ಫ್ಯಾಕ್ಟ್‌ಚೆಕ್‌: ಬಿಜೆಪಿ ಧ್ವಜವನ್ನು ನೂರಾರು ಬ್ರಾಹ್ಮಣರು ಸುಟ್ಟು ಹಾಕಿದರೆ ?

ಜನರ ಗುಂಪೊಂದು ಬಿಜೆಪಿ ಧ್ವಜವನ್ನು ಸುಡುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಚಿತ್ರದ ಶಿರ್ಷಿಕೆಯಲ್ಲಿ ಬ್ರಾಹ್ಮಣರು ಬಿಜೆಪಿಯ ಧ್ವಜವನ್ನು ಸುಡುತ್ತಿದ್ದಾರೆ ಎಂದು ಬರೆಯಲಾಗಿದೆ.

ಚತ್ರನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಲಾಗುತ್ತಿದ್ದು, ಅದರಲ್ಲಿ “ಜೈ ಜೈ ಪರಶುರಾಮ್, ಬಿಜೆಪಿಯ ಧ್ವಜವನ್ನು ಬ್ರಾಹ್ಮಣರು ಸುಟ್ಟು ಹಾಕಿದರು ಎಂದು ಬರೆಯಲಾಗಿದೆ.

ಈ ಚಿತ್ರವನ್ನು ಇದೇ ಶೀರ್ಷಿಕೆಯೊಂದಿಗೆ ಹಲವಾರು ಜನರು ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಅದರ ಸ್ಕ್ರೀನ್ ಶಾಟ್‌ ಅನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌:

ಟ್ವಿಟ್ಟರ್ ಬಳಕೆದಾರ ಪ್ರಮೋದ್ ಟ್ವೀಟ್‌ ನ ರಿಪ್ಲೈನಲ್ಲಿ ಹಲವಾರು ಜನರು ಭಾಸ್ಕರ್ ನ್ಯೂಸ್ ನೆಟ್‌ವರ್ಕ್ ಲೇಖನದ ಸ್ಕ್ರೀನ್‌ಶಾಟ್ ಹಾಕಿದ್ದು, ಅದರಲ್ಲಿ ಅದು 20 ನವೆಂಬರ್ 2018ರ ಲೇಖನ ಎಂದು ಸೂಚಿಸಲಾಗಿದೆ ಎಂದು ಬರೆದಿದ್ದಾರೆ.

ಲೇಖನದ ಶೀರ್ಷಿಕೆಯಲ್ಲಿ ಉಲ್ಲೇಖಿಸಲಾದ ಹೆಸರಿನವರನ್ನು ‘ದಿ ಕ್ವಿಂಟ್’ ವೆಬ್ ಸೈಟ್ ಮಾತನಾಡಿಸಿದ್ದು, ಲೇಖನದಲ್ಲಿ ಹೇಳುವಂತೆ 2018ರ ನವೆಂಬರ್‌ನಲ್ಲಿ ಜೈಪುರ ಜಿಲ್ಲೆಯ ಕೊಟ್‌ಪುಟ್ಲಿಯಲ್ಲಿ ರಾಜಸ್ಥಾನ ವಿಧಾನಸಭಾ ಚುನಾವಣೆಗೆ ಮುನ್ನ ಈ ಘಟನೆ ನಡೆದಿದ್ದು, ಸ್ಥಳೀಯ ಬಿಜೆಪಿ ಮುಖಂಡ ಹನ್ಸರಾಜ್ ಅವರಿಗೆ ಚುನಾವಣೆಗೆ ಟಿಕೆಟ್ ನಿರಾಕರಿಸಿ ಮತ್ತೊಬ್ಬ ಬಿಜೆಪಿ ಮುಖಂಡ ಮುಖೇಶ್ ಗೋಯಲ್ ಅವರಿಗೆ ಟಿಕೆಟ್ ನೀಡಲಾಯಿತು. ಇದರಿಂದ ಕೋಪಗೊಂಡ ಹನ್ಸ್ರಾಜ್ ಬೆಂಬಲಿಗರು ಕೆಲವು ಪ್ರಮುಖ ಬಿಜೆಪಿ ನಾಯಕರ ಪ್ರತಿಕೃತಿ ಹಾಗೂ ಪಕ್ಷದ ಧ್ವಜವನ್ನು ಸುಟ್ಟು ಪ್ರತಿಭಟಿಸಿದ್ದರು.

ಇದಲ್ಲದೆ, ಈ ಘಟನೆಯ ಬಗ್ಗೆ ಸ್ಥಳೀಯ ವರದಿಗಾರ ಕೂಡಾ ಈ ಘಟನೆಯನ್ನು ದೃಢೀಕರಿಸಿದ್ದಾಗಿ ದಿ ಕ್ವಿಂಟ್ ತನ್ನ ವರದಿಯಲ್ಲಿ ಹೇಳಿದೆ.

ಅಲ್ಲದೆ ಈ ಪ್ರತಿಭಟನೆ ನಡೆದಿದ್ದರೂ ಸಹ ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದೆ ಹನ್ಸ್ರಾಜ್ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಆದ್ದರಿಂದ, ಎರಡು ವರ್ಷಗಳ ಹಳೆಯ ಚಿತ್ರವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.


ಓದಿ:ಕೇರಳ ಸರ್ಕಾರ ಹಿಂದೂ ದೇವಾಲಯ ನಿಯಂತ್ರಿಸುವ ಅಧಿಕಾರವನ್ನು ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ನೀಡಿದೆಯೆ? 


 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here