅನಾರೋಗ್ಯಕ್ಕೆ ವಿಪತ್ತುಗಳಿಗೆ ಹೇಗೆ ಕಾರಣವಾಗಿವೆ ಎಂಬುದನ್ನು ನಿರೂಪಿಸಿದ್ದವು.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಛತ್ತೀಸ್‌ಘಡ ಪೊಲೀಸರಿಂದ ಪತ್ರಕರ್ತನ ಬಂಧನ ತಪ್ಪಿಸಲು ತಮ್ಮ ವಶಕ್ಕೆ ಪಡೆದ ಯುಪಿ ಪೊಲೀಸರು

ರೂಪೇಶ್ ಬಂಧನವು ಸುಪ್ರೀಂ ಕೋರ್ಟ್ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲಿ, ಪೊಲೀಸರು ವಿಚಾರಣೆ ನಡೆಸಿ ಬಂಧಿಸುವ ಮೊದಲು ಸಂಬಂಧಪಟ್ಟ ವ್ಯಕ್ತಿಗೆ ತಿಳಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಈ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಗೌರಿ ಲಂಕೇಶ್ ನ್ಯೂಸ್ ವರದಿ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌ | Naanu Gauri

ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ: ಯೋಗೇಂದ್ರ ಯಾದವ್‌

0
ದೇಶದ ತುಂಬ ಹರಡಿರುವ ದ್ವೇಷ ರಾಜಕಾರಣವನ್ನು ಹಿಮ್ಮೆಟ್ಟಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಬೇಕಿದೆ ಎಂದು ಸ್ವರಾಜ್ ಪಕ್ಷದ ಮುಖ್ಯಸ್ಥ, ರೈತ ಹೋರಾಟಗಾರ ಯೋಗೇಂದ್ರ ಯಾದವ್‌ ಬುಧವಾರ ಬೆಂಗಳೂರಿನಲ್ಲಿ ಹೇಳಿದ್ದಾರೆ. ಅವರು ‘ಕರ್ನಾಟಕದ ಜನ ಯಾಕೆ...