Homeಮುಖಪುಟಸರ್ಕಾರದ ವಿರುದ್ಧ ಅಸಮಾಧಾನ: ಮತ್ತೊಬ್ಬ ಐಎಎಸ್ ಅಧಿಕಾರಿಯ ರಾಜೀನಾಮೆ

ಸರ್ಕಾರದ ವಿರುದ್ಧ ಅಸಮಾಧಾನ: ಮತ್ತೊಬ್ಬ ಐಎಎಸ್ ಅಧಿಕಾರಿಯ ರಾಜೀನಾಮೆ

- Advertisement -
- Advertisement -

ತಮ್ಮ ಸಾಮರ್ಥ್ಯವನ್ನು ಕಡೆಗಣಿಸಿ, ಉಪಯೋಗಕ್ಕೆ ಬಾರದ ಹುದ್ದೆಗಳಿಗೆ ನೇಮಿಸುವ ಮೂಲಕ ತಮ್ಮನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿರುವ 2008ರ ಬ್ಯಾಚ್‌ನ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆ (ಎಂಇಡಿಡಿ)ಯಲ್ಲಿ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ದೌಲತ್ ದೇಸಾಯಿ ಅವರು ಹಿಂದೆ ಬಿದ್ದಿರಲು ಬಹಳ ಬೇಸರವಾಗುತ್ತಿದೆ ಎಂದು ಹೇಳುವ ಮೂಲಕ ರಾಜೀನಾಮೆ ಸಲ್ಲಿಸಿದ್ದಾರೆ.

ಅವರು MEDD ಗೆ ವರ್ಗಾವಣೆಯಾಗುವ ಮೊದಲು, ಕೊಲ್ಲಾಪುರದ ಜಿಲ್ಲಾಧಿಕಾರಿ ಆಗಿದ್ದರು ಮತ್ತು ಆ ಜಿಲ್ಲೆಯಲ್ಲಿ 2019 ರಲ್ಲಿ ಸಂಭವಿಸಿದ್ದ ಭಾರೀ ಪ್ರವಾಹವನ್ನು ನಿಭಾಯಿಸಿದ್ದರು. ಆನಂತರ ಅವರನ್ನು ಎಂಇಡಿಡಿಗೆ ವರ್ಗಾವಣೆ ಮಾಡಲಾಗಿತ್ತು. ಅದು ಅವರಿಗೆ ಇರಿಸು ಮುರಿಸು ತಂದಿತ್ತು.

ತಮ್ಮ ರಾಜೀನಾಮೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಧೀರ್ಘ ಪೋಸ್ಟ್ ಹಾಕಿರುವ ಅವರು, “ಮಿಶ್ರ ಭಾವನೆಗಳ ನಡುವೆ, ನಾನು ರಾಜೀನಾಮೆ ನೀಡಿ, ಸ್ವಯಂಪ್ರೇರಣೆಯಿಂದ ಹೊರನಡೆದಿದ್ದೇನೆ. ಉಕ್ಕಿನ ಚೌಕಟ್ಟು ಎಂದು ಕರೆಯಲ್ಪಡುವ ಭಾರತೀಯ ಆಡಳಿತ ಸೇವೆಯ ಅಧಿಕಾರ, ಭದ್ರತೆ, ಸ್ಥಾನಮಾನ ಮತ್ತು ಪ್ರತಿಷ್ಠೆಯನ್ನು ಬಿಟ್ಟುಬಿಟ್ಟಿದ್ದೇನೆ! ಏಕೆಂದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿ ಅತ್ಯಂತ ಸವಾಲಿನ ಅಧಿಕಾರಾವಧಿಯನ್ನು ಸಾಧಿಸಿದ ನಂತರವೂ ಹಿತ್ತಲಿನಲ್ಲಿ ಬಿದ್ದಿರುವುದು ನನಗೆ ಖಿನ್ನತೆಯನ್ನುಂಟು ಮಾಡಿದೆ. ಆ ಕಾರಣದಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದಿದ್ದಾರೆ.

“ನನ್ನ ಅಧಿಕಾರಾವಧಿಯಲ್ಲಿ ಸ್ಥಾಪಿತ ಮತ್ತು ಶಕ್ತಿಶಾಲಿ ಪಟ್ಟಭದ್ರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿ, ದುರ್ಬಲ ಮತ್ತು ನಿರ್ಗತಿಕರ ಧ್ವನಿಯನ್ನು ಯಾವಾಗಲೂ ಕೇಳುತ್ತಿದ್ದೆ. ನನ್ನ ಕೈಗಳು ನಡುಗಿದವು, ಆದರೆ ಅವರ ಪರವಾಗಿ ನಿರ್ಧಾರಗಳು ಆಗಲಿಲ್ಲ. ಅದಕ್ಕಾಗಿ ನನ್ನ ವಿರುದ್ಧ ಬಂದ ಟೀಕೆಗಳನ್ನು ಸಂತೋಷದಿಂದ ಎದುರಿಸಿದೆ. ಸಮಾಜದ ಒಳಿತಿಗಾಗಿ ನಿಯಮಗಳು ಮತ್ತು ನಿಬಂಧನೆಗಳ ಚೌಕಟ್ಟಿನೊಳಗೆ ನಾನು ಏನು ಮಾಡಬಹುದೋ ಅದನ್ನು ಮಾಡಿದ್ದೇನೆ. ಸಾರ್ವಜನಿಕ ಹಿತಾಸಕ್ತಿ ಅಪಾಯದಲ್ಲಿದ್ದರೆ ತಾನು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.

ಇದನ್ನೂ ಓದಿ: ದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು,…

ಈ ಹಿಂದೆ ಸಸಿಕಾಂತ್ ಸೆಂಥಿಲ್ ಮತ್ತು ಕಣ್ಣನ್ ಗೋಪಿನಾಥನ್ ಸಹ ಮೋದಿ ಸರ್ಕಾರ ನೀತಿಗಳಿಂದ ಬೇಸತ್ತು ತಮ್ಮ ಐಎಎಸ್‌ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...