ಭಾರತಕ್ಕೆ ಸ್ವಾತಂತ್ರ್ಯ ಬಂದ ಕುರಿತು ವಿವಾದಿತ ಹೇಳಿಕೆ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದೇಶದ ಅತ್ಯುನ್ನತ ಪ್ರಶಸ್ತಿ ಪಡೆದು ಎರಡು ದಿನಗಳಲ್ಲೇ ಇಂತಹ ಹೇಳಿಎ ನೀಡುವ ಮೂಲಕ ದೇಶದ ಸ್ವತಂತ್ರಕ್ಕಾಗಿ ಬಲಿದಾನ ಮಾಡಿದವರನ್ನು ಅವಮಾನಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತಿದೆ. ದೇಶಕ್ಕೆ ಅಪಮಾನ ಮಾಡಿದ ನಟಿ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಬೇಕು ಎಂದು #कंगना_पद्मश्री_वापस_करो, #कंगना_देश_से_माफी_मांगो #कंगना_रनौत_देशद्रोही_है ಹ್ಯಾಶ್ಟ್ಯಾಗ್ ಬಳಸಿ ಟ್ವಿಟರ್ ಟ್ರೆಂಡ್ ಮಾಡಲಾಗುತ್ತಿದೆ.
ಬುಧವಾರ (ನ.10) ಖಾಸಗಿ ಟೆಲಿವಿಷನ್ ಚಾನೆಲ್ ಟೈಮ್ಸ್ ನೌ ಆಯೋಜಿಸಿದ್ದ ಕಾನ್ಕ್ಲೇವ್ನಲ್ಲಿ ಭಾಗವಹಿಸಿದ್ದ ನಟಿ ಕಂಗನಾ ರಣಾವತ್ ಹಿಂದಿಯಲ್ಲಿ ಮಾತನಾಡುತ್ತಾ, “1947 ರಲ್ಲಿ ಸಿಕ್ಕಿದ್ದು ಅದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿದೆ” ಎಂದಿದ್ದರು.
ಇದನ್ನೂ ಓದಿ: ದೇಶದ ಸ್ವಾತಂತ್ಯ್ರದ ಕುರಿತು ವಿವಾದಾತ್ಮಕ ಹೇಳಿಕೆ: ನಟಿ ಕಂಗನಾ ವಿರುದ್ದ ದೂರು ದಾಖಲು
#KanganaRanaut entire country is painfully first time listening "a real independence achieved in 2014" a serious subject to be debated irrespective of politics, undoubtedly Padma Shri award should be taken immediately to maintain its dignity in India.
#कंगना_पद्मश्री_वापस_करो pic.twitter.com/NFkukL39QC— Er.jitendra Kumar (@jitendraknj) November 12, 2021
Kangana Ranaut called the independence of 1947 as begging, isn't this an insult to the thousands of freedom fighters who had sacrificed their lives for the freedom of the country?
#कंगना_पद्मश्री_वापस_करो pic.twitter.com/NSH8lnOaJ4— Paramveer Beniwal (@Beniwalparm) November 12, 2021
ನಟಿ ಕಂಗನಾ ರಣಾವತ್ ಸ್ವತಂತ್ರ ಬಂದಿದ್ದು 2014ರ ನಂತರ ಎಂಬ ಹೇಳಿಕೆ ಸಾವಿರಾರು ಮಂದಿ ಹೋರಾಟಗಾರರಿಗೆ ಮಾಡಿದ ಅವಮಾನವಲ್ಲವೇ…? ಇದು ರಾಜಕೀಯವನ್ನು ಬದಿಗೊತ್ತಿ ಚರ್ಚೆಸಬೇಕಾದ ವಿಷಯ…ದೇಶದ ಗೌರವ ಉಳಿಸಲು ಮೊದಲು ಈಕೆಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ವಾಪಸ್ ಪಡೆಯಿರಿ ಎಂದು ಸಾವಿರಾರು ಮಂದಿ ಟ್ವೀಟ್ ಮಾಡಿದ್ದಾರೆ.
#KangnaRanaut#कंगना_पद्मश्री_वापस_करो#कंगना_देश_से_माफी_मांगो pic.twitter.com/tGR05V711c
— Sandeep (@_Sandeep__kumar) November 12, 2021
Rare picture of Gandhiji searching 'common sense' in Kangana's brain!#कंगना_पद्मश्री_वापस_करो pic.twitter.com/jahYY7aIJz
— Possible (@PossibleSpeaks) November 12, 2021
What we got in 1947 was 'bheekh'. We got azadi in 2014- Kangana. #Kangana pic.twitter.com/8vN193gdVO
— Satish Acharya (@satishacharya) November 11, 2021
Contribution of BJP/RSS
in the freedom struggle ? pic.twitter.com/sTsv7HGTm0— Srinivas BV (@srinivasiyc) November 12, 2021
ಜೆಎನ್ಯು ಕನ್ನಡ ಅಧ್ಯಯನಪೀಠದ ಮುಖ್ಯಸ್ಥರಾಗಿದ್ದ ಪ್ರೊ. ಪುರುಷೋತ್ತಮ್ ಬಿಳಿಮಲೆಯವರು ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿರುವುದು ಹೀಗೆ: “ಕಂಗನಾ ಭಾರತದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೇಳಿದ್ದು 2014ರ ಆನಂತರ ಬಲಪಂಥೀಯರು ಬರೆಯಬಯಸಿದ ಮತ್ತು ಬರೆಯುತ್ತಿರುವ ಇತಿಹಾಸದ ಒಂದು ಸಣ್ಣ ಭಾಗ ಅಷ್ಟೇ. ಸರಕಾರದ ಜೊತೆ ಕೈಜೋಡಿಸಿರುವ ನಕಲಿ ಇತಿಹಾಸಕಾರರು ಈಗಾಗಲೇ ‘ ನಮ್ಮಲ್ಲಿ ಜಾತಿ ಪದ್ಧತಿ ಮೊದಲು ಇರಲಿಲ್ಲ, ಮುಸ್ಲಿಮರು ಬಂದಮೇಲೆ ಅದು ಹುಟ್ಟಿಕೊಂಡಿತು’,’ ಕುರುಕ್ಷೇತ್ರ ಯುದ್ಧದಲ್ಲಿ ಕ್ಷಿಪಣಿಗಳ ಬಳಕೆಯಾಗಿತ್ತು’ ಎಂಬಿತ್ಯಾದಿ ವಿವರಗಳಿರುವ ಚರಿತ್ರೆಯನ್ನು ಬರೆಯುತ್ತಿದ್ದಾರೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗೆಯ ಸಂಶೋಧನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸರಕಾರವೇ ‘ ನಿಜವಾದ ಚರಿತ್ರೆ’ ಬರೆಯಲು ಸಮಿತಿ ನೇಮಕ ಮಾಡಿದೆ. ಸುಳ್ಳು ಇತಿಹಾಸದ ಪ್ರಚಾರಕ್ಕೆ ನೂರಾರು ಗುಂಪುಗಳು ಕೆಲಸಮಾಡುತ್ತಿವೆ. ಕಂಗನಾ ಹೇಳಿಕೆಗೆ ಸರಕಾರವಾಗಲೀ ಬಲಪಂಥೀಯ ಇತಿಹಾಸಕಾರರಾಗಲೀ, ಐಸಿಎಚ್ಆರ್ ( ಭಾರತೀಯ ಇತಿಹಾಸ ಸಂಸ್ಥೆ) . ಮೊದಲಾದ ಸಂಸ್ಥೆಗಳು ಪ್ರತಿಕ್ರಿಯಿಸಿಲ್ಲ ಎಂಬುದನ್ನು ಗಮನಿಸಿ. ಕಂಗನಾ ಹೇಳಿಕೆಗೆ ಸಭೆಯಲ್ಲಿ ಬಿದ್ದ ಚಪ್ಪಾಳೆ ಬೌದ್ಧಿಕ ಅಧ:ಪತನದ ಸಂಕೇತವೇ ಸರಿ” ಎಂದಿದ್ದಾರೆ.
ಇನ್ನು ನಟಿ ಕಂಗನಾರ ಅದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ ಎಂಬ ದೇಶದ್ರೋಹ ಹೇಳಿಕೆ ಹಿನ್ನೆಲೆ ಆಕೆಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹಿಂಪಡೆಯಬೇಕು ಎಂದು ಕಾಂಗ್ರೆಸ್ ನಾಯಕ ಆನಂದ್ ಶರ್ಮಾ ಒತ್ತಾಯಿಸಿದ್ದಾರೆ.
ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಇತ್ತೀಚೆಗೆ ಕಂಗನಾ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯುವಂತೆ ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದೆ. ದೇಶದ ಕಾನೂನು, ಭಾರತದ ಸಂವಿಧಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ ಇಂತಹ ವ್ಯಕ್ತಿ ಪದ್ಮಶ್ರೀಯಂತಹ ಶ್ರೇಷ್ಠ ಪ್ರಶಸ್ತಿಗೆ ಅರ್ಹರಲ್ಲ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ ಬರೆದಿದ್ದಾರೆ.
ನಟಿ ಕಂಗನಾ ಹೇಳಿಕೆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹಲವು ವ್ಯಂಗ್ಯಚಿತ್ರಗಳು, ಮೀಮ್ಗಳು ಹರಿದಾಡುತ್ತಿವೆ.
Half knowledge is hazardous but zero knowledge is utterly devastating. Few more patriotic speeches like this & Kangana Ranaut will be qualified to get an Bharat Ratna by our government!
#कंगना_पद्मश्री_वापस_करो #Kangana #KanganaRanaut #VarunGandhi #PadmaShri #Independence pic.twitter.com/NM85T8pa0P— ????? ?????? (@nisar_ahemad45) November 11, 2021
#KanganaRanaut she doesn't even know about our freedom fighters and their struggle.why is she awarded with padam Shri ?#कंगना_पद्मश्री_वापस_करो pic.twitter.com/9ioR8uywge
— Sona_samadhiya (@sonasamadhiya) November 11, 2021
#कंगना_पद्मश्री_वापस_करो#KanganaRanaut
Who is more deserving candidate for Padma Shri.?
Like for Sonu sood
Rt for Kangana Ranaut pic.twitter.com/n6AYZHNtu0— Hanima (@Chicken_tanduri) November 11, 2021
#बकलोल_कंगना#कंगना_पद्मश्री_वापस_करो
May be Important question in next upsc exam …? pic.twitter.com/XErV5hcBdx
— Guru Sharnam rohilla (@guru_sharnam) November 11, 2021
Now who created this? ?#कंगना_पद्मश्री_वापस_करो #कंगना_को_पागलखाना_भेजो pic.twitter.com/fOyO4NUn4z
— @Tanmay ? (@_tanmay1) November 11, 2021