Homeಮುಖಪುಟರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಛತ್ತೀಸ್‌ಘಡ ಪೊಲೀಸರಿಂದ ಪತ್ರಕರ್ತನ ಬಂಧನ ತಪ್ಪಿಸಲು ತಮ್ಮ...

ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ: ಛತ್ತೀಸ್‌ಘಡ ಪೊಲೀಸರಿಂದ ಪತ್ರಕರ್ತನ ಬಂಧನ ತಪ್ಪಿಸಲು ತಮ್ಮ ವಶಕ್ಕೆ ಪಡೆದ ಯುಪಿ ಪೊಲೀಸರು

- Advertisement -
- Advertisement -

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ತಿರುಚಿದ್ದ ಸುದ್ದಿ ಪ್ರಸಾರ ಮಾಡಿದ್ದ ಝೀ ನ್ಯೂಸ್‌ ನಿರೂಪಕ ರೋಹಿತ್ ರಂಜನ್ ರನ್ನು ನೋಯ್ಡಾ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.

ಮೊದಲು ಛತ್ತೀಸ್‌ಘಡ ರಾಜ್ಯದಲ್ಲಿ ಝೀ ನ್ಯೂಸ್ ಮತ್ತು ಅದರ ನಿರೂಪಕನ ವಿರುದ್ಧ ದೂರು ದಾಖಲಾಗಿತ್ತು. ಹಾಗಾಗಿ ಛತ್ತೀಸ್‌ಘಡ ಪೊಲೀಸರು ಆತನ ಬಂಧನಕ್ಕೆ ಮುಂದಾಗಿದ್ದರು. ಆದರೆ ಆ ಬಂಧನವನ್ನು ತಪ್ಪಿಸಲು ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದು ರಕ್ಷಣೆ ನೀಡಿದ್ದಾರೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಹತ್ಯೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮಿಸಿದ್ದು, ಹಂತಕರನ್ನು ‘ಮಕ್ಕಳು’ ಎಂದು ಹೇಳಿದ್ದಾರೆ ಎಂದು ತಿರುಚಿದ ಸುಳ್ಳು ಸುದ್ದಿಯನ್ನು ಝೀ ನ್ಯೂಸ್ ಪ್ರಸಾರ್ ಮಾಡಿತ್ತು. ನಿರೂಪಕ ರೋಹಿತ್ ರಂಜನ್ “ರಾಹುಲ್ ಗಾಂಧಿಯ ಪೂರ್ವಗ್ರಹವನ್ನು ಮತ್ತೊಮ್ಮೆ ನೋಡಿ. ಉದಯಪುರದ ಆರೋಪಿಗಳನ್ನು ಅವರು ಮಕ್ಕಳು ಎಂದು ಕರೆದಿದ್ದಾರೆ. ಅವರು ಮಕ್ಕಳೊ ಅಥವಾ ಆತಂಕವಾದಿಗಳೊ” ಎಂದು ಹೇಳಿ ದುರುದ್ದೇಶಪೂರಿತವಾಗಿ ಕೇರಳದ ವಯನಾಡ್‌ನ ಸುದ್ದಿಯನ್ನು ಲಿಂಕ್ ಮಾಡಿ ಮಾಧ್ಯಮದಲ್ಲಿ ತಪ್ಪಾಗಿ ವರದಿ ಮಾಡಿದ್ದರು.

ಕನೌಜ್‌ನ ಬಿಜೆಪಿ ಸಂಸದ ಸುಬ್ರತಾ ಪಾಠಕ್, ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ರಾಜವರ್ಧನ್ ರಾಥೋಡ್, ಬಿಜ್ನೋರ್‌ನ ಚಂದ್‌ಪುರ ವಿಧಾನಸಭೆಯ ಶಾಸಕ ಕಮಲೇಶ್ ಸೈನಿ ಸೇರಿದಂತೆ ಹಲವರು ಈ ವಿಡಿಯೋವನ್ನು ಹಂಚಿಕೊಂಡಿದ್ದರು.

ಇದರ ನಂತರ ಕಾಂಗ್ರೆಸ್‌ ಪಕ್ಷದ ನಾಯಕರು ಮತ್ತು ಸಮಾಜಿಕ ಮಾಧ್ಯಮಗಳ ಬಳಕೆದಾರರು ಝೀ ನ್ಯೂಸ್ ತಪ್ಪಾಗಿ ವರದಿ ಮಾಡಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಷ್ಟೆ ಅಲ್ಲದೆ, ಛತ್ತೀಸ್‌ಗಡದ ರಾಯಪುರದಲ್ಲಿ ಝೀ ನ್ಯೂಸ್ ಮತ್ತು ನಿರೂಪಕ ರಂಜಿತ್ ರಂಜನ್ ವಿರುದ್ಧ ಎಫ್‌ಐಆರ್‌ ಕೂಡಾ ದಾಖಲಾಗಿತ್ತು.

ವಾಸ್ತವದಲ್ಲಿ ರಾಹುಲ್ ಗಾಂಧಿ ಉದಯಪುರದ ಹಂತಕರನ್ನು ಎಲ್ಲಿಯೂ ಮಕ್ಕಳು ಎಂದು ಕರೆದಿಲ್ಲ ಮತ್ತು ಅವರನ್ನು ಕ್ಷಮಿಸಿಲ್ಲ. ಬದಲಿಗೆ “ಉದಯಪುರದಲ್ಲಿ ನಡೆದ ಭೀಕರ ಹತ್ಯೆಯಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಕ್ರೌರ್ಯದಿಂದ ಭಯೋತ್ಪಾದನೆಯನ್ನು ಹರಡುವವರಿಗೆ ತಕ್ಷಣ ಶಿಕ್ಷೆಯಾಗಬೇಕು.ನಾವೆಲ್ಲರೂ ಒಟ್ಟಾಗಿ ದ್ವೇಷವನ್ನು ಸೋಲಿಸಬೇಕು. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ, ದಯವಿಟ್ಟು ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳಿ” ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಸುಳ್ಳು ಸುದ್ದಿ ಪ್ರಸಾರ; ಕ್ಷಮೆಯಾಚಿಸಿ, ಇಬ್ಬರು ಸಿಬ್ಬಂದಿಗಳನ್ನು ವಜಾ ಮಾಡಿದ್ದೇವೆಂದ ‘ಝೀ ನ್ಯೂಸ್’

ತಮ್ಮ ತಪ್ಪಿಗೆ ಝೀ ನ್ಯೂಸ್ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದು, ತಪ್ಪಿಗೆ ಕಾರಣರಾದ ಇಬ್ಬರು ಸಿಬ್ಬಂದಿಗಳನ್ನು ಹುದ್ದೆಯಿಂದ ವಜಾ ಮಾಡಿದ್ದೇವೆ ಎಂದು ಹೇಳಿದೆ.

ಈ ತಿರುಚಿದ ಸುದ್ದಿಯನ್ನು ಪದೇ ಪದೇ ಪ್ರಸಾರ ಮಾಡಿದ ಆರೋಪಕ್ಕಾಗಿ ಅವರನ್ನು ಛತ್ತೀಸ್‌ಗಡ ಪೊಲೀಸರು ಬಂಧಿಸಲು ಉತ್ತರ ಪ್ರದೇಶದ ಪೊಲೀಸರ ಅಡ್ಡಗಾಲು ಹಾಕಿದ್ದಾರೆ. 2018ರಲ್ಲಿ ಚಲನಚಿತ್ರದ ಫೋಟೊವೊಂದನ್ನು ಟ್ವೀಟ್ ಮಾಡಿದ್ದಕ್ಕಾಗಿ ಮತ್ತೊಬ್ಬ ಪತ್ರಕರ್ತ ಮೊಹಮ್ಮದ್ ಜುಬೇರ್‌ರನ್ನು ಒಂದು ವಾರದಿಂದ ಬಂಧನದಲ್ಲಿಡಲಾಗಿದೆ. ಇಂತಹ ತಾರತಮ್ಯವೇಕೆ ಎಂಬ ಪ್ರಶ್ನೆ ಎದ್ದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...