Homeಕರ್ನಾಟಕಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ಅಸ್ಮಿತೆಯ ಪ್ರಶ್ನೆ ಮತ್ತೆ ಗರಿಗೆದರಿದೆ

ಲಿಂಗಾಯತ ಧರ್ಮ ಮಾನ್ಯತೆ ಹೋರಾಟದ ಅಸ್ಮಿತೆಯ ಪ್ರಶ್ನೆ ಮತ್ತೆ ಗರಿಗೆದರಿದೆ

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ಇದುವರೆಗೆ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೆ ಸುಳಿಯುತ್ತಿದ್ದ ಲಿಂಗಾಯತ ಧರ್ಮ ಹೋರಾಟದ ಅಸ್ಮಿತೆಯ ಪ್ರಶ್ನೆ ಮತ್ತೆ ಬುಗಿಲೆದ್ದಿದೆ. ತೀರಾ ಇತ್ತೀಚೆಗೆ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ ಹಾಗೂ ಕೆಲವು ಜನ ಶಾಸಕರು ಮುಖ್ಯ ಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯನ್ನು ಭೇಟಿಯಾಗಿ ವೀರಶೈವ/ಲಿಂಗಾಯತ ಧರ್ಮದ ಜನಾಂಗಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕೆಂದು ಮನವಿ ಮಾಡಿದರು.

ಸರಕಾರಕ್ಕೆ ಸಲ್ಲಿಸಿದ ಮನವಿಯವನ್ನು ಗಮನಿಸಿದ ಜಾಗತಿಕ ಲಿಂಗಾಯತ ಮಹಾಸಭೆ ದಿಡೀರನೆ ತನ್ನ ಮಹಾಮಂಡಳದ ಸಭೆಯನ್ನು ಬೆಂಗಳೂರಿನಲ್ಲಿ ಕರೆದು ಪತ್ರಿಕಾ ಹೇಳಿಕೆ ನೀಡಿದೆ. ವೀರಶೈವ ಮಹಾಸಭೆ ಸರಕಾರಕ್ಕೆ ಸಲ್ಲಿಸಿರುವ ಬೇಡಿಕೆಯ ಬಗೆಗೆ ನಮಗೆ ಯಾವುದೆ ತಕರಾರು ಇಲ್ಲ. ಆದರೆ ಆ ಬೇಡಿಕೆಯಲ್ಲಿ ವೀರಶೈವ ಪದ ಸೇರಿಸಿದ್ದನ್ನು ಜಾಗತಿಕ ಲಿಂಗಾಯತ ಮಹಾಸಭೆ ಕಟುವಾಗಿ ಟೀಕಿಸಿದೆ.

2002 ಕ್ಕೂ ಪೂರ್ವದಲ್ಲಿ ಸರಕಾರದ ಯಾವುದೆ ದಾಖಲೆಯಲ್ಲಿ ಇಲ್ಲದ ವೀರಶೈವ ಪದವನ್ನು ಸೇರಿಸಿ ಸಮಾಜದಲ್ಲಿ ಗೊಂದಲವನ್ನುಂಟು ಮಾಡಿದೆ. ನಿಜಕ್ಕೂ ಬ್ರಿಟಿಷ್ ಆಡಳಿತದ ಸಂದರ್ಭದಿಂದ ಹಿಡಿದು ಸರಕಾರದ ಯಾವ ದಾಖಲೆಯಲ್ಲಿಯೂ ಇಲ್ಲದ ವೀರಶೈವ ಪದವನ್ನು ಅಂದಿನ ವೀರಶೈವ ಮಹಾಸಭೆಯ ಅಧ್ಯಕ್ಷ ಭೀಮಣ್ಣ ಖಂಡ್ರೆಯವರ ಕುತಂತ್ರದಿಂದ ಸರಕಾರದ ನೋಟಿಫಿಕೇಶನ್ ಪಡೆಯಿತು. ಇದಕ್ಕೆ ಬಹು ಮುಖ್ಯ ಕಾರಣ ಭೀಮಣ್ಣ ಖಂಡ್ರೆ ಹಾಗೂ ವೀರಶೈವ ಮಹಾಸಭೆಯೇ ಆಗಿದೆ.

ವೀರಶೈವ ಎಂಬುದು ಲಿಂಗಾಯತ ಧರ್ಮದಲ್ಲಿ ಕೇವಲ ಒಂದು ಮತ. ಮತ ಹೇಗೆ ಧರ್ಮವಾಗುತ್ತದೆ? ಎಂಬುದು ಬಹಳಷ್ಟು ಜನ ಹೋರಾಟಗಾರರ ಪ್ರಶ್ನೆಯಾಗಿದೆ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ವಚನಗಳ ಎಳೆಯನ್ನು ಇಟ್ಟುಕೊಂಡು ಜನ್ಮ ತಳೆದ ಲಿಂಗಾಯತ ಧರ್ಮ, ಕರ್ಮಠರ ಕಪಿಮುಷ್ಠಿ ಮತ್ತು ಧಾರ್ಮಿಕ ಅತ್ಯಾಚಾರಿಗಳ ಕೈಯಲ್ಲಿ ನಲುಗಿ ಹೋದದ್ದು ಸುಳ್ಳಲ್ಲ. ಬಸವಣ್ಣನವರು ಇದ್ದಾಗ ಹೇಗೆ ಪುರೋಹಿತಶಾಹಿ ಅವರ ವಿಚಾರಗಳ ಮೇಲೆ ಬರ್ಬರ ಹತ್ಯೆ ನಡೆಸಲು ಯತ್ನಿಸಿದಂತೆ, ಈಗಲೂ ಅದನ್ನು ದಮನ ಮಾಡಲು ಸನ್ನದ್ದವಾಗಿ ನಿಂತುಕೊಂಡಿದೆ.

ಲಿಂಗಾಯತ ಧರ್ಮಕ್ಕೆ ಸಂಬಂಧವೇ ಪಡದ ಕಲ್ಲಡ್ಕ ಪ್ರಭಾಕರ ಭಟ್ಟ, ಆರ್.ಎಸ್.ಎಸ್.ನ ಸಂತೋಷ್, ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಹಾಗೂ ಪೇಜಾವರ ಮಹಾಸ್ವಾಮಿಗಳು ಸುಖಾ ಸುಮ್ಮನೆ ಮಾತನಾಡುತ್ತಾರೆ. ಲಿಂಗಾಯತ ಧರ್ಮ ಅಥವಾ ವಚನ ಸಾಹಿತ್ಯದ ಬಗೆಗೆ ಎಳ್ಳಷ್ಟು ಗೊತ್ತಿಲ್ಲದ ಇವರುಗಳು ತಲೆ ಬುಡವಿಲ್ಲದೆ ಆಳಿಗೊಂದು ಮಾತಾಡಿ ಲಿಂಗಾಯತರ ದಿಕ್ಕು ತಪ್ಪಿಸಲು ಹೊರಟಿದ್ದಾರೆ.

ಕೆಲವು ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಂತೂ ಕೈತೊಳೆದುಕೊಂಡು ಬೆನ್ನು ಹತ್ತಿದವರಂತೆ ಮತ್ತೆ ಶುರುವಾದ ಪ್ರತ್ಯೇಕ ಧರ್ಮದ ಕೂಗು ಎಂದು ಉಯಿಲೆಬ್ಬಿಸಿ ಜನತೆಯನ್ನು ತಪ್ಪು ದಾರಿಗೆ ಎಳೆಯುತ್ತಿವೆ. ಲಿಂಗಾಯತ ಧರ್ಮದ ಗಂಧಗಾಳಿ ಗೊತ್ತಿಲ್ಲದ ಇವು ಕಾಕೊಳಿಯಾಗಿಯೂ ನವಿಲಿನಂತೆ ನರ್ತಿಸುವ ಸೋಜಿಗ ಎಂಥವರಿಗೂ ಗೊತ್ತಾಗುತ್ತಿದೆ.

ಇಷ್ಟಕ್ಕೂ ಲಿಂಗಾಯತ ಧರ್ಮದ ಹೋರಾಟಕ್ಕೆ ಬಹುತೇಕ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ಸ್ವಹಿತಾಸಕ್ತಿ ಗುಂಪುಗಳು ಯಾಕೆ ವಿರೋಧಿಸುತ್ತಿವೆ? ಎಂಬ ಪ್ರಶ್ನೆಯನ್ನು ಎತ್ತಿಕೊಂಡರೆ ಅದಕ್ಕೊಂದು ತಾರ್ಕಿಕ ಉತ್ತರ ದೊರೆಯುತ್ತದೆ. ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರು ಕಟ್ಟಿದ ಲಿಂಗಾಯತ ಧರ್ಮ ಕಾಯಕ ಜೀವಿಗಳ ಸಂಘಟನೆ. ಇಲ್ಲಿ ಅವರವರ ಕಾಯಕದ ಅನುಭವವೆ ಪ್ರಮಾಣು. ಶಾಸ್ತ್ರ, ಪುರಾಣ, ವೇದಾಂತಗಳೆಲ್ಲ ಕಟ್ಟುಕತೆಗಳು ಎಂಬುದು ಅವರಿಗೆಲ್ಲ ಮನದಟ್ಟಾಗಿತ್ತು. ವೇದವೆಂಬುದು ಓದಿನ ಮಾತು ಎಂಬುದು ಖಚಿತ. ವೇದ ಶಾಸ್ತ್ರ ಪುರಾಣ ಪ್ರಾಮಣ್ಯ ಒಪ್ಪದ ದುಡಿಯುವ ಜನ ತಮಗಾಗಿ ಕಟ್ಟಿಕೊಂಡ ಚಳುವಳಿಯ ಹೆಸರು ಲಿಂಗಾಯತ.

ಹೀಗಾಗಿ ಹನ್ನೆರಡನೆಯ ಶತಮಾನದಿಂದ ಇಲ್ಲಿಯವರೆಗೂ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಮರೆ ಮಾಡುತ್ತಲೆ ಬಂದಿದೆ. ತೀರಾ ಇತ್ತೀಚೆಗೆ ಲಿಂಗಾಯತ ಧರ್ಮಿಯರಿಗೆ ವಚನ ಪ್ರಜ್ಞೆ ಮೂಡುತ್ತಿರುವಂತೆ ಮತ್ತೆ ಮತ್ತೆ ಹೋರಾಟದ ಕಿಚ್ಚು ಹುಟ್ಟಿಕೊಂಡಿದೆ. ಇದು ಯಾವುದೋ ರಾಜಕೀಯ ಒತ್ತಡಗಳಿಂದ ಪ್ರೇರಿತವಾದ ಕಿಚ್ಚಾಗಿದ್ದರೆ ಇಷ್ಟೊತ್ತಿಗೆ ಅದು ತಣ್ಣಗಾಗಿ ಹಳೆ ಕತೆಯಾಗುತ್ತಿತ್ತು. ಒಡಲಿನಿಂದ ಹೊಮ್ಮಿದ ಹೋರಾಟ ಯಾರೋ ನಾಲ್ಕು ಜನ ಪಡಪೋಶಿಗಳ ಮಾತಿಗೆ ತಲೆ ಬಾಗಿಸುವುದಿಲ್ಲ. ಕನ್ನಡ ನಾಡಿನಲ್ಲಿ ಹುಟ್ಟಿದ ಮೊಟ್ಟ ಮೊದಲ ಕನ್ನಡದ ಧರ್ಮ ಲಿಂಗಾಯತ. ಈ ಲಿಂಗಾಯತಕ್ಕೆ ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಹೊಲಿಯರ ನಾಗಿದೇವ, ಸೂಳೆ ಸಂಕವ್ವೆ, ಅಕ್ಕಮಹಾದೇವಿ, ಅಲ್ಲಮಪ್ರಭು,ಚೆನ್ನಬಸವಣ್ಣ, ಕದಿರೆಯ ರೆಮ್ಮವ್ವ ಮುಂತಾದವರೆಲ್ಲ ಬಸವಣ್ಣನವರ ನೇತೃತ್ವದಲ್ಲಿ ಕಟ್ಟಿದ ಅನುಭಾವಿಕ ಚಳುವಳಿ. ನಮ್ಮ ನಾಡಿದ ವಿಸ್ಮೃತಿ ಅಡಗಿರುವುದು ವಚನ ಸಾಹಿತ್ಯದ ಅನುಭಾವದ ಒಡಲಲ್ಲಿ ಎಂಬುದನ್ನು ಯಾರೂ ಮರೆಯುವಂತೆ ಇಲ್ಲ.

ಏಕಕಾಲಕ್ಕೆ ಪುರೋಹಿತಶಾಹಿ, ರಾಜಶಾಹಿ, ಮತ್ತು ಪಟ್ಟಭದ್ರರ ವಿರುದ್ಧ ಸಿಡಿದ ಸಿಡಿಗುಂಡುಗಳು ವಚನ ಸಾಹಿತ್ಯ. ವಚನ ಸಾಹಿತ್ಯದ ಪ್ರಜ್ಞೆ ಎಂದರೆ ಅದು ಸಕಲ ಜೀವಾತ್ಮರಿಗೆ ಲೇಸ ಬಯಸುವ ಪ್ರಜ್ಞೆ. ಈ ಪ್ರಜ್ಞೆ ಎಲ್ಲರಲ್ಲಿ ಮೂಡಿದರೆ ತಮ್ಮ ಕರಾಳ ಕೆಲಸಗಳಿಗೆ, ಧರ್ಮದ ಹೆಸರಿನ ನಂಗಾನಾಚ ಬಯಲಾಗಬಾರದು ಎಂಬುದು ಬಹುತೇಕರ ವಾಂಛೆ. ಆದ್ದರಿಂದಲೆ ಲಿಂಗಾಯತ ಧರ್ಮದ ಹೋರಾಟವನ್ನು ರಾಜಕೀಯ ಹೋರಾಟ ಎಂದು ದಿಕ್ಕು ತಪ್ಪಿಸಲು ಯತ್ನಿಸಿದರು. ಕೆಲವರಂತೂ ಧರ್ಮ ಒಡೆಯುವ ಷಡ್ಯಂತ್ರ ಎಂದೂ ದೂರಿದರು. ಇದರಲ್ಲಿ ಯಶಸ್ವಿಯೂ ಆದರು.

ಆದರೆ ಸತ್ಯಕ್ಕೆ ಶಕ್ತಿ ಹೆಚ್ಚು ಮತ್ತು ಅದು ಸಶಕ್ತವಾಗಿ ಪೆಡಸಿನಿಂದ ಹೊರ ಹೊಮ್ಮುತ್ತದೆ ಎಂಬುದಕ್ಕೆ ಸಾಕ್ಷಿಯಂತೆ ಬೆಂಗಳೂರಿನ ಬಸವ ಸಮಿತಿಯ ಅರಿವಿನ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಮೀಟಿಂಗ್ ಸಾಕ್ಷಿಯಾಗಿತ್ತು. ರಾಷ್ಟ್ರೀಯ ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ ಶಿವಾನಂದ ಜಾಮದಾರ ನಮ್ಮ ದೇಶದ ಸರ್ವೋಚ್ಛ ನ್ಯಾಯಾಲಯಕ್ಕೆ ಅಪೀಲು ಹೋಗುವ ಕುರಿತು ವಿವರವಾಗಿ ಮಾಹಿತಿ ಒದಗಿಸಿದರು.

ಲಿಂಗಾಯತ ಜನ ಸಮುದಾಯದಲ್ಲಿ ಇಂದಿಗೂ ಇರಬಹುದಾದ ಕೆಲವು ಗೊಂದಲಗಳಿಗೆ ಉತ್ತರವಾಗಿ 7-8 ಪುಸ್ತಕಗಳನ್ನು ಸಾವಿರ ಸಾವಿರ ಪ್ರತಿಗಳಲ್ಲಿ ಮುದ್ರಿಸುವುದಾಗಿ ಹೇಳಿದರು. ಸಭೆಯಲ್ಲಿ ಭಾಗವಹಿಸಿದ್ದ ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮಿಗಳು, ಡಾ.ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮದ ಜಯ ಮೃತ್ಯುಂಜಯ ಜಗದ್ಗುರುಗಳು, ಚೆನ್ನಬಸವಾನಂದ ಸ್ವಾಮೀಜಿ ಕೂಡಲ ಸಂಗಮ ಮುಂತಾದ ಮಠಾಧೀಶರು ನೂರಾರು ಜನ ಪ್ರಗತಿ ಪರರು, ವಿಚಾರವಾದಿಗಳು, ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳು ತೊಡೆತಟ್ಟಿ ನಿಂತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಕಾಲ್ತುಳಿತ: ಎಂಟು ಮಹಿಳೆಯರು ಸಾವು; ಹಲವು ಮಂದಿಗೆ ಗಾಯ 

ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಮಂಗಳವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.  ಪೂಜೆಗಾಗಿ ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದಾಗ ಈ ಘಟನೆ ಸಂಭವಿಸಿದ್ದು,...

ದಲಿತ ಕ್ರೈಸ್ತರ ಎಸ್‌ಸಿ ಸ್ಥಾನಮಾನ ರದ್ದು ಆದೇಶ; ಸುಪ್ರೀಂ ಕೋರ್ಟ್ ತೀರ್ಪು ಖಂಡಿಸಿದ ಮಂದಕೃಷ್ಣ ಮಾದಿಗ

ದಲಿತರು ಕ್ರೈಸ್ತರಾದರೆ ಅವರ ಎಸ್‌ಸಿ ಸ್ಥಾನಮಾನ ರದ್ದುಗೊಳ್ಳಲಿದೆ ಎಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಬಲವಾಗಿ ಖಂಡಿಸುತ್ತೇವೆ ಎಂದು ಎಂಆರ್‌ಪಿಎಸ್ ಫೌಂಡೇಶನ್ ಅಧ್ಯಕ್ಷ ಮಂದಕೃಷ್ಣ ಮಾದಿಗ ಹೇಳಿದರು. "ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕು,...

ಜಾರ್ಖಂಡ್: ರಾಮನವಮಿ ಘರ್ಷಣೆಗೆ ಸಂಬಂಧಿಸಿದ 19 ಜನರನ್ನು ಬಂಧಿಸಿ, ಕೈಕೋಳ ಹಾಕಿ ಸಾರ್ವಜನಿಕ ಮೆರವಣಿಗೆ ಮಾಡಿದ ಪೊಲೀಸರು

ಜಾರ್ಖಂಡ್‌ನ ಗರ್ವಾ ಜಿಲ್ಲೆಯಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಸಮುದಾಯಗಳ ನಡುವೆ ನಡೆದ ಘರ್ಷಣೆಯ ನಂತರ ಕನಿಷ್ಠ 19 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಭದ್ರತಾ ಪಡೆಗಳನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ನಂತರ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ : ಹೊಸ ಮಸೂದೆ ಅಂಗೀಕರಿಸಿದ ಇಸ್ರೇಲ್ ಸಂಸತ್ತು

ಇಸ್ರೇಲ್ ಸಂಸತ್ತು ಸೋಮವಾರ (ಮಾರ್ಚ್ 30, 2026) ಹೊಸ ಮಸೂದೆಯೊಂದನ್ನು ಅಂಗೀಕರಿಸಿದೆ. ಇದರ ಪ್ರಕಾರ, ಮಿಲಿಟರಿ ನ್ಯಾಯಾಲಯದಲ್ಲಿ ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಲಾಗಿದೆ. ಪ್ರಧಾನಿ ಬೆಂಜಮಿನ್...

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...