Homeಆರೋಗ್ಯಬಿಜೆಪಿ ಸರ್ಕಾರಕ್ಕೆ ಒಂದು ವರ್ಷ; ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳವುದು ಇನ್ಯಾವಾಗ?

ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ; ಖಾಸಗಿ ಆಸ್ಪತ್ರೆಗಳನ್ನು ಸ್ವಾಧೀನಪಡಿಸಿಕೊಳ್ಳವುದು ಇನ್ಯಾವಾಗ?

ಇಂತಹ ಒಂದು ಗಂಭೀರ ಸಾಂಕ್ರಾಮಿಕದ ಮಧ್ಯೆಯೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಲು ನಿರಾಕರಿಸುತ್ತಿರುವ ರಾಜಕೀಯ ವರ್ಗ ನಮ್ಮನ್ನು ಆಳುತ್ತಿರುವುದು ನಮ್ಮ ದುರಾದೃಷ್ಟ.

- Advertisement -
- Advertisement -

ಅನೇಕ ವರ್ಷಗಳಿಂದ ಆರೋಗ್ಯ ಸೇವೆಗೆ ಅತಿ ಕಡಿಮೆ ಹಣ ಮೀಸಲಿಟ್ಟು ವ್ಯಯಿಸಿದ್ದರ ಕೆಟ್ಟ ಪರಿಣಾಮವನ್ನು ಕರ್ನಾಟಕ ಇಂದು ಕಾಣುತ್ತಿದೆ. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದ ಮೇಲೂ ಇದರಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. 2020-21 ರ ಬಜೆಟ್ಟಿನಲ್ಲಿ, ಆರೋಗ್ಯಕ್ಕೆ ಮೀಸಲಿಟ್ಟ ಹಣ 4.3% ಆಗಿತ್ತು. ಅಂದರೆ ಹಿಂದಿನ ಸರಕಾರಗಳು ಮೀಸಲಿಟ್ಟಷ್ಟೇ ಹಣವನ್ನು ಈ ಹೊಸ ಸರಕಾರವೂ ಮೀಸಲಿಟ್ಟಿತು. ಇದು ಇತರ ಎಲ್ಲಾ ರಾಜ್ಯಗಳ ಸರಾಸರಿಯಾದ 5.3% ಕ್ಕೆ ಹೋಲಿಸಿದರೆ ಬಹಳ ಕಡಿಮೆ. ಕಳೆದ ವರ್ಷ ಯಡಿಯೂರಪ್ಪನವರು ಅಧಿಕಾರ ಸ್ವೀಕರಿಸಿದಾಗ ನೀತಿ ಆಯೋಗವು ರಾಜ್ಯವಾರು ಆರೋಗ್ಯ ಅಂಕಿಅಂಶಗಳ ಎರಡನೇ ಸುತ್ತಿನ ವರದಿಯನ್ನು ಬಿಡುಗಡೆ ಮಾಡಿತು. ಈ ವರದಿಯು, ಕರ್ನಾಟಕದ ಪ್ರಾಥಮಿಕ ಆರೋಗ್ಯ ಸೇವೆಯು ದುರ್ಬಲವಾಗಿರುವುದನ್ನು ಬಹಿರಂಗಗೊಳಿಸಿತು.

ಪ್ರಾಥಮಿಕ ಆರೋಗ್ಯ ಸೇವೆಯೇ ರೋಗಗಳನ್ನು ತಡೆಯುವುದರಲ್ಲಿ ಮತ್ತು ಆರೋಗ್ಯ ಸುಧಾರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆರೋಗ್ಯ ಉಪಕೇಂದ್ರಗಳಲ್ಲಿ ಎಎನ್‍ಎಮ್‍ಗಳ (Auxiliary Nursing Midwifery) ಹುದ್ದೆಗಳ ಖಾಲಿ ಪ್ರಮಾಣ 33.4% ಕ್ಕೆ ಏರಿದೆ. ಇದರಿಂದ ಬಾಣಂತಿಯರ ಮತ್ತು ಮಕ್ಕಳ ಆರೋಗ್ಯ ಸೇವೆಯಯಲ್ಲಿ ವ್ಯತ್ಯಯ ಉಂಟಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮತ್ತು ಸಿಎಚ್‍ಸಿಗಳ (ಸಮುದಾಯ ಆರೋಗ್ಯ ಕೇಂದ್ರಗಳು) ಬೆನ್ನೆಲುಬಾಗಿ ದುಡಿಯುವ ಸ್ಟಾಫ್ ನರ್ಸ್‍ಗಳ ಹುದ್ದೆಗಳಲ್ಲಿ ಸುಮಾರು 22% ಹುದ್ದೆಗಳು ಖಾಲಿಯಾಗಿ ಉಳಿದುಕೊಡಿವೆ. ಸಿಎಚ್‍ಸಿಗಳಲ್ಲಿ ಕೇವಲ 45% (ಆರೋಗ್ಯ ತುರ್ತಿನಲ್ಲಿ ಜೀವ ಉಳಿಸಲು ಪ್ರಮುಖ ಪಾತ್ರ ವಹಿಸುವ ಆರೋಗ್ಯ ಕೇಂದ್ರಗಳು) ಮಾತ್ರ ಕಾರ್ಯನಿರ್ವಹಿಸುತ್ತಿದ್ದವು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ 37.7% ವಿಶೇಷಜ್ಞರ ಹುದ್ದೆಗಳು ಖಾಲಿಯಿದ್ದವು. ಹಾಗಾಗಿ, ನವಜಾತ ಶಿಶು ಮರಣದ ಪ್ರಮಾಣ 18% ಹಾಗೂ ಹೆಣ್ಣು-ಗಂಡು ಶಿಶುಗಳ ಲೈಂಗಿಕ ಅನುಪಾತದ ಪ್ರಮಾಣ 935 ಕ್ಕೆ ನಿಂತನೀರಾಗಿರುವುದು ಆಶ್ಚರ್ಯವಲ್ಲ. ಸಾಂಸ್ಥಿಕ ಹೆರಿಗೆಗಳ ಪ್ರಮಾಣ ಕೇವಲ 79.6% ಆಗಿತ್ತು, ಅದು ಸದ್ಯದ ಗುರಿಯಾದ 90%ಕ್ಕಿಂತ ಕಡಿಮೆ ಹಾಗೂ ಟಿಬಿ ರೋಗದ ಚಿಕಿತ್ಸೆಯ ಯಶಸ್ಸಿನ ಪ್ರಮಾಣ ಕೇವಲ 79.7% ಆಗಿ ಉಳಿದಿದೆ.

ಪ್ರಾಥಮಿಕ ಆರೋಗ್ಯ ಸೇವೆಯು ಯಾವುದೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಅಡಿಪಾಯ. ಹಾಗಾಗಿ ಒಂದು ದುರ್ಬಲ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯು ರಾಜ್ಯದಲ್ಲಿ ಕೋವಿಡ್-19 ನಂತಹ ಸಾಂಕ್ರಾಮಿಕವನ್ನು ತಡೆಗಟ್ಟುವಲ್ಲಿ ಯಾವ ರೀತಿ ಭಾಧಿಸುತ್ತೆ ಎಂಬುದು ಈಗ ಜಗಜ್ಜಾಹಿರವಾಗಿದೆ. ಇಷ್ಟಾದರೂ, ಯಡಿಯೂರಪ್ಪನವರ ಸರಕಾರವು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಿಗೊಟ್ಟು, ಖಾಸಗಿ ಆರೋಗ್ಯ ವಲಯವನ್ನು ಉತ್ತೇಜನ ನೀಡುವ ಅಪಾಯಕಾರಿ ನೀತಿಗಳನ್ನು ಅನುಸರಿಸುವುದನ್ನು ನಿಲ್ಲಿಸಿಲ್ಲ. ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನೀತಿ ಆಯೋಗವು ಸೂಚಿಸಿರುವಂತೆ, ಜಿಲ್ಲಾ ಸರಕಾರಿ ಆಸ್ಪತ್ರೆಯ ನಿರ್ವಹಣೆಯಲ್ಲಿ ಖಾಸಗಿ ವಲಯವನ್ನು ತಂದು, ಸರಕಾರಿ ಆಸ್ಪತ್ರೆಗಳ ಖಾಸಗಿಕರಣಗೊಳಿಸುವ ಪ್ರಯತ್ನ ನಡೆಯುತ್ತಿದೆ. ಪ್ರಸಕ್ತ ಸರಕಾರದ ಹೆಚ್ಚಿನ ಆರೋಗ್ಯದ ಯೋಜನೆಗಳು ಪ್ರಾಥಮಿಕ ಮತ್ತು ಎರಡನೇ ಹಂತದ ಅರೋಗ್ಯ ಸೇವೆಗಳ ಮೇಲ್ಪಟ್ಟ ಮೂರನೇ ಹಂತದ ಆರೋಗ್ಯ ಸೇವೆಯ ಮೇಲೆಯೇ ಕೇಂದ್ರೀಕೃತವಾಗಿವೆ ಹಾಗೂ ಪಿಪಿಪಿ (ಖಾಸಗಿ, ಸರಕಾರಿ ಸಹಯೋಗ)ದ ಮಾದರಿಯಲ್ಲಿ ಯೋಜಿಸಲಾಗಿದೆ. ಅದರಲ್ಲಿ ಆರೋಗ್ಯ ತುರ್ತುಗಳನ್ನು ನಿರ್ವಹಿಸಲು 5 ತಾಲೂಕು ಆಸ್ಪತ್ರೆಗಳು, ಮಂಗಳೂರಿನಲ್ಲಿ ಮಕ್ಕಳ ಆರೋಗ್ಯ ಸೇವೆಯ ಪ್ರಾದೇಶಿಕ ಉನ್ನತ ಕೇಂದ್ರ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ತೀವ್ರ ನಿಘಾ ಘಟಕಗಳನ್ನು ಸ್ಥಾಪಿಸುವುದಾಗಿದೆ. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಎಲ್ಲಾ ಯೋಜನೆಗಳಲ್ಲಿ ಉಪಕರಣದ ಖರೀದಿಯಲ್ಲಿ ಮತ್ತು ನಿರ್ಮಾಣದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಬೇಕಾಗುತ್ತದೆ ಹಾಗೂ ಅದರಿಂದ ಭ್ರಷ್ಟಾಚಾರ ಮಾಡುವ ಅವಕಾಶ ಇರುತ್ತದೆ. ಅಂದರೆ, ವಿಶೇಷತಜ್ಞರ ಹುದ್ದೆಯನ್ನು ಭರ್ತಿ ಮಾಡದೇ ಐಸಿಯುಗಳನ್ನು ರಚಿಸುವುದು, ಎಎನ್‍ಎಮ್ ಮತ್ತು ಸ್ಟಾಫ್ ನರ್ಸಗಳ ಹುದ್ದೆಗಳನ್ನು ಭರ್ತಿ ಮಾಡದೇ ಪಿಎಚ್‍ಸಿಗಳಲ್ಲಿ ದೂರವಾಣಿ ಮೂಲಕ ಆರೋಗ್ಯ ಸೇವೆ ನೀಡುವುದು ಇತ್ಯಾದಿಗಳ ಅರ್ಥ ಸಾಯುತ್ತಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ತೇಪೆ ಹೆಚ್ಚಿದಂತೆ ಆಗುತ್ತೆ ಹೊರತು ಮತ್ತೇನಿಲ್ಲ.

ಇನ್ನು ಗಾಯಕ್ಕೆ ಬರೆ ಹಾಕಿದಂತೆ, ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸಂಬಳದಲ್ಲಿ ಕಡಿತ ಮಾಡಲಾಗಿದೆ. 3-5 ವರ್ಷಗಳ ಕಾಲ ಸೇವೆ ಸಲ್ಲಿಸಿದ ಆರೋಗ್ಯ ಸೇವೆಯ ಕಾರ್ಮಿಕರನ್ನು ಕಾಯಂ ಮಾಡಿಕೊಳ್ಳಲು ಸರಕಾರ ನಿರಾಕರಿಸಿದೆ ಮತ್ತು ‘ಸಮಾನ ಕೆಲಸಕ್ಕೆ ಸಮಾನ ವೇತನ’ದ ಬೇಡಿಕೆಗೂ ಕಿವಿಗೊಟ್ಟಿಲ್ಲ. ಈ ಸಾಂಕ್ರಾಮಿಕದ ನಡುವೆಯೇ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವೈದ್ಯರು, ಸ್ಟಾಫ್ ನರ್ಸ್‍ಗಳು ಹಾಗೂ ಲ್ಯಾಬ್ ಟೆಕ್ನಿಷಿಯನ್ನರ ವೇತನಗಳನ್ನು ತಡೆಹಿಡಿಯಲಾಗಿದೆ. ಇದನ್ನು ನೋಡಿದರೆ, ಈ ಸರಕಾರವು ಇಂತಹ ಬಿಕ್ಕಟ್ಟಿನ ನಡುವೆಯೇ ತನ್ನದೇ ಆರೋಗ್ಯ ಸೇವೆಯ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ನಾಶ ಮಾಡುತ್ತಿದೆ ಎಂದು ಕಾಣುತ್ತದೆ.

ಇಂತಹ ಕೆಟ್ಟ ಹೆಜ್ಜೆಗಳು ಈಗ ತಮ್ಮ ಪರಿಣಾಮಗಳನ್ನು ತೋರಿಸುತ್ತಿವೆ. ಸಾಂಕ್ರಾಮಿಕ ರೋಗಗಳು ಹೆಡೆಬಿಚ್ಚಿದಾಗ ಕೇವಲ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ನಂಬಿಕೊಳ್ಳಬಹುದು ಎಂಬುದು ಈಗ ಸ್ಪಷ್ಟವಾಗುತ್ತಿದೆ ಹಾಗೂ ಖಾಸಗಿ ವಲಯಕ್ಕೆ ಎಷ್ಟೇ ‘ಪ್ರೋತ್ಸಾಹ’ಗಳನ್ನು ನೀಡಿದರೂ ಅದು ತನ್ನ ಹಿತಾಸಕ್ತಿಯನ್ನು ಮಾತ್ರ ನೋಡಿ, ಸಾರ್ವಜನಿಕರ ರಕ್ಷಣೆಗೆ ಬರಲಾರದು ಎಂಬುದೂ ಖಚಿತವಾಗಿದೆ. ಪರಿಸ್ಥಿತಿ ಎಷ್ಟೇ ಗಂಭೀರವಾಗಿರಲಿ, ಖಾಸಗಿ ಆರೋಗ್ಯ ಕ್ಷೇತ್ರವು ತನ್ನ ಲಾಭದ ಚಿಂತೆಯನ್ನಷ್ಟೇ ಮಾಡುತ್ತದೆ ಮತ್ತು ತನ್ನ ಸ್ವಾರ್ಥ ಹಿತಾಸಕ್ತಿಗಳನ್ನು ಕಾಪಾಡಲು ದುಡಿಯುತ್ತ, ಸರಕಾರವು ಖಾಸಗಿ ವಲಯಕ್ಕೆ ಮಾಡಿದ ‘ಅನ್ಯಾಯ’ಗಳ ಬಗ್ಗೆ ದೂರುವುದು, ಗಲಾಟೆ ಜಗಳ ಮಾಡುವುದನ್ನು ಮುಂದುವರೆಸುತ್ತದೆ ಎಂಬುದು ಸಾಬೀತಾಗಿದೆ.

ಇಂತಹ ಒಂದು ಗಂಭೀರ ಸಾಂಕ್ರಾಮಿಕದ ಮಧ್ಯೆಯೂ ಸಾರ್ವಜನಿಕರ ಹಿತಾಸಕ್ತಿಯನ್ನು ಕಾಪಾಡಲು ನಿರಾಕರಿಸುತ್ತಿರುವ ರಾಜಕೀಯ ವರ್ಗ ನಮ್ಮನ್ನು ಆಳುತ್ತಿರುವುದು ನಮ್ಮ ದುರಾದೃಷ್ಟ. ಉದಾಹರಣೆಗೆ, ಈ ಸಾಂಕ್ರಾಮಿಕದ ಬಿಕ್ಕಟ್ಟಿನಲ್ಲಿ, ತುರ್ತು ಪರಿಸ್ಥಿತಿಯ ಕಾನೂನುಗಳು ನೀಡುವ ನ್ಯಾಯಸಮ್ಮತ ಅಧಿಕಾರವನ್ನು ಬಳಸಿಕೊಂಡು ಖಾಸಗಿ ಆರೋಗ್ಯ ಸೇವೆಯ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ವಾಧೀನಪಡಿಸುವಲ್ಲಿ ಯಾವುದು ಅಡ್ಡಿ ಬರುತ್ತಿದೆ? ಸರಕಾರ ಉಚಿತ ಸೌಲಭ್ಯಗಳನ್ನು ನೀಡುತ್ತಿರುವಾಗ ಸಾರ್ವಜನಿಕರು ಕೋವಿಡ್ ಸೇವೆಗಳಿಗಾಗಿ ಖಾಸಗಿ ಸಂಸ್ಥೆಗಳಿಗೆ ಏಕೆ ಹಣ ತೆತ್ತಬೇಕು? ಸಾರ್ವಜನಿಕರ ಹಿತಾಸಕ್ತಿಯನ್ನು ಸರಕಾರ ಕಾಪಾಡದಿದ್ದರೆ ಮತ್ಯಾರು ಕಾಪಾಡಬೇಕು? ಈ ಸರಕಾರವನ್ನು, ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿ ಕಳುಹಿಸಿದ್ದೇವೆ ಎಂಬುದನ್ನು ನೆನಪಿಡಬೇಕಿದೆ ಹಾಗೂ ಸರಕಾರದ ತಪ್ಪುಗಳಿಗೆ ಅವರು ಹೊಣೆ ಹೊರುವಂತೆ ಮಾಡುವ ಸಮಯ ಬಂದಿದೆ. ಅದನ್ನು ಈಗ ಮಾಡದಿದ್ದರೆ ಯಾವಾಗ?

ಡಾ. ಅಖಿಲಾ ವಾಸನ್, ಜನಾರೋಗ್ಯ ಚಳವಳಿಯ ಮುಂಚೂಣಿ ಕಾರ್ಯಕರ್ತೆ ಮತ್ತು ಸಾರ್ವಜನಿಕ ಆರೋಗ್ಯದ ಸಂಶೋಧಕಿ


ಇದನ್ನು ಓದಿ: ಎಲೆಮರೆ -39: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...