Homeಮುಖಪುಟಕೇರಳ: ದಲಿತ ಮಹಿಳೆಗೆ ಮನೆ ಕಟ್ಟುಲು ಸಾಮಾಗ್ರಿಯನ್ನು ಕೊಂಡೊಯ್ಯಲು ಬಿಡದ ಮೇಲ್ಜಾತಿ ಕುಟುಂಬ

ಕೇರಳ: ದಲಿತ ಮಹಿಳೆಗೆ ಮನೆ ಕಟ್ಟುಲು ಸಾಮಾಗ್ರಿಯನ್ನು ಕೊಂಡೊಯ್ಯಲು ಬಿಡದ ಮೇಲ್ಜಾತಿ ಕುಟುಂಬ

- Advertisement -
- Advertisement -

ಕೇರಳದ ಆಲಪುಳ ಜಿಲ್ಲೆಯ ಪಲ್ಲನಾ ಎಂಬ ಗ್ರಾಮದ ದಲಿತ ಮಹಿಳೆಯೊಬ್ಬರು ತಮ್ಮ ಜಾಗದಲ್ಲಿ ಮನೆಕಟ್ಟುವ ಸಾಮಾಗ್ರಿಗಳನ್ನು ಕೊಂಡೊಯ್ಯುದಕ್ಕೆ ಮೇಲ್ಜಾತಿ ಕುಟುಂಬಗಳು ತಡೆಯೊಡ್ಡಿದ ಘಟನೆ ನಡೆದಿದೆ. ಸುಮಾರು ಎಂಟು ತಿಂಗಳಿನಿಂದ ಅವರು ಇದಕ್ಕೆ ಪ್ರಯತ್ನಿಸುತ್ತಿದ್ದು ಪೊಲೀಸ್‌ ಸೇರಿದಂತೆ ಹಲವು ಇಲಾಖೆಗೆ ಈ ಬಗ್ಗೆ ಮನವಿಗಳನ್ನು ನೀಡಲಾಗಿತ್ತು ಎಂದು ಮಹಿಳೆ ಹೇಳಿದ್ದಾರೆ.

ರಸ್ತೆಯೊಂದರ ವಿವಾದ ಇರುವುದರಿಂದ ಆ ರಸ್ತೆಯ ಮೂಲಕ ಅವರ ಮನೆ ನಿರ್ಮಾಣ ಸಾಮಾಗ್ರಿಗಳು ತರಬಾರದು ಎಂದು ಮೇಲ್ಜಾತಿ ಕುಟುಂಬಗಳು ಅವರನ್ನು ತಡೆದಿದೆ ಎಂದು ವರದಿಯಾಗಿದೆ. ಪಂಚಾಯತ್‌ ಅಧಿಕಾರಿಗಳು ಮಹಿಳೆಗೆ ತೊಂದರೆ ಕೊಡಬಾರದು ಎಂದು ಹೇಳಿದ್ದರೂ ಮೇಲ್ಜಾತಿ ಕುಟುಂಬ ಅವರ ಮಾತನ್ನೂ ಕೇಳಿರಲಿಲ್ಲ ಎಂದು ಸಂತ್ರಸ್ಥೆ ಮಹಿಳೆ ಚಿತ್ರಾ ಆರೋಪಿಸಿದ್ದಾರೆ.

ಇದನ್ನೂ ಓದಿ: ಕೇರಳ ದಲಿತ ವಿದ್ಯಾರ್ಥಿನಿ ಹೋರಾಟಕ್ಕೆ ಜಯ: ಜಾತಿ ತಾರತಮ್ಯವೆಸಗಿದ್ದ ಪ್ರಾಧ್ಯಾಪಕನ ವಜಾ

“ನಾವು ದಲಿತರಾಗಿರುವುದರಿಂದ ನಮಗೆ ತೊಂದರೆ ನೀಡಲಾಗುತ್ತಿದೆ. ಜೋರು ಮಳೆ ಬಂದರೆ ಈಗಿರುವ ಟೆಂಟ್‌ ಜಲಾವೃತವಾಗುತ್ತದೆ. ಪತಿ ಪಾಶ್ವವಾಯು ಪೀಡಿತರಾಗಿ ಹಾಸಿಗೆಯ ಮೇಲೆ ಮಲಗಿದ್ದಾರೆ. ಅಗತ್ಯ ಬಿದ್ದರೆ ಆಂಬ್ಯುಲೆನ್ಸ್‌ ಬರಲು ಕೂಡಾ ಬಿಡುವುದಿಲ್ಲ ಎಂಬ ಭಯವಿದೆ” ಎಂದು ಸಂತ್ರಸ್ತೆ ಚಿತ್ರ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಹರಿಪ್ಪಾಡ್ ಬ್ಲಾಕ್ ಪಂಚಾಯಿತಿ ಸರ್ಕಾರಿ ಯೋಜನೆಯ ಅಡಿಯಲ್ಲಿ ಐದು ಸೆಂಟ್ಸ್ ಜಾಗವನ್ನು ಅವರಿಗೆ ಮಂಜೂರು ಮಾಡಿತ್ತು. ಈ ವರ್ಷದ ಆರಂಭದಲ್ಲಿ, ರಾಜ್ಯ ಸರ್ಕಾರವು ಲೈಫ್ ಮಿಷನ್ ವಸತಿ ಯೋಜನೆಯಡಿ 4 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿ, ಸುಮಾರು ಎಂಟು ತಿಂಗಳ ಹಿಂದೆ ಅದರ ಮೊದಲ ಕಂತು 40,000 ರೂಪಾಯಿಯನ್ನು ಬಿಡುಗಡೆ ಮಾಡಿತ್ತು.

ಆದರೆ, ಮನೆ ನಿರ್ಮಾಣಕ್ಕಾಗಿ ಮರಳು, ಕಲ್ಲು, ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿಗಳನ್ನು ಮೇಲ್ಜಾತಿ ಕುಟುಂಬಗಳು ತಡೆದಿದ್ದಾರೆ.

ಈ ಸುದ್ದಿಯನ್ನು ರಾಜ್ಯ ಮಟ್ಟದ ಮಾಧ್ಯಮಗಳು ವರದಿ ಮಾಡುತ್ತಿದ್ದಂತೆ ಅಧಿಕಾರಿಗಳು ಮತ್ತು ಪೊಲೀಸರ ನೆರವಿನಿಂದ ಅವರ ಮನೆ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಬುಧವಾರ ತಂದು ಇಳಿಸಲಾಗಿದೆ.

ಇದನ್ನೂ ಓದಿ: ಲಸಿಕೆ ಸರ್ಟಿಫಿಕೇಟ್‌ನಲ್ಲಿ ಮೋದಿ ಫೋಟೋ ತೆಗೆಯಿರಿ ಎಂದು ಕೇಳುವುದು ಅಪಾಯಕಾರಿ: ಕೇರಳ ಹೈಕೋರ್ಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...